ಕಲ್ಯಾಣ ಕರ್ನಾಟಕದ ಕೇಂದ್ರ ಜಿಲ್ಲೆ ಕಲಬುರಗಿಯಲ್ಲಿ ರಾಜ್ಯದ 7ನೇ ಪ್ರಯಾಣಿಕ ವಿಮಾನ ನಿಲ್ದಾಣದ ಕಾರ್ಯರಂಭ. ರಾಜಧಾನಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಉಳಿದಂತೆ ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮತ್ತು ಬಳ್ಳಾರಿಯ ವಿಜಯನಗರ ವಿಮಾನ ನಿಲ್ದಾಣಗಳು ದೇಶೀಯ ಮಾರ್ಗದ ವಿಮಾನ ಸಂಪರ್ಕ ಹೊಂದಿವೆ. ಇದೀಗ 7ನೇ ಸೇರ್ಪಡೆಯಾಗಿ ವಿಮಾನ ನಿಲ್ದಾಣ ಸೇರಿದೆ. ಹೊಸ ವಿಮಾನ ನಿಲ್ದಾಣ ಕಾರ್ಯಾರಂಭದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮಗಳ ಸ್ಥಾಪನೆಗೆ ನೆರವಾಗುವ ಸಾಧ್ಯತೆಗಳು ಇವೆ. ವ್ಯಾಪಾರ, ಉದ್ಯಮ, ಐಟಿ-ಬಿಟಿ ಸೇರಿದಂತೆ ನಾನಾ ಕ್ಷೇತ್ರಗಳ ಬೆಳವಣಿಗೆಗೆ ವಿಮಾನ ನಿಲ್ದಾಣಗಳು ನೆರವಾಗುತ್ತಿವೆ. ಈಗಿರುವ ಅಂತಾರಾಷ್ಟ್ರೀಯ, ದೇಶೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಎಷ್ಟಿದೆ? ಯಾವ್ಯಾವ ನಿಲ್ದಾಣಗಳಲ್ಲಿ ಎಷ್ಟೆಷ್ಟು ವಿಮಾನ ಹಾರಾಟ ನಡೆಸಲಾಗಿದೆ? ಮುಂಬರುವ ವಿಮಾನ ನಿಲ್ದಾಣಗಳು ಎಲ್ಲೆಲ್ಲಿ ಸ್ಥಾಪನೆಗೊಳ್ಳಲಿವೆ? ಮಿಲಿಟರಿ ವಿಮಾನ ನಿಲ್ದಾಣಗಳು ಎಲ್ಲಿವೆ? ಇತ್ಯಾದಿ ಕಂಪ್ಲೀಟ್ ಮಾಹಿತಿ ಇಲ್ಲಿದೆ.
from India & World News in Kannada | VK Polls https://ift.tt/35kHs3q