2021ರ ತಮಿಳುನಾಡು ಚುನಾವಣೆಯಲ್ಲಿ ನಡೆಯಲಿದೆ ಪವಾಡ: ರಜನಿಕಾಂತ್‌ ಭವಿಷ್ಯ

ಚೆನ್ನೈ: ಭಾರತೀಯ ಸಿನಿಮಾ ರಂಗದಲ್ಲಿ ಸೂಪರ್‌ ಸ್ಟಾರ್‌ ಆಗಿ ಮಿಂಚಿರುವ ಚಿತ್ರನಟ ಈಗ ರಾಜಕೀಯ ಕ್ಷೇತ್ರದಲ್ಲೂ ತಮ್ಮ ಖದರ್‌ ತೋರಲು ಸಜ್ಜಾಗಿದ್ದಾರೆ. ಚುನಾವಣೆ ಅಖಾಡಕ್ಕೆ ಧುಮುಕಲು ರಜನಿಕಾಂತ್‌ ತಯಾರಿ ನಡೆಸಿದ್ದಾರೆ. ಅಗತ್ಯಬಿದ್ದರೆ ಮತ್ತೊಬ್ಬ ಚಿತ್ರನಟ, ರಾಜಕಾರಣಿ ಕಮಲ್‌ಹಾಸನ್‌ ಜತೆ ಕೈ ಜೋಡಿಸಲು ಸಿದ್ಧ ಎಂದೂ ಹೇಳಿದ್ದಾರೆ. ಈಗ ರಜನಿಕಾಂತ್‌ ರಾಜಕೀಯ ಪಕ್ಷಗಳಿಗೆ ಶಾಕ್ ನೀಡುವ ಡೈಲಾಗ್‌ಗಳನ್ನು ಹೊಡೆದಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ರಜನಿಕಾಂತ್‌ ಮಾತನಾಡಿದರು. 2021ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪವಾಡಗಳು ನಡೆಯಲಿವೆ. ತಮಿಳುನಾಡು ಜನರೇ ಅಚ್ಚರಿ ಸೃಷ್ಟಿಸಲಿದ್ದಾರೆ ಎಂದು ರಜನಿಕಾಂತ್‌ ಹೇಳಿದ್ದಾರೆ. ಈ ಮೂಲಕ ಚುನಾವಣಾ ಅಖಾಡಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಆಧ್ಯಾತ್ಮಿಕ ರಾಜಕೀಯಕ್ಕೆ ಅವಕಾಶ ಇಲ್ಲ ಎಂದು ಸಚಿವರೊಬ್ಬರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ರಜನಿ, 2021ರವರೆಗೆ ಕಾಯಿರಿ, ನಂತರ ನಡೆಯುವ ಅಚ್ಚರಿ, ಪವಾಡಗಳನ್ನು ನೋಡಿ ಎಂದಿದ್ದಾರೆ. ರಾಜಕೀಯ ರಂಗದಲ್ಲೂ ತಮ್ಮ "ಸ್ಟೈಲ್‌'ಗಳನ್ನು ತೋರಿಸಲು ರಜನಿಕಾಂತ್‌ ಈಗಿನಿಂದಲೇ ತಯಾರಿ ಮಾಡಿಕೊಂಡಿದ್ದಾರೆ. ರಾಜಕೀಯ ರಂಗದ ಬೆಳ್ಳಿ ಪರದೆಯ ಮೇಲೆ ರಜನಿಕಾಂತ್‌ ಯಾವ ರೀತಿ ಸಕ್ಸಸ್‌ ಆಗುತ್ತಾರೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.


from India & World News in Kannada | VK Polls https://ift.tt/2Ou5UZw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...