ನಿರ್ಬಂಧ ಹೇರಿದರೂ ‘ಮೇಕೆದಾಟು’ ಯಾತ್ರೆಗೆ ಒಮ್ಮತದ ತೀರ್ಮಾನ; ಬಸವನಗುಡಿ ಮೈದಾನದಲ್ಲಿ ಸಮಾರೋಪ

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಸರಕಾರ ನಿರ್ಬಂಧ ಜಾರಿಗೊಳಿಸಿದರೂ ನಿಗದಿಯಂತೆ ನಡೆಸಲು ಕಾಂಗ್ರೆಸ್‌ ಹಿರಿಯ ಮುಖಂಡರ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಾಗೆಯೇ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಪ್ರದೇಶ ಕಾಂಗ್ರೆಸ್‌ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಪ್ರಮುಖರಾದ ವೀರಪ್ಪ ಮೊಯ್ಲಿ, ಆರ್‌.ವಿ ದೇಶಪಾಂಡೆ, ಡಾ.ಜಿ ಪರಮೇಶ್ವರ, ಎಚ್‌.ಕೆ ಪಾಟೀಲ್‌, ಅಲ್ಲಂ ವೀರಭದ್ರಪ್ಪ, ಬಿ.ಕೆ ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್‌, ಈಶ್ವರ ಖಂಡ್ರೆ, ಆರ್‌ ಧ್ರುವ ನಾರಾಯಣ್‌ ಮತ್ತಿತರರು ಪಾಲ್ಗೊಂಡಿದ್ದರು. ತಂತ್ರಗಾರಿಕೆ: ಸರಕಾರ ನಿರ್ಬಂಧ ಹೇರಿದರೆ ಪಾದಯಾತ್ರೆಯನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಬಾರದು. ಸಂಘರ್ಷಕ್ಕೆ ಇಳಿಯದೆ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು. 4817 ಜನರ ನೋಂದಣಿ: ‘ಪಾದಯಾತ್ರೆಗಾಗಿ 4817 ಜನರು ನೋಂದಣಿ ಮಾಡಿಕೊಂಡಿದ್ದಾರೆ. ನಮ್ಮ ತಂಡದಲ್ಲಿ 100 ವೈದ್ಯರಿರುತ್ತಾರೆ. 10 ಆಂಬುಲೆನ್ಸ್‌ ಲಭ್ಯವಿರುತ್ತದೆ. ಅಗತ್ಯವಿದ್ದವರಿಗೆ ಲಸಿಕೆ ಕೊಡಿಸಲು ಸೂಚಿಸಲಾಗಿದೆ. ಪ್ರತಿ ದಿನ 1-2 ಜಿಲ್ಲೆಯವರು ಪಾದಯಾತ್ರೆಗೆ ಜತೆಗೂಡಲಿದ್ದಾರೆ. ಮೊದಲ ದಿನ ಕೊಡಗು, ಚಾಮರಾಜನಗರದವರು ಬರುತ್ತಾರೆ. ನಂತರ ಮೈಸೂರು, ಹಾಸನ, ಮಂಡ್ಯ, ತುಮಕೂರು ಇತರ ಜಿಲ್ಲೆಯವರು ಬರುತ್ತಾರೆ. ಜನವರಿ 19ರಂದು ಬೆಂಗಳೂರು ನಗರದಲ್ಲಿ 6 ಕಿ.ಮೀ. ಪಾದಯಾತ್ರೆ ನಡೆಸಿ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ 3 ವೇದಿಕೆಯಿರುತ್ತದೆ. ಸಾಂಸ್ಕೃತಿಕ ತಂಡದವರಿಗೆ, ಧಾರ್ಮಿಕ ಮುಖಂಡರಿಗೆ ಪ್ರತ್ಯೇಕ ವೇದಿಕೆ ವ್ಯವಸ್ಥೆಯಾಗಲಿದೆ ಎಂದು ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಸತತ ಸಭೆ: ಈ ಮಧ್ಯೆ ಪಾದಯಾತ್ರೆಗೆ ಸಂಬಂಧಿಸಿ ಆರೋಗ್ಯ, ಆಹಾರ, ಸಾರಿಗೆ ಇನ್ನಿತರ ಸಮಿತಿಗಳೊಂದಿಗೆ ಡಿ.ಕೆ.ಶಿವಕುಮಾರ್‌ ದಿನವಿಡೀ ಸಭೆ ನಡೆಸಿದರು.


from India & World News in Kannada | VK Polls https://ift.tt/3JIcVl5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...