ರೋಹಿತ್ ಬೆನ್ನಲ್ಲೇ ಮಯಾಂಕ್ ಶತಕ; ಬೃಹತ್ ಮೊತ್ತದತ್ತ ಭಾರತ

ವಿಶಾಖಪಟ್ಟಣ: ಇಲ್ಲಿನ ಡಾ. ವೈ. ಎಸ್. ರಾಜಶೇಖರ ರೆಡ್ಡಿ ಎಸಿಎ ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮುಂದುವರಿಸಿದೆ. 202/0 ಎಂಬಲ್ಲಿದ್ದ ದಿನದಾಟ ಆರಂಭಿಸಿದ ಭಾರತಕ್ಕೆ ಹಾಗೂ ಉತ್ತಮ ಆರಂಭವೊದಗಿಸಿದರು. ವಾತಾವರಣ ಶುಭ್ರವಾಗಿದ್ದರಿಂದ ಇದರ ಸಂಪೂರ್ಣ ಪ್ರಯೋಜನ ಪಡೆಯಲು ಭಾರತೀಯ ಬ್ಯಾಟ್ಸ್‌ಮನ್‌ಗಳು ಮುಂದಾದರು. ಈ ನಡುವೆ ರೋಹಿತ್ ಶರ್ಮಾ ಜೀವದಾನವನ್ನು ಪಡೆದರು. ಇನ್ನೊಂದೆಡೆ ರನೌಟ್ ಅವಕಾಶವನ್ನು ದಕ್ಷಿಣ ಆಫ್ರಿಕಾ ಮಿಸ್ ಮಾಡಿಕೊಂಡಿತು. ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಮಯಾಂಕ್ ಅಗರ್ವಾಲ್ ಚೊಚ್ಚಲ ಟೆಸ್ಟ್ ಶತಕ ಸಾಧನೆ ಮಾಡಿದರು. ತಾಜಾ ಮಾಹಿತಿ ನಿರೀಕ್ಷಿಸಿ... ಆರಂಭಿಕನಾಗಿ ಮೊದಲ ಟೆಸ್ಟ್‌ನಲ್ಲೇ ಶತಕ ಸಿಡಿಸಿದ ರೋಹಿತ್‌... ಆರಂಭ ಅಂದರೆ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಡಲೋ ಎಂಬಂತೆ ಭಾರತ ಏಕದಿನ ತಂಡದ ಉಪನಾಯಕ ರೋಹಿತ್‌ ಶರ್ಮ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಟೀಂ ಮ್ಯಾನೇಜ್ಮೆಂಟ್‌ ತಮ್ಮ ಮೇಲಿಟ್ಟ ಭರವಸೆಗೆ ತಕ್ಕ ಉಡುಗೊರೆಯನ್ನೇ ನೀಡಿದ್ದಾರೆ. ಬುಧವಾರ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಟೀಮ್‌ ಇಂಡಿಯಾಕ್ಕೆ ಮಯಾಂಕ್‌ ಅಗರ್ವಾಲ್‌ (84*) ಮತ್ತು ರೋಹಿತ್‌ ಶರ್ಮ (115* ರನ್‌, 12 ಫೋರ್‌, 5 ಸಿಕ್ಸರ್‌) ಜೋಡಿ ಅಜೇಯ ದ್ವಿಶತಕದ ಜತೆಯಾಟ (202*) ಕಟ್ಟಿಕೊಟ್ಟಿತು. ಟೀ ವಿರಾಮಕ್ಕೆ 8 ನಿಮಿಷ ಬಾಕಿ ಎನ್ನುವಾಗ ಮಳೆ ಸುರಿಯತೊಡಗಿತು. ಆ ಬಳಿಕ ಮಳೆ ನಿಲ್ಲಲೇ ಇಲ್ಲ. ಕೊನೆಯಲ್ಲಿ ಮಂದ ಬೆಳಕಿನಿಂದಾಗಿ ಅದೇ ಮೊತ್ತಕ್ಕೆ ದಿನದಾಟವನ್ನು ಸ್ಥಗಿತಗೊಳಿಸಲಾಯಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2pqA72H

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...