ನೇಪಾಳದ ಗಡಿ ಜಿಲ್ಲೆಗಳ ನೆಲ ನುಂಗಿದ ಚೀನಾ: ಡ್ರ್ಯಾಗನ್ ಚಕ್ರವ್ಯೂಹದಲ್ಲಿ ಸಿಲುಕಿದರಾ ಕೆಪಿ ಒಲಿ?

ಕಠ್ಮಂಡು: ಚೀನಾದ ಮಾತು ಕೇಳಿ ವಿರೋಧಿ ನಿಲುವು ತಳೆದಿದ್ದ ಇದೀಗ ತನ್ನ ನಿರ್ಧಾರಕ್ಕೆ ಪಶ್ಚಾತಾಪಪಡಬೇಕಾದ ಪರಿಸ್ಥಿತಿ ಬಂದೊದಗಿದೆ. ಚೀನಾದ ನೆಲದಾಹಕ್ಕೆ ಇದೀಗ ನೇಪಾಳ ಕೂಡ ಬಲಿಪಶುವಾಗಿದ್ದು, ಗಡಿಗೆ ಹೊಂದಿಕೊಂಡಿರುವ ಏಳು ಜಿಲ್ಲೆಗಳ ನೆಲವನ್ನು ಕಬಳಿಸುತ್ತಿದೆ ಎಂದು ನೇಪಾಳದ ಸಮೀಕ್ಷೆ ಇಲಾಖೆ ಆರೋಪಿಸಿದೆ. ನೇಪಾಳದ ಕೃಷಿ ಇಲಾಖೆ ಸಮೀಕ್ಷೆ ವರದಿ ಪ್ರಕಾರ ಚೀನಾ ಹಂತ ಹಂತವಾಗಿ ಗಡಿ ಭಾಗದ ಏಳು ಜಿಲ್ಲೆಗಳ ನೆಲವನ್ನು ಕಬಳಿಸುತ್ತಿದ್ದು, ಫಲವತ್ತಾದ ಕೃಷಿ ಭೂಮಿ ಡ್ರ್ಯಾಗನ್‌ಗೆ ಆಹಾರವಾಗುವ ಆತಂಕ ವ್ಯಕ್ತಪಡಿಸಿದೆ. ಆದರೆ ನೇಪಾಳದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷ ಚೀನಾದ ಈ ದುಸ್ಸಾಹಸವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಚೀನಾದ ಮಾತು ಕೇಳಿಕೊಂಡೇ ಭಾರತ ವಿರೋಧಿ ನಿಲುವು ತಳೆದ ನೇಪಾಳ, ಇದೀಗ ಚೀನಾ ತೋಡಿರುವ ಹಳ್ಳದಲ್ಲಿ ಬಿದ್ದ ಹಾಗೆ ಗೋಚರವಾಗುತ್ತಿದೆ. ಚೀನಾ ತನ್ನ ನೆಲವನ್ನು ಕಬಳಿಸುತ್ತಿದ್ದರೂ, ನೋಡಿಕೊಂಡು ಸುಮ್ಮನೆ ಕೂರವ ಪರಿಸ್ಥಿತಿಗೆ ನೇಪಾಳ ತನ್ನನ್ನು ತಾನೇ ದೂಡಿಕೊಂಡಿದೆ. ನೇಪಾಳದ ಗಡಿ ಜಿಲ್ಲೆಗಳಾದ ದೊಲಾಖಾ, ದರ್ಚುಲಾ, ಹುಮ್ಲಾ, ಸಿಂಧುಪಾಲ್‌ಚೌಕ್, ಸಂಕುವಸಾಬಾ ಹಾಗೂ ರೆಸುವಾಗಳಲ್ಲಿ ಚೀನಾ ನೆಲ ಕಬಳಿಸಿರುವುದಲ್ಲದೇ, ರಸ್ತೆ ನಿರ್ಮಾಣ ಕಾರ್ಯವನ್ನೂ ಕೈಗೊಂಡಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಕೇವಲ ದೊಲುಖಾ ಜಿಲ್ಲೆಯೊಂದರಲ್ಲೇ ನೇಪಾಳದ ಸುಮಾರು 1,500 ಮೀಟರ್ ನೆಲವನ್ನು ಚೀನಾ ಕಬಳಿಸಿದೆ ಎಂದು ವರದಿ ತಿಳಿಸಿದ್ದು, ಈ ಕುರಿತು ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಗಹಿಸಿದೆ. ಗೂರ್ಖಾದ ರುಯಿ ಗ್ರಾಮ ಮತ್ತು ಟಾಮ್ ನದಿಯ ಪ್ರದೇಶಗಳಲ್ಲಿನ ಪ್ರದೇಶಗಳನ್ನು ಚೀನಾ 2017ರಲ್ಲೇ ಕಬಳಿಸಿದ್ದು, ಈ ಭಾಗದಲ್ಲಿರುವ ಗ್ರಾಮಗಳನ್ನು ತನ್ನದೆಂದು ನೇಪಾಳ ವಾದಿಸುತ್ತಿದ್ದರೂ ಅವುಗಳನ್ನು ಟಿಬೆಟ್ ಸ್ವಾಯತ್ತ ಪ್ರದೇಶಗಳೊಂದಿಗೆ ಸೇರಿಸಿದೆ. ಒಟ್ಟಿನಲ್ಲಿ ಚೀನಾದ ಮಾತು ಕೇಳಿಕೊಂಡು ಭಾರತದೊಂದಿಗೆ ಗಡಿ ತಗಾದೆ ತೆಗೆದ ನೇಪಾಳ, ಇದೀಗ ಚೀನಾ ತನ್ನ ನೆಲವನ್ನು ಕಬಳಿಸುತ್ತಿದ್ದರೂ ನೋಡಿಕೊಂಡು ಸುಮ್ಮನಿರುವ ಪರಿಸ್ಥಿತಿಗೆ ಬಂದಿರುವುದು ನಿಜಕ್ಕೂ ದುರದೃಷ್ಟಕರ.


from India & World News in Kannada | VK Polls https://ift.tt/2EwMB08

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...