ಪ್ರೊ ಕಬಡ್ಡಿ: ತೆಲುಗು ಟೈಟನ್ಸ್‌ಗೆ ಪುಣೇರಿ ಪಲ್ಟನ್ ಪಂಚ್

ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯಲ್ಲಿ ಈಗಾಗಲೇ ಪ್ಲೇ ಆಫ್ ಅವಕಾಶ ಕಳೆದುಕೊಂಡಿರುವ ತಂಡಗಳ ನಡುವಿಣ ಭರ್ಜರಿ ಹಣಾಹಣಿಯಲ್ಲಿ ವಿರುದ್ಧ ತಂಡ 53-50 ಅಂಕಗಳ ರೋಚಕ ಗೆಲುವು ದಾಖಲಿಸಿದೆ. ಪಂಚಕುಲದ ತಾವು ದೇವಿಲಾಲ್ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಬಂದ ಪಲ್ಟನ್ ಬಳಗ ಅಂತಿಮವಾಗಿ ಗೆಲುವಿನ ಸಿಹಿ ಉಂಡಿತು. ಆಕ್ರಮಣಕಾರಿ ಪ್ರದರ್ಶನಕ್ಕೆ ಅಂಟಿಕೊಂಡ ಪುಣೇರಿ ತಂಡ ಪ್ರಥಮಾರ್ಧ ಮುಕ್ತಾಯದ ವೇಳೆಗೆ 31-36ರ ಮುನ್ನಡೆ ಕಾಪಾಡಿಕೊಂಡು ಬಂದಿತ್ತು. ಆದರೆ ದ್ವೀತಿಯಾರ್ಧದಲ್ಲಿ ತಿರುಗೇಟು ನೀಡಲು ಆರಂಭಿಸಿದ ಟೈಟನ್ಸ್, ಆಟಗಾರರು ಕೊನೆಯ ನಿಮಿಷದವರೆಗೂ ಮುನ್ನಡೆ ಸಾಧಿಸಲು ಹೋರಾಟ ನಡೆಸಿ ವಿಫಲಗೊಂಡರು. ಪುಣೇರಿ ಪರ ಮಂಜೀತ್ 11 ಹಾಗೂ ಸುರ್ಜೀತ್ 7 ಅಂಕ ಗಳಿಸಿದರೆ, ತೆಲುಗು ಪರ ರಾಕೇಶ್ ಪೇರಿಸಿದ 17 ಅಂಕಗಳು ಪ್ರಯೋಜನಕ್ಕೆ ಬರಲಿಲ್ಲ. ಈ ಗೆಲುವಿನ ಹೊರತಾಗಿಯೂ ಆಡಿರುವ 21 ಪಂದ್ಯಗಳಲ್ಲಿ ಏಳು ಗೆಲುವು ಮಾತ್ರ ದಾಖಲಿಸಿರುವ ಪುಣೇರಿ ಪಲ್ಟನ್ ಒಟ್ಟು 47 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇನ್ನೊಂದೆಡೆ 19 ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ 40 ಅಂಕ ಮಾತ್ರ ಸಂಪಾದಿಸಿರುವ ತೆಲುವು ಟೈಟನ್ಸ್ 11ನೇ ಸ್ಥಾನದಲ್ಲಿದೆ. ನಿಮ್ಮ ಮಾಹಿತಿಗಾಗಿ, ಅಂಕಪಟ್ಟಿಯಲ್ಲಿ ಅಗ್ರ ಐದು ಸ್ಥಾನಗಳನ್ನು ಹಂಚಿಕೊಂಡಿರುವ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಹರಿಯಾಣ ಸ್ಟೀಲರ್ಸ್, ಯು ಮುಂಬಾ ಹಾಗೂ ಬೆಂಗಳೂರು ಬುಲ್ಸ್ ಈಗಾಗಲೇ ಪ್ಲೇ ಆಫ್ ಹಂತವನ್ನು ಪ್ರವೇಶಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Vg1fNY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...