'ಮಹಾ' ವಿಚಾರಣೆ: 10.30ರ ಒಳಗೆ ಸರಕಾರ ರಚನೆ ಪ್ರಕ್ರಿಯೆ ದಾಖಲೆ ಸಲ್ಲಿಕೆಗೆ ಸೂಚನೆ

ಮುಂಬಯಿ: ಸುಪ್ರೀಂ ಕೋರ್ಟ್‌ ಅಂಗಳಕ್ಕೆ ತಲುಪಿರುವ ಮಹಾರಾಷ್ಟ್ರ ಸರಕಾರ ರಚನೆ ಕಸರತ್ತು ಸೋಮವಾರ ನಿರ್ಣಾಯಕ ತಿರುವು ಪಡೆಯಲಿದೆ. ಕ್ಷಿಪ್ರ ಕ್ರಾಂತಿಯ ಮೂಲಕ ನಡೆದ ಸರಕಾರ ರಚನೆಯ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಬೆಳಗ್ಗೆ 10.30ಕ್ಕೆ ಮುನ್ನ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ. ಇದನ್ನು ಆಧರಿಸಿ ಅದು ಮುಂದಿನ ಕ್ರಮ ಕೈಗೊಳ್ಳಲಿದ್ದು, ಬಹುಮತ ಸಾಬೀತಿಗೆ 24 ಗಂಟೆಯ ಗಡುವು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸರಕಾರ ರಚನೆಗೆ ಅವಕಾಶ ನೀಡಿರುವ ರಾಜ್ಯಪಾಲರ ನಡೆ ಪ್ರಶ್ನಿಸಿ ಹಾಗೂ ಕೂಡಲೇ ಬಹುಮತ ಸಾಬೀತಿಗೆ ನಿರ್ದೇಶನ ಕೋರಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಮೊರೆ ಹೊಕ್ಕಿದ್ದವು. ಈ ಬಗ್ಗೆ ಭಾನುವಾರ ತುರ್ತು ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ, ಸರಕಾರ ರಚನೆಗೆ ಆಹ್ವಾನಿಸಿ ರಾಜ್ಯಪಾಲರು ನೀಡಿದ ಪತ್ರ ಹಾಗೂ ಫಡ್ನಿವಿಸ್‌ ರಾಜ್ಯಪಾಲರಿಗೆ ನೀಡಿದ ಬೆಂಬಲ ಪತ್ರವನ್ನು ಸೋಮವಾರ ಸಲ್ಲಿಸುವಂತೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾಗೆ ಸೂಚಿಸಿದೆ. ಜತೆಗೆ ಕೇಂದ್ರ ಸರಕಾರ, ಮಹಾರಾಷ್ಟ್ರ ಸರಕಾರ, ಫಡ್ನವಿಸ್‌, ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಈ ನಡುವೆ, ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸಿದರೆ, ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್‌ಗಳು ಶಾಸಕರನ್ನು ಕಾಪಾಡಿಕೊಳ್ಳುವ ಕಾರ್ಯದಲ್ಲಿ ನಿರತವಾಗಿದ್ದವು. 29 ಶಾಸಕರ ನಡೆ ನಿರ್ಣಾಯಕಎನ್‌ಸಿಪಿಯ ಶಾಸಕರ ಬೆಂಬಲದ ಬಗ್ಗೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಗೊಂದಲದ ನಡುವೆಯೇ ಬಿಜೆಪಿ ಪಾಲಿಗೆ 29 ಮಂದಿ 'ಇತರೆ' ಶಾಸಕರ (13 ಪಕ್ಷೇತರರು ಮತ್ತು 16 ಸಣ್ಣ ಪಕ್ಷಗಳ ಶಾಸಕರು) ಬೆಂಬಲ ನಿರ್ಣಾಯಕವಾಗಿದೆ. ಒಂದು ವೇಳೆ ಎನ್‌ಸಿಪಿ ಶಾಸಕರು ಪಕ್ಷ ನಿಷ್ಠೆ ತೋರಿ ಅಜಿತ್‌ ಪವಾರ್‌ಗೆ ಬೆಂಬಲಿಸದಿದ್ದರೆ, ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಒಟ್ಟು 45 ಶಾಸಕರ ಕೊರತೆ ಎದುರಾಗಲಿದೆ. ಈಗಾಗಲೇ ಅಜಿತ್‌ ಪಾಳಯದಲ್ಲಿ ಗುರುತಿಸಿಕೊಂಡಿರುವ ಬಹುತೇಕ ಶಾಸಕರು ಶರದ್‌ ಪವಾರ್‌ ಪಾಳಯಕ್ಕೆ ಮರಳಿದ್ದಾರೆ ಎಂದು ಎನ್‌ಸಿಪಿ ಹೇಳಿರುವ ಹಿನ್ನೆಲೆಯಲ್ಲಿ 29 'ಇತರೆ' ಶಾಸಕರ ಬೆಂಬಲವನ್ನು ಬಿಜೆಪಿ ಆಶ್ರಯಿಸಬೇಕಾಗುತ್ತದೆ. ಈ 29 ಮಂದಿ ಬೆಂಬಲಿಸಿದರೂ, ಇನ್ನೂ 11 ಶಾಸಕರನ್ನು ಶಿವಸೇನೆ, ಕಾಂಗ್ರೆಸ್‌ ಅಥವಾ ಶರದ್‌ ಪವಾರ್‌ ಪಾಳಯದಿಂದ ಸೆಳೆಯಬೇಕಾಗುತ್ತದೆ. ಯಾರ ಬಳಿ ಎಷ್ಟು ಶಾಸಕರು?ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ಮೈತ್ರಿಕೂಟ 165 ಶಾಸಕರ ಬಲ ಹೊಂದಿದೆ. ಅವಕಾಶ ನೀಡಿದರೆ 10 ನಿಮಿಷದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ. - ಸಂಜಯ್‌ ರಾವುತ್‌, ಶಿವಸೇನೆ ಮುಖಂಡ ಬಿಜೆಪಿಗೆ 170ಕ್ಕೂ ಅಧಿಕ ಶಾಸಕರ ಬೆಂಬಲವಿದೆ. ವಿಶ್ವಾಸಮತ ಪಾಸ್‌ ಗೆದ್ದೇ ಗೆಲ್ಲುತ್ತೇವೆ. - ಆಶಿಶ್‌ ಶೇಲರ್‌, ಬಿಜೆಪಿ ಸಂಖ್ಯಾ ಬಲಒಟ್ಟು ಸ್ಥಾನಗಳು: 288, ಮ್ಯಾಜಿಕ್‌ ನಂಬರ್‌: 145 ಬಿಜೆಪಿ: 105 ಶಿವಸೇನೆ: 56 ಎನ್‌ಸಿಪಿ: 54 ಕಾಂಗ್ರೆಸ್‌: 44 ಇತರೆ: 29 ಯಾರ ವಾದ ಏನು?ಎನ್‌ಸಿಪಿ-ಕಾಂಗ್ರೆಸ್‌ ಪರ ಸಿಂಘ್ವಿ - ಬಿಜೆಪಿಗೆ ಆಹ್ವಾನ ನೀಡಿದ ಗವರ್ನರ್‌ ನಡೆ ಪ್ರಶ್ನಾರ್ಹ. ಎನ್‌ಸಿಪಿಯ 54 ಶಾಸಕರ ಪೈಕಿ 41 ಮಂದಿ ಅಜಿತ್‌ ಪವಾರ್‌ಗೆ ಬೆಂಬಲಿಸಿಲ್ಲ. - ಕುದುರೆ ವ್ಯಾಪಾರ ತಡೆಯಲು ತಕ್ಷಣ ಬಹುಮತ ಸಾಬೀತಿಗೆ ಆದೇಶಿಸಿ. ಶಿವಸೇನೆ ವಕೀಲ ಕಪಿಲ್‌ ಸಿಬಲ್‌- ಮುಂಜಾನೆ 5.17ಕ್ಕೆ, ಸಂಪುಟ ಸಭೆ ಅನುಮೋದನೆ ಇಲ್ಲದೆಯೇ ರಾಷ್ಟಪತಿ ಆಡಳಿತ ತೆರವು ಮಾಡಿದ ವಿಧಾನ, ದಿಢೀರ್‌ ಪದಗ್ರಹಣ ಮಾಡಿದ್ದು ವಿಚಿತ್ರ. ಮುಕುಲ್‌ ರೋಹಟಗಿ ಪ್ರತಿವಾದ- ಸಂವಿಧಾನದ ವಿಧಿ 36ರ ಅಡಿಯಲ್ಲಿ ಸಿಎಂ, ಡಿಸಿಎಂ ನೇಮಿಸುವ ಅಧಿಕಾರ ರಾಜ್ಯಪಾಲರಿಗಿದೆ. ಅದನ್ನು ಪ್ರಶ್ನಿಸುವ ಅರ್ಜಿಗಳು ಸಿಂಧುತ್ವ ಹೊಂದಿಲ್ಲ.


from India & World News in Kannada | VK Polls https://ift.tt/34gTuen

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...