ವಾಣಿಜ್ಯ ಸಂಘರ್ಷದಿಂದ ಯುದ್ಧ ಭೀತಿ, ನಡೆದರೆ ಮಹಾಯುದ್ಧಕ್ಕಿಂತಲೂ ಭೀಕರ

ಬೀಜಿಂಗ್‌: ಅಮೆರಿಕ-ಚೀನಾದ ನಿಜವಾದ ಯುದ್ಧಕ್ಕೇ ಕಾರಣವಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಮಾಜಿ ವಿದೇಶಾಂಗ ಸಚಿವ ಹೆನ್ರಿ ಕಿಸ್ಸಿಂಜರ್‌ (96) ಆತಂಕ ವ್ಯಕ್ತಪಡಿಸಿದ್ದಾರೆ. ಉಭಯ ರಾಷ್ಟ್ರಗಳ ತೀವ್ರವಾಗಿದ್ದು, ಬಗೆಹರಿಯ­ದಿದ್ದರೆ ಮೊದಲ ಜಾಗತಿಕ ಯುದ್ಧಕ್ಕಿಂತಲೂ ಭೀಕರ ಸಶಸ್ತ್ರ ಸಂಘರ್ಷಕ್ಕೆ ಕಾರಣವಾದೀತು ಎಂದು ಎಚ್ಚರಿಸಿದ್ದಾರೆ. ಮೊದಲ ಮಹಾ ಯುದ್ಧ ಕೂಡ ಸಣ್ಣ ಪುಟ್ಟ ವೈಮನಸ್ಯಗಳಿಂದಲೇ ಶುರು­ವಾಯಿತು. ಮಾತ್ರವಲ್ಲದೆ ಈಗಿನ ಮಾರಕಾಸ್ತ್ರ­ಗಳು ಬಹಳ ಶಕ್ತಿಶಾಲಿಯಾಗಿವೆ. ಹೀಗಾಗಿ ಮಾತುಕತೆಯ ಮೂಲಕ ಬಿಕ್ಕಟ್ಟು ಬಗೆಹರಿಸಲು ಉಭಯ ರಾಷ್ಟ್ರಗಳು ವಿಳಂಬ ಮಾಡಬಾರದು ಎಂದು ಕಿಸ್ಸಿಂಜರ್‌ ಒತ್ತಾಯಿಸಿದ್ದಾರೆ. ಅಮೆರಿಕ ಅಧ್ಯಕ್ಷ ನಿಕ್ಸನ್‌ ಅವಧಿಯಲ್ಲಿ ಕಿಸ್ಸಿಂಜರ್‌ ವಿದೇಶಾಂಗ ಸಚಿವರಾಗಿದ್ದರು. 1971ರಲ್ಲಿಅಮೆರಿಕ-ಚೀನಾ ವ್ಯಾಪಾರ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


from India & World News in Kannada | VK Polls https://ift.tt/2KKZPXv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...