ವಾಯುಮಾಲಿನ್ಯಕ್ಕೆ ದಿಲ್ಲಿ ಕಂಗಾಲು; ಎಚ್ಚೆತ್ತುಕೊಳ್ಳದಿದ್ದರೆ ಶ್ವಾಸಕೋಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ

- ಅಭಿಷೇಕ ಡಿ ಪುಂಡಿತ್ತೂರು ದೆಹಲಿಯ ಬೆಚ್ಚಿಬೀಳಿಸುವ ವಾಯುಮಾಲಿನ್ಯ ಭವಿತವ್ಯದಲ್ಲಿ ಸಂಭವಿಸಬಹುದಾದ ಭೀಕರ ಅನಾಹುತದ ಬಾಗಿಲನ್ನು ತೆರೆದಿದೆ. ರಾಜ್ಯ ಸರಕಾರ ವಾಯುಮಾಲಿನ್ಯವನ್ನು ನಿಯಂತ್ರಣದಲ್ಲಿ ತರಲು ಹರಸಾಹಸ ಪಡುತ್ತಿದ್ದರೂ ಸಾಧ್ಯವಾಗಿಲ್ಲ. ಹೀಗಾಗುತ್ತಿರುವುದು ಏಕೆ? ನಾವೇಕೆ ಈಗಲೇ ಎಚ್ಚೆತ್ತುಕೊಳ್ಳಬೇಕು? ನಿಯಂತ್ರಣ ತಪ್ಪಿಹೋದರೆ ಮನುಕುಲಕ್ಕೆ ಏನಾಗಲಿದೆ? ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ವಸ್ತುಸ್ಥಿತಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನ ಇದಾಗಿದೆ. ಈಗಲೇ ವಾಯುಮಾಲಿನ್ಯ ನಿಯಂತ್ರಣದ ಬೀಜ ಬಿತ್ತಿ, ಇಲ್ಲದಿದ್ದರೆ ಭಯಂಕರ ಅಪಾಯ ಕಟ್ಟಿಟ್ಟ ಬುತ್ತಿ! ಅಭಿವೃದ್ಧಿಯ ಭರಾಟೆಯಲ್ಲಿ ಸಾಗುತ್ತಿರುವ ಭಾರತ, ಹವಾಮಾನ ಬದಲಾವಣೆಯ ಪ್ರಕೋಪಕ್ಕೆ ತುತ್ತಾಗುತ್ತಿದೆ. ಇದರ ಪರಿಣಾಮವಾಗಿ 2100ರ ವೇಳೆಗೆ ಪ್ರತಿ ವರ್ಷ ದೇಶದಲ್ಲಿ ಸರಾಸರಿ 15 ಲಕ್ಷ ಮಂದಿ ಸಾವನ್ನಪ್ಪುವ ಹಂತ ತಲುಪಲಿದೆ. ಕ್ಲೈಮೇಟ್‌ ಇಂಪ್ಯಾಕ್ಟ್‌ ಲ್ಯಾಬ್‌ ಸಂಸ್ಥಯು, ಚಿಕಾಗೋದಾ ವಿವಿಯ ಟಾಟಾ ಸೆಂಟ್‌ ಆರ್‌ ಡೆವೆಲಪ್‌ಮೆಂಟ್‌ ಸಹಯೋಗದಲ್ಲಿ ನಡೆಸಿದ ಅಧ್ಯಯನದ ವರದಿಯಲ್ಲಿ ಇಂತಹ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅಂತೆಯೇ ಗಂಗಾ ನದಿ ಕಿನಾರೆಯ ಪ್ರದೇಶಗಳು ಅಂದರೆ ದೇಶದ ಉತ್ತರದ ಭಾಗದಲ್ಲಿರುವ ಜನರು ವಾಯು ಮಾಲಿನ್ಯದಿಂದಾಗಿ ತಮ್ಮ ಜೀವಿತಾವಧಿಯಲ್ಲಿನ 7 ವರ್ಷಗಳನ್ನು ಕಳೆದುಕೊಳ್ಳಲಿದ್ದಾರೆ ಎಂಬುದಾಗಿ ವಾಯು ಗುಣಮಟ್ಟ-ಜೀವನ ಸೂಚ್ಯಂಕ (ಏರ್‌ ಕ್ವಾಲಿಟಿ ಲೈಫ್‌ ಇಂಡೆಕ್ಸ್‌ - ಎಕ್ಯುಎಲ್‌ಐ)ನಲ್ಲಿ ತಿಳಿಸಲಾಗಿದೆ. ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ ನ ವರದಿಯ ಪ್ರಕಾರ ಭಾರತದಲ್ಲಿ 1998-2016ರ ಅವಧಿಯಲ್ಲಿ ವಾಯುಮಾಲಿನ್ಯದ ಪ್ರಮಾಣದಲ್ಲಿ ಶೇ.72 ರಷ್ಟು ಅಧಿಕವಾಗಿದೆ. ಇದು ದೇಶದ ಶೇ.40 ರಷ್ಟು ಭೂ ಭಾಗದಲ್ಲಿ ಆಗುತ್ತಿರುವುದಾಗಿಯೂ ವರದಿ ಹೇಳಿದೆ.

ಶ್ವಾಸಕೋಶಕ್ಕೇ ಅಪಾಯ!ಅಂತಾರಾಷ್ಟ್ರೀಯ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆ (ಗ್ಲೋಬಕಾನ್‌) 2018ರ ವಾರ್ಷಿಕ ವರದಿಯ ಪ್ರಕಾರ ಭಾರತದಲ್ಲಿ ಒಂದು ವರ್ಷದಲ್ಲಿ ಹೊಸ ಪ್ರಕರಣಗಳ ಪೈಕಿ ಶೇ.5.9 (67,795) ಮಂದಿಯಲ್ಲಿ ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿದೆ. ಇದರಲ್ಲಿ 48,698 ಮಂದಿ ಪುರುಷರು ಶ್ವಾಸಕೋಶ ಕ್ಯಾನ್ಸರ್‌ ಪತ್ತೆಯಾಗಿರುವುದಾಗಿ ಮಾಹಿತಿ ನೀಡಿದೆ. ಪ್ರಮುಖವಾಗಿ ದಿಲ್ಲಿ ಸೇರಿದಂತೆ ದೇಶದ ಉತ್ತರ ಭಾಗದಲ್ಲಿನ ಅತ್ಯಂತ ಕೆಟ್ಟ ಗಾಳಿ ಸೇವನೆಯಿಂದ ಸಮಸ್ಯೆಗೆ ಗುರಿಯಾದವರು ಅಧಿಕ ಎಂದು ವರದಿ ಹೇಳಿದೆ. ದಿಲ್ಲಿ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್‌, ಬಿಹಾರ ಹಾಗೂ ಪಶ್ಚಿಮ ಬಂಗಾಳವನ್ನು ಗಂಗಾ ನದಿ ಯ ಕಿನಾರೆ ರಾಜ್ಯಗಳು ಎಂದು ಗುರಿತಿಸಲಾಗುತ್ತಿದ್ದು, ಈ ಎಲ್ಲ ರಾಜ್ಯಗಳಲ್ಲಿ ಜನರ ಜೀವಿತಾವಧಿ ವಾಯುಮಾಲಿನ್ಯದಿಂದಾಗಿ ನಶಿಸುತ್ತಿದೆ ಎಂದು ವಿಶ್ಲೇಶಿಸಲಾಗಿದೆ. ದಿಲ್ಲಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. 28 ವರ್ಷದ ಯುವಕ, ಧೂಮಪಾನವೇ ಮಾಡದ ವ್ಯಕ್ತಿಗೆ ಸ್ಟೇಜ್‌-4 ಶ್ವಾಸಕೋಶದ ಕ್ಯಾನ್ಸರ್‌ ಇರುವುದು ಇತ್ತೀಚೆಗೆ ಪತ್ತೆಯಾಗಿತ್ತು. ಇತ್ತೀಚಿನ ದಿನದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುವ ಶೇ.50 ಮಂದಿ ಧೂಮಪಾನಿಗಳಲ್ಲ ಎಂದು ಅವರು ಹೇಳಿದ್ದಾರೆ. ಮುಂದಿನ ದಿನದಲ್ಲಿ ಬಿಸಿ ಇನ್ನಷ್ಟು ಏರಲಿದೆ !ಮುಂದಿನ ವರ್ಷಗಳಲ್ಲಿ ಭಾರತ ಹವಾಮಾನ ಬದಲಾವಣೆಯ ಪ್ರಕೋಪವನ್ನೇ ಎದುರಿಸಲಿದೆ. ಅಂದರೆ ಈ ಶತಮಾನದ ಬಳಿಕ ದಿಲ್ಲಿಯಲ್ಲಿ ಪ್ರಸ್ತುತ ಭೇಸಿಗೆ ಕಾಲದ ತಾಪಮಾನಕ್ಕಿಂತ ಸುಮಾರು 22 ಪಟ್ಟು ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆಗಳಿದೆ. ಒಟ್ಟಾರೆ ದೇಶದಲ್ಲಿ ಸಾಮಾನ್ಯ ಉಷ್ಣಾಂಶವೇ 35 ಡಿಗ್ರಿ ಸೆಲ್ಸಿಸ್‌ಗಿಂತ ಹೆಚ್ಚಿರಲಿದೆ ಎಂದು ಹೇಳಲಾಗಿದೆ. ಇದರಿಂದಾಗಿ ದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸಾವಿನ ಸಂಖ್ಯೆ ಹೆಚ್ಚಳವಾಗಲಿದೆ. ಶನಿವಾರವೂ ದಿಲ್ಲಿ ವಾಯುಗುಣಮಟ್ಟ ಸಿವಿಯರ್‌! ಹರಿಯಾಣ, ಉತ್ತರ ಪ್ರದೇಶದ ಭಾಗದಲ್ಲಿ ವಾತಾವರಣದಲ್ಲಿ ದಟ್ಟವಾದ ಹಿಮಕ್ಕೆ ಹೊಗೆಯೂ ಆವರಿಸಿದ ವಾತಾವರಣ ಇನ್ನಷ್ಟು ಹೆಚ್ಚಿದೆ. ಅತ್ಯಂತ ಅಪಾಯಕಾರಿ ಮಟ್ಟದಲ್ಲಿರುವ ದಿಲ್ಲಿ ವಾತಾವರಣದಲ್ಲಿ PM 2.5 ಅಂಶ ಹಾಗೂ PM 10 ಅಂಶ 500ರಲ್ಲಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ ಅತಿ ಹೆಚ್ಚು ಮಲಿನ ಗಾಳಿ ಹೊಂದಿರುವ ನಗರವಾಗಿದೆ.


from India & World News in Kannada | VK Polls https://ift.tt/2JKestF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...