ಕೋವಿಡ್‌ ನಡುವೆಯೂ ರೈಲ್ವೆಗೆ ಭರ್ಜರಿ ಆದಾಯ: ಪ್ರಿಮಿಯಂ ಟಿಕೆಟ್‌ನಿಂದ 6 ತಿಂಗಳಲ್ಲಿ ₹ 1033 ಕೋಟಿ ಕಲೆಕ್ಷನ್!

ಹೊಸ ದಿಲ್ಲಿ: ಕೋವಿಡ್‌ನಿಂದಾಗಿ ಹೇರಲಾಗಿರುವ ನಿರ್ಬಂಧದ ನಡುವೆಯೂ ಭಾರತೀಯ ರೈಲ್ವೇಗೆ ಭರ್ಜರಿ ಆದಾಯ ಹರಿದು ಬಂದಿದೆ. ಆರು ತಿಂಗಳಿನಲ್ಲಿ ರೈಲ್ವೇ ಇಲಾಖೆಯು ತತ್ಕಾಲ್‌ ಟಿಕೆಟ್‌ನಿಂದ ₹ 403 ಕೋಟಿ, ಪ್ರೀಮಿಯಂ ತತ್ಕಲ್‌ ಟಿಕೆಟ್‌ನಿಂದ ₹ 119 ಕೋಟಿ ಹಾಗೂ ವಿಶೇಷ ದರದ ಟಿಕೆಟ್‌ನಿಂದ ₹ 511 ಕೋಟಿ ಆದಾಯ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ. 2020-21ನೇ ಆರ್ಥಿಕ ವರ್ಷದ ಅಂಕಿ ಅಂಶ ಇದಾಗಿದೆ. ಈ ಅವಧಿಯಲ್ಲಿ ಕೋವಿಡ್‌ ಲಾಕ್‌ಡೌನ್, ಸೀಮಿತ ರೈಲುಗಳ ಕಾರ್ಯಾಚರಣೆ, ಪ್ರಯಾಣಿಕ ಸಂಖ್ಯೆ ಕುಸಿತ ಇದ್ದರೂ ರೈಲ್ವೇ ಇಲಾಖೆ ಟಿಕೆಟ್‌ ಮಾರಾಟದಿಂದ ಭರ್ಜರಿ ಆದಾಯ ಸಂಗ್ರಹಿಸಿದೆ. ಮಧ್ಯ ಪ್ರದೇಶದ ಚಂದ್ರಶೇಖರ್‌ ಗೌರ್‌ ಎನ್ನುವವವರು, ಈ ಮಾಹಿತಿಯನ್ನು ಕೋರಿ ರೈಲ್ವೇ ಇಲಾಖೆಗೆ ಮಾಹಿತಿ ಹಕ್ಕು ಕಾಯ್ದೆ (RTI= Right To Information )ಯಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರ ನೀಡಿರುವ ರೈಲ್ವೇ ಇಲಾಖೆ, 2020-21ರ ಹಣಕಾಸು ವರ್ಷದ ಸೆಪ್ಪೆಂಬರ್‌ ತಿಂಗಳಂತ್ಯದವರೆಗೆ, ತತ್ಕಾಲ್‌ ಟಿಕೆಟ್‌ನಿದ ₹ 240 ಕೋಟಿ, ಪ್ರೀಮಿಯಂ ತತ್ಕಾಲ್‌ ಟಿಕೆಟ್‌ನಿಂದ ₹ 89 ಕೋಟಿ ಹಾಗೂ, ವಿಶೇಷ ದರದ ಟಿಕೆಟ್‌ಗಳಿಂದ ₹353 ಕೋಟಿ ಆದಾಯ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದೆ. ಕೊನೆ ಕ್ಷಣದಲ್ಲಿ ಜರೂರಾರಿ ಪ್ರಯಾಣಿಸುವವರು ಹೆಚ್ಚಿನ ದರ ಪಾವತಿ ಮಾಡಿ, ತತ್ಕಾಲ್‌ ಅಥವಾ ಪ್ರೀಮಿಯಂ ಪಡೆದು ಪ್ರಯಾಣ ಮಾಡುತ್ತಾರೆ. ಈ ವಿಭಾಗದ ಟಿಕೆಟ್‌ ಮಾರಾಟದಿಂದ ರೈಲ್ವೇ ಭರ್ಜರಿ ಆದಾಯ ಗಳಿಸಿದೆ. ಇನ್ನು ಯಾವುದೇ ಪ್ರಯಾಣ ನಿರ್ಬಂಧಗಳಿಲ್ಲ 2019-20ನೇ ಹಣಕಾಸು ವರ್ಷದಲ್ಲೂ ಕೂಡ ರೈಲ್ವೇ ಇಲಾಖೆ, ಈ ವಿಭಾಗಗಳ ಟಿಕೆಟ್‌ ಮಾರಾಟದಿಂದ ಭಾರಿ ಆದಾಯ ಗಳಿಸಿತ್ತು. 2019-20ನೇ ಹಣಕಾಸು ವರ್ಷದಲ್ಲಿ ವಿಶೇಷ ದರಗಳಿಂದ ₹ 1313 ಕೋಟಿ, ತತ್ಕಾಲ್‌ ಟಿಕೆಟ್‌ ಮಾರಾಟದಿಂದ ₹ 1669 ಕೋಟಿ ಹಾಗೂ ಮಾರಾಟದಿಂದ ₹ 603 ಕೋಟಿ ಆದಾಯ ರೈಲ್ವೇ ಇಲಾಖೆಯ ಬೊಕ್ಕಸಕ್ಕೆ ಹರಿದು ಬಂದಿತ್ತು. ತತ್ಕಾಲ್‌ ಟಿಕೆಟ್‌ಗಳಿಗೆ ವಿಪರೀತ ದರ ವಿಧಿಸಲಾಗುತ್ತಿದೆ ಎಂದು ರೈಲ್ವೆಯ ಸಂಸದೀಯ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟ ವಾರದೊಳಗೆ ಈ ಮಾಹಿತಿ ಬಂದಿದೆ. ಕಡಿಮೆ ದೂರದ ಪ್ರಯಾಣಕ್ಕೂ ರೈಲ್ವೇ ತತ್ಕಾಲ್‌ ಟಿಕೆಟ್‌ಗಳಿಗೆ ಭಾರೀ ದರ ವಿಧಿಸುತ್ತಿದೆ. ಇದು ಬಡ ಪ್ರಯಾಣಿಕರಿಗೆ ಅನಾನುಕೂಲವಾಗಿದೆ ಎಂದು ರೈಲ್ವೇಯ ಸಂಸದೀಯ ಸ್ಥಾಯಿ ಸಮಿತಿ ಅಭಿಪ್ರಾಯ ಪಟ್ಟಿತ್ತು. ಅಲ್ಲದೇ ಸದ್ಯ ವಿಧಿಸಲಾಗುತ್ತಿರುವ ದರ ನ್ಯಾಯ ಬದ್ಧವಲ್ಲವೆಂದೂ, ಪ್ರಯಾಣದ ದೂರದ ಅನುಗುಣವಾಗಿ ದರ ನಿಗದಿ ಮಾಡಬೇಕು ಎಂದೂ ಸ್ಥಾಯಿ ಸಮಿತಿ ಸಲಹೆ ನೀಡಿತ್ತು. ಜತೆಗೆ ಈಗಾಗಲೇ ದುರಂತೋ ಹಾಗೂ ಶತಾಬ್ದಿ ರೈಲುಗಳು ಸಾಮಾನ್ಯ ಟಿಕೆಟ್‌ ದರವೇ ಹೆಚ್ಚಳ ಇದ್ದು, ಇವುಗಳ ಪ್ರಿಮಿಯಂ ಟಿಕೆಟ್‌ ದರಗಳು ವಿಮಾನ ಪ್ರಯಾಣಕ್ಕಿಂತಲೂ ತುಟ್ಟಿ. ಹಾಗಾಗಿ ಇದು ತಾರತಮ್ಯ ಉಂಟು ಮಾಡುತ್ತದೆ ಎಂದು ಹೇಳಿತ್ತು.


from India & World News in Kannada | VK Polls https://ift.tt/3HKIyZR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...