
ಹೊಸದಿಲ್ಲಿ: ಪತ್ರಕರ್ತೆಯರು, ಉದ್ಯಮಿಗಳು ಸೇರಿದಂತೆ 100 ಮುಸ್ಲಿಂ ಮಹಿಳೆಯರ ಫೋಟೊ ಪ್ರದರ್ಶಿಸಿ, ಅವರೆಲ್ಲರನ್ನೂ ಆನ್‌ಲೈನ್‌ನಲ್ಲಿ ಹರಾಜಿಗೆ ಇರಿಸಿದ್ದ ‘ಬುಲ್ಲಿಆ್ಯಪ್’ ಹೆಸರಿನ ವಿವಾದಿತ ವೆಬ್‌ಪೇಜ್‌ವೊಂದನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿ, ಐಟಿ ಖಾತೆ ಸಹಾಯಕ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ದೂರು ನೀಡಲಾಗಿತ್ತು. ಇದರ ಬೆನ್ನಿಗೆ ಕ್ರಮ ಜರುಗಿಸಿದ ಸಚಿವ ವೈಷ್ಣವ್, ವೆಬ್‌ಪೇಜ್ ನಿರ್ಬಂಧಿಸಲು ಆದೇಶಿಸಿದರು. ಜತೆಗೆ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ)ಗೆ ಈ ವೆಬ್‌ಪೇಜ್ ಕುರಿತು ತನಿಖೆ ನಡೆಸಲು ಸೂಚನೆ ನೀಡಿದ್ದಾರೆ. ಐಟಿ ಸಚಿವಾಲಯದ ಆಂತರಿಕ ತನಿಖೆಯಲ್ಲಿ 'ಗಿಟ್‌ಹಬ್' ಎಂಬ ಆನ್‌ಲೈನ್ ವೇದಿಕೆ ಮೂಲಕ ವಿವಾದಿತ ಬುಲ್ಲಿಬಾಯಿ ವೆಬ್‌ಪೇಜ್ ಅಪ್‌ಲೋಡ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಇದಲ್ಲದೇ, ದಿಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಮಹಿಳೆಯರು ಬುಲ್ಲಿಬಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಕೂಡ ಮುಂಬಯಿ ಪೊಲೀಸರಿಗೆ ವೆಬ್‌ಪೇಜ್ ವಿರುದ್ಧ ದೂರು ನೀಡಿದ್ದಾರೆ. ಸುಲ್ಲಿ ಡೀಲ್ಸ್ ಬಗ್ಗೆ ನಿರ್ಲಕ್ಷ್ಯ: ಕಳೆದ ವರ್ಷ ಇದೇ ಮಾದರಿಯಲ್ಲಿ 'ಸುಲ್ಲಿಡೀಲ್ಸ್' ಹೆಸರಿನ ವೆಬ್‌ಪೇಜ್ ಸೃಷ್ಟಿಸಿ ಮುಸ್ಲಿಂ ಮಹಿಳೆಯರು ಹರಾಜಿಗಿದ್ದಾರೆ ಎಂದು ಬಿಂಬಿಸಲಾಗಿತ್ತು. ಮಹಿಳೆಯರು ಫೋಟೊ ಮೇಲೆ ಕ್ಲಿಕ್ ಮಾಡಿ, ಅವರ ಖರೀದಿಯ ಮೌಲ್ಯ ಹಾಗೂ ಇತರ ವಿವರಗಳನ್ನು ಆನ್‌ಲೈನ್ ಬಳಕೆದಾರರು ಕಾಣಬಹುದಾಗಿತ್ತು. ಸುಲ್ಲಿ ಡೀಲ್ಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ವೆಬ್‌ಪೇಜ್ ನಿಷ್ಕ್ರೀಯಗೊಂಡಿತ್ತು. ಆದರೆ ದೂರುಗಳ ಬಗ್ಗೆ ಮುಂಬಯಿ ಸೈಬರ್ ಪೊಲೀಸರಿಂದ ಗಂಭೀರ ತನಿಖೆ ನಡೆದಿರಲಿಲ್ಲ. ಹಾಗಾಗಿ ಬೇರೆ ಹೆಸರಲ್ಲಿ ಮತ್ತೊಮ್ಮೆ ಇಂಥದ್ದೇ ದುಷ್ಕೃತ್ಯ ನಡೆದಿದೆ ಎಂದು ಟ್ವೀಟಿಗರು ಆಕ್ರೋಶ ಹೊರಹಾಕಿದ್ದಾರೆ. ಬುಲ್ಲಿ ಬಾಯಿ ಆಪ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋವನ್ನು ಮಾತ್ರ ಪ್ರದರ್ಶಿಸಿ ಅವರೆಲ್ಲರನ್ನು ಹರಾಜಿಗೆ ಹಾಕಿರೋದು ಮುಸ್ಲಿಂ ಮಹಿಳೆಯರ ಮೇಲೆ ಅವರಿಗೆ ಇರುವ ಅಸಹನೆಯನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ.
from India & World News in Kannada | VK Polls https://ift.tt/3HsOy97