ಕಲಬುರಗಿ: ನೆರೆ ಪರಿಹಾರಕ್ಕೆ ಕೇಂದ್ರದಿಂದ ಯಾವುದೇ ಸ್ಪಂದನೆ ದೊರೆಯದಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವ ಕಿಡಿಕಾರಿದ್ದಾರೆ. ಕಲಬುರಗಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಕರ್ನಾಟಕದ ಸಂತೃಸ್ತರಿಗೆ ನೀಡದೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈಗಾಗಲೇ ಇಬ್ಬರು ರೈತರು ಜೀವನ ಸಾಗಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ 25 ಸಂಸದರ ಜೊತೆ ಸಚಿವೆ ನಿರ್ಮಲಾ ಸೀತಾರಾಂ ಕೂಡ ರಾಜ್ಯದಿಂದ ಆಯ್ಕೆಯಾದವರು. ಇಷ್ಟು ಜನ ಸಂಸದರಿದ್ದರೂ ಒಂದು ರೂಪಾಯಿ ರಾಜ್ಯಕ್ಕೆ ತರೋಕೆ ಆಗದಿರೋದು ನಮ್ಮ ದುದೈವ ಎಂದಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಸಂಸದರೆಲ್ಲ ಹೆದರುತ್ತಿದ್ದಾರೆ. ಇವರಿಗೆಲ್ಲ ಯಾಕೆ ಹೆದರಿಕೆ ಎಂಬುದು ಅರ್ಥವಾಗುತ್ತಿಲ್ಲ. ಅಧಿಕೃತವಾಗಿ ನೆರೆ ಪರಿಹಾರ ಬೇಕೆಂದು ಕೇಳಿಕೊಂಡರೂ ತಿರಸ್ಕಾರ ಮಾಡಿದ್ದಾರೆ. ಈಗ ಯಾರ ಬಳಿ ಪರಿಹಾರಕ್ಕಾಗಿ ಕೈ ಚಾಚಬೇಕು? ಎಂದು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಖಜಾನೆ ಖಾಲಿಯಾಗಿದೆ. ನಮ್ಮ ಬಳಿ ಹಣವಿಲ್ಲ ಎನ್ನುತ್ತಿದ್ದಾರೆ. ಕೇಂದ್ರದ ಬಳಿ ಹೋದ್ರೆ ಸಿಎಂಗೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಯಾವುದನ್ನು ನಂಬಬೇಕು. ಈಗಾಗಲೇ ನೆರೆ ಹಾನಿಯ ವರದಿಯನ್ನು ಕೇಂದ್ರ ರಿಜೆಕ್ಟ್ ಮಾಡಿದೆ. ಏನ್ ಮಾಡ್ಬೇಕು ರೀ? ರಾಜ್ಯದ ತೆರಿಗೆ ಹಣ ಎಲ್ಲಿ ಹೋಗ್ತಿದೆ? ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ನೆರೆ ಪರಿಹಾರಕ್ಕಾಗಿ ಗ್ರಾಮ ಪಂಚಾಯಿತಿಗಳಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ನಾಚಿಕೆ ಆಗಬೇಕು ಇವರಿಗೆ. ಒಳಜಗಳದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಕ್ಷೀಣಿಸಿದೆ. ಇದು ನಮ್ಮ ದುದೈವ ಎಂದಿದ್ದಾರೆ.
from India & World News in Kannada | VK Polls https://ift.tt/353UVxn