ಐಟಿ ದಾಳಿ ವೇಳೆ ನೀರಿನ ಟ್ಯಾಂಕ್‌ನಲ್ಲಿ ಸಿಗ್ತು ಕೋಟಿ ಕೋಟಿ ಹಣ: ಹೇರ್‌ ಡ್ರೈಯರ್ ಬಳಸಿ ಒಣಗಿಸಿದ ಅಧಿಕಾರಿಗಳು!

ಭೋಪಾಲ್‌: ಭೂಗತ ನೀರಿನ ಟ್ಯಾಂಕ್‌ ( underground water tank) ನಲ್ಲಿ ಅಡಿಗಿಸಿಡಲಾಗಿದ್ದ ಒಂದು ಕೋಟಿ ರೂ. ನಗದು ಸೇರಿದಂತೆ ಒಟ್ಟು 8 ಕೋಟಿ ರೂ. ಮೌಲ್ಯದ ಸೊತ್ತನ್ನು ಉದ್ಯಮಿಯೊಬ್ಬರಿಂದ ಆದಾಯ ತೆರಿಗೆ ಇಲಾಖೆ ವಶ ಪಡಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯ ಪ್ರದೇಶದ ದಾಮೋಹ್‌ ಜಿಲ್ಲೆಯ ಉದ್ಯಮಿ ಶಂಕರ್‌ ರೈ ಹಾಗೂ ಆತನ ಕುಟುಂಬದ ಮೇಲೆ ಶನಿವಾರ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ದಯ, ಆತನಿಂದ ನಗದು, ಬಂಗಾರ ಸೇರಿ ಒಟ್ಟು 8 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿಕೊಂಡಿದೆ. ವಶ ಪಡಿಸಿಕೊಳ್ಳಲಾದ ಒಂದು ಕೋಟಿ ರೂ. ನಗದನ್ನು ಭೂಗತ ನೀರಿನ ಟ್ಯಾಂಕ್‌ನಲ್ಲಿ ಬ್ಯಾಂಗ್ ಒಂದರಲ್ಲಿ ತುಂಬಿಟ್ಟು ಅಡಗಿಸಿಡಲಾಗಿತ್ತು. ಅಧಿಕಾರಿಗಳು ಹೇರ್‌ ಡ್ರೈಯರ್‌ಗಳು ಹಣ ಒಣಗಿಸುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಗದು ಹೊರೆತು ಪಡಿಸಿ ಆಭರಣ ಹಾಗೂ ಇನ್ನಿತರ 5 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. 'ಆದಾಯ ತೆರಿಗೆ ಇಲಾಖೆಯೂ ರೈ ಅವರ ಕುಟುಂಬದಿಂದ ₹ 8 ಕೋಟಿ ಮೌಲ್ಯದ ಸೊತ್ತನ್ನು ಜಪ್ತಿ ಮಾಡಿದೆ. ಇದರಲ್ಲಿ ನೀರಿನ ಟ್ಯಾಂಕ್‌ನಲ್ಲಿ ಅಡಗಿಸಲಾಗಿದ್ದ ಒಂದು ಕೋಟಿ ರೂ. ನಗದು ಹಾಗೂ 3 ಕಿಲೋ ಗ್ರಾಂ ಬಂಗಾರ ವಶ ಪಡಿಸಿಕೊಳ್ಳಲಾಗಿದೆ' ಎಂದು ಜಬಲ್ಪುರ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಮುನ್‌ ಮುನ್‌ ಶರ್ಮಾ ತಿಳಿಸಿದ್ದಾರೆ. ಗರುವಾರ ಮುಂಜಾನೆ 5 ಗಂಟೆಗೆ ಆರಂಭವಾದ ಸುಮಾರು 40 ಗಂಟೆಗಳ ಕಾಲ ಮುಂದುವರಿದಿದೆ. ರೈಗೆ ಸಂಬಂಧಿಸಿದ ಒಟ್ಟು 10 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ರೈ ತನ್ನ ಉದ್ಯೋಗಿಗಳ ಹೆಸರಲ್ಲಿ 36 ಬಸ್‌ಗಳನ್ನು ಹೊಂದಿದ್ದ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಗೆದಷ್ಟೂ ಆತನ ಆಸ್ತಿ ಹೊರ ಬರುತ್ತಿದ್ದು, ಇನ್ನಷ್ಟು ಕಡೆಗಳನ್ನು ಆತ ಆಸ್ತಿ ಹೊಂದಿರುವ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಸಿಕ್ಕಿದೆ. ಮಧ್ಯ ಪ್ರದೇಶದ ಅಥವಾ ಇನ್ನಿತರ ಕಡೆ ಆತನ ಆಸ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವವರಿಗೆ ₹ 10,000 ಬಹುಮಾನ ನೀಡುವುದಾಗಿಯೂ ಆದಾಯ ತೆರಿಗೆ ಇಲಾಖೆ ಘೋಷಣೆ ಮಾಡಿದೆ. ರೈ ಮೇಲಿನ ಆದಾಯ ತೆರಿಗೆ ದಾಳಿ ಅಂತ್ಯವಾಗಿದ್ದು, ವಶ ಪಡಿಸಿಕೊಂಡ ದಾಖಲೆಗಳ ಅನ್ವಯ ಇನ್ನು ಹೆಚ್ಚಿನ ತನಿಖೆ ನಡೆಸುತ್ತೇವೆ. ಈಗಾಗಲೇ ವಶ ಪಡಿಸಿಕೊಂಡ ದಾಖಲೆಗಳು ಹಾಗೂ ಬೇನಾಮಿ ಆಸ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ. ಆತನ ಒಟ್ಟು ಅಕ್ರಮ ಆಸ್ತಿ ಎಷ್ಟಿದೆ ಎನ್ನುವುದರ ಬಗ್ಗೆ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ. ಶಂಕರ್‌ ರೈ ಈ ಹಿಂದೆ ಕಾಂಗ್ರೆಸ್‌ ಬೆಂಬಲದೊಂದಿಗೆ ದಾಮೋಹ್‌ ಪಾಲಿಕೆಯ ಅಧ್ಯಕ್ಷರಾಗಿದ್ದರು. ಆತನ ಸಹೋದರ ಕಮಲ್‌ ರೈ ಬಿಜೆಪಿ ಬೆಂಬಲದೊಂದಿಗೆ ದಾಮೋಹ್‌ ಪಾಲಿಕೆಯ ಉಪಾಧ್ಯಕ್ಷನಾಗಿದ್ದ.


from India & World News in Kannada | VK Polls https://ift.tt/3n5rllB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...