ಕಂಕನಾಡಿ ಮಾರುಕಟ್ಟೆ ಮತ್ತೆ ಸ್ಥಳಾಂತರ; ನಿರ್ಮಾಣ ಹಂತದಲ್ಲೇ ಶೆಡ್‌ ನಿರ್ಮಿಸಿ ವ್ಯಾಪಾರ!

ಮುಹಮ್ಮದ್‌ ಆರಿಫ್‌ ಮಂಗಳೂರು: ಹಳೆ ಸ್ಥಳದಲ್ಲಿ 41.5 ಕೋಟಿ ರೂ. ವೆಚ್ಚದಲ್ಲಿ ನೂತನ ಬಹುಮಹಡಿ ಮಾರುಕಟ್ಟೆ ನಿರ್ಮಾಣದ ಒಂದು ಭಾಗದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇನ್ನೊಂದೆಡೆ ಕಟ್ಟಡ ವಿಸ್ತರಣೆಗಾಗಿ ತಾತ್ಕಾಲಿಕ ಮಾರುಕಟ್ಟೆಯನ್ನು ಮತ್ತೆ ತಾತ್ಕಾಲಿಕ ಕಟ್ಟಡಕ್ಕೆ ಸ್ಥಳಾಂತರ ಶೀಘ್ರ ನಡೆಯಲಿದೆ. ಹೊಸ ಮಾರುಕಟ್ಟೆ ನಿರ್ಮಾಣ ಹಿನ್ನೆಲೆಯಲ್ಲಿ 25 ವರ್ಷ ಹಳೆಯ ಮಾರುಕಟ್ಟೆಯನ್ನು ಒಂದೂವರೆ ವರ್ಷ ಹಿಂದೆ ಕೆಡವಲಾಗಿತ್ತು. ಈ ಸಂದರ್ಭ ಮಾರುಕಟ್ಟೆ ವ್ಯಾಪಾರಿಗಳಿಗಾಗಿ ಮುಖ್ಯ ರಸ್ತೆ ಪಕ್ಕದಲ್ಲೇ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಿ, ಅದಕ್ಕೆ ಸ್ಥಳಾಂತರ ಮಾಡಲಾಗಿತ್ತು. ತಾತ್ಕಾಲಿಕ ಮಾರುಕಟ್ಟೆಯಲ್ಲಿ 99 ಅಂಗಡಿಗಳು ಕಾರ್ಯಾಚರಿಸುತ್ತಿದ್ದವು. ಅದಕ್ಕೆ ಎರಡು ವರ್ಷಗಳ ಕಾಲಾವಧಿ ನೀಡಲಾಗಿತ್ತು. ಇದೀಗ ಎರಡು ವರ್ಷ ಸಮೀಪಿಸುತ್ತಿದ್ದು, ಹೊಸ ಕಟ್ಟಡ ನಿರ್ಮಾಣದ ವಿಸ್ತರಣೆ ಹಿನ್ನೆಲೆಯಲ್ಲಿ ತಾತ್ಕಾಲಿಕ ಮಾರುಕಟ್ಟೆ ತೆರವು ಸನ್ನಿಹಿತವಾಗಿದೆ. ಒಟ್ಟು ಅಂಗಡಿಗಳ ಪೈಕಿ, ಮೀನು ಮತ್ತು ಮಾಂಸ ಹಾಗೂ ಇನ್ನು ಕೆಲವು ಬಿಟ್ಟು, ಉಳಿದ 72 ಅಂಗಡಿಗಳನ್ನು ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ತಾತ್ಕಾಲಿಕ ಶೆಡ್‌ ನಿರ್ಮಾಣ ಹಂತದ ಕಟ್ಟಡದ ಒಂದು ಬದಿಯಲ್ಲಿ ಅಲ್ಯುಮಿನಿಯಂ ಫ್ಯಾಬ್ರಿಕೇಶನ್‌ ಮೂಲಕ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸುತ್ತಿದ್ದು, ಅದಕ್ಕೆ ಅಂಗಡಿಗಳನ್ನು ಸ್ಥಳಾಂತರ ಮಾಡಲು ಸಿದ್ಧತೆ ನಡೆಯುತ್ತಿದೆ. ಕಳೆದ ಬಾರಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೂವಿನ ಮಾರುಕಟ್ಟೆ ತೆರವುಗೊಳಿಸಿ, ಮುಖ್ಯ ರಸ್ತೆ ಪಕ್ಕ ತಾತ್ಕಾಲಿಕ ಶೆಡ್‌ಗಳನ್ನು ಹೂವಿನ ವ್ಯಾಪಾರ ಆರಂಭಿಸಲಾಗಿದೆ. ಹೊಸ ರಸ್ತೆ ಸಂತ ಜೋಸೆಫರ ಶಾಲೆ ಪಕ್ಕದ ಹೂವಿನ ಮಾರುಕಟ್ಟೆ ಹಳೆಯ ಕೆಡವಿದ್ದು, ಅಲ್ಲಿಂದ ಮಾರುಕಟ್ಟೆ ಹಿಂಭಾಗದ ದ್ವಿಚಕ್ರ ಸರ್ವಿಸ್‌ ಸೆಂಟರ್‌, ಚರ್ಚ್, ಪ್ರಾರ್ಥನಾ ಕೇಂದ್ರ, ವಾಣಿಜ್ಯ ಮಳಿಗೆಗಳು, ವಸತಿ ಪ್ರದೇಶಕ್ಕೆ ದ್ವಿಪಥ ರಸ್ತೆ ನಿರ್ಮಿಸಲಾಗುವುದು. ಜನರ ಸುರಕ್ಷೆಗಾಗಿ ತಡೆಗೋಡೆ ನಿರ್ಮಿಸಲಾಗುತ್ತಿದೆ ಎನ್ನುತ್ತಿದ್ದಾರೆ ಕಾರ್ಪೊರೇಟರ್‌ ನವೀನ್‌ ಡಿಸೋಜ. ಒಂದೂವರೆ ವರ್ಷದ ಹಿಂದೆ ತಾತ್ಕಾಲಿಕ ಮಾರುಕಟ್ಟೆ ಕಟ್ಟಡವನ್ನು ಮಾತ್ರ ಪಾಲಿಕೆ ನಿರ್ಮಿಸಿತ್ತು. ನಮ್ಮ ಖರ್ಚಿನಿಂದ ಸೆಟ್ಟಿಂಗ್ಸ್‌ ಮಾಡಿಕೊಂಡಿದ್ದೆವು. ಈಗ ಶೀಟ್‌ಗಳಿಂದ ನಿರ್ಮಿಸಿದ ಶೆಡ್‌ಗಳಿಗೆ ತೆರಳಬೇಕು. ಮತ್ತೆ ಸೆಟ್ಟಿಂಗ್ಸ್‌ ಮಾಡಿಕೊಳ್ಳಬೇಕು. ಭದ್ರ ಬಾಗಿಲು, ಕಾವಲು ವ್ಯವಸ್ಥೆ, ವಿದ್ಯುದ್ದೀಪ, ನೀರು, ಶೌಚಾಲಯಗಳನ್ನು ಪಾಲಿಕೆ ನಿರ್ಮಿಸಿಕೊಡಬೇಕು ಎನ್ನುತ್ತಾರೆ ವ್ಯಾಪಾರಿಗಳು. ಮುಖ್ಯ ರಸ್ತೆಯಿಂದ ಮಾರುಕಟ್ಟೆ ಹಾಗೂ ಒಳಗಿನ ಪ್ರದೇಶಕ್ಕೆ ತೆರಳಲು ನಿರ್ಮಿಸಿರುವ ಕೆಟ್ಟ ರಸ್ತೆ ಸಂಪರ್ಕದಿಂದ ಪ್ರತಿದಿನ ಹಲವರು ಬಿದ್ದಿದ್ದು, ವಾಹನಗಳ ಕೆಳಭಾಗ ಜಖಂಗೊಂಡು ಜನರು ಶಾಪ ಹಾಕುತ್ತಿದ್ದಾರೆ. ಮುಂದೆ ರಸ್ತೆ ನಿರ್ಮಾಣ ಹೀಗಾಗದಿರಲಿ. ಮಾರುಕಟ್ಟೆ ಕೂಡ ಸಕಾಲದಲ್ಲಿ ನಿರ್ಮಾಣಗೊಳ್ಳಲಿ ಎನ್ನುತ್ತಾರೆ ಸ್ಥಳೀಯ ನಿವಾಸಿ ಜೆಸಿಂತಾ. ಕಂಕನಾಡಿಯಲ್ಲಿ 10 ಮಹಡಿಗಳ ಹಾಗೂ ಹೆಚ್ಚುವರಿ ನೆಲ ಮತ್ತು ತಳ ಸೇರಿ ಆರು ಅಂತಸ್ತುಗಳ ಅತ್ಯಾಧುನಿಕ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ. 71 ದ್ವಿಚಕ್ರ ಮತ್ತು 505 ಕಾರು ಪಾರ್ಕ್ ವ್ಯವಸ್ಥೆ ಇರಲಿದೆ. ಮಾರುಕಟ್ಟೆ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಈಗಾಗಲೇ ಒಮ್ಮೆ ಸ್ಥಳಾಂತರ ನಡೆದಿದ್ದರೆ, ಮತ್ತೆ ತಾತ್ಕಾಲಿಕ ಕಟ್ಟಡಕ್ಕೆ ಸ್ಥಳಾಂತರ ಅನಿವಾರ್ಯವಾಗಿದೆ. ಎಲ್ಲ ಸಹಕಾರದಿಂದ ಸೆಪ್ಟೆಂಬರ್‌ ವೇಳೆ ಹೊಸ ಮಾರುಕಟ್ಟೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಪ್ರೇಮಾನಂದ ಶೆಟ್ಟಿ, ಮೇಯರ್‌, ಮಂಗಳೂರು


from India & World News in Kannada | VK Polls https://ift.tt/33bK6gi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...