ನಿರ್ಣಾಯಕ ಟೆಸ್ಟ್‌ಗೆ ಭಾರತ ತಂಡದಲ್ಲಿ 2 ಬದಲಾವಣೆ ಸೂಚಿಸಿದ ಮಾಂಜ್ರೇಕರ್‌!

ಮುಂಬೈ: ಐತಿಹಾಸಿಕ ಸಾಧನೆಯನ್ನು ಎದುರು ನೋಡುತ್ತಿದೆ. 1992ರಿಂದ ಪ್ರವಾಸ ಕೈಗೊಂಡಿರುವ ಭಾರತ ತಂಡಕ್ಕೆ ಈವರೆಗೆ ಟೆಸ್ಟ್‌ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಈ ಬಾರಿ 3 ಟೆಸ್ಟ್‌ಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಾಗ 1-1ರ ಸಮಬಲ ಕಂಡಿರುವ ಭಾರತ ತಂಡ, ಈಗ ಸರಣಿ ನಿರ್ಣಾಯಕ ಕೇಪ್‌ ಟೌನ್‌ ಟೆಸ್ಟ್‌ನಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಗೆಲುವನ್ನು ಎದುರು ನೋಡುತ್ತಿದೆ. ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 112 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಆದರೆ, ಗಾಯದ ಸಮಸ್ಯೆ ಕಾರಣ ದ್ವಿತೀಯ ಟೆಸ್ಟ್‌ಗೆ ಅಲಭ್ಯರಾದಾಗ ಕೆಎಲ್‌ ರಾಹುಲ್‌ ಸಾರಥ್ಯದಲ್ಲಿ ಆಡಿದ್ದ ಭಾರತ ತಂಡ 7 ವಿಕೆಟ್‌ಗಳ ಸೋಲನುಭವಿಸಿತ್ತು. ಹೀಗಾಗಿ ಸರಣಿಯ ಕ್ಲೈಮ್ಯಾಕ್ಸ್‌ ಟೆಸ್ಟ್‌ ಆಗಿರುವ ಕೇಪ್‌ ಟೌನ್‌ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಲೆಸಿದೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ , ಮಹತ್ವದ ಟೆಸ್ಟ್‌ ಪಂದ್ಯಕ್ಕೆ ಟೀಮ್ ಇಂಡಿಯಾ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಎರಡು ಮಹತ್ವದ ಬದಲಾವಣೆ ತಂದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಾಂಜ್ರೇಕರ್‌, ಹನುಮ ವಿಹಾರಿ ಜಾಗಕ್ಕೆ ವಿರಾಟ್‌ ಕೊಹ್ಲಿ ಮತ್ತು ಗಾಯಾಳು ಮೊಹಮ್ಮದ್‌ ಸಿರಾಜ್‌ ಸ್ಥಾನದಲ್ಲಿ ಅನುಭವಿ ಇಶಾಂತ್‌ ಶರ್ಮಾ ಆಡಬೇಕಿತ್ತು ಎಂದಿದ್ದಾರೆ. "ಮನಸ್ಸು ಭಾರವಾಗುತ್ತದೆ. ಆದರೆ ವಿರಾಟ್‌ ಕೊಹ್ಲಿ ಸಲುವಾಗಿ ಹನುಮ ವಿಹಾರಿ ಸ್ಥಾನ ಮಾಡಿಕೊಡಲೇ ಬೇಕು. ಈ ನಡುವೆ ಅಜಿಂಕ್ಯ ರಹಾನೆ ಅವರನ್ನು ಕೈ ಬಿಡಬೇಕು ಎಂದನ್ನಿಸಿದ್ದೂ ನಿಜ. ಆದರೆ, ಎರಡನೇ ಟೆಸ್ಟ್‌ನಲ್ಲಿ ಅವರು ಬಾರಿಸಿದ್ದ ಹೋರಾಟಯುತ ಅರ್ಧಶತಕದ ಒಂದೇ ಒಂದು ಕಾರಣಕ್ಕೆ ಅವರಿಗೆ ಮತ್ತೊಂದು ಅವಕಾಶ ಕೊಡಲಾಗಿದೆ. ಈ ಬಗ್ಗೆ ಚರ್ಚೆ ಮಾಡಬಹುದು ಕೂಡ," ಎಂದು ಮಾಂಜ್ರೇಕರ್‌ ಹೇಳಿದ್ದಾರೆ. ಈ ನಡುವೆ ಮೊಹಮ್ಮದ್‌ ಸಿರಾಜ್‌ ಗಾಯಗೊಂಡಿರುವ ಕಾರಣ ಅವರ ಸ್ಥಾನದಲ್ಲಿ ಇಶಾಂತ್‌ ಶರ್ಮಾ ಮತ್ತು ಉಮೇಶ್‌ ಯಾದವ್‌ ಅವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು. ಇಲ್ಲಿ ಅನುಭವಿ ವೇಗಿ ಇಶಾಂತ್‌ಗೆ ಮಣೆ ಹಾಕುವುದೇ ಸರಿ ಎಂದು ಮಾಂಜ್ರೇಕರ್‌ ಅಭಿಪ್ರಾಯ ಪಟ್ಟಿದ್ದಾರೆ. ಸಂಜಯ್‌ ಆಯ್ಕೆಯ ಟೀಮ್ ಇಂಡಿಯಾ ಪ್ಲೇಯಿಂಗ್‌ ಇಲೆವೆನ್‌ ಹೀಗಿದೆ 1. ಕೆಎಲ್‌ ರಾಹುಲ್‌ (ಓಪನರ್‌) 2. ಮಯಾಂಕ್‌ ಅಗರ್ವಾಲ್‌ (ಓಪನರ್‌) 3. ಚೇತೇಶ್ವರ್‌ ಪೂಜಾರ (ಬ್ಯಾಟ್ಸ್‌ಮನ್‌) 4. ವಿರಾಟ್‌ ಕೊಹ್ಲಿ (ಬ್ಯಾಟ್ಸ್‌ಮನ್‌/ ಕ್ಯಾಪ್ಟನ್‌) 5. ಅಜಿಂಕ್ಯ ರಹಾನೆ (ಬ್ಯಾಟ್ಸ್‌ಮನ್‌) 6. ರಿಷಭ್ ಪಂತ್‌ (ವಿಕೆಟ್‌ಕೀಪರ್‌/ ಬ್ಯಾಟ್ಸ್‌ಮನ್‌) 7. ಶಾರ್ದುಲ್‌ ಠಾಕೂರ್‌ (ಆಲ್‌ರೌಂಡರ್‌) 8. ಆರ್‌ ಅಶ್ವಿನ್‌ (ಆಫ್‌ ಸ್ಪಿನ್ನರ್‌) 9. ಜಸ್‌ಪ್ರೀತ್‌ ಬುಮ್ರಾ (ಬಲಗೈ ವೇಗಿ) 10. ಮೊಹಮ್ಮದ್‌ ಶಮಿ (ಬಲಗೈ ವೇಗಿ) 11. ಇಶಾಂತ್‌ ಶರ್ಮಾ (ಬಲಗೈ ವೇಗಿ)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3qbeXTa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...