ವಿಜಯಪುರ: ಪಾಪಿ ಪುತ್ರನೊಬ್ಬ ಹೆತ್ತ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಭೀಮಾ ತೀರದ ಟಾಕಳಿ ಗ್ರಾಮದಲ್ಲಿ ನಡೆದಿದೆ. ಇಂಡಿ ತಾಲೂಕಿನ ಟಾಕಳಿ ಗ್ರಾಮದ ಅಣ್ಣಪ್ಪ ತೊರವಿ (58) ಪುತ್ರನಿಂದಲೇ ಕೊಲೆಯಾದ ದುರ್ದೈವಿ. ಸಂಜೀವ ತೊರವಿ (38) ತಂದೆಯನ್ನು ಕೊಂದ ಪಾಪಿ ಪುತ್ರ. ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಪುತ್ರ ತಂದೆಯನ್ನೇ ಕೊಲೆಗೈದಿದ್ದಾನೆಂದು ಹೇಳಲಾಗುತ್ತಿದೆ. ಮನೆಯವರೆಲ್ಲ ಗ್ರಾಮ ದೇವರ ಜಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಸಂಜೀವ್ ಈ ಕೃತ್ಯ ಎಸಗಿದ್ದಾನೆ. , ನಿನ್ನೆ (ಬುಧವಾರ) ತಂದೆ ಅಣ್ಣಪ್ಪ ಬಳಿ 1 ಸಾವಿರ ರೂಪಾಯಿ ಪಡೆದು ಕಂಠ ಪೂರ್ತಿ ಸಾರಾಯಿ ಕುಡಿದು ಬಂದಿದ್ದ ಸಂಜೀವ್, ಮತ್ತೆ ರಾತ್ರಿ 500 ರೂಪಾಯಿ ಹಣ ನೀಡುವಂತೆ ತಂದೆಯನ್ನು ಕೇಳಿದ್ದ. ಇದಕ್ಕೆ ತಂದೆ ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಆತ, ಕೊಡಲಿಯಿಂದ ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
from India & World News in Kannada | VK Polls https://ift.tt/2oHqI6q