ಐಶ್ವರ್ಯಾ ರೈ ತರ ಕಾಣ್ತೀಯ ಅಂತ ಹೇಳಿ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಬಂಧನ

ಬೆಂಗಳೂರು: ಪಕ್ಕದ ಮನೆಗೆ ಹೋಗಿ ಕುಳಿತಿದ್ದಾಗ, ಕುಡಿಯಲು ನೀರು ಕೊಡಲು ಬಂದ ಮಹಿಳೆಗೆ ‘ನೀನು ಐಶ್ವರ್ಯ ರೈನಂತೆ ಕಾಣುತ್ತಿದ್ದೀಯಾ’ ಎಂದು ಆಕೆಯ ಕೈ ಹಿಡಿದು ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗಸಂದ್ರದ ಚಿಕ್ಕಬಿದರಕಲ್ಲಿನ ಸಿದ್ದಗಂಗಾ ಲೇಔಟ್‌ನ 31 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ, ಅದೇ ಬಡಾವಣೆಯ ರಾಜಣ್ಣ ಎಂಬ ಕಾಮುಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿದ್ದಗಂಗಾ ಲೇಔಟ್‌ ನಿವಾಸಿ ರಾಜಣ್ಣ ಡಿ. 28ರಂದು ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಪರಿಚಯಸ್ಥ ಮಹಿಳೆಯ ಮನೆಗೆ ಹೋಗಿದ್ದಾನೆ. ಈ ವೇಳೆ ಕೆಲವು ನಿಮಿಷಗಳ ಕಾಲ ಸುಮ್ಮನೆ ಕುಳಿತಿದ್ದ ರಾಜಣ್ಣ ಮಹಿಳೆಯಲ್ಲಿ ನೀರು ಕೇಳಿದ್ದಾನೆ. ಮಹಿಳೆ ನೀರು ಕೊಡಲು ಬಂದಾಗ ‘ನೀನು ಐಶ್ವರ್ಯ ರೈ ಇದ್ದ ಹಾಗೆ ಇದ್ದೀಯಾ, ಬಂದು ನನ್ನ ಪಕ್ಕದಲ್ಲಿ ಕುಳಿತುಕೋ, ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದರೆ ನಿನ್ನದೇ ಪ್ರತಿಬಿಂಬ ಕಾಣುತ್ತದೆ’ ಎಂದು ಅಸಭ್ಯವಾಗಿ ವರ್ತಿಸಿ ಹೇಳಿದ್ದ. ಈ ವೇಳೆ ಮಹಿಳೆ ‘ಅಣ್ಣ ನೀವು ಈ ರೀತಿ ಮಾತನಾಡಬಾರದು, ದಯವಿಟ್ಟು ಇಲ್ಲಿಂದ ಹೋಗಿ’ ಎಂದು ಹೇಳುತ್ತಿದ್ದಂತೆಯೇ, ಕಾಮುಕ ರಾಜಣ್ಣ ಏಕಾಏಕಿ ಎದ್ದು, ಮಹಿಳೆಯ ಕೈ ಹಿಡಿದು ಎಳೆದಾಡಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ರಕ್ಷಣೆಗಾಗಿ ಕಿರುಚಿಕೊಂಡಿದ್ದಾರೆ. ಮಹಿಳೆಯ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಬರುವಷ್ಟರಲ್ಲೇ ರಾಜಣ್ಣ ಮನೆಯಿಂದ ಓಡಿ ಹೋಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅತ್ಯಾಚಾರಿಗೆ ಜೈಲು ಶಿಕ್ಷೆ, 1.50 ಲಕ್ಷ ರೂ. ದಂಡವಿಜಯಪುರ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿನ ಪೊಕ್ಸೊ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 1.50 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ. ಇಂಡಿ ತಾಲೂಕಿನ ಪಡನೂರ ಗ್ರಾಮದ ಆರೋಪಿ ಗಣಪತಿ ಭೀಮಾಶಂಕರ ವೀರಶೆಟ್ಟಿ ಶಿಕ್ಷೆಗೊಳಗಾದವ. ಈತ 2017ರ ಜೂ.16ರಂದು 16 ವರ್ಷದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ತನ್ನ ತೋಟದ ವಸ್ತಿಯಲ್ಲಿ ಸುಮಾರು ಎರಡು ತಿಂಗಳವರೆಗೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶೆ ಸವಿತಾ ಕುಮಾರಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 1.50 ರೂ. ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವಿ. ಜಿ. ಹಗರಗುಂಡ ವಾದ ಮಂಡಿಸಿದ್ದರು.


from India & World News in Kannada | VK Polls https://ift.tt/3zn7Cmp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...