ಬ್ರಿಟನ್‌ನಲ್ಲಿ ದಕ್ಷಿಣ ಆಫ್ರಿಕಾ ಮೂಲದ ಮತ್ತೊಂದು ಕೊರೊನಾ ರೂಪಾಂತರ ಪತ್ತೆ: ಏನಾಗ್ತಿದೆ?

ಲಂಡನ್: ಮಾರಕ ಹೊಸ ರೂಪಾಂತರ ದಾಳಿಯಿಂದ ತತ್ತರಿಸಿರುವ ಇಂಗ್ಲೆಂಡ್‌ನಲ್ಲಿ ಇದೀಗ ದಕ್ಷಿಣ ಆಪ್ರಿಕಾ ಮೂಲದ ಮತ್ತೊಂದು ಪತ್ತೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್, ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಹೆಚ್ಚು ಸಾಂಕ್ರಾಮಿಕ ಕೊರೊನಾ ರೂಪಾಂತರದ ಎರಡು ಪ್ರಕರಣಗಳು ಬ್ರಿಟನ್‌ನಲ್ಲಿ ದಾಖಲಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ಆರೋಗ್ಯ ಇಲಾಖೆ ಕಳೆದ ವಾರ ವೈರಸ್‌ನ ಹೊಸ ಆನುವಂಶಿಕ ರೂಪಾಂತರವನ್ನು ಪತ್ತೆಯಾಗಿದೆ ಎಂದು ಹೇಳಿದೆ. ಅಲ್ಲದೇ ಈ ವೈರಾಣು ಹೆಚ್ಚು ಸಾಂಕ್ರಾಮಿಕ ಶಕ್ತಿಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿತ್ತು. ಈ ವೈರಾಣುವಿನ ಎರಡು ಪ್ರಕರಣಗಳು ಇದೀಗ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿದ್ದು, ದಕ್ಷಿಣ ಆಫ್ರಿಕಾಕೆ ಪ್ರಯಾಣಿಸಿದ್ದ ಇಬ್ಬರು ಬ್ರಿಟನ್ ನಾಗರಿಕರು ಈ ಸೋಂಕಿಗೆ ತುತ್ತಾಗಿದ್ದಾರೆ. ಬ್ರಿಟನ್ ಈಗಾಗಲೇ ಕೊರೊನಾ ವೈರಸ್‌ನ ಹೊಸ ರೂಪಾಂತರದ ದಾಳಿಯನ್ನು ಎದುರಿಸುತ್ತಿದ್ದು, ಇದೀಗ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಮತ್ತೊಂದು ಬಗೆಯ ಕೊರೊನಾ ವೈರಾಣುವಿನ ವಿರುದ್ಧವೂ ಹೋರಾಡಬೇಕಿದೆ. ಈಗ ಕಂಡುಬಂದಿರುವ ಎರಡೂ ರೂಪಾಂತರ ತಳಿಗಳು ಹೆಚ್ಚು ಸಾಂಕ್ರಾಮಿಕ ಶಕ್ತಿಯನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಇದು ಇಡೀ ವಿಶ್ವದಲ್ಲಿ ವೇಗವಾಗಿ ಪಸರಿಸುವ ಆತಂಕ ಕೂಡ ಎದುರಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಪತತ್ತೆಯಾಗಿರುವ ಹೊಸ ತಳಿಯ ಕೊರೊನಾ ವೈರಾಣು, ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಕ್ಕಿಂತಲೂ ಹೆಚ್ಚು ವೇಗವಾಗಿ ಹರಡುವ ಗುಣ ಹೊಂದಿದೆ ಎಂದು ಹೇಳಲಾಗಿದೆ. ಇಂಗ್ಲೆಂಡ್‌ನಲ್ಲಿ ಕಂಡು ಬಂದಿರುವ ಕೊರೊನಾ ಹೊಸ ರೂಪಾಂತರ ಈಗಾಗಲೇ ಜಗತ್ತಿನಲ್ಲಿ ಆತಂಕವನ್ನು ಸೃಷ್ಟಿಸಿದ್ದು, ಇದೀಗ ಮತ್ತೊಂದು ಕೊರೊನಾ ರೂಪಾಂತರದ ಇರುವಿಕೆ ಈ ಆತಂಕವನ್ನು ದಿಗ್ವುಣಗೊಳಿಸಿದೆ.


from India & World News in Kannada | VK Polls https://ift.tt/2M4feG2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...