ರೋಹಿತ್‌-ಧವನ್‌ ಓಪನರ್ಸ್‌! ವಿಂಡೀಸ್‌ ಓಡಿಐ ಸರಣಿಗೆ ಭಾರತ ಸಂಭಾವ್ಯ XI ಇಂತಿದೆ..

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಓಡಿಐ ಸರಣಿ ಸೋತು ತವರಿಗೆ ಮರಳಿರುವ ಭಾರತ ತಂಡದಲ್ಲಿ ಇನ್ನು ಮುಂದೆ ರೋಹಿತ್‌ ಶರ್ಮಾ ಹವಾ ಶುರುವಾಗಲಿದೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಓಡಿಐ ಸರಣಿ ಹಾಗೂ ಅಷ್ಟೇ ಪಂದ್ಯಗಳ ಟಿ20 ತವರು ಸರಣಿಗಳಿಗೆ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದೆ.ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದ ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಕೆ.ಎಲ್‌ ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರದ್ಧ ಓಡಿಐ ಸರಣಿ ಆಡಿತ್ತು. ಇದೀಗ ರೋಹಿತ್‌ ಶರ್ಮಾ ಸಂಪೂರ್ಣ ಫಿಟ್ ಆಗಿದ್ದು, ವೆಸ್ಟ್‌ ಇಂಡೀಸ್‌ ವಿರುದ್ಧ ಫೆ. 6 ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲನೇ ಏಕದಿನ ಪಂದ್ಯದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ತವರು ಸರಣಿಗಳಿಗೆ ಹಿರಿಯ ವೇಗಿಗಳಾದ ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್‌ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಸರಣಿಯಲ್ಲಿ ಸ್ಪಿನ್‌ ಹಾಗೂ ವೇಗಿಗಳ ಸಂಯೋಜನೆಯ ಅಂತ್ಯುತ್ತಮ ಪ್ಲೇಯಿಂಗ್‌ ಇಲೆವೆನ್‌ನೊಂದಿಗೆ ಟೀಮ್ ಇಂಡಿಯಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಅದರಂತೆ ವಿಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಒಡಿಐ ಸರಣಿಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌ ಅನ್ನು ಇಲ್ಲಿ ವಿವರಿಸಲಾಗಿದೆ.

ವೆಸ್ಟ್‌ ಇಂಡೀಸ್‌ ವಿರುದ್ಧ ಫೆಬ್ರವರಿ 6 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಓಡಿಐ ಸರಣಿಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌ ಆರಿಸಲಾಗಿದ್ದು, ರೋಹಿತ್‌ ಶರ್ಮಾ ಹಾಗೂ ಶಿಖರ್‌ ಧವನ್ ಇನಿಂಗ್ಸ್‌ ಆರಂಭಿಸಬಹುದಾಗಿದೆ.


ರೋಹಿತ್‌-ಧವನ್‌ ಓಪನರ್ಸ್‌! ವಿಂಡೀಸ್‌ ಓಡಿಐ ಸರಣಿಗೆ ಭಾರತ ಸಂಭಾವ್ಯ XI ಇಂತಿದೆ..

ಹೊಸದಿಲ್ಲಿ:

ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಓಡಿಐ ಸರಣಿ ಸೋತು ತವರಿಗೆ ಮರಳಿರುವ ಭಾರತ ತಂಡದಲ್ಲಿ ಇನ್ನು ಮುಂದೆ ರೋಹಿತ್‌ ಶರ್ಮಾ ಹವಾ ಶುರುವಾಗಲಿದೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಓಡಿಐ ಸರಣಿ ಹಾಗೂ ಅಷ್ಟೇ ಪಂದ್ಯಗಳ ಟಿ20 ತವರು ಸರಣಿಗಳಿಗೆ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದೆ.

ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದ ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಕೆ.ಎಲ್‌ ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರದ್ಧ ಓಡಿಐ ಸರಣಿ ಆಡಿತ್ತು. ಇದೀಗ ರೋಹಿತ್‌ ಶರ್ಮಾ ಸಂಪೂರ್ಣ ಫಿಟ್ ಆಗಿದ್ದು, ವೆಸ್ಟ್‌ ಇಂಡೀಸ್‌ ವಿರುದ್ಧ ಫೆ. 6 ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲನೇ ಏಕದಿನ ಪಂದ್ಯದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ತವರು ಸರಣಿಗಳಿಗೆ ಹಿರಿಯ ವೇಗಿಗಳಾದ ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್‌ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಸರಣಿಯಲ್ಲಿ ಸ್ಪಿನ್‌ ಹಾಗೂ ವೇಗಿಗಳ ಸಂಯೋಜನೆಯ ಅಂತ್ಯುತ್ತಮ ಪ್ಲೇಯಿಂಗ್‌ ಇಲೆವೆನ್‌ನೊಂದಿಗೆ ಟೀಮ್ ಇಂಡಿಯಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಅದರಂತೆ ವಿಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಒಡಿಐ ಸರಣಿಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌ ಅನ್ನು ಇಲ್ಲಿ ವಿವರಿಸಲಾಗಿದೆ.



​ಆರಂಭಿಕರು: ರೋಹಿತ್‌-ಧವನ್‌
​ಆರಂಭಿಕರು: ರೋಹಿತ್‌-ಧವನ್‌

ಬರೋಬ್ಬರಿ ಒಂದು ವರ್ಷದ ಬಳಿಕ ಭಾರತ ಓಡಿಐ ತಂಡದಲ್ಲಿ ರೋಹಿತ್‌ ಶರ್ಮಾ ಹಾಗೂ ಶಿಖರ್‌ ಧವನ್‌ ಇನಿಂಗ್ಸ್‌ ಆರಂಭಿಸಲು ಸಜ್ಜಾಗುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಓಪನರ್‌ ಬ್ಯಾಟ್ಸ್‌ಮನ್‌ಗಳಲ್ಲಿ ರೋಹಿತ್‌-ಧವನ್‌ ಜೋಡಿ ಕೂಡ ಒಂದು. ಕಳೆದ ಇಂಗ್ಲೆಂಡ್‌ ಸರಣಿಯಿಂದ ಧವನ್‌ ಓಡಿಐ ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ. ಆದರೆ ರೋಹಿತ್‌ ಗಾಯದ ಸಮಸ್ಯೆಯಿಂದ ಕೆಲ ಸರಣಿಗಳನ್ನು ಕಳೆದುಕೊಂಡಿದ್ದರು.

ರೋಹಿತ್‌ ಶರ್ಮಾ ಹಾಗೂ ಶಿಖರ್‌ ಧವನ್‌ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನಿಂಗ್ಸ್‌ ಆರಂಭಿಸಿದ್ದ ಕೆಎಲ್ ರಾಹುಲ್‌ ವೆಸ್ಟ್ ಇಂಡೀಸ್‌ ವಿರುದ್ಧ ಓಡಿಐ ಸರಣಿಯಲ್ಲಿ ಮಧ್ಯಮ ಕ್ರಮಾಂಕಕ್ಕೆ ಮರಳುವ ಸಾಧ್ಯತೆ ಇದೆ. ಅದಹಾಗೆ ಕಳೆದ ಎರಡು ವರ್ಷಗಳಿಂದ ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಹಾಗಾಗಿ 4 ಅಥವಾ 5 ನೇ ಕ್ರಮಾಂಕದಲ್ಲಿ ರಾಹುಲ್‌ ಆಡುವ ಸಂಭವವಿದೆ.

ವಿಂಡೀಸ್‌ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ!



​ಮಧ್ಯಮ ಕ್ರಮಾಂಕ: ಕೊಹ್ಲಿ, ರಾಹುಲ್, ಪಂತ್‌
​ಮಧ್ಯಮ ಕ್ರಮಾಂಕ: ಕೊಹ್ಲಿ, ರಾಹುಲ್, ಪಂತ್‌

ಎಂದಿನಂತೆ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮೂರನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಒಡಿಐ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದ್ದರು. ಆ ಮೂಲಕ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅಂದಹಾಗೆ ಈ ಸರಣಿಯಲ್ಲಿ ಕೊಹ್ಲಿ ವೃತ್ತಿ ಬದುಕಿನ 71ನೇ ಶತಕದ ನಿರೀಕ್ಷೆಯಲ್ಲಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕೆ.ಎಲ್‌ ರಾಹುಲ್‌ ಆಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಶ್ರೇಯಸ್‌ ಅಯ್ಯರ್‌ ಆಡುವ ಬಳಗದಲ್ಲಿ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸುವುದು ಬಹುತೇಕ ಖಚಿತ.

ಭಾರತ ವಿರುದ್ಧದ ಟಿ20 ಸರಣಿಗೆ ವೆಸ್ಟ್‌ ಇಂಡೀಸ್‌ ತಂಡ ಪ್ರಕಟ!



​6ನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್‌
​6ನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್‌

ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಓಡಿಐ ಪಂದ್ಯದಲ್ಲಿ ಭಾರತ ಆರು ಬ್ಯಾಟ್ಸ್‌ಮನ್‌ಗಳು ಹಾಗೂ ಐವರು ಬೌಲರ್‌ಗಳೊಂದಿಗೆ ಕಣಕ್ಕೆ ಇಳಿದಿತ್ತು. ಆದರೆ ವಿಂಡೀಸ್‌ ವಿರುದ್ಧ ಓಡಿಐ ಸರಣಿಗೆ ವೆಂಕಟೇಶ್‌ ಅಯ್ಯರ್‌ ಇಲ್ಲ, ಮತ್ತೊಂದೆಡೆ ಹಾರ್ದಿಕ್‌ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಸಂಪೂರ್ಣ ಫಿಟ್ ಇಲ್ಲ. ಈ ಹಿನ್ನೆಲೆಯಲ್ಲಿ ತಂಡದ ಆಡುವ ಬಳಗದಲ್ಲಿ ದೀಪಕ್‌ ಹೂಡ ಒಬ್ಬರು ಮಾತ್ರ ಬ್ಯಾಟಿಂಗ್ ಆಲ್‌ರೌಂಡರ್‌ ಆಗಿ ಇದ್ದಾರೆ. ಆದರೆ ಅನುಭವದ ಕೊರತೆಯ ಹಿನ್ನೆಲೆಯಲ್ಲಿ ಆರನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್ ಅವರನ್ನು ಆಡಿಸುವ ಸಾಧ್ಯತೆ ಇದೆ.

ಶ್ರೇಯಸ್‌ ಅಯ್ಯರ್‌ಗೆ ಹೋಲಿಕೆ ಮಾಡಿದರೆ ಸೂರ್ಯಕುಮಾರ್‌ ಯಾದವ್‌ ಕಳೆದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಓಡಿಐ ಸರಣಿಯಲ್ಲಿ ಸೂರ್ಯಕುಮಾರ್‌ ಯಾದವ್ 6ನೇ ಕ್ರಮಾಂಕದಲ್ಲಿಆಡುವ ಸಾಧ್ಯತೆ ದಟ್ಟವಾಗಿದೆ. ಕೆ.ಎಲ್‌ ರಾಹುಲ್ ಮೊದಲನೇ ಓಡಿಐಗೆ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ಶ್ರೇಯಸ್ ಅಯ್ಯರ್‌ 4 ಅಥವಾ 5ನೇ ಕ್ರಮಾಂಕದಲ್ಲಿ ಚಾನ್ಸ್‌ ಪಡೆದುಕೊಳ್ಳುವ ಸಾಧ್ಯತೆ ಇದೆ.

ಫಿಟ್ನೆಸ್‌ ಟೆಸ್ಟ್‌ನಲ್ಲಿ ರೋಹಿತ್‌ ಪಾಸ್‌, ವಿಂಡೀಸ್‌ ವಿರುದ್ಧದ ಸರಣಿಗೆ ಸಜ್ಜಾದ 'ಹಿಟ್‌ಮ್ಯಾನ್'



​ಬೌಲಿಂಗ್‌ ಆಲ್‌ರೌಂಡರ್ಸ್‌: ವಾಷಿಂಗ್ಟನ್‌, ಶಾರ್ದುಲ್, ಚಹರ್‌
​ಬೌಲಿಂಗ್‌ ಆಲ್‌ರೌಂಡರ್ಸ್‌: ವಾಷಿಂಗ್ಟನ್‌, ಶಾರ್ದುಲ್, ಚಹರ್‌

ಬ್ಯಾಟಿಂಗ್‌ ಏಳನೇ ಕ್ರಮಾಂಕದಲ್ಲಿ ವಾಷಿಂಗ್ಟನ್‌ ಸುಂದರ್‌ ಆಡುವ ಸಾಧ್ಯತೆ ಇದೆ. ಬೌಲಿಂಗ್‌ ಆಲ್‌ರೌಂಡರ್‌ ಆಗಿ ಸುಂದರ್‌ ಈ ಹಿಂದೆ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರಾಎ. ಇತ್ತೀಚೆಗೆ ಮುಕ್ತಾಯವಾಗಿದ್ದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿಯೂ ತಮಿಳುನಾಡು ಆಲ್‌ರೌಂಡರ್‌ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಈ ಟೂರ್ನಿಯಲ್ಲಿ ಕೆಳ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ಅವರು ಉತ್ತಮ ರನ್‌ಗಳನ್ನು ಗಳಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಓಡಿಐ ಸರಣಿಯಲ್ಲಿ ಶಾರ್ದುಲ್‌ ಠಾಕೂರ್‌ ಹಾಗೂ ದೀಪಕ್‌ ಚಹರ್‌ ಅವರ ಬ್ಯಾಟಿಂಗ್‌ ಪ್ರದರ್ಶನ ಟೀಮ್‌ ಇಂಡಿಯಾ ಪಾಲಿಗೆ ಪಾಸಿಟಿವ್‌ ಅಂಶವಾಗಿತ್ತು. ಈ ಸರಣಿಯಲ್ಲಿ ಈ ಇಬ್ಬರೂ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇದರಲ್ಲಿ ಪ್ಲಸ್‌ ಪಾಯಿಂಟ್‌ ಎಂದರೆ ಈ ಜೋಡಿಯ ಬ್ಯಾಟಿಂಗ್! ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್‌ ವಿರುದ್ದದ ಓಡಿಐ ಸರಣಿಗೆ ಶಾರ್ದುಲ್‌ ಹಾಗೂ ದೀಪಕ್‌ 8 ಮತ್ತು 9ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರರಾಗಿದ್ದಾರೆ.

ಟೀಮ್ ಇಂಡಿಯಾದಿಂದ ಅಶ್ವಿನ್‌ ಹೊರ ಬೀಳಲು ಇದೇ ಕಾರಣ!



​ಬೌಲರ್‌ಗಳು: ಮೊಹಮ್ಮದ್‌ ಸಿರಾಜ್‌, ಯುಜ್ವೇಂದ್ರ ಚಹಲ್‌
​ಬೌಲರ್‌ಗಳು: ಮೊಹಮ್ಮದ್‌ ಸಿರಾಜ್‌, ಯುಜ್ವೇಂದ್ರ ಚಹಲ್‌

ಇನ್ನು ಬೌಲರ್‌ಗಳ ಸ್ಥಾನದಲ್ಲಿ ತಂಡದ ಕೊನೆಯ ಎರಡು ಸ್ಥಾನಗಳಿಗೆ ಮೊಹಮ್ಮದ್‌ ಸಿರಾಜ್‌ ಹಾಗೂ ಯುಜ್ವೇಂದ್ರ ಚಹಲ್‌ ಅವಕಾಶ ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಪಂದ್ಯದಲ್ಲಿ ಆಡಿದ್ದ ಪ್ರಸಿಧ್‌ ಕೃಷ್ಣ ಬದಲು ಸಿರಾಜ್‌ ಪ್ಲೇಯಿಂಗ್‌ XIನಲ್ಲಿ ಆಡುವ ನೆಚ್ಚಿನ ಆಟಗಾರರಾಗಿದ್ದಾರೆ. ಇನ್ನು ಸ್ಪಿನ್ ವಿಭಾಗವನ್ನು ಅನುಭವಿ ಯುಜ್ವೇಂದ್ರ ಚಹಲ್ ಮುನ್ನಡೆಸುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧ ಯೋಗ್ಯ ಪ್ರದರ್ಶನ ತೋರಿದ್ದ ಚಹಲ್‌, ವಿಂಡೀಸ್‌ ಸರಣಿಯಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಲೇ ಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಯುವ ಸ್ಪಿನ್ನರ್‌ ರವಿ ಬಿಷ್ಣೋಯ್‌ಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ.

ಚಹಲ್‌ ಸ್ಥಾನ ಕಬಳಿಸಲು ಕಾಯುತ್ತಿರುವ ಸ್ಪಿನ್ನರ್‌ ಹೆಸರಿಸಿದ ಕಾರ್ತಿಕ್‌!





from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/1OtsS5Hbe

ಧೋನಿ ಅಲ್ಲ, ತಂಡದಲ್ಲಿ ಸ್ಥಾನ ಕಳೆದುಕೊಳ್ಳಲು ಇವರೇ ಕಾರಣ ಎಂದ ಭಜ್ಜಿ!

ಹೊಸದಿಲ್ಲಿ: ಭಾರತ ತಂಡದಲ್ಲಿ ಅವಕಾಶ ಕಳೆದುಕೊಂಡ ಬಗ್ಗೆ ಮಾಜಿ ನಾಯಕ ವಿರುದ್ಧ ನಾನು ದೂರುವುದಿಲ್ಲ. ಏಕೆಂದರೆ ಅವರು ಆ ವರ್ಷಗಳಲ್ಲಿ ನನಗೆ ಅತ್ಯುತ್ತಮ ಸ್ನೇಹಿತರಾಗಿದ್ದರು ಎಂದು ಮಾಜಿ ಸ್ಪಿನ್ನರ್‌ ಹೇಳಿದ್ದಾರೆ. 2007ರ ಐಸಿಸಿ ಟಿ20 ವಿಶ್ವಕಪ್‌ ಹಾಗೂ 2011ರ ವಿಶ್ವಕಪ್‌ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಹರ್ಭಜನ್ ಸಿಂಗ್‌ 2021ರ ಡಿಸೆಂಬರ್‌ 24 ರಂದು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂದಹಾಗೆ 2016ರಲ್ಲಿ ಕೊನೆಯ ಬಾರಿ ಭಜ್ಜಿ ಭಾರತ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು. ಒಬ್ಬ ಆಟಗಾರನಾಗಿ ಅತ್ಯುತ್ತಮ ಲಯದಲ್ಲಿದ್ದಾಗ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ತಮಗೆ ಹೆಚ್ಚಿನ ಬೆಂಬಲ ನೀಡಿರಲಿಲ್ಲ. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗ ಹಾಗೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾಗ ಆಟಗಾರನಿಗೆ ಕ್ರಿಕೆಟ್‌ ಮಂಡಳಿ ಬೆಂಬಲ ತುಂಬಾ ಅತ್ಯಗತ್ಯ. ಆದರೆ ಈ ವಿಷಯದಲ್ಲಿ ನನಗೆ ಬಿಸಿಸಿಐನಿಂದ ಯಾವುದೇ ಸಹಕಾರ ಸಿಗಲಿಲ್ಲ ಎಂದು ಹರ್ಭಜನ್‌ ಸಿಂಗ್‌ ಬೇಸರ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಅವಕಾಶ ಕಳೆದುಕೊಂಡ ಬಗ್ಗೆ ಎಂಎಸ್‌ ಧೋನಿ ವಿರುದ್ಧ ಏನಾದರೂ ದೂರು ಇದೆಯೇ ಎಂದು ನ್ಯೂಸ್‌18 ಹರ್ಭಜನ್‌ ಸಿಂಗ್‌ಗೆ ಪ್ರಶ್ನೆ ಕೇಳಿತು. ಇದಕ್ಕೆ ಮಾಜಿ ಆಫ್‌ ಸ್ಪಿನ್ನರ್‌, ಎಂಎಸ್‌ ಧೋನಿ ವಿರುದ್ಧ ನಾನು ದೂರುವುದಿಲ್ಲ. ಅವರು ಆ ವರ್ಷಗಳಲ್ಲಿ ನನಗೆ ಉತ್ತಮ ಸ್ನೇಹಿತರಾಗಿದ್ದರು ಎಂದರು. "ಇಲ್ಲವೇ, ಇಲ್ಲ. ಎಂಎಸ್ ವಿರುದ್ಧ ನನ್ನಿಂದ ದೂರು ಇಲ್ಲ. ಅಂದಹಾಗೆ ಆ ವರ್ಷಗಳಲ್ಲಿ ಅವರು ನನಗೆ ಉತ್ತಮ ಸ್ನೇಹಿತರಾಗಿದ್ದರು. ಆದರೆ ವಿರುದ್ಧ ನನ್ನಿಂದ ದೂರು ಇದೆ. ಏಕೆಂದರೆ ಆ ಸಂದರ್ಭದಲ್ಲಿ ಬಿಸಿಸಿಐ ಒಂದು ರೀತಿ ಸರ್ಕಾರವಾಗಿತ್ತು. ಹಾಗಾಗಿ ಬಿಸಿಸಿಐ ಅನ್ನು ನಾನು ಸರ್ಕಾರ ಎಂದು ಕರೆಯುತ್ತೇನೆ. ಆಗಿನ ಸಂದರ್ಭದಲ್ಲಿ ಸೆಲೆಕ್ಟರ್‌ಗಳು ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿರಲಿಲ್ಲ ಹಾಗೂ ಅವರು ತಂಡವನ್ನು ಒಗ್ಗೂಡಿಸಲು ಬಿಟ್ಟಿರಲಿಲ್ಲ," ಎಂದರು. "ಹಿರಿಯ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಉತ್ತುಂಗದಲ್ಲಿರುವ ವೇಳೆ ಹೊಸ ಆಟಗಾರರನ್ನು ತಂಡಕ್ಕೆ ಕರೆ ತರುವ ಅಗತ್ಯವೇನಿತ್ತು? ಈ ಬಗ್ಗೆ ನಾನು ಒಮ್ಮೆ ಸೆಲೆಕ್ಟರ್‌ಗಳ ಬಳಿ ಮಾತನಾಡಿದ್ದೆ, ಇದಕ್ಕೆ ಅವರು ಇದು ನಮ್ಮ ಕೈಯಲ್ಲಿ ಇಲ್ಲ ಎಂದು ಉತ್ತರ ನೀಡಿದ್ದರು. ಮತ್ತೇ ನೀವು ಏಕೆ ಸೆಲೆಕ್ಟರ್‌ಗಳಾಗಿದ್ದೀರಿ ಎಂದು ನಾನು ಅವರಿಗೆ ಮರು ಪ್ರಶ್ನೆ ಕೇಳಿದ್ದೆ," ಎಂದು ಈ ಹಿಂದಿನ ಸೆಲೆಕ್ಟರ್‌ಗಳ ವಿರುದ್ಧ ಭಜ್ಜಿ ಆಕ್ರೋಶ ವ್ಯಕ್ತಪಡಿಸಿದರು. "ನೋಡಿ, ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಾರೆ. 2012ರ ನಂತರ ಬಹಳಷ್ಟು ವಿಷಯಗಳು ಉತ್ತಮವಾಗಿರಬಹುದೆಂದು ನಾನು ತಿಳಿಸಲು ಬಯಸುತ್ತೇನೆ. ಸೆಹ್ವಾಗ್‌, ನಾನು, ಯುವರಾಜ್‌, ಗಂಭೀರ್ ಸೇರಿದಂತೆ ಹಲವು ಸ್ಟಾರ್‌ ಆಟಗಾರರು ಐಪಿಎಲ್‌ನಲ್ಲಿ ಸಕ್ರಿಯರಾಗಿದ್ದರಿಂದ ಭಾರತ ತಂಡದ ಪರ ಆಡುವಾಗಲೇ ವೃತ್ತಿ ಬದುಕಿಗೆ ವಿದಾಯ ಹೇಳಬಹುದಿತ್ತು. 2011ರ ವಿಶ್ವಕಪ್ ಗೆದ್ದಿದ್ದ ಈ ಆಟಗಾರರು ಮತ್ತೆ ತಂಡದಲ್ಲಿ ಒಂದಾಗಲು ಸಾಧ್ಯವಾಗಲೇ ಇಲ್ಲ. ಏಕೆ? ಇದರಲ್ಲಿ ಕೆಲವರು ಮಾತ್ರ 2015ರ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಏಕೆ?' ಎಂದು ಹರ್ಭಜನ್‌ ಸಿಂಗ್‌ ಪ್ರಶ್ನೆ ಮಾಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/6ehyPikSO

ಕೇಂದ್ರ ಬಜೆಟ್‌ನತ್ತ ಕಲಬುರಗಿ ಜನರ ಚಿತ್ತ; ಹೊಸ ಯೋಜನೆ ಘೋಷಣೆಯಾಗಲಿ ಎಂಬ ನಿರೀಕ್ಷೆ

ವೆಂಕಟೇಶ ಏಗನೂರು ಕಲಬುರಗಿ: ಕೇಂದ್ರ ಸರಕಾರ ಮಂಗಳವಾರ (ಇಂದು) ಬಜೆಟ್‌ ಮಂಡಿಸಲಿದ್ದು, ಅದರಲ್ಲೂ ಜಿಲ್ಲೆಗೆ ಹೊಸ ಯೋಜನೆಗಳು ಸಿಗಬಹುದಾ ಎಂಬ ನಿರೀಕ್ಷೆಗಳು ಗರಿಗೆದರಿವೆ. ಕಲ್ಯಾಣ ಕರ್ನಾಟಕ ಭಾಗದ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಗೆ ನಿರೀಕ್ಷೆಯಂತೆಯೇ ಹಲವು ಯೋಜನೆಗಳನ್ನು ಕೇಂದ್ರ ಸರಕಾರದಿಂದ ನಿರೀಕ್ಷೆ ಮಾಡಲಾಗಿದೆ. ಜಿಲ್ಲೆಗೆ ಮಂಜೂರಾದ ಯೋಜನೆಗಳು ಕಳೆದುಕೊಳ್ಳುತ್ತಿರುವ ಮಧ್ಯೆಯೂ ಕೇಂದ್ರ ಈ ಬಾರಿ ಹೊಸ ಯೋಜನೆಗಳನ್ನು ಘೋಷಿಸಲಿದೆಯಾ ಅಥವಾ ಅನುದಾನ ಏನಾದರೂ ಹರಿಸಲಿದ್ದಾರಾ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಬಜೆಟ್‌ ಲೆಕ್ಕದ ಮೇಲೆ ಜಿಲ್ಲೆಯ ಜನರ ಚಿತ್ತವಿದ್ದು, ಜಿಲ್ಲೆಗೆ ಏನು ಸಿಗಲಿದೆ ಎಂಬ ಲೆಕ್ಕಾಚಾರದ ಚರ್ಚೆಯಲ್ಲಿ ತೊಡಗಿದ್ದಾರೆ. ನಿಮ್ಸ್‌ಗೆ ದೊರೆಯುವುದೇ ಚಾಲನೆ: ಅಂದಿನ ಯುಪಿಎ ಸರಕಾರ 2014ರಲ್ಲಿ ಜಿಲ್ಲೆಗೆ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನಿಮ್ಸ್‌)ವನ್ನು ಘೋಷಿಸಲಾಗಿತ್ತು. ಆದರೆ, ಈ ಯೋಜನೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದ್ದು, ಈ ಯೋಜನೆಗೆ ಕೇಂದ್ರ ಅನುದಾನ ಘೋಷಿಸಿ ಚಾಲನೆ ನೀಡಬೇಕಾದ ಅನಿವಾರ್ಯತೆಯಿದ್ದು, ಈ ಬಾರಿ ಈ ಯೋಜನೆಯತ್ತ ಸರಕಾರ ಗಮನ ಹರಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವೂ ಆಗಿದೆ. ಘೋಷಣೆಯಾಗಲಿ ಏಮ್ಸ್‌: ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿ ರಾಜ್ಯಕ್ಕೆ ಒಂದು ಏಮ್ಸ್‌ ನೀಡುತ್ತೇವೆ ಎಂದು ಈ ಹಿಂದೆ ಘೋಷಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಅವರ ಅವಧಿಯಲ್ಲಿಯೂ ಕಲಬುರಗಿ ಏಮ್ಸ್‌ಗೆ ಸೂಕ್ತ ಎಂದು ಘೋಷಿಸಿದ್ದರು. ಕಲಬುರಗಿಯಲ್ಲಿ ಇರುವ ಇಎಸ್‌ಐಸಿ ಆಸ್ಪತ್ರೆ 1,400 ಕೋಟಿ ರೂ.ಯಲ್ಲಿ ನಿರ್ಮಾಣಗೊಂಡಿದ್ದು, ಇದರಲ್ಲಿ ಕೇವಲ ಶೇ 12ರಷ್ಟು ಮಾತ್ರ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏಮ್ಸ್‌ ಘೋಷಣೆಯಾದರೆ ಜಿಲ್ಲೆ ಮೆಡಿಕಲ್‌ ಹಬ್‌ ಆಗಿ ಪರಿವರ್ತನೆಯಾಗಿ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ.


from India & World News in Kannada | VK Polls https://ift.tt/skyePB4zg

ರಸಹೀನ ಕಾರ್ಯಕ್ರಮ ಪ್ರಸಾರ ಮಾಡಿ FM Rainbow ಮುಚ್ಚುವ ಹುನ್ನಾರ: ಸುರೇಶ್‌ಕುಮಾರ್‌ ಆಕ್ಷೇಪ

ಬೆಂಗಳೂರು: ಅಕಾಶವಾಣಿಯ ‘ರೇನ್‌ ಬೋ 101.3 ಎಫ್‌ಎಂ’ ರೇಡಿಯೊ ಚಾನೆಲ್‌ ಅನ್ನು ಹಂತ -ಹಂತವಾಗಿ ಮುಚ್ಚಲು ಮುಂದಾಗಿರುವುದರ ವಿರುದ್ಧ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ವಲಯದ ಆಕಾಶವಾಣಿ ಮುಖ್ಯಸ್ಥ ರಮಾಕಾಂತ್‌ ವಿರುದ್ಧ ಆಕ್ರೋಶ ಹೊರಹಾಕಿರುವ ಮಾಜಿ ಸಚಿವ ಎಸ್‌. ಸುರೇಶ್‌ಕುಮಾರ್‌, ‘ರೇನ್‌ ಬೋ 101.3 ಎಫ್‌ಎಂ ಚಾನೆಲ್‌ ಬೆಂಗಳೂರಿನ ಸಂಸ್ಕೃತಿಯ ಪ್ರತೀಕವಾಗಿರುವ ಮತ್ತು ವ್ಯಾಪಾರಿ ಮನೋಧರ್ಮವನ್ನು ಮೀರಿ ಅಪ್ಪಟ ಮನೋರಂಜನೆಗೆ ಹೆಸರಾಗಿದೆ. ರಮಾಕಾಂತ್‌ ಅವರು ಭಾಷಾಂಧತೆ ಹಾಗೂ ಸುದ್ದಿ ಮೂಲದ ಜವಾಬ್ದಾರಿಗಳನ್ನಷ್ಟೇ ಸೇವೆಯುದ್ದಕ್ಕೂ ನಿರ್ವಹಿಸಿಕೊಂಡು ಬಂದಿದ್ದಾರೆ. ಮನೋರಂಜನೆ ಕುರಿತು ಅವರು ಹೊಂದಿರುವ ಉಪೇಕ್ಷೆ ಇಂತಹ ದುಷ್ಟ ಆಲೋಚನೆಗೆ ಕಾರಣವಾಗಿದೆ’ ಎಂದು ಕಿಡಿಕಾರಿದ್ದಾರೆ. ‘ರಾತ್ರಿ 9ರಿಂದ 11ರವರೆಗೆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎಲ್ಲರ ಮೆಚ್ಚುಗೆಯ ಕನ್ನಡ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ರದ್ದು ಮಾಡಲಾಗಿದೆ. ಆ ಜಾಗದಲ್ಲಿ ಪ್ರೈಮರಿ ಚಾನೆಲ್‌ನ ರಸಹೀನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಜನರು ಈ ವಾಹಿನಿಯಿಂದ ವಿಮುಖರಾಗಲಿ ಎಂಬ ದುರುದ್ದೇಶ ಹೊಂದಿರುವಂತಿದೆ. ಪ್ರೈಮರಿ ಚಾನೆಲ್‌ನಲ್ಲಿನ ಹಿಂದಿ ಹಾಗೂ ಅನ್ಯಭಾಷಾ ಸುದ್ದಿ ಕಾರ್ಯಕ್ರಮಗಳನ್ನು ಸಹ ರೇನ್‌ ಬೋ ಮೂಲಕ ಪ್ರಸಾರ ಮಾಡಲು ಹುನ್ನಾರ ನಡೆಯುತ್ತಿದೆ. ಕನ್ನಡ ಸುದ್ದಿಗಳನ್ನು ಹೊರತುಪಡಿಸಿ, ಹಿಂದಿ ಮತ್ತಿತರ ಭಾಷೆಗಳ ಸುದ್ದಿಗಳ ಬಿತ್ತರದ ಅವಶ್ಯಕತೆ ಏನಿದೆ?’ ಎಂದು ಪ್ರಶ್ನಿಸಿದ್ದಾರೆ. ‘ಒಂದು ವೇಳೆ ರಮಾಕಾಂತ್‌ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ 'ರಮಾಕಾಂತ್‌ ಗೋ ಬ್ಯಾಕ್‌' ಚಳವಳಿ ಪ್ರಬಲವಾಗುತ್ತದೆ’, ಎಂದು ಸುರೇಶ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ಎಫ್‌ ರೇನ್‌ಬೋದ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಹೊರಟಿದೆ: ಎಚ್‌ಡಿಕೆಕನ್ನಡದ ಮನರಂಜನೆಯ ಪ್ರತೀಕವಾಗಿರುವ ಎಫ್‌ಎಂ ರೇನ್‌ಬೋ ಸ್ಥಗಿತಕ್ಕೆ ಹಂತ ಹಂತವಾಗಿ ಮುಚ್ಚಲು ಮುಂದಾಗಿರುವುದರ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕೂಡ ಕಿಡಿಕಾರಿದ್ದರು. ಈ ಸಂಬಂಧ ಹೇಳಿಕಡ ಬಿಡುಗಡೆ ಮಾಡಿದ್ದ ಅವರು, ‘ಕನ್ನಡದ ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಸಕಲ ಪ್ರಯತ್ನವನ್ನೂ ಕೇಂದ್ರ ಸರಕಾರ ಮಾಡುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಇನ್ನೊಂದು ಸಾಕ್ಷಿ. ಈಗ ನೇರವಾಗಿ ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದಿದ್ದಾರೆ. ‘ಸೂರ್ಯೋದಯಕ್ಕೆ ಮುನ್ನವೇ ಪ್ರಸಾರ ಆರಂಭಿಸಿ ರಾತ್ರಿ 11ರ ತನಕ ಸತತ 18 ಗಂಟೆ ಕಾಲ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಿರುವ ʼ101.3 ಎಫ್ ಎಂ ರೇನ್ ಬೋ ಕನ್ನಡ ಕಾಮನಬಿಲ್ಲುʼ ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಸರಕಾರ ಹೊರಟಿರುವುದು ಅಕ್ಷಮ್ಯ. ಇದು ಕನ್ನಡಕ್ಕೆ ಕೊಡಲಿ ಪೆಟ್ಟು ಎಂದು ಅವರು ಕಿಡಿಕಾರಿದ್ದಾರೆ. ʼರೇನ್ ಬೋ ಕನ್ನಡ ಕಾಮನಬಿಲ್ಲುʼ ಕೇವಲ ರೇಡಿಯೋ ವಾಹಿನಿ ಮಾತ್ರವಲ್ಲ, ಕನ್ನಡಿಗರ ಹೃದಯ ಬಡಿತ, ಕನ್ನಡದ ಅಸ್ಮಿತೆ ಕೂಡ ಎಂದಿರುವ ಕುಮಾರಸ್ವಾಮಿ, ‘ಆದರೆ, ಕೇಂದ್ರ ಸರಕಾರ ಕನ್ನಡಿಗರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದೆ. ಅಧಿಕಾರಿಗಳ ಮೂಲಕ ಕನ್ನಡಮ್ಮನ ರಕ್ತ ಬಗೆಯುವ ಹೀನ ಕೆಲಸ ಮಾಡುತ್ತಿದೆ. ಈ ಹಿಂದೆ ಕನ್ನಡಿಗರ ಮನೆಮನದಲ್ಲಿ ತುಂಬಿದ್ದ ʼಅಮೃತವರ್ಷಿಣಿʼಯನ್ನು ಮುಗಿಸಲಾಯಿತು. ಈಗ ಕನ್ನಡ ಕಾಮನಬಿಲ್ಲನ್ನು ಮುಗಿಸಲು ಹೊರಟಿದ್ದಾರೆ. ಕನ್ನಡ ವಿರೋಧಿ ಕೇಂದ್ರ ಸರಕಾರ, ಕನ್ನಡದ್ರೋಹಿ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಕನ್ನಡದ ಆಕ್ರಂದನವನ್ನು ಇನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/xEkylvc45

ಮಲಯಾಳಂ ನ್ಯೂಸ್‌ಚಾನೆಲ್‌ ಪ್ರಸಾರ ಸ್ಥಗಿತಗೊಳಿಸಿದ ಕೇಂದ್ರದ ನಿರ್ಧಾರಕ್ಕೆ ಕೇರಳ ಹೈಕೋರ್ಟ್ ತಡೆ

ತಿರುವನಂತಪುರಂ: ಕೇರಳದ ‘ಮೀಡಿಯಾ ಒನ್‌’ ಸುದ್ದಿವಾಹಿನಿಯ ಪ್ರಸಾರ ಸ್ಥಗಿತಗೊಳಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶಕ್ಕೆ ಕೇರಳ ಹೈಕೋರ್ಟ್‌ ಎರಡು ದಿನಗಳವರೆಗೆ ತಡೆಯಾಜ್ಞೆ ನೀಡಿದೆ. ‘ಭದ್ರತಾ ಕಾರಣ’ಗಳಿಂದಾಗಿ ಕೇಂದ್ರ ಸರಕಾರದ ಪರವಾನಗಿ ಪಡೆದ ಚಾನೆಲ್‌ಗಳ ಪಟ್ಟಿಯಿಂದ ಮೀಡಿಯಾ ಒನ್‌ ಸುದ್ದಿವಾಹಿನಿಯನ್ನು ತೆಗೆದುಹಾಕಿದ ಕಾರಣ ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಚಾನೆಲ್‌ ಪ್ರಸಾರ ಸ್ಥಗಿತಗೊಂಡಿತು. ಭದ್ರತಾ ಕಾರಣಗಳಿಂದಾಗಿ ಚಾನೆಲ್‌ ಪರವಾನಗಿ ನವೀಕರಿಸುವುದಿಲ್ಲ ಎಂದು ಆದೇಶಿಸಿದ್ದಕ್ಕಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಮೀಡಿಯಾ ಒನ್‌ ಒಡೆತನ ಹೊಂದಿರುವ ‘ಮಾಧ್ಯಮಮ್‌ ಬ್ರಾಡ್‌ಕಾಸ್ಟಿಂಗ್‌ ಲಿಮಿಟೆಡ್‌’ ಸಂಸ್ಥೆಯು ಮಧ್ಯಾಹ್ನ 1.45ರ ಸುಮಾರಿಗೆ ಹೈಕೋರ್ಟ್‌ ಮೊರೆ ಹೋಯಿತು. ಮಧ್ಯಾಹ್ನ 3 ಗಂಟೆ ವೇಳೆಗೆ ತುರ್ತು ವಿಚಾರಣೆಗೆ ಒಪ್ಪಿದ ನ್ಯಾಯಾಲಯವು ಕೊನೆಗೆ ಕೇಂದ್ರದ ಆದೇಶಕ್ಕೆ ಎರಡು ದಿನ ತಡೆಯಾಜ್ಞೆ ನೀಡಿದೆ. ಸುದ್ದಿವಾಹಿನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್‌.ಶ್ರೀಕುಮಾರ್‌, ‘ಸುದ್ದಿವಾಹಿನಿಯು ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶ ರದ್ದುಗೊಳಿಸಬೇಕು’ ಎಂದು ಮನವಿ ಮಾಡಿದರು. ಕೇಂದ್ರ ಸಚಿವಾಲಯದ ಪರ ಸಹಾಯಕ ಸಾಲಿಸಿಟರ್‌ ಜನರಲ್‌ ಎಸ್‌. ಮನು ವಾದ ಮಂಡಿಸಿದರು. ‘ಕೇಂದ್ರದಿಂದ ಸಮರ್ಪಕ ಸೂಚನೆ ಪ್ರಕಟವಾಗಲು ಸಮಯ ಬೇಕು’ ಎಂದರು. ಕೊನೆಗೆ ನ್ಯಾಯಾಲಯವು ಕೇಂದ್ರದ ಆದೇಶಕ್ಕೆ ಎರಡು ದಿನ ತಡೆಯಾಜ್ಞೆ ನೀಡಿ, ಬುಧವಾರಕ್ಕೆ ವಿಚಾರಣೆ ಮುಂದೂಡಿತು. ದಿಲ್ಲಿ ಹಿಂಸಾಚಾರ ವರದಿ ವೇಳೆ ಕೇಬಲ್‌ ನೆಟ್‌ವರ್ಕ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ 2020ರಲ್ಲೂ ಮೀಡಿಯಾ ಒನ್‌ ಪ್ರಸಾರವನ್ನು ಕೇಂದ್ರ ಸರಕಾರ ಎರಡು ದಿನ ಸ್ಥಗಿತಗೊಳಿಸಿತ್ತು.


from India & World News in Kannada | VK Polls https://ift.tt/yToz37YaJ

ಮೈಸೂರು ಗ್ಯಾಸ್‌ ಪೈಪ್‌ಲೈನ್‌ ಖಾಸಗಿ ಕಂಪನಿಗಳ ಕಮಿಷನ್‌ ಯೋಜನೆ: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪ

: ಗ್ಯಾಸ್‌ ಪೈಪ್‌ ಲೈನ್‌ ಯೋಜನೆ ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಲ್ಲ. ಖಾಸಗಿ ಕಂಪನಿಗಳ ಕಮಿಷನ್‌ ಯೋಜನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪಿಸಿದರು. 'ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ 17 ಖಾಸಗಿ ಕಂಪನಿಗಳಿಗೆ ಬಿಡ್‌ ನೀಡಿದ್ದು, ಗ್ಯಾಸ್‌ ವಿತರಣೆಯನ್ನು ಖಾಸಗೀಕರಣ ಮಾಡುವ ಹುನ್ನಾರವಿದೆ. ಇದು ಬಿಜೆಪಿಯ ಹಿಡನ್‌ ಅಜೆಂಡಾ. 2024ಕ್ಕೆ ಯುಪಿಎ ಅಧಿಕಾರಕ್ಕೆ ಬಂದರೂ ಸಬ್ಸಿಡಿ ನೀಡಲು ಸಾಧ್ಯವಾಗದ ರೀತಿ ಖಾಸಗೀಕರಣಗೊಳಿಸಲಾಗುತ್ತಿದೆ' ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. 500 ರೂ.ಗೆ ಗ್ಯಾಸ್‌ ಶುದ್ಧ ಸುಳ್ಳು '500 ರೂಪಾಯಿಗೆ ಗ್ಯಾಸ್‌ ಸಿಲಿಂಡರ್‌ ನೀಡುವುದು ಸುಳ್ಳು ಆಶ್ವಾಸನೆ. ಈ ವಿಚಾರದಲ್ಲಿ ಸಂಸದ ಪ್ರತಾಪ್‌ ಸಿಂಹ ಸತ್ಯ ಮರೆ ಮಾಚಿದ್ದಾರೆ. ಹೊಸ ಸಂಪರ್ಕ ಪಡೆಯಲು 6 ಸಾವಿರ ಠೇವಣಿ ಜತೆಗೆ ನಾನಾ ಶುಲ್ಕ ಸೇರಿ ಆರಂಭದಲ್ಲೇ 7,154 ರೂ. ಕಟ್ಟಬೇಕು. ಸರಿಯಾಗಿ ಬಿಲ್‌ ಪಾವತಿಸದಿದ್ದರೆ ಸಂಪರ್ಕ ಕಡಿತವಾಗುತ್ತದೆ. ಗ್ಯಾಸ್‌ ದರವನ್ನೂ ಖಾಸಗಿಯವರೇ ನಿಗದಿ ಮಾಡಲಿದ್ದು, ಗ್ಯಾಸ್‌ ಬೆಲೆ ದುಬಾರಿಯಾಗಲಿದೆ. ಇದರಿಂದ ಬಡಬಗ್ಗರನ್ನು ಸುಲಿಗೆ ಮಾಡಲಾಗುತ್ತದೆ' ಎಂದು ಹೇಳಿದರು. ಖಾಸಗಿಯವರ ಕಾಳಜಿ ಏಕೆ? 'ಸಂಸದ ಪ್ರತಾಪ ಸಿಂಹ ಅವರಿಗೆ ಖಾಸಗಿ ಕಂಪನಿಗಳ ಮೇಲೆ ಹೆಚ್ಚು ಕಾಳಜಿ ಏಕೆ? ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಕಮಿಷನ್‌ ಪಡೆಯುತ್ತಿದ್ದೀರಿ ಎಂದು ರೋಹಿಣಿ ಸಿಂಧೂರಿ ಆರೋಪಿಸಿದಾಗ ಅವರನ್ನು ಜಿಲ್ಲೆಯಿಂದಲೇ ಓಡಿಸಿದಿರಿ. ನಂಜನಗೂಡಿನ ಜ್ಯುಬಿಲಿಯಂಟ್‌ ಕಾರ್ಖಾನೆ ವಿರುದ್ಧ ಎಫ್‌ಐಆರ್‌ ದಾಖಲಾಗಲು ಬಿಡದೆ ವಕಾಲತ್ತು ವಹಿಸಿದಿರಿ. ಇದರ ಹಿಂದಿನ ಉದ್ದೇಶ ಏನು? ಗ್ಯಾಸ್‌ ಯೋಜನೆಯಲ್ಲಿ ನಿಮ್ಮ ಶಾಸಕರು ಕಮಿಷನ್‌ ಕೇಳುತ್ತಿದ್ದಾರಾ? ಪಾಲಿಕೆ ಸದಸ್ಯರು ಯಾಕೆ ಸಭೆಗೆ ಬರುತ್ತಿಲ್ಲ? ಯೋಜನೆಗೆ 700 ಕೋಟಿ ರೂ. ವಿನಿಯೋಗಿಸಲಾಗುತ್ತಿದ್ದು, ಪ್ರತಾಪ್‌ ಸಿಂಹಗೆ ಶೇ. 10ರಷ್ಟು ಕಮಿಷನ್‌ ಹೋಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಪ್ರತಾಪ ಸಿಂಹ ಸ್ಪಷ್ಟನೆ ನೀಡಬೇಕು' ಎಂದು ಆಗ್ರಹಿಸಿದರು. ಒಡೆಯರ್‌ ಧೂಳಿಗೂ ಸಮವಲ್ಲ ' - ಕೊಡಗಿಗೆ ಸಂಸದ ಪ್ರತಾಪ್‌ ಸಿಂಹ ಕೊಡುಗೆ ಶೂನ್ಯ. ಕಾಂಗ್ರೆಸ್‌ ಸರಕಾರದ ಅವಧಿಯ ಯೋಜನೆಗಳನ್ನು ಮಾತ್ರ ಇವರು ಪೂರ್ಣಗೊಳಿಸುತ್ತಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ನೂತನ ಯೋಜನೆಗಳನ್ನು ಜಾರಿಗೊಳಿಸಿಲ್ಲ. ರಾಜರ ನಂತರ ನಾನೇ ಎನ್ನುವ ಪ್ರತಾಪ ಸಿಂಹ ನಾಲ್ವಡಿಯವರ ಧೂಳಿಗೂ ಸಮವಲ್ಲ. ಅವರಿಗೆ ಅವಮಾನ ಮಾಡಬೇಡಿ' ಎಂದರು. 'ಪ್ರತಾಪ ಸಿಂಹ ಮೈಸೂರಿಗೆ ಕಾಂಗ್ರೆಸ್‌ ಕೊಡುಗೆ ಒಪ್ಪಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸಿದ್ದರಾಮಯ್ಯ ಅವರು ನೀಡಿರುವ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದಾರೆ. ಹಾಗೆಯೇ ಬೆಂಗಳೂರು - ಮೈಸೂರು ಹೆದ್ದಾರಿ ಕಾಮಗಾರಿಯ ಶ್ರೇಯಸ್ಸು ಸಿದ್ದರಾಮಯ್ಯ ಮತ್ತು ಆಸ್ಕರ್‌ ಫರ್ನಾಂಡೀಸ್‌ ಅವರಿಗೆ ಸಲ್ಲಬೇಕು' ಎಂದರು. ಫೋಟೋ ತೆಗೆಸಿಕೊಂಡಿದ್ದೇ ಸಾಧನೆ 'ಆರು ತಿಂಗಳ ಆಡಳಿತದ ಬಗ್ಗೆ ಪುಸ್ತಕ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ಸಾಧನೆಗಳನ್ನು ಸೇರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಿದ್ದು, ಬಿಟ್‌ ಕಾಯಿನ್‌ ದಂಧೆಯಲ್ಲಿ ಕಾಡಿಬೇಡಿ ತಪ್ಪಿಸಿಕೊಂಡಿದ್ದು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿರುವುದು, ಕೊರೊನಾ ಹೆಸರಿನಲ್ಲಿ ಲೂಟಿ ಮಾಡುತ್ತಿರುವುದು, ಆಶ್ವಾಸನೆಗಳ ಮೂಲಕ ಸುಳ್ಳಿನ ಸರಮಾಲೆ ಸೃಷ್ಟಿಸಿರುವುದು, 1.7 ಲಕ್ಷ ಕೋಟಿ ಸಾಲ ಮಾಡಿರುವುದು, ಗೋವಿಗೆ ಮುತ್ತಿಡುವ ಫೋಟೋ ತೆಗೆಸಿಕೊಂಡಿರುವುದು.. ಇವೆಲ್ಲ ಬೊಮ್ಮಾಯಿಯವರ 6 ತಿಂಗಳ ಸಾಧನೆ' ಎಂದು ಟೀಕಿಸಿದರು. ಪಕ್ಷದ ನಗರಾಧ್ಯಕ್ಷ ಆರ್‌. ಮೂರ್ತಿ, ಬಿ.ಎಂ. ರಾಮು, ಶ್ರೀನಾಥ್‌ ಬಾಬು ಇದ್ದರು. 'ಜನ ಸಾಮಾನ್ಯರನ್ನು ಸುಲಿಗೆ ಮಾಡಲು ಮೈಸೂರಿನಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಇದು ಕಮಿಷನ್‌ ದಂಧೆ. ಶಾಸಕರ ವಿರುದ್ಧ ಕೇವಲವಾಗಿ ಮಾತನಾಡುವ ಸಂಸದ ಪ್ರತಾಪ ಸಿಂಹ ವರ್ತನೆಯನ್ನು ಯಾರೂ ಒಪ್ಪಲ್ಲ' ಎಂದು ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಹೇಳಿದ್ದಾರೆ.


from India & World News in Kannada | VK Polls https://ift.tt/H6iyEjFdZ

ಜ್ಞಾನ ಭಾರತಿ ಆವರಣದಲ್ಲಿ ವಿದ್ಯಾರ್ಥಿ ಸಂಘಟನೆಗಳ ಸಂಘರ್ಷ: ಪೊಲೀಸರಿಂದ ಲಘು ಲಾಠಿ ಪ್ರಹಾರ..!

: ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ಎಬಿವಿಪಿ ಸೇರಿದಂತೆ ಎರಡು ಸಂಘಟನೆಗಳ ನಡುವೆ ಪ್ರತಿಭಟನೆ ವಿಚಾರವಾಗಿ ಮಾತಿನ ಚಕಮಕಿ ನಡೆಯಿತು. ತೀವ್ರಗೊಳ್ಳುವುದನ್ನು ನಿಯಂತ್ರಿಸಲು ಪೊಲೀಸರು ಲಘು ನಡೆಸಿದ್ದು, ಘಟನೆಯಲ್ಲಿ ಎಬಿವಿಪಿ ಸಂಘಟನೆಯ ಓರ್ವ ವಿದ್ಯಾರ್ಥಿನಿಯ ತಲೆಗೆ ತೀವ್ರ ಪೆಟ್ಟಾಗಿದೆ. ಹಲವು ವಿದ್ಯಾರ್ಥಿಗಳು ಮತ್ತು ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ರಾಯಚೂರು ಜಿಲ್ಲಾ ನ್ಯಾಯಾಧೀಶರು ಡಾ. ಬಿ. ಆರ್‌. ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ, ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟವು ವಿಶ್ವ ವಿದ್ಯಾಲಯದ ಆಡಳಿತ ಕಚೇರಿಯ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದೇ ಸ್ಥಳಕ್ಕೆ ಧಾವಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ನೇತೃತ್ವದ ಗುಂಪೊಂದು ವಿಶ್ವ ವಿದ್ಯಾಲಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಿಂಬಿಸಿ ಪ್ರತಿಭಟನೆಗೆ ಮುಂದಾಯಿತು. 'ಪದವಿ ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ನೀಡುವಲ್ಲಿ ವಿಶ್ವ ವಿದ್ಯಾಲಯ ವಿಳಂಬ ಮಾಡುತ್ತಿದೆ' ಎಂದು ಆರೋಪಿಸಿ ಕಚೇರಿಗೆ ಮುತ್ತಿಗೆ ಹಾಕಲು ಎಬಿವಿಪಿ ಕಾರ್ಯಕರ್ತರು ಮುಂದಾದರು. ಈಗಾಗಲೇ ಒಂದು ಸಂಘಟನೆಯವರು ಪ್ರತಿಭಟನೆ ನಡೆಸುತ್ತಿದ್ದು, ಮತ್ತೊಂದು ದಿವಸ ಪ್ರತಿಭಟನೆ ನಡೆಸುವಂತೆ ಪೊಲೀಸರು ಮನವರಿಕೆ ಮಾಡಿಕೊಟ್ಟರೂ ಎಬಿವಿಪಿ ಕಾರ್ಯಕರ್ತರು ಸುಮ್ಮನಾಗಲಿಲ್ಲ. ಎಬಿವಿಪಿ ಕಾರ್ಯಕರ್ತರ ಕ್ರಮವನ್ನು ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ ಖಂಡಿಸಿತು. ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು. ಲಘು ಲಾಠಿ ಪ್ರಹಾರ ನಡೆಸಿ ವಿದ್ಯಾರ್ಥಿಗಳನ್ನು ಪೊಲೀಸರು ಚದುರಿಸಿದರು. ಈ ವೇಳೆ 20ಕ್ಕೂ ಹೆಚ್ಚು ಎಬಿವಿಪಿ ಕಾರ್ಯಕರ್ತರು ಮತ್ತು ಕೆಲ ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಹಾಗೂ ಡಿಸಿಪಿ ಸಂಜೀವ್‌ ಪಾಟೀಲ್‌ ಸ್ಥಳಕ್ಕಾಗಮಿಸಿ ಪರಿಸ್ಥಿತಿ ಕೈ ಮೀರದಂತೆ ಕ್ರಮ ಕೈಗೊಂಡರು. ಯಾರೂ ಅನುಮತಿ ಪಡೆದಿರಲಿಲ್ಲ: 'ವಿಶ್ವ ವಿದ್ಯಾಲಯದ ಆವರಣದಲ್ಲಿ ಲಘು ಲಾಠಿ ಪ್ರಹಾರದಂತಹ ಘಟನೆಗಳು ನಡೆಯದಂತೆ ತಡೆಯಲು ಮತ್ತು ವಿಶ್ವ ವಿದ್ಯಾಲಯದ ಆಡಳಿತ ಕಚೇರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗುವುದು' ಎಂದು ಕುಲಪತಿ ಪ್ರೊ. ಕೆ. ಆರ್‌. ವೇಣುಗೋಪಾಲ್‌ 'ವಿಕ'ಗೆ ತಿಳಿಸಿದ್ದಾರೆ. 'ವಿಶ್ವವಿದ್ಯಾಲಯದ ಆಡಳಿತ ಕಚೇರಿ ಮುಂದೆ ಪ್ರತಿಭಟನೆಗೆ ಎಬಿವಿಪಿ ಮತ್ತು ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ ಸೇರಿದಂತೆ ಎರಡೂ ಸಂಘಟನೆಗಳು ಅನುಮತಿ ಪಡೆದಿರಲಿಲ್ಲ. ಆದರೆ, ಒಂದು ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಇನ್ನೊಂದು ಸಂಘಟನೆಯೂ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕರ್ತವ್ಯ ಪಾಲನೆ ಮಾಡಿದ್ದಾರೆ' ಎಂದು ಅವರು ಹೇಳಿದರು. ನಾವು ವಿದ್ಯಾರ್ಥಿನಿಗೆ ಹೊಡೆದಿಲ್ಲ 'ಪ್ರತಿಭಟನೆ ನಡೆಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಅನುಮತಿ ಪಡೆದಿರಲಿಲ್ಲ. ಸಂಘರ್ಷ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಆದರೆ, ರಕ್ತ ಸುರಿಯವಂತೆ ಮತ್ತು ಗಂಭೀರ ಗಾಯಗಳಾಗುವಂತೆ ಯಾರಿಗೂ ಹೊಡೆದಿಲ್ಲ. ಗಾಯಗೊಂಡ ವಿದ್ಯಾರ್ಥಿನಿಯು ರಸ್ತೆಯಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ' ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಲಾಠಿ ಪ್ರಹಾರಕ್ಕೆ ಎಬಿವಿಪಿ ಖಂಡನೆ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಂತೆ ನಮ್ಮ ಕಾರ್ಯಕರ್ತರು ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾಗ ಅಮಾನುಷವಾಗಿ ಲಾಠಿ ಚಾರ್ಜ್ ಮಾಡಲಾಗಿದೆ. ಇದು ಖಂಡನೀಯ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸರಕಾರವನ್ನು ಎಬಿವಿಪಿ ಒತ್ತಾಯಿಸಿದೆ. ರಾಜಕೀಯ ಸಂಘಟನೆಯ ದಾಂಧಲೆ ರಾಯಚೂರು ಜಿಲ್ಲಾ ನ್ಯಾಯಾಧೀಶರ ಧೋರಣೆಯನ್ನು ಖಂಡಿಸಿ ಕಳೆದ ಮೂರು ದಿನಗಳಿಂದ ವಿಶ್ವ ವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ವಿಶ್ವ ವಿದ್ಯಾಲಯದ ಆವರಣದಲ್ಲಿ ಯಾವುದೇ ರಾಜಕೀಯ ಪ್ರೇರಿತ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಗೆ ಅವಕಾಶವಿಲ್ಲ. ಈ ಬಗ್ಗೆ ಪೊಲೀಸರು ಮನವರಿಕೆ ಮಾಡಿಕೊಟ್ಟರೂ, ಒಳಗೆ ನುಗ್ಗಿ ಎಬಿವಿಪಿ ಕಾರ್ಯಕರ್ತರು ದಾಂಧಲೆ ನಡೆಸಿದರು. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ವಿವಿ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ ಆರೋಪಿಸಿದೆ.


from India & World News in Kannada | VK Polls https://ift.tt/SekoDalHJ

ಕೋವಿಡ್ ಹರಡುವುದನ್ನು ತಡೆಯಲು ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ನೆರವಾಗಿದೆಯೇ?: ಅಧ್ಯಯನ ಹೇಳುವುದೇನು?

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ತಳಿ ಸೋಂಕು ಪ್ರಸರಣ ಹೆಚ್ಚುತ್ತಿದ್ದಂತೆಯೇ ರಾತ್ರಿ ಕರ್ಫ್ಯೂ ಮತ್ತು ಸೇರಿದಂತೆ ಅನೇಕ ನಿರ್ಬಂಧಗಳನ್ನು ಜಾರಿಗೆ ತರಲಾಗಿತ್ತು. ಆದರೆ ಈ ನಿರ್ಬಂಧಗಳು ಸೋಂಕು ತಡೆಗೆ ಎಷ್ಟರಮಟ್ಟಿಗೆ ಸಹಕಾರಿ ಎಂಬ ಚರ್ಚೆ ನಡೆದಿತ್ತು. ಸದ್ಯ ರಾಜ್ಯದಲ್ಲಿ ಮತ್ತು ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿದೆ. ಬೆಂಗಳೂರು ನಗರವನ್ನು ಗುರಿಯಾಗಿರಿಸಿಕೊಂಡು ನಡೆಸಿದ ಅಧ್ಯಯನವೊಂದು, ಓಮಿಕ್ರಾನ್ ಹರಡುವಿಕೆಯನ್ನು ನಿಧಾನಗೊಳಿಸುವುದರಲ್ಲಿ ಹಾಗೂ ವಿಳಂಬ ಮಾಡುವುದರಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಸಾಕಷ್ಟು ನೆರವಾಗಿದೆ ಎಂದು ಹೇಳಿದೆ. 'ನಿರ್ಬಂಧಗಳು ಇಲ್ಲದೆ ಇದ್ದಿದ್ದರೆ ಓಮಿಕ್ರಾನ್ ಹೆಚ್ಚು ತ್ವರಿತವಾಗಿ ಹರಡುತ್ತಿತ್ತು ಮತ್ತು ಜನತೆಗೆ ಹೆಚ್ಚು ಬಾಧಿಸುತ್ತಿತ್ತು' ಎಂದು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಯುನಿವರ್ಸಿಟಿ ಆಫ್ ವರ್ಜೀನಿಯಾ ಬಯೋಕಾಂಪ್ಲೆಕ್ಸಿಟಿ ಸಂಸ್ಥೆಯ ಪರಿಣತರು ನಡೆಸಿದ ಅಧ್ಯಯನ ವರದಿ ತಿಳಿಸಿದೆ. ಜನವರಿ ಮೊದಲ ವಾರದಲ್ಲಿ ದೇಶಾದ್ಯಂತ ಕೋವಿಡ್ ಸೋಂಕುಗಳ ಸಂಖ್ಯೆ ಹೆಚ್ಚಳವಾಗಿತ್ತು. ಹೀಗಾಗಿ ವೀಕೆಂಡ್ ಲಾಕ್‌ಡೌನ್, ನೈಟ್ ಕರ್ಫ್ಯೂದಂತಹ ನಿರ್ಬಂಧಗಳನ್ನು ಮರಳಿ ಜಾರಿಗೆ ತರಲಾಗಿತ್ತು. ಕೆಲವು ರಾಜ್ಯಗಳಲ್ಲಿ ಈ ನಿರ್ಬಂಧಗಳು ಇನ್ನೂ ಮುಂದುವರಿದಿವೆ. ಆದರೆ ಅನೇಕ ತಜ್ಞರು ಈ ನಿರ್ಬಂಧಗಳು ಸೋಂಕು ಹರಡುವುದನ್ನು ನಿಯಂತ್ರಿಸಲು ಹೇಗೆ ಪರಿಣಾಮಕಾರಿ ಎಂದು ಪ್ರಶ್ನಿಸಿದ್ದಾರೆ. ಗೂಗಲ್ ಪ್ರಕಟಿಸಿದ ಸಮುದಾಯ ಚಲನಶೀಲತೆ ವರದಿಗಳನ್ನು ಬಳಸಿಕೊಂಡಿದ್ದು, ಬಳಿಕ ಸಿಮ್ಯುಲೇಷನ್ ಅಧ್ಯಯನ ಮೂಲಕ ಅಂತಹ ನಿರ್ಬಂಧಗಳ ಪರಿಣಾಮವನ್ನು ಅಂದಾಜಿಸಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ. ನಿರ್ಬಂಧಗಳು ಇಲ್ಲದೆ ಹೋಗಿದ್ದರೆ ಓಮಿಕ್ರಾನ್ ಹರಡುವಿಕೆಯಿಂದ ಸೋಂಕು ತಗುಲಬಹುದಾಗಿದ್ದ ಜನರ ಸಂಖ್ಯೆಯನ್ನು ಈ ನಿರ್ಬಂಧಗಳು ನಿಯಂತ್ರಿಸಿವೆ ಎಂದು ಅಧ್ಯಯನ ತಿಳಿಸಿದೆ. ಜನರ ಓಡಾಟ ನಿರ್ಬಂಧಗಳು ಕೋವಿಡ್ ಪ್ರಕರಣಗಳು ಏಕಾಏಕಿ ಉತ್ತುಂಗಕ್ಕೆ ಏರುವುದನ್ನು ತಡೆದಿದೆ ಮತ್ತು ಅದರ ಪ್ರಮಾಣವನ್ನು ತಗ್ಗಿಸಿದೆ ಎಂದು ಅಧ್ಯಯನ ಖಚಿತಪಡಿಸಿದೆ. ಒಮ್ಮೆ ಕೋವಿಡ್ ಸೋಂಕು ಪ್ರಮಾಣ ಕೆಳಕ್ಕಿಳಿದ ಬಳಿಕ ಆಸ್ಪತ್ರೆ ಹಾಸಿಗೆಗಳ ದೈನಂದಿನ ಬೇಡಿಕೆ ಕೂಡ ಕುಸಿದಿದೆ. ಒಮ್ಮೆ ಕೋವಿಡ್ ಅಲೆಯು ತನ್ನ ಉತ್ತುಂಗದ ಅವಧಿಯನ್ನು ದಾಟಿದರೆ, ನಿರ್ಬಂಧಗಳ ಅನುಕೂಲತೆಯು ಸೀಮಿತಗೊಳ್ಳುತ್ತದೆ ಎಂದು ಹೇಳಿದೆ. ಕರ್ನಾಟಕದಲ್ಲಿನ ಪ್ರಕರಣಗಳ ಪಥವು ದಕ್ಷಿಣ ಆಫ್ರಿಕಾದ ಟ್ರೆಂಡ್ ಅನುಸರಿಸಿದರೆ ಮತ್ತು ಚೆನ್ನಾಗಿ ಲಸಿಕೆ ಸಾಧನೆ ಮಾಡಿದ ದೇಶಗಳ ಆಸ್ಪತ್ರೆ ದಾಖಲೀಕರಣದಂತೆ ಇದ್ದರೆ, ಪ್ರಕರಣಗಳ ಸಂಖ್ಯೆ ತುತ್ತ ತುದಿಗೆ ಹೋದಾಗ ಅದರ ಸಾಮರ್ಥ್ಯದ ಒಳಗೇ ಆರೋಗ್ಯ ವ್ಯವಸ್ಥೆ ಅಗತ್ಯಗಳು ಇರುವ ಸಾಧ್ಯತೆ ಇದೆ. ಇದು ಜನರ ಓಡಾಟ ನಿರ್ಬಂಧ ಅಥವಾ ನಿರ್ಬಂಧಗಳು ಇಲ್ಲದೆ ಇದ್ದರೂ ಸಾಧ್ಯ ಎಂದು ಸಂಶೋಧಕರು ತಿಳಿಸಿದ್ದಾರೆ. ರಾಜ್ಯದಲ್ಲಿ ಜನವರಿ 31ರಿಂದ ರಾತ್ರಿ ಕರ್ಫ್ಯೂಗಳು ತೆರವಾಗುತ್ತಿವೆ. ಬೆಂಗಳೂರಿನಲ್ಲಿ ಶಾಲೆಗಳು ಮರು ಆರಂಭವಾಗುತ್ತಿವೆ.


from India & World News in Kannada | VK Polls https://ift.tt/ynLAt2m5f

ಬೆಂಗಳೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ದುರಂತ: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬಲಿ

: ದ್ವಿಚಕ್ರ ವಾಹನದಲ್ಲಿ ತೆರಳುವಾಗ ತಪ್ಪಿಸಲು ಹೋಗಿ ಸ್ಕಿಡ್‌ ಆಗಿ ಬಿದ್ದ ಪರಿಣಾಮ, ಹಿಂಬದಿ ಕುಳಿತಿದ್ದ ಖಾಸಗಿ ಶಾಲೆ ಶಿಕ್ಷಕಿ ಮೇಲೆ ಬೊಲೆರೋ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟೆಗಾರ ಪಾಳ್ಯದ ಶಿಕ್ಷಕಿ ಶರ್ಮಿಳಾ (38) ಮೃತಪಟ್ಟವರು. ಬೈಕ್‌ ಚಲಾಯಿಸುತ್ತಿದ್ದ ಪತಿ ಪ್ರಕಾಶ್‌ಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಬೊಲೆರೋ ವಾಹನ ಚಾಲಕ ಮಾದೇಶ್‌ (34)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶರ್ಮಿಳಾ ಹಾಗೂ ಪ್ರಕಾಶ್‌ ದಂಪತಿ ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ರಜೆ ಇದ್ದ ಹಿನ್ನೆಲೆಯಲ್ಲಿ ಮಾದನಾಯಕನ ಹಳ್ಳಿಯಲ್ಲಿದ್ದ ಶರ್ಮಿಳಾ ಸಹೋದರನ ಮನೆಗೆ ದಂಪತಿ ಬೈಕ್‌ನಲ್ಲಿ ಹೊರಟ್ಟಿದ್ದರು. ಅಂಜನಾ ನಗರ ತಂಗುದಾಣ ಬಳಿ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಪ್ರಕಾಶ್‌ ದ್ವಿಚಕ್ರ ವಾಹನ ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ಸ್ಕಿಡ್‌ ಆಗಿ ದ್ವಿಚಕ್ರ ವಾಹನ ಸಹಿತ ದಂಪತಿ ರಸ್ತೆಗೆ ಬಿದ್ದಿದ್ದಾರೆ. ಇದೇ ಸಮಯಕ್ಕೆ ಹಿಂದಿನಿಂದ ವೇಗವಾಗಿ ಬಂದ ಬೊಲೆರೋ ವಾಹನದ ಎಡಭಾಗದ ಚಕ್ರ ಶರ್ಮಿಳಾ ಅವರ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟರು. ಪ್ರಕಾಶ್‌ಗೆ ಸಣ್ಣ ಪುಟ್ಟ ಗಾಯಗಳಾಗಿ ಬದುಕುಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೈಪ್‌ಲೈನ್‌ ಅಳವಡಿಕೆಗಾಗಿ ಅಗೆತ ಮಾಗಡಿ ಮುಖ್ಯ ರಸ್ತೆಯ ಅಂಜನಾ ನಗರದಿಂದ ದೊಡ್ಡಗೊಲ್ಲರ ಹಟ್ಟಿವರೆಗೆ ಕಾವೇರಿ ನೀರಿನ ಪೈಪ್‌ಲೈನ್‌ ಅಳವಡಿಕೆಗಾಗಿ ಜಲಮಂಡಳಿ ರಸ್ತೆಯನ್ನು ಅಗೆದಿದೆ. ಕಾಮಗಾರಿ ಬಳಿಕ ಆ ಗುಂಡಿಯನ್ನು ಸಂಪೂರ್ಣವಾಗಿ ಮುಚ್ಚಿರಲಿಲ್ಲ. ಹೀಗಾಗಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಸಾರ್ವಜನಿಕರ ಆಕ್ರೋಶ..! ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಸಾವು ನೋವು ಸಂಭವಿಸುತ್ತಿದ್ದರೂ ಸರ್ಕಾರ ಹಾಗೂ ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಿಬಿಎಂಪಿ ಲೋಪವಿಲ್ಲ: ಸ್ಪಷ್ಟನೆ ಮಾಗಡಿ ಮುಖ್ಯ ರಸ್ತೆಯು ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ ಆಗಿರುವುದರಿಂದ ಕೊಟ್ಟಿಗೆ ಪಾಳ್ಯದಿಂದ - ನೈಸ್‌ ಜಂಕ್ಷನ್‌ವರೆಗೆ ರಸ್ತೆ ಅಭಿವೃದ್ಧಿ ಜವಾಬ್ದಾರಿಯನ್ನು ಬಿಬಿಎಂಪಿಯು ಕೆಆರ್‌ಡಿಸಿಎಲ್‌ಗೆ ವಹಿಸಿದೆ. ಮಾಗಡಿ ರಸ್ತೆ ಅಭಿವೃದ್ಧಿ ಕಾರ್ಯ ಪ್ರಾರಂಭಿಸಲು ಈಗಾಗಲೇ ಪ್ಯಾಕೇಜ್‌-4 ಟೆಂಡರ್‌ ಕರೆಯಲಾಗಿದೆ. ಸರಕಾರದ ಅನುಮೋದನೆ ನೀಡುವ ಹಂತದಲ್ಲಿದೆ ಎಂದು ಕೆಆರ್‌ಡಿಸಿಎಲ್‌ ಮಾಹಿತಿ ನೀಡಿದೆ ಎಂದು ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯ ಆಯುಕ್ತರು ತಿಳಿಸಿದ್ದಾರೆ. ಕೆಆರ್‌ಡಿಸಿಎಲ್‌ ಮುಖ್ಯ ಎಂಜಿನಿಯರ್‌ ಅವರು ರಸ್ತೆ ಮೂಲಭೂತ ಸೌಕರ್ಯ ವಿಭಾಗಕ್ಕೆ ಪತ್ರ ಬರೆದು ಸರಕಾರದ ಟೆಂಡರ್‌ ಅನುಮೋದನೆಯಾಗುವವರೆಗೂ ಮಾಗಡಿ ರಸ್ತೆ ನಿರ್ವಹಣೆ ಮಾಡುವಂತೆ ಕೋರಿದ್ದರು. ಅದರಂತೆ ಸಮಗ್ರವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ, ಜಲಮಂಡಳಿ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಲು ರಸ್ತೆ ಅಗೆದು ವೆಟ್‌ಮ್ಯಾಕ್ಸ್‌ ಹಾಕಿ ಮುಚ್ಚಿದೆ. ಇದನ್ನು ಅಭಿವೃದ್ಧಿಗೊಳಿಸಲು ಬಿಬಿಎಂಪಿಯಲ್ಲಿ ಯಾವುದೇ ಅನುದಾನವಿಲ್ಲದ ಕಾರಣ ತುರ್ತಾಗಿ ಕೆಆರ್‌ಡಿಸಿಎಲ್‌ ಅವರು ಡಾಂಬರು ಹಾಕಲು ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಪಷ್ಟಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ರಸ್ತೆ ಮೂಲಭೂತ ವಿಭಾಗದ ವತಿಯಿಂದ ಯಾವುದೇ ತೊಂದರೆಯಾಗಿಲ್ಲ. ಇಷ್ಟಾಗಿಯೂ ಬಿಬಿಎಂಪಿ ಮೂಲಭೂತ ವಿಭಾಗದಿಂದ ಈ ರಸ್ತೆ ದುರಸ್ತಿಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.


from India & World News in Kannada | VK Polls https://ift.tt/1lbev6Sti

ಐಎಸ್‌ಎಲ್‌: ಅಗ್ರ ನಾಲ್ಕರ ಸ್ಥಾನಕ್ಕೆ ಬೆಂಗಳೂರು ಎಫ್‌ಸಿ ಲಗ್ಗೆ!

ವಾಸ್ಕೋ (ಗೋವಾ): ರೋಶನ್‌ ನೌರೆಮ್‌ (56ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಪ್ರಸಕ್ತ ಸಾಲಿನ ಇಂಡಿಯನರ್ ಸೂಪರ್‌ ಲೀಗ್‌ ಟೂರ್ನಿಯಲ್ಲಿನ ತನ್ನ 14ನೇ ಪಂದ್ಯದಲ್ಲಿ ಎಫ್‌ಸಿ ವಿರುದ್ಧ ಜಯ ಗಳಿಸಿ ಲೀಗ್‌ನಲ್ಲಿ ಐದನೇ ಜಯ ಸಂಪಾದಿಸಿದೆ. ತಿಲಕ್‌ ಮೈದಾನದಲ್ಲಿಭಾನುವಾರ ನಡೆದ ಹಣಾಹಣಿಯಲ್ಲಿ ಬ್ಲೂಸ್‌ 1-0 ಅಂತರದಲ್ಲಿಕೇರಳ ವಿರುದ್ಧ ಜಯಭೇರಿ ಬಾರಿಸಿತು. ಈ ಫಲಿತಾಂಶದೊಂದಿಗೆ ಪೂರ್ಣ 3 ಅಂಕ ಗಳಿಸಿದ ಬ್ಲೂಸ್‌ ಒಟ್ಟಾರೆ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಮೊದಲಾರ್ಧ ಗೋಲ್‌ ರಹಿತಗೊಂಡ ಪರಿಣಾಮ ಬ್ಲೂಸ್‌ ಆಕ್ರಮಣಕಾರಿ ಆಟದೊಂದಿಗೆ ದ್ವಿತೀಯಾರ್ಧ ಆರಂಭಿಸಿತು. ಇದರ ಫಲವಾಗಿ 56ನೇ ನಿಮಿಷದಲ್ಲಿ ರೋಶನ್‌ ಗೋಲ್‌ ಬಾರಿಸಿ ಬ್ಲೂಸ್‌ಗೆ 1-0 ಅಂತರದ ಮುನ್ನಡೆ ತಂದರು. 65ನೇ ನಿಮಿಷದಲ್ಲಿಆಟಗಾರರ ಬದಲಾವಣೆಗೆ ಒತ್ತು ನೀಡಿದ ಬೆಂಗಳೂರು ತಂಡ ಮುನ್ನಡೆ ವಿಸ್ತರಿಸಲು ಯತ್ನಿಸತು. ಆದರೆ ಯಾವುದೇ ಲಾಭ ದೊರೆಯಲಿಲ್ಲ. ಕೊನೆಯವರೆಗೂ ಗೋಲಿಗಾಗಿ ಯತ್ನಿಸಿದ ಕೇರಳ ತಂಡ ಬ್ಲೂಸ್‌ ರಕ್ಷಣಾ ಕೋಟೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕನಿಷ್ಠ ಡ್ರಾ ಮಾಡಿಕೊಳ್ಳಲು ಕೇರಳ ತಂಡಕ್ಕೆ ಛೆಟ್ರಿ ಪಡೆ ಬಿಡಲಿಲ್ಲ. ಇದಕ್ಕೂ ಮುನ್ನ ಉಭಯ ತಂಡಗಳು ರಕ್ಷ ಣಾತ್ಮಕ ಆಟಕ್ಕೆ ಆದ್ಯತೆ ನೀಡಿದ ಪರಿಣಾಮ 45 ನಿಮಿಷಗಳ ಮೊದಲಾರ್ಧದ ಆಟದಲ್ಲಿಯಾವುದೇ ಗೋಲ್‌ ದಾಖಲಾಗಲಿಲ್ಲ. ಆದರೆ ಕೇರಳ ಬ್ಲಾಸ್ಟರ್ಸ್‌ಗೆ ಹೋಲಿಸಿದರೆ, ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಹಲವು ಬಾರಿ ಗೋಲ್‌ ಗಳಿಕೆಯ ಅವಕಾಶಗಳನ್ನು ಸೃಷ್ಟಿಸಿ ಮೇಲುಗೈ ಸಾಧಿಸಿತು. ದಾನಿಶ್‌ ಫರೂಕಿ ಮತ್ತು ಪ್ರಿನ್ಸ್‌ ಇಬಾರ ಗೋಲ್‌ ಗಳಿಸಲು ಉತ್ತಮ ಅವಕಾಶ ಗಿಟ್ಟಿಸಿದರೂ ನಿಗದಿತ ಗುರಿ ಸಾಧಿಸುವಲ್ಲಿವಿಫಲಗೊಂಡರು. ಕೇರಳ ಬ್ಲಾಸ್ಟರ್ಸ್‌ ಸಹ ದಾಳಿ ಮತ್ತು ಗೋಲ್‌ ಗಳಿಕೆಯಲ್ಲಿಹಿಂದೆ ಬಿಳಲಿಲ್ಲ. ಎದುರಾಳಿಯ ಪ್ರತಿ ತಂತ್ರಕ್ಕೆ ತಿರುಗೇಟು ನೀಡಿತು. ಉಭಯ ತಂಡಗಳ ಡಿಫೆಂಡರ್‌ಗಳು ಇತ್ತಂಡಗಳ ಗೋಲಿನ ಅವಕಾಶವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಗಮನ ಸೆಳೆದರು. ಆಕ್ರಮಣಕಾರಿ ಕಾಲ್ಚಳಕ ತೋರಿದ ಬಿಎಫ್‌ಸಿ ಆಟಗಾರರು 37 ಮತ್ತು 41ನೇ ನಿಮಿಷದಲ್ಲಿಎರಡು ಬಾರಿ ಗೋಲ್‌ ಬಾರಿಸುವ ಅವಕಾಶ ಗಿಟ್ಟಿಸಿದರು. 37ನೇ ನಿಮಿಷದಲ್ಲಿಇಬಾರ ಮತ್ತು ಛೆಟ್ರಿ ಮಾಡಿದ ಪ್ರಮಾದವನ್ನೇ 41ನೇ ನಿಮಿಷದಲ್ಲಿ ಉದಾಂತ ಮತ್ತು ಪರಾಗ್‌ ಮಾಡಿದರು. ಹೀಗಾಗಿ ವಿರಾಮಕ್ಕೆ ಮುನ್ನಡೆ ಗಳಿಸಲು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿಬ್ಲೂಸ್‌ ವಿಫಲಗೊಂಡಿತು. 20ನೇ ನಿಮಿಷದಲ್ಲಿರೋಶನ್‌ ಮೈದಾನದ ಎಡ ಬದಿಯಿಂದ ಚೆಂಡನ್ನು ಉದಾಂತ ಸಿಂಗ್‌ ಅವರತ್ತ ತಳ್ಳಿದರು. ಕೂಡಲೇ ಚೆಂಡನ್ನು ನಾಯಕ ಸುನೀಲ್‌ ಛೆಟ್ರಿಯತ್ತ ಪಾಸ್‌ ಮಾಡಿದರು. ಛೆಟ್ರಿ ಅದನ್ನು ಅತ್ಯಂತ ಜಾಗರೂಕತೆಯಿಂದ ಡ್ಯಾನಿಶ್‌ ಫಾಕೂಕ್‌ ದಿಕ್ಕಿನಲ್ಲಿಬ್ಯಾಕ್‌ ಪಿಕ್‌ ಮಾಡಿದರು. ಆದರೆ ಡ್ಯಾನಿಸ್‌ ಹೊಡೆದ ಚೆಂಡು ಗೋಲ್‌ ಪೆಟ್ಟಿಗೆಯಿಂದ ದೂರದಲ್ಲಿಹಾದು ಹೋಯಿತು. ಹೀಗಾಗಿ ಆರಂಭಿಕ ಮುನ್ನಡೆ ಗಳಿಸುವ ಬ್ಲೂಸ್‌ ಆಸೆ ಈಡೇರಲಿಲ್ಲ. ಇದಕ್ಕೂ ಮುನ್ನ ಚೆಂಡನ್ನು ಟ್ಯಾಕಲ್‌ ಮಾಡುವ ಯತ್ನದಲ್ಲಿಎದುರಾಳಿ ತಂಡದ ಮಾರ್ಕೊ ಲೆಸ್ಕೊವಿಕ್‌ ಅವರಿಗೆ ಅಡ್ಡಿಪಡಿಸಿದ ಕಾರಣ ಪಂದ್ಯದ 11ನೇ ನಿಮಿಷದಲ್ಲಿ ಬಿಎಫ್‌ಸಿ ತಂಡದ ಪ್ರಿನ್ಸ್‌ ಇಬಾರ ರೆಫರಿಯಿಂದ ಹಳದಿ ಕಾರ್ಡ್‌ ಎಚ್ಚರಿಕೆ ಪಡೆದರು. 24ನೇ ನಿಮಿಷದಲ್ಲಿರೋಶನ್‌ ನಡೆಸಿದ ಗೋಲಿನ ಯತ್ನ ಕೂಡ ಸಫಲವಾಗಲಿಲ್ಲ. ಪೂರ್ಣ ಅಂಕಗಳ ಗಳಿಕೆಯೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಸನಿಹಗೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಸಿದ ಕೋಚ್‌ ಮಾರ್ಕೊ ಪೆಜ್ಜೈಯುಲಿ ಬಳಗ 4-3-3 ಮಾದರಿಯಲ್ಲಿಆಟ ಆರಂಭಿಸಿದರೆ, ಎದುರಾಳಿ ತಂಡ 4-4-2ರಲ್ಲಿರಚನೆಯೊಂದಿಗೆ ಕಣಕ್ಕಿಳಿಯಿತು. ಬೆಂಗಳೂರು ಎಫ್‌ಸಿ ತನ್ನ ಮುಂದಿನ ಪಂದ್ಯದಲ್ಲಿ ಫೆಬ್ರವರಿ 5ರಂದು ಬಂಬೋಲಿಮ್‌ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿ ಜಮ್‌ಶೆಡ್‌ಪುರ ಎಫ್‌ಸಿಯನ್ನು ಎದುರಿಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lpG36Pfoi

ಲಸಿಕೆ ಕಡ್ಡಾಯಕ್ಕೆ ವಿರೋಧ: ಪ್ರತಿಭಟನೆಗೆ ಹೆದರಿ ಬಚ್ಚಿಟ್ಟುಕೊಂಡ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ

ಒಟ್ಟಾವಾ: ಕೆನಡಾದಲ್ಲಿ ಕೋವಿಡ್ 19 ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಸಂಘರ್ಷದ ಮಟ್ಟಕ್ಕೆ ತಲುಪಿದೆ. ಇದರಿಂದ ಪ್ರಾಣಭಯಕ್ಕೆ ಒಳಗಾಗಿರುವ ಪ್ರಧಾನಿ ಹಾಗೂ ಅವರ ಕುಟುಂಬ ರಾಜಧಾನಿಯಲ್ಲಿನ ತಮ್ಮ ಮನೆಯನ್ನು ತೊರೆದು ಗೋಪ್ಯ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಗಡಿಯಾಚೆ ಓಡಾಡುವ ಲಸಿಕೆ ಕಡ್ಡಾಯ ನಿಯಮದ ವಿರುದ್ಧ 'ಸ್ವಾತಂತ್ರ್ಯ ರಕ್ಷಣೆ' ಪ್ರತಿಭಟನೆ ಆರಂಭಿಸಿದ್ದು, ಅದು ಈಗ ಟ್ರುಡೋ ಸರ್ಕಾರದ ಕೊರೊನಾ ವೈರಸ್ ನಿಯಂತ್ರಣ ಕ್ರಮಗಳ ವಿರುದ್ಧದ ಬೃಹತ್ ಹೋರಾಟವಾಗಿ ಪರಿವರ್ತನೆ ಹೊಂದಿದೆ. ಸಾವಿರಾರು ಟ್ರಕ್ ಚಾಲಕರು ಮತ್ತು ಇತರೆ ಪ್ರತಿಭಟನಾಕಾರರು ರಾಜಧಾನಿ ನಗರದಲ್ಲಿ ಶನಿವಾರ ಜಮಾಯಿಸಿದ್ದು, ಲಸಿಕೆ ಕಡ್ಡಾಯಗೊಳಿಸಿರುವುದನ್ನು ವಾಪಸ್ ಪಡೆಯುವಂತೆ ಹಾಗೂ ಇತರೆ ಸಾರ್ವಜನಿಕ ಆರೋಗ್ಯ ನಿಯಂತ್ರಣ ಕ್ರಮಗಳನ್ನು ನಿಲ್ಲಿಸುವಂತೆ ಆಗ್ರಹಿಸಿದ್ದರು ಎಂದು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ. ಪ್ರತಿಭಟನಾಕಾರರಲ್ಲಿ ಮಕ್ಕಳು, ವೃದ್ಧರು ಮತ್ತು ವಿಶೇಷಚೇತನರು ಕೂಡ ಸೇರಿದ್ದಾರೆ. ಕೆಲವು ಪ್ರತಿಭಟನಾಕಾರರು ಸರ್ಕಾರ, ಮುಖ್ಯವಾಗಿ ಪ್ರಧಾನಿ ಟ್ರುಡೋ ವಿರುದ್ಧ ಆಕ್ರೋಶ ಭರಿತ ಮತ್ತು ಅವಾಚ್ಯ ಪದಗಳನ್ನು ಬಳಸಿ ನಿಂದಿಸುತ್ತಿದ್ದಾರೆ ಎಂದು ದಿ ಗ್ಲೋಬ್ ಆಂಡ್ ಮೇಲ್ ಪತ್ರಿಕೆ ವರದಿ ತಿಳಿಸಿದೆ. ಕೆಲವು ಪ್ರತಿಭಟನಾಕಾರರು ಪ್ರಮುಖ ಯುದ್ಧ ಸ್ಮಾರಕದಲ್ಲಿ ನರ್ತಿಸುವುದು ವಿಡಿಯೋಗಳಲ್ಲಿ ಸೆರೆಯಾಗಿದೆ. ಪ್ರತಿಭಟನಾಕಾರರ ಈ ವರ್ತನೆಯನ್ನು ಕೆನಡಾದ ಪ್ರಮುಖ ಯೋಧ ಜನರಲ್ ವೇಯ್ನ್ ಐರ್ ಮತ್ತು ಕೆನಡಾ ರಕ್ಷಣಾ ಸಚಿವ ಅನಿತಾ ಆನಂದ್ ಖಂಡಿಸಿದ್ದಾರೆ. ದೇಶದಲ್ಲಿ ವಿಪರೀತ ಕೊರೆಯುವ ಚಳಿ ಇದ್ದರೂ, ಅದನ್ನು ಲೆಕ್ಕಿಸದೆ ನೂರಾರು ಪ್ರತಿಭಟನಾಕಾರರು ಸಂಸತ್ ಆವರಣಕ್ಕೆ ನುಗ್ಗಿದ್ದರಿಂದ ಸಂಭಾವ್ಯ ಹಿಂಸಾಚಾರದ ಬಗ್ಗೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸುಮಾರು 10,000 ಪ್ರತಿಭಟನಾಕಾರರು ಇಲ್ಲಿ ಸೇರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗುವ ಭೀತಿ ಇದೆ ಎಂದು ಟ್ರುಡೋ ಶುಕ್ರವಾರ ಮಾಧ್ಯಮಗಳಿಗೆ ಹೇಳಿದ್ದರು. ಕೆಲವು ಬೆರಳೆಣಿಕೆಯಷ್ಟು ಕಿಡಿಗೇಡಿಗಳು ಈ ಪ್ರತಿಭಟನೆಯ ಗುಂಪನ್ನು ನಡೆಸುತ್ತಿದ್ದಾರೆ. ಇವು ಕೆನಡಾ ಜನರ ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತಿಲ್ಲ ಎಂದು ಟ್ರುಡೋ ಹೇಳಿದ್ದಾರೆ. ರಿಡೋ ಕಾಟೇಜ್‌ನಲ್ಲಿನ ತಮ್ಮ ಮನೆಯಿಂದ ಟ್ರುಡೋ ಮತ್ತು ಅವರ ಕುಟುಂಬ, ಪ್ರತಿಭಟನಾ ಕೇಂದ್ರದಿಂದ ದೂರದ ಸ್ಥಳಕ್ಕೆ ತೆರಳಿ, ರಹಸ್ಯವಾಗಿ ನೆಲೆಸಿದೆ. ಆದರೆ ಅವರು ರಾಷ್ಟ್ರ ರಾಜಧಾನಿ ಪ್ರದೇಶದ ಒಳಗೇ ಇದ್ದಾರೆ ಎಂದು ಹೇಳಲಾಗಿದೆ. ತಮ್ಮ ಒಂದು ಮಗುವಿನಲ್ಲಿ ಕೋವಿಡ್ 19 ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಟ್ರುಡೋ ಅವರು ಐಸೋಲೇಷನ್‌ನಲ್ಲಿ ಇದ್ದಾರೆ. ಪ್ರತಿಭಟನಾ ನಿರತ ಟ್ರಕ್ ಚಾಲಕರನ್ನು ದೇಶದ ಅನೇಕ ಭಾಗಗಳ ಜನರು ಸೇರಿಕೊಂಡಿದ್ದಾರೆ. ಪಾರ್ಲಿಮೆಂಟ್ ಹಿಲ್‌ನಲ್ಲಿ ಸಾಲುಗಟ್ಟಿ ಟ್ರಕ್‌ಗಳನ್ನು ಸಾಗಿಸಿದ ಚಾಲಕರು, ಎಡೆಬಿಡದೆ ಹಾರ್ನ್‌ಗಳನ್ನು ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಸಂಸತ್ ಕಟ್ಟಡದ ಸುತ್ತಲೂ, ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಬ್ಯಾನರ್‌ಗಳನ್ನು ಅಳವಡಿಸಿದರು. 'ಪ್ರತಿಭಟನಾನಿರತರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಯೋಧರ ಸಮಾಧಿ ಮೇಲೆ ಹತ್ತಿ ನರ್ತಿಸುತ್ತಿರುವುದು ಕಂಡು ಬಹಳ ನೋವಾಗಿದೆ. ಕೆನಡಾದ ತಲೆಮಾರುಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ನಮ್ಮ ಹಕ್ಕುಗಳಿಗಾಗಿ ಹೋರಾಡಿ ಹುತಾತ್ಮರಾಗಿವೆ. ಆದರೆ ಇದಕ್ಕಾಗಿ ಅಲ್ಲ. ಇದರಲ್ಲಿ ಭಾಗಿಯಾದವರು ನಾಚಿಕೆಯಿಂದ ತಲೆತಗ್ಗಿಸಬೇಕು' ಎಂದು ಜನರಲ್ ವೇಯ್ನ್ ಐರ್ ಕಿಡಿಕಾರಿದ್ದಾರೆ. ಡೊನಾಲ್ಡ್ ಟ್ರಂಪ್ ಶ್ಲಾಘನೆಜಸ್ಟಿನ್ ಟ್ರುಡೋ ಸರ್ಕಾರದ ವಿರುದ್ಧ ಟ್ರಕ್ಕರ್‌ಗಳ ಪ್ರತಿಭಟನೆಯನ್ನು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ ಟ್ರಂಪ್ ಶ್ಲಾಘಿಸಿದ್ದಾರೆ. ಕಾನೂನು ವಿರೋಧಿ ಲಸಿಕೆ ಕಡ್ಡಾಯದ ವಿರುದ್ಧ ಅವರು ಧೈರ್ಯದಿಂದ ಪ್ರತಿರೋಧ ತೋರಿಸಿದ್ದಾರೆ. ಅವರು ತಮ್ಮದೇ ನಾಯಕರ ಬದಲು ಅಮೆರಿಕದ ಸ್ವಾತಂತ್ರ್ಯವನ್ನು ಸಮರ್ಥಿಸಲು ಹೋರಾಡುತ್ತಿದ್ದಾರೆ. ಅವರಿಗೆ ತಮ್ಮ ಬೆಂಬಲ ಇದೆ ಎಂದು ಟ್ರಂಪ್ ಹೇಳಿದ್ದಾರೆ. ಪ್ರತಿಭಟನೆ ಏಕೆ?ದೇಶವನ್ನು ಪ್ರವೇಶಿಸುವ ಟ್ರಕ್ಕರ್‌ಗಳು ಜನವರಿ 15ರಿಂದ ಸಂಪೂರ್ಣವಾಗಿ ಲಸಿಕೆಗಳನ್ನು ಪಡೆದುಕೊಳ್ಳುವುದು ಕಡ್ಡಾಯ ಎಂದು ಕೆನಡಾ ನಿಯಮ ಜಾರಿಗೊಳಿಸಿತ್ತು. ದೇಶದ ಒಳಗೆ ಪ್ರವೇಶಿರುವ ಟ್ರಕ್ಕರ್‌ಗಳಿಗೆ ಅಮೆರಿಕ ಲಸಿಕೆ ಕಡ್ಡಾಯಗೊಳಿಸಿದ ಕೆನಡಾ ಕೂಡ ನಿಯಮ ರೂಪಿಸಿತ್ತು. ಆದರೆ ಕೆನಡಿಯನ್ ಟ್ರಕ್ಕಿಂಗ್ ಅಲಯನ್ಸ್ ಅಂದಾಜಿನ ಪ್ರಕಾರ, ಕೆನಡಾದ ಶೇ 15ರಷ್ಟು, ಅಂದರೆ ಸುಮಾರು 16 ಸಾವಿರ ಮಂದಿ ಸಂಪೂರ್ಣ ಲಸಿಕೆಯನ್ನು ಪಡೆದುಕೊಂಡಿಲ್ಲ. ಲಸಿಕೆ ಕಡ್ಡಾಯ ಮಾಡಿರುವುದು ಪೂರೈಕೆ ಸರಪಣಿಗೆ ಭಾರಿ ಹೊಡೆತ ನೀಡಿದೆ ಎಂದು ಟ್ರಕ್ಕರ್‌ಗಳು ಆರೋಪಿಸಿದ್ದಾರೆ. ಜಸ್ಟಿನ್ ಟ್ರುಡೋ ಅವರು ಪ್ರತಿಭಟನೆಗೆ ಹೆದರಿ ಪಲಾಯನ ಮಾಡಿರುವುದು ಭಾರತದಲ್ಲಿಯೂ ಚರ್ಚೆಗೆ ಒಳಗಾಗಿದೆ. ಭಾರತದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಟ್ರುಡೋ ಬೆಂಬಲ ವ್ಯಕ್ತಪಡಿಸಿದ್ದರು. ಈ ಪ್ರತಿಭಟನೆಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬೇಕು ಎಂದು ಸಲಹೆ ನೀಡುವ ಮೂಲಕ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಟ್ರುಡೋ ಒಂದು ಸಣ್ಣ ಪ್ರತಿಭಟನೆಯನ್ನು ಎದುರಿಸಲು ಸಾಧ್ಯವಾಗದೆ ಹೆದರಿ ಪರಾರಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟೀಕಿಸಿದ್ದಾರೆ.


from India & World News in Kannada | VK Polls https://ift.tt/gbqKl5o68

ಸೋಮವಾರದಿಂದ ಸಂಸತ್‌ ಬಜೆಟ್‌ ಅಧಿವೇಶನ: ಪೆಗಾಸಸ್‌, ರೈತ ಸಮಸ್ಯೆಗಳೇ ಪ್ರತಿಪಕ್ಷಗಳ ಅಸ್ತ್ರ..!

: ಸೋಮವಾರದಿಂದ ಸಂಸತ್‌ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಪೆಗಾಸಸ್‌ ವಿವಾದ, ಮತ್ತು ಪೂರ್ವ ಲಡಾಕ್‌ನಲ್ಲಿ ಚೀನಾದ ಆಕ್ರಮಣಗಳಂತಹ ವಿಷಯಗಳನ್ನು ಸರ್ಕಾರದ ವಿರುದ್ಧ ಅಸ್ತ್ರಗಳಾಗಿ ಪ್ರಯೋಗಿಸಲು ಸಜ್ಜಾಗಿವೆ. ಜಂಟಿ ಸದನವನ್ನು ಉದ್ದೇಶಿಸಿ ಸೋಮವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ. ಕೋವಿಡ್‌-19 ಸಾಂಕ್ರಾಮಿಕದ ಪರಿಸ್ಥಿತಿ ಹಿನ್ನೆಲೆಯಲ್ಲಿ ಸೆಂಟ್ರಲ್‌ ಹಾಲ್‌ ಹಾಗೂ ಉಭಯ ಸದನಗಳ ಚೇಂಬರ್‌ಗಳಲ್ಲಿ ಸಂಸದ ಆಸನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರಪತಿ ಭಾಷಣದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ 'ಆರ್ಥಿಕ ಸಮೀಕ್ಷೆ 2021-22' ಮಂಡಿಸಲಿದ್ದಾರೆ. ಅವರು ಮಂಗಳವಾರ 2022 - 23ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಕೂರಬೇಕಾದ ಕಾರಣ, ಲೋಕ ಸಭೆ ಮತ್ತು ರಾಜ್ಯ ಸಭೆ ಕಲಾಪಗಳನ್ನು ಪಾಳಿಗಳಲ್ಲಿ ನಡೆಸಲಾಗುತ್ತದೆ. ಅಲ್ಲದೆ ಎರಡು ಹಂತಗಳಲ್ಲಿ ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ಭಾಗವು ಜನವರಿ 31 ರಿಂದ ಫೆಬ್ರುವರಿ 11ರವರೆಗೆ ನಡೆಯಲಿದ್ದು, ನಂತರ ವಿವಿಧ ಇಲಾಖೆಗಳಿಗೆ ಬಜೆಟ್‌ ಹಂಚಿಕೆಗಳನ್ನು ಪರಿಶೀಲಿಸಲು ಬಿಡುವು ನೀಡಲಾಗುತ್ತದೆ. ಮಾರ್ಚ್ 14ರಂದು ಅಧಿವೇಶನ ಪುನಾರಂಭವಾಗಲಿದ್ದು, ಏಪ್ರಿಲ್‌ 8 ರಂದು ಅಂತ್ಯಗೊಳ್ಳಲಿದೆ. ಲೋಕ ಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಬುಧವಾರದಿಂದ ಕೈಗೆತ್ತಿಕೊಳ್ಳಲಾಗುತ್ತದೆ. ಫೆಬ್ರುವರಿ 7 ರಂದು ಪ್ರಧಾನಿ ನರೇಂದ್ರ ಮೋದಿ ಚರ್ಚೆಗೆ ಉತ್ತರಿಸುವ ನಿರೀಕ್ಷೆಯಿದೆ. ಸುಗಮ ಕಲಾಪಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಮತ್ತು ರಾಜ್ಯ ಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರು ಎಲ್ಲಾ ಪಕ್ಷಗಳ ಸದನ ನಾಯಕರೊಂದಿಗೆ ಸೋಮವಾರ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಉತ್ತರ ಪ್ರದೇಶ, ಉತ್ತರಾ ಖಂಡ, ಪಂಜಾಬ್‌, ಗೋವಾ ಮತ್ತು ಮಣಿಪುರ - ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ನಡುವೆ ಬಜೆಟ್‌ ಅಧಿವೇಶನ ನಡೆಯಲಿದೆ. ರೈತರ ಸಮಸ್ಯೆಗಳು, ಚೀನಾದ ಆಕ್ರಮಣ, ಕೋವಿಡ್‌ - 19 ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್, ಏರ್‌ ಇಂಡಿಯಾ ಮಾರಾಟ ಮತ್ತು ಪೆಗಾಸಸ್‌ ವಿವಾದದಂತಹ ಸಮಸ್ಯೆಗಳನ್ನು ಸಮಾನ ಮನಸ್ಕ ಪಕ್ಷಗಳೊಂದಿಗೆ ಪ್ರಸ್ತಾಪಿಸುವುದಾಗಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಈಗಾಗಲೇ ಘೋಷಿಸಿದೆ.


from India & World News in Kannada | VK Polls https://ift.tt/UnaI601bv

ಯುವಕರಿಗೆ ಪಂಜಾಬ್‌ ಕಾಂಗ್ರೆಸ್‌ ಮಣೆ..! ಎಂಜಿನಿಯರ್‌, ಉಪನ್ಯಾಸಕ, ಪದವೀಧರರಿಗೆ ಟಿಕೆಟ್‌..!

ಚಂಡೀಗಢ: ಪಂಜಾಬ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರಿ ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್‌, ಹೊಸ ಮುಖಗಳು, ಅದರಲ್ಲೂ ಹಲವು ಕ್ಷೇತ್ರಗಳ ವೃತ್ತಿಪರರಿಗೆ ಟಿಕೆಟ್‌ ನೀಡುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆದಿದೆ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದವರು, ಬೋಧನಾ ವೃತ್ತಿಯಲ್ಲಿದ್ದು ರಾಜಕೀಯಕ್ಕೆ ಬಂದವರು, ವಿದೇಶದಲ್ಲಿ ಪದವಿ ಪಡೆದವರು ಹಾಗೂ ಪಕ್ಷದ ನಾಯಕರ ಮಕ್ಕಳನ್ನು ರಾಜಕೀಯಕ್ಕೆ ಸೆಳೆದಿದೆ. ಅಲ್ಲದೆ, ಅವರಿಗೆ ಟಿಕೆಟ್‌ ನೀಡುವ ಮೂಲಕ ಯುವ ಮತದಾರರು ಸೇರಿ ಸಮಾಜದ ಎಲ್ಲ ವರ್ಗದವರ ಮತ ಸೆಳೆಯಲು ತಂತ್ರ ರೂಪಿಸಿದ್ದಾರೆ. ಸಂದೀಪ್‌ ಕುಮಾರ್‌ ಜಾಖಡ್‌ (45) ಅವರು ಪಂಜಾಬ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸುನಿಲ್‌ ಜಾಖರ್‌ ಅವರ ಸಂಬಂಧಿಯಾಗಿದ್ದು, ಇವರಿಗೆ ಅಬೋಹರ್‌ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಅವರು ಅಮೆರಿಕದ ಫ್ಲೊರಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ. ಯುವ ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಇವರಿಗೆ ಟಿಕೆಟ್‌ ನೀಡಿದೆ ಎಂದು ಹೇಳಲಾಗಿದೆ. ನಟ, ಸಮಾಜ ಸೇವಕ ಸೋನು ಸೂದ್‌ ಅವರ ಸಹೋದರಿ ಮಾಳವಿಕಾ ಸೂದ್‌ ಸಾಚರ್‌ (38) ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದರ ಹಿಂದೆಯೂ ಯುವ ಮತದಾರರ ಸೆಳೆಯುವ ತಂತ್ರವಿದೆ. ಅದರಲ್ಲೂ, ಮೋಗಾ ಕ್ಷೇತ್ರದ ಹಾಲಿ ಶಾಸಕ ಹರ್‌ಜೋತ್‌ ಸಿಂಗ್‌ ಕಮಲ್‌ ಅವರಿಗೆ ಟಿಕೆಟ್‌ ತಪ್ಪಿಸಿ, ಮಾಳವಿಕಾ ಅವರಿಗೆ ಟಿಕೆಟ್‌ ನೀಡಿದ್ದು ಇದೇ ತಂತ್ರದ ಭಾಗವಾಗಿದೆ. ಮಾಳವಿಕಾ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ಬುದ್ಲಾಧ (ಎಸ್‌ಸಿ ಮೀಸಲು) ಕ್ಷೇತ್ರದಿಂದ ಸ್ಪರ್ಧಿಸಿರುವ ರಣವೀರ್‌ ಕೌರ್‌ ಮಿಯಾನ್‌ ಅವರು 30 ವರ್ಷದ ಯುವಕರಾಗಿದ್ದು, ಇಂಗ್ಲಿಷ್‌ ಸಾಹಿತ್ಯದ ಕುರಿತು ಪಿಎಚ್‌ಡಿ ಮಾಡಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲ, ಸಚಿವ ಬ್ರಹ್ಮ ಮೊಹಿಂದ್ರಾ ಪುತ್ರ ಮೋಹಿತ್‌ ಮೊಹಿಂದ್ರಾ (32) ಅವರಿಗೆ ಪಟಿಯಾಲ ಗ್ರಾಮೀಣದಿಂದ ಟಿಕೆಟ್ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರ ಸಂಬಂಧಿ ಜಗಪಾಲ್‌ ಸಿಂಗ್‌ ಅಬುಲ್‌ ಖುರಾನ, ಶಿಕ್ಷಕ ವೃತ್ತಿಯಲ್ಲಿದ್ದು ಬಳಿಕ ರಾಜಕೀಯಕ್ಕೆ ಧುಮುಕಿದ ರಜಿಂದರ್‌ ಕೌರ್‌, ಪಂಜಾಬಿ ಗಾಯಕ ಸಿಧು ಮೂಸೆವಾಲಾ (28), ಯುವ ಕಾಂಗ್ರೆಸ್‌ ನಾಯಕ ಅಮರ್‌ಪ್ರೀತ್‌ ಸಿಂಗ್‌ ಲಲ್ಲಿ (39) ಅವರೂ ಚುನಾವಣೆ ಕಣದಲ್ಲಿರುವ ಯುವ ಮುಖಗಳಾಗಿವೆ. ಎರಡು ಕ್ಷೇತ್ರಗಳಿಂದ ಸಿಎಂ ಸ್ಪರ್ಧೆ ಮುಖ್ಯಮಂತ್ರಿ ಚರಣ್‌ ಜಿತ್‌ ಸಿಂಗ್‌ ಚನ್ನಿ ತಾವು ಹಾಲಿ ಪ್ರತಿನಿಧಿಸುತ್ತಿರುವ ಚಮಕೌರ್‌ ಸಾಹಿಬ್‌ ಅಲ್ಲದೆ ಬಹಾದೂರ್‌ ಕ್ಷೇತ್ರದಿಂದಲೂ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್‌ ಭಾನುವಾರ ಪ್ರಕಟಿಸಿದ ಎಂಟು ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಖ್ಯಮಂತ್ರಿ ಚನ್ನಿ ಅವರ ಹೆಸರಿದೆ. ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಮುಖ್ಯಮಂತ್ರಿ ನಿರ್ಧಾರವನ್ನು ಆಮ್‌ ಆದ್ಮಿ ಪಾರ್ಟಿ ವರಿಷ್ಠ ಅರವಿಂದ್‌ ಕೇಜ್ರಿವಾಲ್‌ ಟೀಕಿಸಿದ್ದಾರೆ. 'ನಮ್ಮ ಪಕ್ಷದ ಸಮೀಕ್ಷೆಯು ಚಮಕೌರ್‌ ಸಾಹಿಬ್‌ನಲ್ಲಿ ಚನ್ನಿಯವರು ಸೋಲುವುದು ಖಚಿತ ಎಂಬ ವರದಿ ನೀಡಿದೆ. ಮುಖ್ಯಮಂತ್ರಿ ಈಗ ಎರಡು ಕ್ಷೇತ್ರ ಆರಿಸಿಕೊಂಡಿರುವುದನ್ನು ನೋಡಿದರೆ ನಮ್ಮ ಸಮೀಕ್ಷೆ ನಿಜವಾಗುವಂತೆ ತೋರುತ್ತಿದೆ' ಎಂದು ಕೇಜ್ರಿವಾಲ್‌ ಹೇಳಿದ್ದಾರೆ.


from India & World News in Kannada | VK Polls https://ift.tt/V7SDeXjxp

ಉತ್ತರ ಪ್ರದೇಶ ಚುನಾವಣೆ: ಬಿಜೆಪಿಗೆ ಮುಸ್ಲಿಮರ ಬೆಂಬಲ..! ಕೇಸರಿಗೆ ಜೈ ಎಂದ ಎಸ್ಪಿ, ಬಿಎಸ್ಪಿಯ ಹಲವು ಮುಖಂಡರು..!

ಲಖನೌ: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನಕ್ಕೆ 10 ದಿನ ಇರುವಾಗಲೇ ಬಿಜೆಪಿಗೆ ಭಾರಿ ಬಲ ಬಂದಿದೆ. ಕಾಂಗ್ರೆಸ್‌ ನಾಯಕ, ಇತ್ತಿಹಾದ್‌ - ಎ - ಮಿಲ್ಲತ್‌ ಸಮಿತಿ ಮುಖ್ಯಸ್ಥ ಮೌಲಾನ ತೌಕೀರ್‌ ರಾಜಾ ಖಾನ್‌ ಅವರ ಸೊಸೆ, ತ್ರಿವಳಿ ತಲಾಖ್‌ ಸಂತ್ರಸ್ತೆ ನಿದಾ ಖಾನ್‌ ಸೇರಿದಂತೆ, ಸಮಾಜವಾದಿ ಪಕ್ಷ (), ಬಹುಜನ ಸಮಾಜ ಪಕ್ಷ (), ಕಾಂಗ್ರೆಸ್‌ಗಳ ಎರಡು ಡಜನ್‌ಗೂ ಅಧಿಕ ನಾಯಕರು ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಸಚಿವರಾಗಿರುವ ಎಸ್‌ಪಿ ನಾಯಕ ಶಿವಚರಣ್‌ ಪ್ರಜಾಪತಿ, ಬಿಎಸ್‌ಪಿ ನಾಯಕರಾದ ಗಂಗಾರಾಮ್‌ ಅಂಬೇಡ್ಕರ್‌ ಮೊದಲಾದ ನಾಯಕರು, ಲಖನೌನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ ಲಕ್ಷ್ಮೀಕಾಂತ ಬಾಜಪೇಯಿ ಅವರ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆಯಾದರು. ರಾಜ್ಯದಲ್ಲಿ ವಿಧಾನಸಭೆ ಚಟುವಟಿಕೆಗಳು ಗರಿಗೆದರುತ್ತಿದ್ದಂತೆಯೇ ಸ್ವಾಮಿ ಪ್ರಸಾದ್‌ ಮೌರ್ಯ ಸೇರಿದಂತೆ ಒಬಿಸಿಯ ಹಲವು ನಾಯಕರು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದು, ಬಿಜೆಪಿಗೆ ಹಿನ್ನಡೆ ಎಂದೇ ಹೇಳಲಾಗಿತ್ತು. ಇದಾದ ಬಳಿಕ ಮುಲಾಯಂ ಸಿಂಗ್‌ ಯಾದವ್‌ ಸೊಸೆ ಅಪರ್ಣಾ ಯಾದವ್‌ ಸೇರಿ ಎಸ್‌ಪಿ, ಬಿಎಸ್‌ಪಿ ಹಾಗೂ ಕಾಂಗ್ರೆಸ್‌ನ ಹಲವು ನಾಯಕರು ಸತತವಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಇದರಿಂದ ಕಮಲ ಪಾಳಯದಲ್ಲಿ ಹೊಸ ಚೈತನ್ಯ ಮೂಡಿದೆ. ಇದುವರೆಗೆ ಚುನಾವಣೆ ಪೂರ್ವವಾಗಿ ನಡೆದ ಹಲವು ಸಮೀಕ್ಷೆಗಳು, ರಾಜ್ಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಅವರ ವರ್ಚಸ್ಸು ಹಾಗೂ ಮೋದಿ ಅವರ ಅಲೆಯಿಂದಾಗಿ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬುದನ್ನು ಅರಿತ ಹಲವು ಪಕ್ಷದ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಸೇರಿದ ಹತ್ತಾರು ನಾಯಕರು ವಿವಿಧ ಸಮುದಾಯಗಳಿಗೆ ಸೇರಿದವರಾಗಿರುವುದರಿಂದ ಜಾತಿ ಮತಗಳ ಲೆಕ್ಕಾಚಾರದಲ್ಲೂ ಕಮಲ ಪಾಳಯಕ್ಕೆ ಮುನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಹಿಳಾ ರಕ್ಷಣೆ ಮೆಚ್ಚಿ ಬಿಜೆಪಿ ಸೇರ್ಪಡೆ ಎಂದ ನಿದಾ 'ತ್ರಿವಳಿ ತಲಾಖ್‌ ನಿಷೇಧ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಬಿಜೆಪಿಯ ಪ್ರಯತ್ನ ಮೆಚ್ಚಿ ಬಿಜೆಪಿ ಸೇರ್ಪಡೆಯಾಗಿದ್ದೇನೆ' ಎಂದು ತ್ರಿವಳಿ ತಲಾಖ್‌ ಸಂತ್ರಸ್ತೆಯಾದ ನಿದಾ ಖಾನ್‌ ತಿಳಿಸಿದ್ದಾರೆ. 'ತ್ರಿವಳಿ ತಲಾಖ್‌ ನಿಷೇಧದಿಂದ ಮುಸ್ಲಿಂ ಹೆಣ್ಣು ಮಕ್ಕಳಿಗೆ ನೆಮ್ಮದಿ ದೊರೆತಿದೆ. ಅಲ್ಲದೆ, ಬಿಜೆಪಿ ಅವಧಿಯಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ಇದೆಲ್ಲ ಕೆಲಸಗಳನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ' ಎಂದು ತಿಳಿಸಿದ್ದಾರೆ. ನಿದಾ ಖಾನ್‌ ಮಾವ ಮೌಲಾನ ತೌಕೀರ್‌ ರಾಜಾ ಖಾನ್‌ ಅವರು 15 ದಿನಗಳ ಹಿಂದಷ್ಟೇ ಕಾಂಗ್ರೆಸ್‌ ಸೇರಿದ್ದು, ಇದಾದ ಬೆನ್ನಲ್ಲೇ ಸೊಸೆ ಬಿಜೆಪಿ ಸೇರಿದ್ದಾರೆ. ಅಲ್ಲದೆ, ಇದಕ್ಕೂ ಮೊದಲು ಮಾವನ ವಿರುದ್ಧವೂ ನಿದಾ ಖಾನ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಅಖಿಲೇಶ್‌ ಯಾದವ್‌ ವಿರುದ್ಧ ಅಪರ್ಣಾ ಯಾದವ್‌ ಕಣಕ್ಕೆ..? ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಅವರ ಸೊಸೆ ಅಪರ್ಣಾ ಯಾದವ್‌ ಅವರನ್ನು ಅಧ್ಯಕ್ಷ ಅಖಿಲೇಶ್‌ ಯಾದವ್‌ ವಿರುದ್ಧವೇ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಕರ್ಹಾಲ್‌ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅಖಿಲೇಶ್‌ ಯಾದವ್‌ ಘೋಷಿಸಿದ್ದು, ಈಗ ಅವರ ವಿರುದ್ಧ ಸಂಬಂಧಿಯನ್ನೇ ಕಣಕ್ಕಿಳಿಸುವ ಮೂಲಕ ಜಿದ್ದಾಜಿದ್ದಿಯ ಸ್ಪರ್ಧೆಯೊಡ್ಡಲು ಕಮಲ ಪಾಳಯ ತೀರ್ಮಾನಿಸಿದೆ. ಇತ್ತೀಚೆಗೆ ಬಿಜೆಪಿ ಸೇರಿದ ಬಳಿಕ ಅಪರ್ಣಾ ಯಾದವ್‌ ಸಹ ಅಖಿಲೇಶ್‌ ವಿರುದ್ಧ ಸ್ಪರ್ಧೆಗೆ ಉತ್ಸಾಹ ತೋರಿಸಿದ್ದಾರೆ ಎಂದು ತಿಳಿದು ಬಂದಿದೆ. ಮುಸ್ಲಿಂ ಬಾಹುಳ್ಯ ಗ್ರಾಮದ ಜನ ಸಿಎಂ ಯೋಗಿಗೆ ಬೆಂಬಲ ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಬೆಂಬಲ ಎಸ್‌ಪಿ ಹಾಗೂ ಬಿಎಸ್‌ಪಿಗೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ರಾಜ್ಯದ ಕಿಥೋರೆ ವಿಧಾನ ಸಭೆ ಕ್ಷೇತ್ರದ ನಾಂಗ್ಲಾ ಸಾಹು ಗ್ರಾಮದ ಮುಸ್ಲಿಮರು ಮಾತ್ರ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಅದರಲ್ಲೂ, ಯೋಗಿ ಆದಿತ್ಯನಾಥ್‌ ಅವರ ಆಡಳಿತ ಮೆಚ್ಚಿ ಇವರು ಪ್ರತಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ನಾಂಗ್ಲಾ ಸಾಹು ಗ್ರಾಮದಲ್ಲಿ ಶೇ.97ರಷ್ಟು ಮುಸ್ಲಿಮರಿದ್ದು, ಗ್ರಾಮದಲ್ಲಿ ಅರ್ಧ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಜನ ಬಿಜೆಪಿಗೇ ಮತ ಹಾಕುತ್ತಾರೆ ಎಂದು ತಿಳಿದು ಬಂದಿದೆ. ಎಸ್‌ಪಿ ನಾಯಕ, ಕ್ಷೇತ್ರದ ಶಾಸಕ ಶಾಹಿದ್‌ ಮಂಜೂರ್‌ ಅಟ್ಟಹಾಸದಿಂದ ಗ್ರಾಮಸ್ಥರನ್ನು ಮುಕ್ತಗೊಳಿಸಿ, ಇಡೀ ಗ್ರಾಮದಲ್ಲಿ ಶಾಂತಿ ನೆಲೆಸಲು ಮೋದಿ ಹಾಗೂ ಯೋಗಿ ಅವರೇ ಕಾರಣ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಇವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಇವರಲ್ಲಿ ಯುವ ಮುಸ್ಲಿಮರ ಪಾಲೂ ಜಾಸ್ತಿ ಇದೆ. 'ಗ್ರಾಮದಲ್ಲಿ 2014ಕ್ಕೂ ಮೊದಲು ಅಪರಾಧ, ಹಿಂಸೆ ಜಾಸ್ತಿ ಇತ್ತು. ಆದರೆ, ಯೋಗಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗ್ರಾಮದಲ್ಲಿ ಶಾಂತಿ ನೆಲೆಸಿದೆ. ಕಳ್ಳರು, ದರೋಡೆಕೋರರು ಸೇರಿ ಎಲ್ಲ ಅಪರಾಧಿಗಳನ್ನು ನಿರ್ಮೂಲನೆ ಮಾಡಲಾಗಿದೆ. ಹಾಗಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ' ಎಂದು ಎಂಜಿನಿಯರಿಂಗ್‌ ವಿದ್ಯಾರ್ಥಿ ರೆಹಾನ್‌ ಚೌಹಾಣ್‌ ತಿಳಿಸಿದ್ದಾರೆ. 'ಯೋಗಿ ಅಧಿಕಾರಕ್ಕೆ ಬಂದ ಬಳಿಕ ಗ್ರಾಮಕ್ಕೆ ಕಳ್ಳರು ಬರುವುದು ನಿಂತಿದೆ. ಕಳ್ಳಕಾಕರ ಉಪಟಳ ನಿಂತು ಹೋಗಿದ್ದು, ನಾವೀಗ ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ' ಎಂದು ಮೊಹಮ್ಮದ್‌ ಎಂಬ ಹಿರಿಯ ನಾಗರಿಕರು ಮಾಧ್ಯಮಗಳಿಗೆ ಹೇಳಿದ್ದಾರೆ. ರೀಟಾ ಬಹುಗುಣ ಪುತ್ರ ಪಕ್ಷಾಂತರ? ಬಿಜೆಪಿ ಸಂಸದೆ ರೀಟಾ ಬಹುಗುಣ ಪುತ್ರ ಮಯಾಂಕ್‌ ಜೋಶಿ ಅವರಿಗೆ ಲಖನೌ ಕಂಟೋನ್ಮೆಂಟ್‌ ಕ್ಷೇತ್ರದಿಂದ ಟಿಕೆಟ್‌ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿರುವ ಕಾರಣ ಅವರು ಸಮಾಜವಾದಿ ಪಾರ್ಟಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. 'ಮಯಾಂಕ್‌ ಮಾತ್ರವಲ್ಲ ಅವರ ತಾಯಿ ರೀಟಾ ಸಹ ಸಮಾಜವಾದಿ ಪಕ್ಷದ ಜತೆ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲೇ ಇಬ್ಬರು ಸಹ ಎಸ್‌ಪಿ ಸೇರುವ ಸಾಧ್ಯತೆ ಇದೆ' ಎಂದು ಎಸ್‌ಪಿ ವಕ್ತಾರ ಫಕ್ರುಲ್‌ ಚಾಂದ್‌ ಹೇಳಿದ್ದಾರೆ.


from India & World News in Kannada | VK Polls https://ift.tt/bG7xTdpca

ಹಾಫ್ ಹೆಲ್ಮೆಟ್ಟು, ಪೊಲೀಸರಿಗೆ ಇಕ್ಕಟ್ಟು; ನಾಗರಿಕರ ಟೀಕೆ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ

ಬೆಂಗಳೂರು: ಗುಣಮಟ್ಟವಿಲ್ಲದ ಕಾರಣಕ್ಕಾಗಿ ಟ್ರಾಫಿಕ್‌ ಪೊಲೀಸರು ಲಾರಿ ಚಕ್ರಗಳ ಅಡಿಯಲ್ಲಿ ಹೆಲ್ಮೆಟ್‌ಗಳನ್ನು ಪುಡಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಚರ್ಚೆಯನ್ನು ಹುಟ್ಟುಹಾಕಿದೆ. ಗುಣಮಟ್ಟವಿಲ್ಲದ ಹೆಲ್ಮೆಟ್‌ಗಳನ್ನು ಬಳಸುವ ಪೊಲೀಸರತ್ತ ನಾಗರಿಕರು ಬೊಟ್ಟು ಮಾಡಿದ್ದಾರೆ. ಡಿಸಿಪಿ(ಸಂಚಾರ-ಬೆಂಗಳೂರು ಪಶ್ಚಿಮ) ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಅವರು ಹಂಚಿಕೊಂಡಿರುವ ವಿಡಿಯೊ ಕ್ಲಿಪ್‌ನಲ್ಲಿ, ಪೊಲೀಸ್‌ ಅಕಾರಿಯೊಬ್ಬರು ಕಳಪೆ ಗುಣಮಟ್ಟದ ಹೆಲ್ಮೆಟ್‌ ಧರಿಸಿ, ಐಎಸ್‌ಐ ಚಿಹ್ನೆ, ಗುಣಮಟ್ಟವಿಲ್ಲದ ಹೆಲ್ಮೆಟ್‌ಗಳನ್ನು ನಾಶಪಡಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಹಲವು ವಾಹನ ಸವಾರರು ವ್ಯಂಗ್ಯವಾಡಿದ್ದಾರೆ. ಇತರೆ ದ್ವಿಚಕ್ರ ವಾಹನ ಸವಾರರ ಪ್ರಾಣದಂತೆ ಪೊಲೀಸರ ಪ್ರಾಣ ಕೂಡ ಅಮೂಲ್ಯವಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ರೀತಿಯ ವಿಮರ್ಶೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್‌ ಇಲಾಖೆ, ಎಲ್ಲ ಸಿಬ್ಬಂದಿಯು ಕಡ್ಡಾಯವಾಗಿ ಐಎಸ್‌ಐ ಗುಣಮಟ್ಟದ ಫುಲ್‌ ಹೆಲ್ಮೆಟ್‌ಗಳನ್ನು ಧರಿಸುವಂತೆ ಸೂಚಿಸಿದೆ. ‘ಕಾನೂನು ಎಲ್ಲರಿಗೂ ಒಂದೇ. ಹೆಲ್ಮೆಟ್‌ ನಿಯಮ ಪೊಲೀಸರಿಗೂ ಅನ್ವಯವಾಗುತ್ತದೆ. ಐಎಸ್‌ಐ ಗುಣಮಟ್ಟದ, ಫುಲ್‌ ಹೆಲ್ಮೆಟ್‌ಗಳನ್ನು ಧರಿಸುವಂತೆ ಈಗಾಗಲೇ ನಾವು ಪೊಲೀಸ್‌ ಸಿಬ್ಬಂದಿಗೆ ಸೂಚಿಸಿದ್ದೇವೆ. ಇದುವರೆಗೂ ಗುಣಮಟ್ಟವಿಲ್ಲದ ಹೆಲ್ಮೆಟ್‌ ಧರಿಸಿದ 1,600 ಪೊಲೀಸ್‌ ಸಿಬ್ಬಂದಿಗೆ ದಂಡ ಕೂಡ ವಿಧಿಸಲಾಗಿದೆ’ ಎಂದು ಪೊಲೀಸ್‌ ಜಂಟಿ ಆಯುಕ್ತ(ಸಂಚಾರ) ಬಿ.ಆರ್‌.ರವಿಕಾಂತೇಗೌಡ ತಿಳಿಸಿದರು. ಬಿ.ವಿ.ಕೆ.ಅಯ್ಯಂಗಾರ್‌ ರಸ್ತೆ, ಶಿವಾಜಿನಗರ, ವಿಲ್ಸನ್‌ ಗಾರ್ಡನ್‌ ಸೇರಿದಂತೆ ಇತರೆ ಸ್ಥಳಗಳಲ್ಲಿರುವ ಅಧಿಕೃತ ಪೊಲೀಸ್‌ ಸ್ಟೋರ್‌ಗಳಿಂದ ಪೊಲೀಸರು ಹೆಲ್ಮೆಟ್‌ಗಳನ್ನು ಖರೀದಿಸುತ್ತಾರೆ. ‘ಹೆಲ್ಮೆಟ್‌ ಅನ್ನು ನಮ್ಮ ಸ್ವಂತ ಖರ್ಚಿನಿಂದ ಖರೀದಿಸಬೇಕಿದೆ. ಪೊಲೀಸ್‌ ಲಾಂಛನವಿರುವ ಮತ್ತು ಐಎಸ್‌ಐ ಗುರುತು ಹೊಂದಿರುವ ಹಾಫ್‌ ಹೆಲ್ಮೆಟ್‌ಗೆ 350 ರೂ. ಬೆಲೆ ಇದ್ದು, ಇದೇ ರೀತಿಯ ವೈಶಿಷ್ಟ್ಯ ಹೊಂದಿರುವ ಫುಲ್‌ ಹೆಲ್ಮೆಟ್‌ಗೆ 800 ರೂ. ಬೆಲೆ ಇದೆ’ ಎಂದು ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರು ಹೇಳಿದರು. ‘ಪೊಲೀಸ್‌ ಇಲಾಖೆ ಕೇವಲ ಇಂಧನ ಶುಲ್ಕವನ್ನು ಮಾತ್ರ ಪಾವತಿಸುತ್ತದೆ. ದ್ವಿಚಕ್ರ ವಾಹನಗಳಲ್ಲಿ ಗಸ್ತು ತಿರುಗುವ ಪೊಲೀಸ್‌ ಸಿಬ್ಬಂದಿ ತಮ್ಮ ಖರ್ಚಿನಲ್ಲಿ ಹೆಲ್ಮೆಟ್‌ ಖರೀದಿಸಬೇಕು’ ಎಂದು ರವಿಕಾಂತೇಗೌಡ ತಿಳಿಸಿದರು. ‘ನಮ್ಮ ಸಿಬ್ಬಂದಿಗೆ ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸುವಂತೆ ತಿಳಿಸಲಾಗಿದೆ. ಈ ಕುರಿತು ಸಾರ್ವಜನಿಕ ಅಭಿಯಾನ ಆರಂಭಿಸುವ ಮುನ್ನ ನಮ್ಮ ಇಲಾಖೆಯಲ್ಲಿ ಮೊದಲು ನಿಯಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ಡಿಸಿಪಿ(ಸಂಚಾರ-ಬೆಂಗಳೂರು ಪಶ್ಚಿಮ) ಕುಲದೀಪ್‌ ಕುಮಾರ್‌ ಜೈನ್‌ ಹೇಳಿದರು. ಹೆಲ್ಮೆಟ್‌ ಧರಿಸಿದವರೇ ಅಪಘಾತಗಳಲ್ಲಿ ಹೆಚ್ಚು ಸಾವು !ಸಂಚಾರ ಪೊಲೀಸರ ಅಂಕಿ-ಅಂಶದ ಪ್ರಕಾರ, ಅಪಘಾತಗಳಲ್ಲಿ ಹೆಲ್ಮೆಟ್‌ ಧರಿಸದವರು ಮೃತಪಟ್ಟಿರುವುದಕ್ಕಿಂತ ಮೂರು ಪಟ್ಟು ಅಧಿಕ ಸಂಖ್ಯೆಯಲ್ಲಿ ಹೆಲ್ಮೆಟ್‌ ಧರಿಸಿರುವ ಬೈಕ್‌ ಚಾಲಕರು ಮತ್ತು ಹಿಂಬದಿ ಸವಾರರು ಮೃತಪಟ್ಟಿದ್ದಾರೆ. ಈ ಸಂಖ್ಯೆ ಹೆಚ್ಚಲು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳು ಮತ್ತು ಹೆಲ್ಮೆಟ್‌ ಸರಿಯಾಗಿ ಧರಿಸದಿರುವುದೇ ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ವರದಿಯ ಪ್ರಕಾರ 2019ರಿಂದ 2021ರವರೆಗೆ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 1,300 ಬೈಕ್‌ ಚಾಲಕರು ಮತ್ತು ಹಿಂಬದಿ ಸವಾರರು ಮೃತಪಟ್ಟಿದ್ದಾರೆ. ಈ ಪೈಕಿ 947 ಮಂದಿ ಹೆಲ್ಮೆಟ್‌ ಧರಿಸಿದ್ದರೆ, 353 ಮಂದಿ ಹೆಲ್ಮೆಟ್‌ ಧರಿಸಿರಲಿಲ್ಲ. ‘ಕಳಪೆ ಹೆಲ್ಮೆಟ್‌ ಸವಾರರ ಜೀವಕ್ಕೆ ಕುತ್ತು ತರುತ್ತಿರುವ ಹಿನ್ನೆಲೆಯಲ್ಲಿ ನಾವು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳ ವಿರುದ್ಧ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದೇವೆ. ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನ ಸವಾರರು ಹಾಫ್‌ ಹೆಲ್ಮೆಟ್‌ ಬದಲು ಫುಲ್‌ ಹೆಲ್ಮೆಟ್‌ ಧರಿಸಬೇಕು. ಸದ್ಯ ಈ ಬಗ್ಗೆ ಬೈಕ್‌ ಸವಾರರಿಗೆ ಕೇವಲ ಅರಿವು ಮೂಡಿಸಿ, ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ. ಫೆಬ್ರವರಿ ಅಂತ್ಯದ ವೇಳೆಗೆ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುವುದನ್ನು ಅರಂಭಿಸುತ್ತೇವೆ. ಕೇವಲ ನಿಯಮ ಪಾಲಿಸುವ ಉದ್ದೇಶದಿಂದ ಗುಣಮಟ್ಟವಿಲ್ಲದ ಹೆಲ್ಮೆಟ್‌ ಧರಿಸುವುದರಿಂದ ಅಪಘಾತಗಳ ಸಮಯದಲ್ಲಿ ಪ್ರಾಣ ಉಳಿಯುವುದಿಲ್ಲ’ ಎಂದು ರವಿಕಾಂತೇಗೌಡ ವಿವರಿಸಿದರು.


from India & World News in Kannada | VK Polls https://ift.tt/pf2XbBaOt

ಮೋದಿಗೆ ತಿರುಗುಬಾಣವಾದ ‘ಕೆಂಪು ಟೋಪಿ’ ಟೀಕೆ; ಪ್ರಧಾನಿ ಹೇಳಿಕೆಯನ್ನೇ ಪ್ರತ್ಯಸ್ತ್ರವನ್ನಾಗಿಸಿದ ಅಖಿಲೇಶ್‌ ಟೀಂ

ಲಖನೌ: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾತಿ ಲೆಕ್ಕಾಚಾರ ಮಾತ್ರವಲ್ಲ, ವಿರೋಧಿಗಳ ಹೇಳಿಕೆ, ಟೀಕೆಗಳು ಸಹ ಚುನಾವಣೆ ಪ್ರಚಾರದ ವಿಷಯಗಳಾಗಿ ಮಾರ್ಪಾಡಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಪ್ರಧಾನಿ ಅವರು ಸಮಾಜವಾದಿ ಪಕ್ಷದ ವಿರುದ್ಧ ಬಳಸಿದ್ದ ‘ ಧರಿಸಿದವರು ಉತ್ತರ ಪ್ರದೇಶಕ್ಕೆ ರೆಡ್‌ ಅಲರ್ಟ್‌’ ಎಂಬ ಅಸ್ತ್ರವನ್ನೇ ಸಮಾಜವಾದಿ ಪಕ್ಷವು ಪ್ರತ್ಯಸ್ತ್ರವನ್ನಾಗಿ ಬಳಸುತ್ತಿದೆ. ಸಮಾಜವಾದಿ ಪಕ್ಷದ ಹಿರಿಯ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆ ಪ್ರಚಾರದ ಪ್ರತಿಯೊಂದು ಘಳಿಗೆಯಲ್ಲೂ ಕೆಂಪು ಟೋಪಿಗಳನ್ನು ಧರಿಸುತ್ತಿದ್ದಾರೆ. ಕೆಂಪು ಟೋಪಿ ಎಂಬುದು ಬದಲಾವಣೆ ಹಾಗೂ ಕ್ರಾಂತಿಯ ಸಂಕೇತ ಎಂದು ಜನರಿಗೆ ಬಿಂಬಿಸುತ್ತಿದ್ದಾರೆ. ಪ್ರತಿಯೊಬ್ಬರೂ ಕೆಂಪು ಟೋಪಿ ಖರೀದಿಸಿ, ಧರಿಸಿ, ಮನೆ-ಮನೆ ಪ್ರಚಾರ ಕೈಗೊಳ್ಳುವ ಮೂಲಕ ಮೋದಿ ಅವರ ಟೀಕೆಯನ್ನೇ ಪ್ರಚಾರದ ದಾಳವನ್ನಾಗಿ ಬಳಸುತ್ತಿದ್ದಾರೆ. ‘ಸಮಾಜವಾದಿ ಪಕ್ಷದ ಪ್ರತಿಯೊಬ್ಬರೂ ಹಳ್ಳಿ ಹಳ್ಳಿಗಳಿಗೆ, ಮನೆ ಮನೆಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಕೆಂಪು ಟೋಪಿ ಧರಿಸಿಯೇ ಎಲ್ಲರೂ ಪ್ರಚಾರದಲ್ಲಿ ತೊಡಗಿದ್ದೇವೆ. ಇದು ಬದಲಾವಣೆ ಹಾಗೂ ಕ್ರಾಂತಿಯ ಸಂಕೇತವಾಗಿದೆ’ ಎಂದು ಪಕ್ಷದ ವಕ್ತಾರ ಸುನಿಲ್‌ ಸಿಂಗ್‌ ಸಜನ್‌ ತಿಳಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ಸಂಕೇತವಾಗಿ ಧರಿಸುವ ಕೆಂಪು ಟೋಪಿ ಬಗ್ಗೆ ನರೇಂದ್ರ ಮೋದಿ ಅವರು ಟೀಕಿಸಿದ್ದರು. ‘ಕೆಂಪು ಟೋಪಿ ಧರಿಸಿದವರು ಉತ್ತರ ಪ್ರದೇಶಕ್ಕೆ ರೆಡ್‌ ಅಲರ್ಟ್‌’ ಎಂದಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸಹ ಕೆಂಪು ಟೋಪಿ ಧರಿಸಿದವರು ಗೂಂಡಾಗಳು ಎಂದು ಜರಿದಿದ್ದರು. ಆದರೆ, ಇದೇ ಟೀಕೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಟೋಪಿ ಧರಿಸಿಯೇ ಬಿಜೆಪಿಗೆ ಟಾಂಗ್‌ ನೀಡುತ್ತಿದೆ. ಚುನಾವಣೆ ಉಪಕರಣಗಳನ್ನು ಉತ್ಪಾದಿಸುವ ಶೀಲಾ ಎಂಟರ್‌ಪ್ರೈಸಸ್‌ ಕಂಪನಿಯು ಸಮಾಜವಾದಿ ಪಕ್ಷದ ಟೋಪಿಗಳನ್ನು ತಯಾರಿಸುತ್ತದೆ. ಇದರಲ್ಲಿ ಎರಡು ಗುಣಮಟ್ಟದ ಕ್ಯಾಪ್‌ಗಳು ಸಿಗುತ್ತಿವೆ. ಬ್ರ್ಯಾಂಡೆಡ್‌ ಟೋಪಿಗಳಿಗೆ 100 ಕ್ಯಾಪ್‌ಗಳಿಗೆ 2,500 ರೂ. ದರ ಇದ್ದರೆ, ಅಷ್ಟೇನೂ ಗುಣಮಟ್ಟದಲ್ಲದ ಮತ್ತೊಂದು ದರ್ಜೆಯ 100 ಟೋಪಿಗಳಿಗೆ 150 ರೂ. ಆಗಲಿದೆ. ಆಯಾ ಕ್ಷೇತ್ರಗಳ ನಾಯಕರು ಕಾರ್ಯಕರ್ತರಿಗೆ ಟೋಪಿ ವಿತರಿಸುತ್ತಿದ್ದಾರೆ.


from India & World News in Kannada | VK Polls https://ift.tt/fBF9v7pG3

ಬಜೆಟ್‌ ಮೇಲಿದೆ ಪಂಚರಾಜ್ಯ ಚುನಾವಣೆಯ ಒತ್ತಡ: ನಿರೀಕ್ಷೆಗಳೇನು?

ಹೊಸದಿಲ್ಲಿ: ಮುಂಬರುವ ರಾಜ್ಯಗಳ ಚುನಾವಣೆ ದೃಷ್ಟಿಯಿಂದ 2022-23ರ ಕೇಂದ್ರ ಬಜೆಟ್‌, ಸಾರ್ವಜನಿಕ ಬಂಡವಾಳ ವೆಚ್ಚವನ್ನು ಗಣನೀಯ ಏರಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವ ಸಾಧ್ಯತೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ಆಯವ್ಯಯವನ್ನು ಮಂಡಿಸಲಿದ್ದು, ನಾನಾ ವಲಯಗಳಿಗೆ ಸರಕಾರ ನೆರವು ನೀಡಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ. ಕೋವಿಡ್‌ ಪಿಡುಗಿನ ಆರ್ಥಿಕ ದುಷ್ಪರಿಣಾಮಗಳನ್ನು ಹತ್ತಿಕ್ಕಲು ಸರಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಹೀಗಿದ್ದರೂ, ಹಲವು ಸವಾಲುಗಳು ಈಗಲೂ ಉಳಿದಿವೆ. ಇದನ್ನು ಬಗೆಹರಿಸಲು ಬಜೆಟ್‌ ಆದ್ಯತೆ ನೀಡಬಹುದು ಎನ್ನಲಾಗುತ್ತಿದೆ. ರಾಜ್ಯಗಳ ಚುನಾವಣೆ ಎಫೆಕ್ಟ್ ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿದೆ. ಅದೊಂದೇ ಅಲ್ಲದೆ, ಗೋವಾ, ಮಣಿಪುರ, ಪಂಜಾಬ್‌ ಮತ್ತು ಉತ್ತರಾಖಂಡ್‌ನಲ್ಲೂ ಚುನಾವಣೆ ನಡೆಯುತ್ತಿದೆ. ಫೆಬ್ರವರಿ 10ರಿಂದ ಆರಂಭವಾಗುತ್ತಿದೆ. ಹೀಗಾಗಿ ಕೇಂದ್ರ ಆಯವ್ಯಯವು 4 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಕೆಲ ಜನಪ್ರಿಯ ಘೋಷಣೆಗಳನ್ನೂ ಹೊರಡಿಸುವ ನಿರೀಕ್ಷೆ ಇದೆ. ಬಜೆಟ್‌ನ ಇತ್ತೀಚಿನ ಸ್ವಾರಸ್ಯ ಫೆಬ್ರವರಿ 1ರಂದು ಮಂಡನೆಯಾಗಲಿರುವ ಆಯವ್ಯಯ ಪೇಪರ್‌ಲೆಸ್‌ ಆಗಿರಲಿದೆ. ಓಮಿಕ್ರಾನ್‌ ವೈರಸ್‌ ಪ್ರಸರಣ ಹಿನ್ನೆಲೆಯಲ್ಲಿ ಈ ಸಲ 'ಹಲ್ವ ಕಾರ್ಯಕ್ರಮ' ನಡೆಯಲಿಲ್ಲ. ಸಂಸತ್ತಿನ ಬಜೆಟ್‌ ಅಧಿವೇಶನದ ವೇಳೆ ಕೋವಿಡ್‌-19 ಶಿಷ್ಟಾಚಾರ ಇರಲಿದೆ. ಕಾಂಗ್ರೆಸ್‌ ರೈತರ ವಿವಾದ, ಚೀನಾ ಸಂಘರ್ಷ, ಏರ್‌ ಇಂಡಿಯಾ ಬಂಡವಾಳ ಹಿಂತೆಗೆತವನ್ನು ಪ್ರಸ್ತಾಪಿಸಲು ಸಜ್ಜಾಗಿದೆ. ಮುಂಗಡಪತ್ರದ ನಿರೀಕ್ಷೆಗಳು ಸರಕಾರದ ಸಾರ್ವಜನಿಕ ಬಂಡವಾಳ ವೆಚ್ಚ ಗಣನೀಯ ಏರಿಕೆ ಸಂಭವ ಬೆಳವಣಿಗೆಗೆ ಉತ್ತೇಜನ ನೀಡಲು ಮೂಲ ಸೌಕರ್ಯಕ್ಕೆ ಅನುದಾನ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನೆರವು ಚುನಾವಣೆ ಹೊಸ್ತಿಲಿನಲ್ಲಿರುವ ರಾಜ್ಯಗಳಿಗೆ ಹೆಚ್ಚುವರಿ ಅನುದಾನ ರಿಯಲ್‌ ಎಸ್ಟೇಟ್‌ ವಲಯಕ್ಕೆ ತೆರಿಗೆ ವಿನಾಯಿತಿಯ ಉತ್ತೇಜನ ನಿರೀಕ್ಷೆ ಮಾಡಲಾಗಿದೆ. ಮಾರುಕಟ್ಟೆ ಮೇಲೆ ಪ್ರಭಾವ? ಬಜೆಟ್‌ಗೆ ಮುನ್ನ ಷೇರು ಮಾರುಕಟ್ಟೆ ಕುಸಿತದ ಹಾದಿಯಲ್ಲಿದೆ. ರಷ್ಯಾ-ಉಕ್ರೇನ್‌ ಸಂಘರ್ಷ, ಹಣದುಬ್ಬರ, ಕಚ್ಚಾ ತೈಲ ಏರಿಕೆ ನಕಾರಾತ್ಮಕ ಪ್ರಭಾವ ಬೀರಿದೆ. ಹೀಗಿದ್ದರೂ ಭಾರತೀಯ ಷೇರು ಮಾರುಕಟ್ಟೆ ಇರುವುದರಲ್ಲಿ ಉತ್ತಮ ಪ್ರದರ್ಶನ ದಾಖಲಿಸಿವೆ. ಎಲ್‌ಐಸಿ ಐಪಿಒ ಕೂಡ ಮಾರ್ಚ್ 31ರೊಳಗೆ ನಡೆಯಲಿದೆ. ಒಟ್ಟಾರೆಯಾಗಿ ಏರಿಳಿತಗಳು ಮುಂದುವರಿಯಲಿದ್ದರೂ, ಬಜೆಟ್‌ ಒಂದೇ ಭಾರಿ ಪ್ರಭಾವ ಬೀರದು ಎನ್ನುತ್ತಾರೆ ತಜ್ಞರು.


from India & World News in Kannada | VK Polls https://ift.tt/AltvVnS6M

ಛತ್ತೀಸ್‌ಗಢದಲ್ಲಿ'ಅಮರ ಜವಾನ್‌ ಜ್ಯೋತಿ' ನಿರ್ಮಾಣ: ರಾಹುಲ್‌ ಗಾಂಧಿ ಶಂಕುಸ್ಥಾಪನೆ

ರಾಯಪುರ: ಹೊಸದಿಲ್ಲಿಯ ಇಂಡಿಯಾ ಗೇಟ್‌ ಬಳಿ 50 ವರ್ಷ ಹಿಂದೆ ಸ್ಥಾಪಿಸಿದ್ದ 'ಅಮರ ಜವಾನ್‌ ಜ್ಯೋತಿ'ಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಳಿಸಿದ ಕೇಂದ್ರ ಸರಕಾರದ ಕ್ರಮಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ತನ್ನ ಆಡಳಿತವಿರುವ ಛತ್ತೀಸ್‌ಗಢದಲ್ಲಿ ಹೊಸದಾಗಿ 'ಅಮರ ಜವಾನ್‌ ಜ್ಯೋತಿ' ಸ್ಥಾಪಿಸಲು ಮುಂದಾಗಿದೆ. ''ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಫೆ.3ರಂದು ಶಂಕುಸ್ಥಾಪನೆ ನಡೆಸಲಿದ್ದಾರೆ,'' ಎಂದು ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಸಂಗತಿಯನ್ನು ಬಘೇಲ್‌ ಬಹಿರಂಗಪಡಿಸಿದ್ದಾರೆ. '' ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನೇ ನಡೆಸದವರಿಗೆ ಅಮರ ಜವಾನ್‌ ಜ್ಯೋತಿಯ ಮಹತ್ವ ತಿಳಿಯಲ್ಲ. ಹಾಗಾಗಿ ಅವರು ಅದನ್ನು ನಂದಿಸಿದರು. ಈ ಮೂಲಕ ದೇಶದ ಇತಿಹಾಸವನ್ನೇ ಅಳಿಸುವ ದುಷ್ಕೃತ್ಯವನ್ನು ಕೇಂದ್ರ ಸರಕಾರ ನಡೆಸಿದೆ. ಇದಕ್ಕೆ ಪರಿಹಾರವಾಗಿ ಮತ್ತೊಮ್ಮೆ ನಮ್ಮ ವೀರ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಅಮರ ಜವಾನ್‌ ಜ್ಯೋತಿಯನ್ನು ಬೆಳಗಿಸಲು ಕಾಂಗ್ರೆಸ್‌ ನಿರ್ಧರಿಸಿದೆ ,'' ಎಂದಿದ್ದಾರೆ. ಜ.21ರಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿಅಮರ ಜವಾನ್‌ ಜ್ಯೋತಿಯನ್ನು ವಿಲೀನಗೊಳಿಸಲಾಗಿದೆ. 1971ರ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ 1972ರ ಜ.26ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅಮರ ಜವಾನ್‌ ಜ್ಯೋತಿಯನ್ನು ಲೋಕಾರ್ಪಣೆ ಮಾಡಿದ್ದರು. ಇಂಡಿಯಾ ಗೇಟ್‌ನಲ್ಲಿರುವ ಅಮರ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ವಿಲೀನಗೊಳಿಸುವ ಕೇಂದ್ರ ಸರಕಾರದ ನಡೆಯನ್ನು ಕಾಂಗ್ರೆಸ್ ವಿರೋಧಿಸಿತ್ತು. ಇದು 1971ರ ನಂತರದ ಯುದ್ಧಗಳಲ್ಲಿ ಮಡಿದ ಯೋಧರಿಗೆ ನೀಡುವ ಗೌರವ ಎಂದು ಸರಕಾರ ಸಮರ್ಥಿಸಿಕೊಂಡಿತ್ತು. 'ಅಮರ ಜವಾನ್ ಜ್ಯೋತಿಯ ದೀಪವನ್ನು ನಂದಿಸುತ್ತಿಲ್ಲ. ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ವಾಲೆಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. 1971ರ ಯುದ್ಧ ಹಾಗೂ ಇತರೆ ಯುದ್ಧಗಳಲ್ಲಿ ಹುತಾತ್ಮರಾದವರಿಗೆ ಅಮರ ಜ್ಯೋತಿ ಬೆಳಕಿನಲ್ಲಿ ಗೌರವ ಸಲ್ಲಿಸಲಾಗುತ್ತಿದೆ. ಆದರೆ ಅದರಲ್ಲಿ ಯಾರೊಬ್ಬರ ಹೆಸರೂ ಇಲ್ಲ. ಇದು ವಿಚಿತ್ರ ಸಂಗತಿಯಾಗಿದೆ' ಎಂದು ಸರಕಾರದ ಮೂಲಗಳು ತಿಳಿಸಿದ್ದವು. ಕೆಲವು ಜನರಿಗೆ ದೇಶಭಕ್ತಿ ಎಂದರೆ ಏನು ಎಂದು ಅರ್ಥವಾಗುವುದಿಲ್ಲ ಎಂದು ಕಿಡಿಕಾರಿದ್ದರು. ಮೊದಲನೇ ವಿಶ್ವಯುದ್ಧ ಮತ್ತು ಆಂಗ್ಲೋ ಆಫ್ಘನ್ ಯುದ್ಧಗಳಲ್ಲಿ ಬ್ರಿಟಿಷರ ಪರ ಹೋರಾಡಿ ಮೃತಪಟ್ಟವರ ಹೆಸರುಗಳನ್ನು ಇಂಡಿಯಾ ಗೇಟ್‌ನಲ್ಲಿ ಕೆತ್ತಲಾಗಿದೆ. ಇದು ನಮ್ಮ ವಸಾಹತುಶಾಹಿ ಇತಿಹಾಸದ ಸಂಕೇತವಾಗಿದೆ ಎಂದು ಸರ್ಕಾರ ಹೇಳಿದೆ.


from India & World News in Kannada | VK Polls https://ift.tt/JPKFnHErc

ಪಾಕಿಸ್ತಾನ: ಪಬ್‌ಜಿ ಹುಚ್ಚಿನಲ್ಲಿ ಇಡೀ ಕುಟುಂಬವನ್ನೇ ಕೊಂದ ಬಾಲಕ

ಲಾಹೋರ್‌: ಹಿಂಸಾಚಾರವನ್ನು ಉತ್ತೇಜಿಸುವ ಮೊಬೈಲ್‌ ಗೇಮ್‌ ''ಯಿಂದ ಅನಾಹುತಗಳ ಸರಣಿ ಮುಂದುವರಿದಿದೆ. ಭಾರತದಲ್ಲಿ ಪ್ರಸ್ತುತ ಈ ಗೇಮ್‌ ಅನ್ನು ನಿಷೇಧಿಸಲಾಗಿದೆ. ಆದರೆ ಪಾಕಿಸ್ತಾನದಲ್ಲಿ'ಪಬ್‌ಜಿ' ಸನ್ನಿಗೊಳಗಾದ 14 ವರ್ಷದ ಬಾಲಕನೊಬ್ಬ ತನ್ನ ತಾಯಿ ಮತ್ತು ಅಪ್ರಾಪ್ತ ವಯಸ್ಸಿನ ಇಬ್ಬರು ಸಹೋದರಿಯರು ಸೇರಿದಂತೆ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದಿದ್ದಾನೆ. ಕಳೆದ ವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲಾಹೋರ್‌ನ ಕಹ್ನಾ ಪ್ರದೇಶದಲ್ಲಿ 45 ವರ್ಷದ ಆರೋಗ್ಯ ಕಾರ್ಯಕರ್ತೆ ನಹೀದ್‌ ಮುಬಾರಕ್‌, ಅವರ 22 ವರ್ಷದ ಮಗ ತೈಮೂರ್‌ ಮತ್ತು 17 ಮತ್ತು 11 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಶವವಾಗಿ ಪತ್ತೆಯಾಗಿದ್ದರು. ನಹೀದ್‌ ಅವರ 14 ವರ್ಷದ ಪುತ್ರ ಮಾತ್ರ ಬದುಕಿದ್ದ. ಘಟನೆ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಆತನೇ ಕೊಲೆಗಾರ ಎನ್ನುವುದು ಖಚಿತಪಟ್ಟಿದೆ. 'ಪಬ್‌ಜಿ' ವ್ಯಸನಿಯಾಗಿದ್ದ ಬಾಲಕನನ್ನು ಅನೇಕ ಬಾರಿ ತಾಯಿ ಬೈಯ್ದಿದ್ದರು. ಆದರೂ ಗೇಮ್‌ ಹುಚ್ಚು ಮಾತ್ರ ಕಡಿಮೆಯಾಗಿರಲಿಲ್ಲ. ಗೇಮ್‌ ಆಡಲು ವಿರೋಧಿಸುವ ತಾಯಿ ಮೇಲೆ ಆತ ಸಿಟ್ಟನ್ನೂ ಬೆಳೆಸಿಕೊಂಡಿದ್ದ. ಕಳೆದ ವಾರ ಆಟದಲ್ಲಿ ಬರುವ 'ಚಾಲೆಂಜ್‌' ಸ್ವೀಕರಿಸಿ ತನ್ನ ತಾಯಿ ಮತ್ತು ಸಹೋದರ, ಸಹೋದರಿಯರನ್ನು ಹತ್ಯೆ ಮಾಡಿದ್ದಾನೆ. ಈ ವಿಷಯವನ್ನು ವಿಚಾರಣೆ ವೇಳೆ ಬಾಲಕನೇ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮೊದಲು ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ನಿದ್ರೆಯಲ್ಲಿದ್ದ ಸಹೋದರ, ಸಹೋದರಿಯರನ್ನು ಮಾಡಿದ್ದಾನೆ. ಕೃತ್ಯದ ಬಳಿಕ ಬಂದೂಕನ್ನು ಮನೆಯ ಬಳಿಯ ಚರಂಡಿಗೆ ಎಸೆದಿದ್ದ ಬಾಲಕ, ಮತ್ತೆ ಎಂದಿನಂತೆ 'ಪಬ್‌ಜಿ' ಆಟದಲ್ಲಿ ಮುಳುಗಿದ್ದ. ಈ ಮನೆಯಲ್ಲಿ ಬಾಲಕನ ಹೊರತು ಬೇರೆ ಯಾರೂ ಕಾಣಿಸದೆ ಇದ್ದಾಗ, ಸಂಶಯಗೊಂಡ ಅಕ್ಕಪಕ್ಕದ ಮನೆಯವರು ಮರುದಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಮನೆಯಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದವು. ಆದರೆ ಈ ಘಟನೆಯ ಬಗ್ಗೆ ತನಗೇನೂ ತಿಳಿದೇ ಇಲ್ಲ ಎಂದು ಅಮಾಯಕನಂತೆ ವರ್ತಿಸಿದ್ದ. ''ನಾನು ಮನೆಯ ಮೇಲಿನ ಮಹಡಿಯಲ್ಲಿದ್ದೆ. ಕುಟುಂಬದವರನ್ನು ಯಾರು ಕೊಂದಿದ್ದಾರೆಂದು ನನಗೆ ಗೊತ್ತಿಲ್ಲ,'' ಎಂದು ಹೇಳಿದ್ದ. ಬಾಲಕನ ಅನುಮಾನಾಸ್ಪದ ವರ್ತನೆ ನೋಡಿ ವಿಚಾರಣೆ ತೀವ್ರಗೊಳಿಸಿದ ಬಳಿಕ ತಾನೇ ಗುಂಡು ಹಾರಿಸಿ ಕೊಂದಿರುವುದಾಗಿ ತಿಳಿಸಿದ್ದಾನೆ. ದಿನದ ಬಹುತೇಕ ಸಮಯ ಪಬ್‌ಜಿ ಆಡುತ್ತಿದ್ದ ಬಾಲಕನ ಮಾನಸಿಕ ಸ್ಥಿಮಿತವೂ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯಿಂದ ವಿಚ್ಛೇದನ ಪಡೆದು ಮಕ್ಕಳೊಂದಿಗೆ ವಾಸವಿದ್ದ ನಹೀದ್‌ ಕುಟುಂಬದ ರಕ್ಷಣೆಗಾಗಿ ಪರವಾನಗಿ ಪಡೆದು ಪಿಸ್ತೂಲ್‌ ಖರೀದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಲಾಹೋರ್‌ನಲ್ಲಿ ಆನ್‌ಲೈನ್‌ ಗೇಮಿಗೆ ಸಂಬಂಧಿಸಿದ ನಾಲ್ಕನೇ ಅಪರಾಧ ಇದಾಗಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.


from India & World News in Kannada | VK Polls https://ift.tt/BmPqICrid

ಮೋದಿಗಿಂತಲೂ ದೊಡ್ಡ ಹಿಂದೂ ಆಗಲು ಯೋಗಿ ಮತ್ತು ಅಖಿಲೇಶ್ ನಡುವೆ ಪೈಪೋಟಿ: ಓವೈಸಿ ಟೀಕೆ

ಲಖನೌ: ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ನಡುವಿನ ಸ್ಪರ್ಧೆ ಸಾಮಾಜಿಕ ನ್ಯಾಯದ ಕುರಿತಾಗಿಲ್ಲ ಎಂದು ಮುಖ್ಯಸ್ಥ ಟೀಕಿಸಿದ್ದಾರೆ. ಅವರಿಬ್ಬರೂ ನರೇಂದ್ರ ಮೋದಿ ಅವರಿಗಿಂತಲೂ ಮಹಾನ್ ಹಿಂದೂ ಆಗಲು ಪೈಪೋಟಿ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 'ಅವರ ಸ್ಪರ್ಧೆ ಸಾಮಾಜಿಕ ನ್ಯಾಯದ ಕುರಿತಾಗಿ ಇಲ್ಲ. ಯೋಗಿ ಅಥವಾ ಅಖಿಲೇಶ್ ನಡುವೆ ಮಹಾನ್ ಹಿಂದೂ ಯಾರು ಎಂಬುದರ ಕುರಿತು ಇಬ್ಬರೂ ಹಣಾಹಣಿ ನಡೆಸುತ್ತಿದ್ದಾರೆ. ಇಬ್ಬರೂ ಮೋದಿಗಿಂತಲೂ ಅತಿ ದೊಡ್ಡ ಹಿಂದೂ ಆಗಲು ಪೈಪೋಟಿ ನಡೆಸುತ್ತಿದ್ದಾರೆ. ಒಬ್ಬರು ದೇವಸ್ಥಾನದ ಬಗ್ಗೆ ಮಾತನಾಡಿದರೆ, ಇನ್ನೊಬ್ಬರು ಮತ್ತೊಂದು ದೇವಸ್ಥಾನದ ಬಗ್ಗೆ ಮಾತನಾಡುತ್ತಾರೆ' ಎಂದು ಓವೈಸಿ ಶನಿವಾರ ವಾಗ್ದಾಳಿ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ಅವರು ಟೀಕಾಪ್ರಹಾರ ನಡೆಸಿದರು. ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್‌ಗೆ ಮುಸ್ಲಿಮರ ಮತಗಳು ಮಾತ್ರ ಬೇಕು. ಆದರೆ ಅವರಿಗೆ ಚುನಾವಣಾ ಟಿಕೆಟ್ ನೀಡಲು ಹಿಂಜರಿಯುತ್ತಾರೆ ಎಂದು ಟೀಕಿಸಿದರು. ಅಲ್ಪಸಂಖ್ಯಾತರ ಮತಗಳನ್ನು ಒಡೆಯುವ ಮೂಲಕ ಬಿಜೆಪಿಗೆ ಸಹಾಯ ಮಾಡಲು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಯತ್ನಿಸುತ್ತಿರುವ ಆರೋಪವನ್ನು ಅವರು ನಿರಾಕರಿಸಿದರು. 'ಜಾತ್ಯತೀತ ಎಂದು ಹೇಳಿಕೊಳ್ಳುವ ಜನರು ಮುಸ್ಲಿಮರು ರತ್ನಗಂಬಳಿ ಹಾಸುವುದನ್ನು ಮತ್ತು ಜಿಂದಾಬಾದ್ ಘೋಷಣೆಗಳನ್ನು ಕೂಗುವುದನ್ನಷ್ಟೇ ಬಯಸಿದ್ದಾರೆ. ನಿಮಗೆ ಟಿಕೆಟ್ ಬೇಕಿದ್ದರೆ, ನೀವು ಅಂಗಲಾಚಬೇಕು. ಇದು ಅವರ ಬೂಟಾಟಿಕೆ ಮತ್ತು ದ್ವಿಮುಖ ನೀತಿ' ಎಂದು ಆರೋಪಿಸಿದರು. ಎಐಎಂಐಎಂ ಉತ್ತರ ಪ್ರದೇಶ ಚುನಾವಣೆಗೆ ಮಾಜಿ ಸಚಿವ ಬಾಬು ಸಿಂಗ್ ಕುಶ್ವಾಹ ಅವರ ಜನ್ ಅಧಿಕಾರ್ ಪಾರ್ಟಿ ಮತ್ತು ಅಖಿಲ ಭಾರತ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಂಸ್ಥೆಗಳ ಜತೆಗೆ ಮೈತ್ರಿ ಮಾಡಿಕೊಂಡು ಭಾಗಿದಾರಿ ಪರಿವರ್ತನ್ ಮೋರ್ಚಾ ಸ್ಥಾಪಿಸಿದೆ. ಈ ಮೈತ್ರಿಕೂಟ ಸುಮಾರು 100 ಸೀಟುಗಳಲ್ಲಿ ಸ್ಪರ್ಧಿಸಲಿದೆ ಎಂದು ಓವೈಸಿ ತಿಳಿಸಿದರು. 'ಮೌಲಾನಾ ಒಬ್ಬರು ಕಾಂಗ್ರೆಸ್ ಸೇರ್ಪಡೆಯಾದರು. ಆದರೆ ಕಾಂಗ್ರೆಸ್‌ನ ಹಿರಿಯ ನಾಯಕಿಯೊಬ್ಬರು ನನಗೆ ಅವರೊಂದಿಗೆ ಮಾಡುವುದೇನೂ ಇಲ್ಲ ಎಂದರು' ಎಂದು ವಿವಾದಾತ್ಮಕ ನಾಯಕ ಟಿಆರ್ ಖಾನ್ ಅವರಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅಂತರ ಕಾಪಾಡಿಕೊಂಡಿದ್ದನ್ನು ಟೀಕಿಸಿದರು. 'ಬದೌನ್‌ ಸಂಸದೆ ಸಂಘಮಿತ್ರ ಮೌರ್ಯ ಈಗಲೂ ಬಿಜೆಪಿಯಲ್ಲಿ ಇದ್ದಾರೆ. ಆದರೆ ಆಕೆಯ ತಂದೆ ಸ್ವಾಮಿ ಪ್ರಸಾದ್ ಮೌರ್ಯ ಸಮಾಜವಾದಿ ಪಕ್ಷದಲ್ಲಿದ್ದಾರೆ. ಇದೆಲ್ಲವನ್ನೂ ನೀವು ನೋಡುತ್ತೀರಾ? ಉತ್ತರ ಪ್ರದೇಶದ ಜನರು ಕುರುಡರಲ್ಲ. ನಿನ್ನೆ ಅಖಿಲೇಶ್ ಯಾದವ್ ಅವರು ಮುಸ್ಲಿಂ ಅಭ್ಯರ್ಥಿಗಳನ್ನು ಕೈಬಿಡುವ ಬಗ್ಗೆ ಮಾತನಾಡಿದರು. ಅವರು ಗಂಗಾ ಜಮುನಿ ತೆಹ್ಜೀಬ್ ಉಲ್ಲೇಖಿಸಿದ್ದರು. ಅಂದರೆ ನೀವು ನಿಮ್ಮ ಪಕ್ಷದ ಅಭ್ಯರ್ಥಿಯನ್ನು ಕೈಬಿಡುತ್ತೀರಿ ಮತ್ತು ಮುಜಫ್ಫರನಗರ ಜಿಲ್ಲೆಯಲ್ಲಿ ಮುಸ್ಲಿಮರಿಗೆ ಒಂದೂ ಸೀಟು ನೀಡುವುದಿಲ್ಲವೇ? ಇದು ದೊಡ್ಡ ಜುಮ್ಲಾ' ಎಂದು ವಾಗ್ದಾಳಿ ನಡೆಸಿದರು.


from India & World News in Kannada | VK Polls https://ift.tt/43Co90kJI

ದೇವಮಾನವನಿಗೆ ದಾನ ಮಾಡಲು ಹೆಣ್ಣು ವಸ್ತುವಲ್ಲ; ಪುತ್ರಿಯ ದಾನಕ್ಕೆ ಮುಂದಾದ ತಂದೆಗೆ ಕೋರ್ಟ್ ಚಾಟಿಯೇಟು

ಮುಂಬಯಿ: ಯಾರಿಗಾದರೂ ದಾನವಾಗಿ ನೀಡಲು ಹೆಣ್ಣುಮಗಳು ವಸ್ತುವಲ್ಲ ಎಂದು ಮುಂಬಯಿ ಹೈಕೋರ್ಟ್‌ನ ಔರಂಗಾಬಾದ್‌ ವಿಭಾಗೀಯ ಪೀಠವು ಸ್ಪಷ್ಟವಾಗಿ ಹೇಳಿದೆ. ಸ್ವಯಂಘೋಷಿತ ದೇವಮಾನವ ಎನಿಸಿರುವ ಶಂಕೇಶ್ವರ್‌ ಢಾಕ್ನೆಗೆ ಆತನ ಭಕ್ತ ಸೊಪನ್‌ ಢಾಂಕೆ ಎಂಬಾತ ತನ್ನ 17 ವರ್ಷದ ಮಗಳನ್ನು ದಾನವಾಗಿ ಒಪ್ಪಿಸಿದ್ದ. ಈತನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ನ್ಯಾ. ವಿಭಾ ಕಂಕಣ್‌ವಾಡಿ ಅವರು ಆರೋಪಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಲ್ನಾ ಜಿಲ್ಲೆಯ ಬದ್ನಾಪುರದ ಮಂದಿರವೊಂದರಲ್ಲಿ ವಾಸವಿದ್ದ ದೇವಮಾನವನ ಜತೆಗೆ ತಂದೆ- ಮಗಳು ವಾಸವಿದ್ದರು. 2021ರ ಆಗಸ್ಟ್‌ನಲ್ಲಿ ಅಪ್ರಾಪ್ತ ಬಾಲಕಿಯು ದೇವಮಾನವ ಹಾಗೂ ತಂದೆ ಇಬ್ಬರೂ ಸೇರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ, 2018ರಲ್ಲಿ ಮಗಳನ್ನು ದೇವಮಾನವನಿಗೆ ದಾನ ನೀಡಿದ ಸಂಬಂಧ 100 ರೂ. ಮುಖಬೆಲೆಯ ಛಾಪಾ ಕಾಗದದ ದಾಖಲೆಯೊಂದನ್ನು ಆರೋಪಿಗಳು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಹೈಕೋರ್ಟ್‌ ರಿಜಿಸ್ಟ್ರಾರ್‌ ವಿರುದ್ಧವೇ ನ್ಯಾಯಾಂಗ ನಿಂದನೆ ದಾವೆ ಹೂಡಿದ್ದವಗೆ 11 ಲಕ್ಷ ದಂಡಬೆಂಗಳೂರು: ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಟಿ.ಜಿ ಶಿವಶಂಕರೇಗೌಡ ವಿರುದ್ಧ ಸಿವಿಲ್‌ ನ್ಯಾಯಾಂಗ ನಿಂದನೆ ದಾವೆ ಹೂಡಿದ್ದ ಉಡುಪಿ ಜಿಲ್ಲೆ ಕಾರ್ಕಳದ ಜಿತೇಂದ್ರ ಕುಮಾರ್‌ ರಾಜನ್‌ ಎಂಬ ವ್ಯಕ್ತಿಗೆ ಹೈಕೋರ್ಟ್‌ 11 ಲಕ್ಷ ರೂ. ದಂಡ ವಿಧಿಸಿದೆ. ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ. ಎಂ.ಜಿ. ಉಮಾ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ಈ ಆದೇಶ ನೀಡಿದೆ. ಜಿತೇಂದ್ರ ಕುಮಾರ್‌ ರಾಜನ್‌ ರಿಜಿಸ್ಟ್ರಾರ್‌ ವಿರುದ್ಧ 11 ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ ನ್ಯಾಯಾಂಗದ ಅಮೂಲ್ಯ ಸಮಯ ಹಾಳು ಮಾಡಿದ್ದಾರೆ. ಹಾಗಾಗಿ ಒಂದೊಂದು ಅರ್ಜಿಗೆ ತಲಾ 1 ಲಕ್ಷ ರೂ.ನಂತೆ ಒಟ್ಟು 11 ಲಕ್ಷ ರೂ.ದಂಡ ಪಾವತಿಸಬೇಕು ಎಂದು ನ್ಯಾಧಿಯಪೀಠ ಆದೇಶಿಸಿದೆ. ಅಲ್ಲದೆ, ದಂಡದ ಮೊತ್ತವನ್ನು 8 ವಾರಗಳಲ್ಲಿ ವಕೀಲರ ಪರಿಷತ್ತಿಗೆ ಪಾವತಿಸಬೇಕು. ಒಂದು ವೇಳೆ ಪಾವತಿಸದಿದ್ದರೆ ಜಿಲ್ಲಾಧಿಕಾರಿ ದಂಡ ವಸೂಲಿಗೆ ಕ್ರಮ ಕೈಗೊಳ್ಳಬೇಕು ಹಾಗೂ ದಂಡದ ಮೊತ್ತ ಪಾವತಿಯಾಗದಿದ್ದರೆ ವಕೀಲರ ಪರಿಷತ್ತು ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಬಹುದು ಎಂದು ನ್ಯಾಯಪೀಠ ಆದೇಶಿಸಿದೆ. ‘ಅನಗತ್ಯ ಸಿವಿಲ್‌ ನ್ಯಾಯಾಂಗ ನಿಂದನೆ ದಾವೆ ಹೂಡಿ ಕೋರ್ಟ್‌ನ ಅಮೂಲ್ಯ ಸಮಯ ಹಾಳು ಮಾಡಿದ್ದಲ್ಲದೆ, ರಿಜಿಸ್ಟ್ರಾರ್‌ ಜನರಲ್‌ ವಿರುದ್ಧ ದಾವೆ ಹೂಡುವ ಮೂಲಕ ನ್ಯಾಯಾಂಗದ ಮೇಲೆ ಸವಾರಿ ಮಾಡಿ ನ್ಯಾಯಾಂಗದ ಅಧಿಕಾರಿಗಳಿಗೆ ಬೆದರಿಕೆ ಹಾಕುವಂತೆ ನಡೆದುಕೊಂಡಿರುವುದು ನ್ಯಾಯಾಂಗವನ್ನು ಅಣಕ ಮಾಡಿದಂತೆ ಎಂದು ಹೇಳಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶಿಸಿದೆ.


from India & World News in Kannada | VK Polls https://bit.ly/3KVchRW

ಶಾಲೆಗಳಲ್ಲಿ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಸಮವಸ್ತ್ರದ ಜೊತೆ ಹಿಜಾಬ್‌ ಧರಿಸುವಂತಿಲ್ಲ; ಕೇರಳ ಸರ್ಕಾರ

ತಿರುವನಂತಪುರಂ: ಕೇರಳದ ಪ್ರೌಢಶಾಲೆಗಳಲ್ಲಿ ಎನ್‌ಸಿಸಿ ಮಾದರಿಯ ‘ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್ಸ್‌’ (ಎಸ್‌ಪಿಸಿ) ಘಟಕದ ವಿದ್ಯಾರ್ಥಿಗಳಿಗೆ ಹಿಜಾಬ್‌ ಹಾಗೂ ಪೂರ್ತಿ ತೋಳಿನ ಉಡುಪು ಧರಿಸಲು ಅನುಮತಿ ಇಲ್ಲ ಎಂದು ಅಲ್ಲಿನ ರಾಜ್ಯ ಸರಕಾರ ತಿಳಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಹಾಗೂ ಪೂರ್ತಿ ತೋಳಿನ ಉಡುಪು ಧರಿಸಲು ಅನುಮತಿ ನೀಡಬೇಕು ಎಂದು ಎಂಟನೇ ತರಗತಿ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸರಕಾರ, ‘ಇಲ್ಲಿಯವರೆಗೆ ಯಾವೊಬ್ಬ ಮುಸ್ಲಿಂ ವಿದ್ಯಾರ್ಥಿಯೂ ಇಂತಹ ಬೇಡಿಕೆ ಇಟ್ಟಿಲ್ಲ. ಇಂದಿನ ಸಂದರ್ಭದಲ್ಲಿ ಸಮವಸ್ತ್ರ ವಿಚಾರದಲ್ಲಿ ಧಾರ್ಮಿಕ ವಿಚಾರಗಳನ್ನು ಸೇರಿಸಿದರೆ ಇಂತಹುದೇ ಬೇಡಿಕೆಗಳು ಇತರೆಡೆಗಳಿಂದಲೂ ಬರಬಹುದು. ಇದಕ್ಕೆ ಅನುಮತಿ ನೀಡಿದರೆ ರಾಜ್ಯದಲ್ಲಿರುವ ಜಾತ್ಯತೀತತೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಅನುಮತಿ ನೀಡಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು ವಿದ್ಯಾರ್ಥಿನಿಯು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಳು. ರಾಜ್ಯ ಸರಕಾರವೇ ಇದನ್ನು ತೀರ್ಮಾನಿಸಲಿ ಎಂದು ಕೋರ್ಟ್‌ ನಿರ್ದೇಶಿಸಿತ್ತು. ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು, ಕೌಶಲ ಅಭಿವೃದ್ಧಿ, ಸಮಾಜಮುಖಿ ಕೆಲಸ, ನಾಯಕತ್ವ, ಕಾನೂನು, ನಾಗರಿಕ ಪ್ರಜ್ಞೆ, ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಸೇರಿ ಹಲವು ರೀತಿಯಲ್ಲಿ ಮಾರ್ಗದರ್ಶನ ನೀಡುವ ದಿಸೆಯಲ್ಲಿ ಕೇರಳ ರಾಜ್ಯ ಸರಕಾರವು ಎಸ್‌ಪಿಸಿ ಯೋಜನೆ ಜಾರಿಗೆ ತಂದಿದೆ. ಮಾಲ್‌ಗಳು ಪಾರ್ಕಿಂಗ್‌ ಶುಲ್ಕ ವಿಧಿಸುವುದು ಕಾನೂನುಬಾಹಿರ; ಹೈಕೋರ್ಟ್‌ ಕೊಚ್ಚಿ: ಮಾಲ್‌ಗಳು ಪಾರ್ಕಿಂಗ್‌ ಶುಲ್ಕ ವಿಧಿಸುವುದು ಕಾನೂನುಬಾಹಿರ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ. ಮಾಲ್‌ಗಳಿಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಅವಕಾಶ ನೀಡಿದರೆ ಲಿಫ್ಟ್‌ ಸೇವೆಗೂ ಶುಲ್ಕ ವಿಧಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಹೈಕೋರ್ಟ್‌ ಹೇಳಿದೆ. ಎಡಾಪಳ್ಳಿ ಲುಲು ಮಾಲ್‌ನಲ್ಲಿ ಪಾರ್ಕಿಂಗ್‌ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ಬೋಸ್ಕೋ ಲೂಯಿಸ್‌ ಮತ್ತು ಪಾಲಿ ವಡಕ್ಕನ್‌ ಸಲ್ಲಿಸಿರುವ ಅರ್ಜಿಯನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್‌ ಪರಾಮರ್ಶೆ ನಡೆಸಿದ್ದಾರೆ. ಪಾರ್ಕಿಂಗ್‌ ಶುಲ್ಕ ವಿಧಿಸುವುದನ್ನು ಮುಂದುವರಿಸಬಹುದು. ಆದರೆ ಇದುವರೆಗೆ ವಿಧಿಸಲಾದ ಶುಲ್ಕ ಅರ್ಜಿಯ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರಬೇಕು ಎಂದು ಕೇರಳ ಹೈಕೋರ್ಟ್‌ ವ್ಯಕ್ತಪಡಿಸಿದೆ. ಅರ್ಜಿಯನ್ನು ಒಂದು ತಿಂಗಳ ಬಳಿಕದ ಪರಿಗಣನೆಗೆ ಮುಂದೂಡಲಾಗಿದೆ.


from India & World News in Kannada | VK Polls https://ift.tt/3KTkczi

ಮಾಲ್‌ಗಳು ಪಾರ್ಕಿಂಗ್‌ ಶುಲ್ಕ ವಿಧಿಸುವುದು ಕಾನೂನು ಬಾಹಿರ; ಕೇರಳ ಹೈಕೋರ್ಟ್‌

(ಕೇರಳ): ಮಾಲ್‌ಗಳು ಪಾರ್ಕಿಂಗ್‌ ಶುಲ್ಕ ವಿಧಿಸುವುದು ಕಾನೂನುಬಾಹಿರ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ. ಮಾಲ್‌ಗಳಿಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಅವಕಾಶ ನೀಡಿದರೆ ಲಿಫ್ಟ್‌ ಸೇವೆಗೂ ಶುಲ್ಕ ವಿಧಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಹೈಕೋರ್ಟ್‌ ಹೇಳಿದೆ. ಎಡಾಪಳ್ಳಿ ಲುಲು ಮಾಲ್‌ನಲ್ಲಿ ಪಾರ್ಕಿಂಗ್‌ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ಬೋಸ್ಕೋ ಲೂಯಿಸ್‌ ಮತ್ತು ಪಾಲಿ ವಡಕ್ಕನ್‌ ಸಲ್ಲಿಸಿರುವ ಅರ್ಜಿಯನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್‌ ಪರಾಮರ್ಶೆ ನಡೆಸಿದ್ದಾರೆ. ಪಾರ್ಕಿಂಗ್‌ ಶುಲ್ಕ ವಿಧಿಸುವುದನ್ನು ಮುಂದುವರಿಸಬಹುದು. ಆದರೆ ಇದುವರೆಗೆ ವಿಧಿಸಲಾದ ಶುಲ್ಕ ಅರ್ಜಿಯ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರಬೇಕು ಎಂದು ಕೇರಳ ಹೈಕೋರ್ಟ್‌ ವ್ಯಕ್ತಪಡಿಸಿದೆ. ಅರ್ಜಿಯನ್ನು ಒಂದು ತಿಂಗಳ ಬಳಿಕದ ಪರಿಗಣನೆಗೆ ಮುಂದೂಡಲಾಗಿದೆ. ಕೇರಳದ ಶಾಲೆಗಳಲ್ಲೂ ಹಿಜಾಬ್‌ಗೆ ನಿಷೇಧ ತಿರುವನಂತಪುರಂ: ಕೇರಳದ ಪ್ರೌಢಶಾಲೆಗಳಲ್ಲಿ ಎನ್‌ಸಿಸಿ ಮಾದರಿಯ ‘ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್ಸ್‌’ (ಎಸ್‌ಪಿಸಿ) ಘಟಕದ ವಿದ್ಯಾರ್ಥಿಗಳಿಗೆ ಹಿಜಾಬ್‌ ಹಾಗೂ ಪೂರ್ತಿ ತೋಳಿನ ಉಡುಪು ಧರಿಸಲು ಅನುಮತಿ ಇಲ್ಲ ಎಂದು ಅಲ್ಲಿನ ರಾಜ್ಯ ಸರಕಾರ ತಿಳಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಹಾಗೂ ಪೂರ್ತಿ ತೋಳಿನ ಉಡುಪು ಧರಿಸಲು ಅನುಮತಿ ನೀಡಬೇಕು ಎಂದು ಎಂಟನೇ ತರಗತಿ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸರಕಾರ, ‘ಅನುಮತಿ ನೀಡಿದರೆ ರಾಜ್ಯದಲ್ಲಿರುವ ಜಾತ್ಯತೀತತೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಅನುಮತಿ ನೀಡಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು ವಿದ್ಯಾರ್ಥಿನಿಯು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಳು. ರಾಜ್ಯ ಸರಕಾರವೇ ಇದನ್ನು ತೀರ್ಮಾನಿಸಲಿ ಎಂದು ಕೋರ್ಟ್‌ ನಿರ್ದೇಶಿಸಿತ್ತು. ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು, ಕೌಶಲ ಅಭಿವೃದ್ಧಿ, ಸಮಾಜಮುಖಿ ಕೆಲಸ, ನಾಯಕತ್ವ, ಕಾನೂನು, ನಾಗರಿಕ ಪ್ರಜ್ಞೆ, ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಸೇರಿ ಹಲವು ರೀತಿಯಲ್ಲಿ ಮಾರ್ಗದರ್ಶನ ನೀಡುವ ದಿಸೆಯಲ್ಲಿ ಸರಕಾರವು ಎಸ್‌ಪಿಸಿ ಯೋಜನೆ ಜಾರಿಗೆ ತಂದಿದೆ.


from India & World News in Kannada | VK Polls https://ift.tt/3ouvlNB

ನಾಲ್ಕನೇ ಬಾರಿ ಬಿಬಿಎಲ್‌ ಕಿರೀಟ ಮುಡಿಗೇರಿಸಿಕೊಂಡ ಪರ್ತ್‌ ಪಡೆ!

ಮೆಲ್ಬೋರ್ನ್‌: ಆಲ್‌ರೌಂಡರ್‌ ಲಾರೆನ್‌ ಈವನ್ಸ್‌ (41 ಎಸೆತಗಳಲ್ಲಿ ಅಜೇಯ 76 ರನ್‌) ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಮತ್ತು ಆಂಡ್ರೂ ಟೈ (15ಕ್ಕೆ 3) ಅವರ ಮಾರಕ ಬೌಲಿಂಗ್‌ ಬಲದಿಂದ ಮಿಂಚಿದ ತಂಡ ದಾಖಲೆಯ ನಾಲ್ಕನೇ ಬಾರಿ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದಿದೆ. ಇತಿಹಾಸ ಪ್ರಸಿದ್ಧ ಎಂಸಿಜಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆಧಿಪತ್ಯ ಮೆರೆದ ಪರ್ತ್‌ ತಂಡ ಎದುರು ಬರೋಬ್ಬರಿ 79 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಲೀಗ್‌ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡವೆನಿಸಿಕೊಂಡಿದೆ. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಪರ್ತ್‌ ಸ್ಕಾರ್ಚರ್ಸ್‌ ತಂಡ 25 ರನ್‌ ಗಳಿಸುವ ಹೊತ್ತಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಂತರ ಜೊತೆಯಾದ ಕ್ಯಾಪ್ಟನ್‌ ಆಷ್ಟನ್‌ ಟರ್ನರ್‌ (54 ರನ್) ಮತ್ತು ಲಾರೆನ್‌ ಈವನ್ಸ್‌ (76*) ಅವರ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನದ ಫಲವಾಗಿ ಪರ್ತ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 171 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಸಿಡ್ನಿ ತಂಡದ ಪರ ಸ್ಟೀವ್‌ ಓ'ಕೀಫ್‌ (43ಕ್ಕೆ 2) ಮತ್ತು ನೇಥನ್‌ ಲಯಾನ್‌ (24ಕ್ಕೆ 2) ವಿಕೆಟ್‌ ಪಡೆದು ಗಮನ ಸೆಳೆದರು. ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್‌ ಪರ ಡೇನಿಯೆಲ್‌ ಹ್ಯೂಸ್‌ 33 ಎಸೆತಗಳಲ್ಲಿ 42 ರನ್‌ಗಳನ್ನು ಸಿಡಿಸಿದರಾದರೂ ಪ್ರಯೋಜನವಾಗಲಿಲ್ಲ. 16.2 ಓವರ್‌ಗಳಲ್ಲಿ 92 ರನ್‌ಗಳಿಗೆ ಸಿಡ್ನಿ ಸಿಕ್ಸರ್ಸ್‌ ತಂಡ ಆಲ್‌ಔಟ್‌ ಆಯಿತು. ಆಂಡ್ರೂ ಟೈ ಯಶಸ್ವಿ ಬೌಲರ್‌ ಆಗಿ ಮುರು ವಿಕೆಟ್‌ ಕಿತ್ತರೆ, ಜೇ ರಿಚರ್ಡ್ಸನ್‌ (20ಕ್ಕೆ 2) ಆರಂಭಿಕ ಯಶಸ್ಸು ತಂದುಕೊಟ್ಟರು. ಅಂದಹಾಗೆ ಲೀಗ್‌ ಇತಿಗಹಾಸದಲ್ಲಿ ಸಿಡ್ನಿ ಸಿಕ್ಸರ್ಸ್‌ ಕೂಡ ಮೂರು ಬಾರಿ ಟ್ರೋಫಿ ಗೆದ್ದ ದಾಖಲೆ ಹೊಂದಿದೆ. ಸಂಕ್ಷಿಪ್ತ ಸ್ಕೋರ್‌ಪರ್ತ್‌ ಸ್ಕಾರ್ಚರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 171 ರನ್‌ (ಜಾಶ್‌ ಇಂಗ್ಲಿಶ್ 13, ಆಷ್ಟನ್‌ ಟರ್ನರ್‌ 54, ಲಾರೆನ್‌ ಈವನ್ಸ್‌ 76*, ಆಷ್ಟನ್‌ ಅಗರ್‌ 15; ನೇಥನ್‌ ಲಯಾನರ್ 24ಕ್ಕೆ 2, ಸ್ಟೀವ್‌ ಓ'ಕೀಫ್ 43ಕ್ಕೆ 2, ಜಾಕ್ಸನ್‌ ಬರ್ಡ್‌ 6ಕ್ಕೆ 1). ಸಿಡ್ನಿ ಸಿಕ್ಸರ್ಸ್‌: 16.2 ಓವರ್‌ಗಳಲ್ಲಿ 92 ರನ್‌ಗಳಿಗೆ ಆಲ್‌ಔಟ್‌ (ನಿಕೋಲಸ್‌ ಬೆರ್ಟಸ್‌ 15, ಡೇನಿಯೆಲ್‌ ಹ್ಯೂಸ್‌ 42, ಜೇ ಲೆನ್ಟನ್ 10; ಆಂಡ್ರೂ ಟೈ 15ಕ್ಕೆ 3, ಜೇ ರಿಚರ್ಡ್ಸನ್ 20ಕ್ಕೆ 2, ಆಷ್ಟನ್‌ ಟರ್ನರ್‌ 6ಕ್ಕೆ 1, ಜೇಸನ್‌ ಬೆಹ್ರೆನ್‌ ಡಾರ್ಫ್ 12ಕ್ಕೆ 1, ಪೀಟರ್‌ 13ಕ್ಕೆ 1, ಆಷ್ಟನ್‌ ಅಗರ್ 25ಕ್ಕೆ 1).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3r7fGW4

ಬೆಂಗಳೂರಿನಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಯತ್ನ: ಪತ್ನಿ ಸಾವು, ಪತಿ, ಮಗಳು ಪಾರು..

ದಾಸರಹಳ್ಳಿ (): ಕೊರೊನಾ ಸಂದರ್ಭದಲ್ಲಿ ಸಂಬಂಧಿಕರು, ಸ್ನೇಹಿತರ ಬಳಿ ಸಾಲ ಮಾಡಿಕೊಂಡ ಕ್ಯಾಬ್‌ ಚಾಲಕರೊಬ್ಬರು, ಅದನ್ನು ತೀರಿಸಲಾಗದೇ ಮನನೊಂದು ತನ್ನ , ಮಗಳಿಗೆ ವಿಷ ಉಣಿಸಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಾನು ಪ್ರಕಾಶ್‌ (40), ಪತ್ನಿ ಗೀತಾ (37) ಹಾಗೂ ಲೇಖನ (14) ಆತ್ಮಹತ್ಯೆಗೆ ಯತ್ನಿಸಿದ್ದು, ಭಾನು ಪ್ರಕಾಶ್‌ ಹಾಗೂ ಲೇಖನ ಬದುಕುಳಿದಿದ್ದಾರೆ. ಘಟನೆಯಲ್ಲಿ ಗೀತಾ ಮೃತ ಪಟ್ಟಿದ್ದಾರೆ. ದಂಪತಿಗೆ 8 ತಿಂಗಳ ಮತ್ತೊಂದು ಹೆಣ್ಣು ಮಗು ಇದೆ. ಕ್ಯಾಬ್‌ ಚಾಲಕನಾಗಿದ್ದ ಬೆಂಗಳೂರಿನ ಭಾನು ಪ್ರಕಾಶ್‌, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕತ್ತಿ ನಾಗೇನ ಹಳ್ಳಿಯ ಗೀತಾ ಅವರನ್ನು 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಡದಿ, ಮಕ್ಕಳ ಜತೆ ಅನ್ಯೋನ್ಯವಾಗಿದ್ದರು. ಕ್ಯಾಬ್‌ ಜತೆಗೆ ಚೀಟಿ ವ್ಯವಹಾರ ಕೂಡ ನಡೆಸುತ್ತಿದ್ದರು. ಸ್ನೇಹಿತರ ಬಳಿ ಶೇ. 2 - 3 ಬಡ್ಡಿಗೆ ಲಕ್ಷಾಂತರ ರೂ. ಸಾಲ ಪಡೆದು, ಬೇರೆಯವರಿಗೆ ಶೇ. 5ರ ಬಡ್ಡಿಗೆ ಸಾಲ ನೀಡುತ್ತಿದ್ದರು ಎನ್ನಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಚೀಟಿ ಎತ್ತಿದವರು, ಸಾಲ ಪಡೆದವರು ಹಣ ಮರಳಿಸದ ಕಾರಣ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಸಾಲ ನೀಡಿದವರು ವಾಪಸ್‌ ಕೊಡುವಂತೆ ಒತ್ತಡ ಹಾಕಿದ್ದರು. ಇದರಿಂದ ಕಂಗೆಟ್ಟ ಭಾನು ಪ್ರಕಾಶ್‌, ಪತ್ನಿ ಮತ್ತು ಮಗಳಿಗೆ ತಿಳಿಯದಂತೆ ಕೃಷಿಗೆ ಬಳಸುವ ರಾಸಾಯನಿಕವನ್ನು ಹಾಲಿನಲ್ಲಿ ಬೆರೆಸಿ ಕುಡಿಸಿ, ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಮಗಳು ಲೇಖನ ತನ್ನ ದೊಡ್ಡಪ್ಪನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಅವರು ಮನೆಗೆ ಬಂದು ನೋಡುವಷ್ಟರಲ್ಲಿ ಗೀತಾ ಮೃತಪಟ್ಟಿದ್ದರು. ಭಾನು ಪ್ರಕಾಶ್‌ ಮತ್ತು ಲೇಖನ ಇಬ್ಬರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಬಳಿಕ ತಂದೆ, ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಶವ ಪರೀಕ್ಷೆ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


from India & World News in Kannada | VK Polls https://ift.tt/3r7eWjM

ಹಲ್ಲೆ, ಜಾತಿ ನಿಂದನೆ ಆರೋಪ: ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಐವರ ವಿರುದ್ಧ ಕೇಸ್‌..!

: ತಾಲೂಕಿನ ಮುಗದ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಕಾರಿ ಅಧ್ಯಕ್ಷ ಹುದ್ದೆಯ ವಿಚಾರವಾಗಿ ಸಂಸ್ಥೆಯ ನಾಲ್ವರು ಸೇರಿ ವ್ಯಕ್ತಿಯೊಬ್ಬನ ಮೇಲೆ , ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ವಿಧಾನ ಪರಿಷತ್‌ ಬಸವರಾಜ ಹೊರಟ್ಟಿ 5ನೇ ಆರೋಪಿ ಎಂಬುದು ಚರ್ಚಾ ವಸ್ತುವಾಗಿದೆ..! ಅಣ್ಣಿಗೇರಿ ತಾಲೂಕಿನ ಕೊಂಡಿ ಕೊಪ್ಪದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಧಾರವಾಡ ಜಿಲ್ಲಾ ಅಧ್ಯಕ್ಷ ಮೋಹನ ಗುಡಸಲಮನಿ ಎಂಬುವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಘಟನೆ ವೇಳೆ ಆರೋಪಿಗಳಾದ ವೆಂಕಟೇಶ ಲಕ್ಷನಿ, ಚೈತ್ರಾ ಮೇಟಿ, ನಿರ್ಮಲಾ ಚವ್ಹಾಣ, ದೊಡ್ಡಪ್ಪ ಕೆಂಗಣ್ಣವರ ಅವರು ಗುಡಸಲಮನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ವೆಂಕಟೇಶ ಜಾತಿ ನಿಂದನೆ ಮಾಡಿದ್ದಲ್ಲದೆ ಕೊಠಡಿಯಲ್ಲಿ ಕೂಡಿ ಹಾಕಿ ಕಾರನ್ನು ಚಚ್ಚಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಎಲ್ಲ ಬೆಳಣಿಗೆಗಳಿಗೆ ಸಭಾಪತಿ ಹೊರಟ್ಟಿ ಅವರು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಅವರನ್ನೂ 5ನೇ ಆರೋಪಿಯನ್ನಾಗಿ ದೂರು ದಾಖಲಿಸಲಾಗಿದೆ. ತಾಲೂಕಿನ ಮುಗದ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆಗೆ ಮೋಹನ ಗುಡಸಲಮನಿ ಮಂಗಳವಾರ ಹೋಗಿದ್ದರು. ಸಭಾಪತಿ ಹೊರಟ್ಟಿ ಸರ್ವೋದಯ ಶಿಕ್ಷಣ ಸಂಸ್ಥೆಯ ಮೇಲೆ ಯಾವುದೇ ಅಧಿಕಾರ ಹೊಂದಿಲ್ಲ. ಸಂಸ್ಥೆಯಲ್ಲಿ ಅಳವಡಿಸಿರುವ ಅವರ ನಾಮಫಲಕ ತೆಗೆದು ಹಾಕುವಂತೆ ಕೇಳಿದಾಗ, ಸಿಟ್ಟಿಗೆದ್ದ ನಾಲ್ವರು ಆರೋಪಿಗಳು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದಾಗ ಇರಲಿಲ್ಲ: ಹೊರಟ್ಟಿ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಹೊರಟ್ಟಿ, 'ಘಟನೆ ನಡೆದಾಗ ನಾನು ಅಲ್ಲಿಇರಲೇ ಇಲ್ಲ. ಮಂಗಳವಾರ ನಾನು ಪೊಲೀಸ್‌ ಎಸ್ಕಾಟ್‌ನಲ್ಲಿಯೇ ಬೆಂಗಳೂರಿಗೆ ಹೋಗಿದ್ದೇನೆ. ಹೀಗಿದ್ದಾಗಿಯೂ ನನ್ನ ಮೇಲೆ ಕೇಸ್‌ ದಾಖಲು ಮಾಡಲಾಗಿದೆ. ಒಬ್ಬ ಸಭಾಪತಿ ಮೇಲೆ ಜಾತಿ ನಿಂದನೆ ಕೇಸ್‌ ದಾಖಲಿಸಿ ಕಿರುಕುಳ ನೀಡಲಾಗಿದೆ. ಇನ್ನು ಜನ ಸಾಮಾನ್ಯರ ಸ್ಥಿತಿ ಏನು? ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದಿದ್ದೇನೆ. ಘಟನೆ ನನಗೆ ನೋವು ತರಿಸಿದೆ' ಎಂದು ಹೇಳಿದರು. ಈ ಪ್ರಕರಣ ತೀರ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆದರೆ ಈ ಕುರಿತಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಅವರನ್ನು ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಪ್ರಕರಣದ ತನಿಖೆ ಎಲ್ಲಿಗೆ ಬಂತು ಎಂಬುದರ ಬಗ್ಗೆಯೂ ಯಾರೂ ಮಾಹಿತಿ ನೀಡುತ್ತಿಲ್ಲ. ಸಾಂವಿಧಾನಿಕ ಬಿಕ್ಕಟ್ಟು ರಾಜ್ಯದಲ್ಲಿ ರಾಜ್ಯಪಾಲರು, ಸಭಾಪತಿ, ಸಭಾಧ್ಯಕ್ಷ ಹಾಗೂ ಮುಖ್ಯ ನ್ಯಾಯಮೂರ್ತಿಗಳಿಗೆ ಮಾತ್ರ ಪ್ರಮಾಣ ವಚನ ಬೋಧಿಸುವ ಅಧಿಕಾರ ಇದೆ. ಇವು ಸಾಂವಿಧಾನಿಕ ಹುದ್ದೆಗಳಾಗಿದ್ದರಿಂದ ಇಲ್ಲಿ ಸಭಾಪತಿ ಸೇರಿದಂತೆ ಈ ನಾಲ್ವರ ಮೇಲೆ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗೆ ಮಾಡಬೇಕೆಂದಲ್ಲಿ ಕೆಲ ನಿಯಮಗಳನ್ನು ಪಾಲಿಸಬೇಕು. ಆದರೆ, ಇದಾವುದನ್ನು ಯೋಚಿಸದೇ ಪರಿಷತ್‌ ಸಭಾಪತಿ ಮೇಲೆ ಪ್ರಕರಣ ದಾಖಲಿಸಿರುವುದು ಪೊಲೀಸರ ಕಾರ್ಯ ವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಜಾತಿ ನಿಂದನೆ ಪ್ರಕರಣ ದಾಖಲಾದಾಗ ಆರೋಪಿಗಳನ್ನು ತನಿಖಾಧಿಕಾರಿ ವಿವೇಚನೆಯ ಮೇಲೆ ಬಂಧಿಸಬಹುದು. ಇದು ಅನಿವಾರ್ಯ ಆದಲ್ಲಿ ಸಭಾಪತಿಗಳನ್ನು ಬಂಧಿಸಬಹುದೇ ಎಂಬುದರ ಬಗ್ಗೆ ಪೊಲೀಸರಿಗೆ ಅರಿವಿಲ್ಲದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


from India & World News in Kannada | VK Polls https://ift.tt/33UnJwL

ಫಿಕ್ಸರ್‌ಗಳಿಂದ ಹಣ ಪಡೆದ ಟೇಲರ್‌ಗೆ ನಿಷೇಧ ಶಿಕ್ಷೆ ಹೇರಿದ ಐಸಿಸಿ!

ಹೊಸದಿಲ್ಲಿ: (ಐಸಿಸಿ), ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ ವಿರುದ್ಧ ಮೂರೂವರೆ ವರ್ಷಗಳ ಕಾಲ ನಿಷೇಧ ಶಿಕ್ಷೆ ಹೇರಿದೆ. ಮಾಜಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಐಸಿಸಿ ಭ್ರಷ್ಟಾಚಾರ ತಡೆ ನೀಡಿ ಮತ್ತು ಐಸಿಸಿ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಅಂದಹಾಗೆ ಕೆಲ ದಿನಗಳ ಹಿಂದಷ್ಟೇ ಬ್ರೆಂಡನ್‌ ತಾವು ಮಾಡಿರುವ ತಪ್ಪನ್ನು ಟ್ವಿಟರ್‌ ಮೂಲಕ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ಇದರ ಹಿಂದಿನ ಕಥೆಯನ್ನೂ ತೆರೆದಿಟ್ಟಿದ್ದರು. ಜೊತೆಗೆ ಐಸಿಸಿ ಕಡೆಯಿಂದ ನಿಷೇಧ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯೂ ಇದೆ ಎಂದು ತಮ್ಮ ಸೋಷಿಯಲ್‌ ಮೀಡಿಯಾ ಗೋಡೆಯ ಮೇಲೆ ಬರೆದುಕೊಂಡಿದ್ದರು. ಫಿಕ್ಸರ್‌ಗಳು ಸಂಪರ್ಕಿಸಿದ ಸಂಗತಿಯನ್ನು ತಡವಾಗಿ ಐಸಿಸಿ ಗಮನಕ್ಕೆ ತಂದು ಆರ್ಟಿಕಲ್‌ 2.4.2 ನಿಯಮವನ್ನು ಟೇಲರ್‌ ಉಲ್ಲಂಘಿಸಿದ್ದಾರೆ. ಈ ನಿಯಮದ ಪ್ರಕಾರ ಬೇರೆ ವ್ಯಕ್ತಿಗಳಿಂದ ಹಣ, ಉಡುಗೊರೆ ಅಥವಾ ಬೇರೆ ರೀತಿಯ ಸವಲತ್ತುಗಳು ಲಭ್ಯವಾಗಿರುವ ಸಂಗತಿಯನ್ನು ಆಟಗಾರರು ಕೂಡಲೇ ಐಸಿಸಿ ಗಮನಕ್ಕೆ ತರಬೇಕು. ಜೊತೆಗೆ ಆರ್ಟಿಕಲ್‌ 2.4.3 ಮತ್ತು 2.4.4 ನಿಯಮಗಳ ಉಲ್ಲಂಘನೆಯೂ ಆಗಿದೆ ಎಂದು ಐಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಐಸಿಸಿ ಭ್ರಷ್ಟಾಚಾರ ತಡೆ ಘಟಕ ಹೇರಿರುವ ಎಲ್ಲ ಆರೋಪಗಳನ್ನು ಬ್ರೆಂಡನ್‌ ಟೇಲರ್‌ ಒಪ್ಪಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗಿ ತಮ್ಮ ವಿರುದ್ಧ ಹೇರಲಾಗಿರುವ ಶಿಕ್ಷೆಗೆ ಸಮ್ಮತಿಸುವುದಾಗಿ ಹೇಳಿಕೊಂಡಿದ್ದಾರೆ. ಇನ್ನು 2021ರಲ್ಲಿ ಐರ್ಲೆಂಡ್‌ ವಿರುದ್ಧದ ಪಂದ್ಯದ ವೇಳೆ ಬ್ರೆಂಡನ್‌ ಟೇಲರ್‌ ಅವರಿಂದ ಪಡೆಯಲಾಗಿದ್ದ ಮೂತ್ರದ ಸ್ಯಾಂಪಲ್‌ನಲ್ಲಿ ನಿಷೇಧಿತ ಬೆನ್‌ಝೊಯ್ಲೆಕಾಗ್ನೈನ್‌ ಅಂಶ ಪತ್ತೆಯಾಗಿದೆ. ಈ ಮೂಲಕ ಐಸಿಸಿ ಡೋಪಿಂಗ್‌ ನಿಯಮವನ್ನೂ ಟೇಲರ್‌ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಇವೆಲ್ಲದರ ಕಾರಣ ಯಾವುದೇ ಕ್ರಿಕೆಟ್‌ ಚಟುವಟಿಕೆಗಳಲ್ಲಿ ಮೂರೂವರೆ ವರ್ಷಗಳ ಕಾಲ ಪಾಲ್ಗೊಳ್ಳದೇ ಇರುವಂತೆ ಐಸಿಸಿ ನಿಷೇಧ ಹೇರಿದೆ. 2025ರ ಜುಲೈ 28ರ ಬಳಿಕ ಅವರು ಕ್ರಿಕೆಟ್‌ ಚಟುವಟಿಕೆಗಳಿಗೆ ಹಿಂದಿರುಗಬಹುದಾಗಿದೆ. "ಬ್ರೆಂಡನ್‌ ಜಿಂಬಾಬ್ವೆ ರಾಷ್ಟ್ರೀಯ ತಂಡದ ಮಾಜಿ ನಾಯಕ. 17 ವರ್ಷಗಳ ಕಾಲ ಜಿಂಆಬ್ವೆ ಪರ ಆಡಿದ್ದಾರೆ. ಅಷ್ಟು ಸುದೀರ್ಘಾವಧಿಯ ವೃತ್ತಿಬದುಕಿನಲ್ಲಿ ಹಲವು ಬಾರಿ ಐಸಿಸಿ ಆಯೋಜಿಸಿದ್ದ ಭ್ರಷ್ಟಾಚಾರ ತಡೆ ಸೆಮಿನಾರ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಡೋಪಿಂಗ್‌ ನೀತಿ ನಿಯಮಗಳ ಬಗ್ಗೆಯೂ ಅವರಿಗೆ ಚೆನ್ನಾಗಿ ಅರಿವಿದೆ. ಇದರಿಂದ ಎದುರಾಗುವ ಸಮಸ್ಯೆಗಳ ಬಗ್ಗೆಯೂ ಅವರಿಗೆ ಗೊತ್ತಿದೆ," ಎಂದು ಐಸಿಸಿ ಇಂಟೆಗ್ರಿಟಿ ಯೂನಿಟ್‌ನ ಜನರಲ್‌ ಮ್ಯಾನೇಜರ್‌ ಅಲೆಕ್ಸ್‌ ಮಾರ್ಷಲ್‌ ಹೇಳಿದ್ದಾರೆ. "ಅವರಂತಹ ಅನುಭವಿ ಆಟಗಾರರಿಂದ ಇಂತಹ ತಪ್ಪು ನಡೆದಿರುವುದು ಬಹಳಾ ಬೇಸರ ತಂದಿದೆ. ಅಂದಹಾಗೆ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಅದಕ್ಕೆ ತಕ್ಕ ಶಿಕ್ಷೆಯನ್ನೂ ಹೇರಲಾಗಿದೆ. ಫಿಕ್ಸಿಂಗ್‌ ಸಲುವಾಗಿ ಯಾರಾದರೂ ಸಂಪರ್ಕಿಸಿದರೆ ಅದನ್ನು ಐಸಿಸಿ ಗಮನಕ್ಕೆ ತರಲು ತಡ ಮಾಡಿದರೆ ಏನಾಗುತ್ತದೆ ಎಂಬುದು ಬ್ರೆಂಡನ್‌ ಮೂಲಕ ಉಳಿದ ಆಟಗಾರರಿಗೆ ಪಾಠವಾಗಲಿದೆ. ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸುತ್ತಿರುವ ಬ್ರೆಂಡನ್‌ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ," ಎಂದಿದ್ದಾರೆ. 2019ರಲ್ಲಿ ಜಿಂಬಾಬ್ವೆ ಪ್ರೀಮಿಯರ್‌ ಲೀಗ್‌ ಆರಂಭಿಸುವ ಸಲುವಾಗಿ ಭಾರತೀಯ ಉದ್ಯಮಿ ಒಬ್ಬರನ್ನು ಬ್ರೆಂಡನ್‌ ಭೇಟಿಯಾಗಿದ್ದರು. ಈ ಸಭೆಯ ವಿಡಿಯೋ ಮಾಡಿ, ಫಿಕ್ಸಿಂಗ್‌ ಸಲುವಾಗಿ ನಡೆಸುತ್ತಿರುವ ವಿಡಿಯೋ ಎಂದು ಬಿಡುಗಡೆ ಮಾಡುವುದಾಗಿ ಬ್ರೆಂಡನ್‌ ಅವರನ್ನು ಬ್ಲಾಕ್‌ಮೇಲ್‌ ಮಾಡಲಾಗಿತ್ತು. ಬಳಿಕ ಅವರ ಒತ್ತಡಕ್ಕೆ ಮಣಿದ ಜಿಂಬಾಬ್ವೆ ಆಟಗಾರ ಹಣ ಸ್ವೀಕರಿಸಿ ತಾಯ್ನಾಡಿಗೆ ಹಿಂದಿರುಗಿದ್ದರು. ಬಳಿಕ 4 ತಿಂಗಳ ನಂತರ ಈ ಸಂಗತಿಯನ್ನು ಐಸಿಸಿ ಗಮನಕ್ಕೆ ತಂದಿದ್ದಾರೆ. ತಡವಾಗಿ ಐಸಿಸಿ ಗಮನಕ್ಕೆ ತಂದ ಕಾರಣ ಮತ್ತಷ್ಟು ಸಮಸ್ಯೆಗೆ ತಿಳಿಸಿದ್ದಾರೆ. ತಮ್ಮ ಕುಟುಂಬದವರನ್ನು ಮೊದಲು ಸುರಕ್ಷಿತ ಸ್ಥಳದಲ್ಲಿ ಇರಿಸಲು ಆದ್ಯತೆ ಕೊಟ್ಟ ಕಾರಣ ವಿಚಾರ ಐಸಿಸಿ ಗಮನಕ್ಕೆ ತರಲು ತಡವಾಯಿತು ಎಂದು ಟೇಲರ್‌ ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3J2tN5h

ದೇಶಾದ್ಯಂತ ದಿನೇ ದಿನೇ ಕುಗ್ಗುತ್ತಿದೆ ಕೋವಿಡ್: ಅಂತ್ಯದತ್ತ ಕೊರೊನಾ 3ನೇ ಅಲೆ..?

: ಕಳೆದ ನಾಲ್ಕು ದಿನಗಳಿಂದ ನಿತ್ಯ ಸೋಂಕಿತರ ಸಂಖ್ಯೆ ಕಡಿಮೆ ದಾಖಲಾಗುತ್ತಿರುವುದು ಮತ್ತು ಕಳೆದೊಂದು ವಾರ ಸರಾಸರಿ ಪಾಸಿಟಿವಿಟಿ ಪ್ರಮಾಣ ಸ್ಥಿರವಾಗಿರುವ ಆಧಾರದ ಮೇಲೆ ದೇಶದಲ್ಲಿ ಕೊರೊನಾ ಮೂರನೇ ಅಲೆಯು ಅಂತ್ಯದತ್ತ ಸಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವಾರ ನಿತ್ಯ ಸೋಂಕಿತರ ಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚು ದಾಖಲಾದ ಬಳಿಕ ದೈನಂದಿನ ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಂಡು ಬಂದಿಲ್ಲ. ಬದಲಿಗೆ 2.5 ಲಕ್ಷದ ಆಸುಪಾಸಿನಲ್ಲಿ ಸ್ಥಿರವಾಗಿದೆ. ಪ್ರಮುಖವಾಗಿ ದಿಲ್ಲಿ, ಮುಂಬಯಿ, ಚೆನ್ನೈನಂಥ ಮಹಾನಗರಗಳಲ್ಲಿ ಓಮಿಕ್ರಾನ್‌ ಪ್ರೇರಿತ ಕೋವಿಡ್‌-19 ಸೋಂಕಿನ ಆರ್ಭಟ ಬಹಳಷ್ಟು ಕಡಿಮೆ ಆಗಿದೆ. ಸಾಮಾನ್ಯ ಜ್ವರ , ಸೌಮ್ಯ ರೋಗ ಲಕ್ಷಣಗಳಾದ ಕೆಮ್ಮು ಹಾಗೂ ಶೀತದಂತಹ ಚಳಿಗಾಲದ ಸಮಸ್ಯೆಗಳಿಂದ ಮಾತ್ರವೇ ಜನರು ಬಳಲುತ್ತಿದ್ದಾರೆ. ಮುಖ್ಯವಾಗಿ ಇವರೆಲ್ಲರೂ 4-5 ದಿನಗಳಲ್ಲಿ ಪೂರ್ಣವಾಗಿ ಚೇತರಿಕೆ ಕಾಣುತ್ತಿದ್ದಾರೆ. 'ದಕ್ಷಿಣ ಆಫ್ರಿಕಾ ಸೇರಿದಂತೆ ಅಮೆರಿಕ, ಯುರೋಪ್‌ಗಳಲ್ಲಿ ಮೂರನೇ ಅಲೆ ಕಾಣಿಸಿಕೊಂಡಿದ್ದಕ್ಕೂ, ನಮ್ಮ ದೇಶಕ್ಕೂ ಬಹಳ ವ್ಯತ್ಯಾಸವಿದೆ. ಹೆಚ್ಚಿನ ಜನರು ಕೊರೊನಾ ನಿರೋಧಕ ಲಸಿಕೆಯನ್ನು ಸೂಕ್ತ ಸಮಯಕ್ಕೆ ಪಡೆದಿರುವುದು ಮೂರನೇ ಅಲೆ ಕ್ಷೀಣಿಸಲು ಪ್ರಮುಖ ಕಾರಣ' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ 2ನೇ ಅಲೆಯ ಆರ್ಭಟದ ವೇಳೆ ಉತ್ತುಂಗ ಸ್ಥಿತಿಯಲ್ಲಿ ದಿನವೊಂದಕ್ಕೆ ದೇಶಾದ್ಯಂತ ಸುಮಾರು 4 ಸಾವಿರ ಸೋಂಕಿತರು ಮೃತಪಡುತ್ತಿದ್ದರು. ಆದರೆ 3ನೇ ಅಲೆಯ ಉತ್ತುಂಗದಲ್ಲಿ ಈ ಪ್ರಮಾಣ 600ರಷ್ಟಿದೆ. ಎರಡನೇ ಅಲೆ ಉತ್ತುಂಗದಲ್ಲಿ ದೈನಂದಿನ ಕೇಸ್‌ ಗರಿಷ್ಠ 4.14 ಲಕ್ಷ (2021ರ ಮೇ 14) ತಲುಪಿದ್ದರೆ, ಮೂರನೇ ಅಲೆಯಲ್ಲಿ ಜನವರಿ 23ರಂದು 3.37 ಲಕ್ಷ ತಲುಪಿದ್ದು ಗರಿಷ್ಠವಾಗಿದೆ. ಆ ನಂತರ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ ವಾರ ದೇಶಾದ್ಯಂತ ಸಕ್ರಿಯ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 22.5 ಲಕ್ಷ ಮುಟ್ಟಿತ್ತು. ಆದರೆ, ಬಳಿಕ ಕ್ರಮೇಣ ನಾಲ್ಕೇ ದಿನಗಳಲ್ಲಿ ಇಳಿಕೆಯಾಗಿ, ಸದ್ಯ 21 ಲಕ್ಷದ ಹತ್ತಿರ ಬಂದಿದೆ. ಡಿಸೆಂಬರ್‌ ಕೊನೆಯ ವಾರದಲ್ಲಿ ಸರಾಸರಿ ಪಾಸಿಟಿವಿಟಿ ಪ್ರಮಾಣವು ಶೇ. 1 ರಷ್ಟಿತ್ತು. ಬಳಿಕ ಏಕಾಏಕಿ ಶೇ. 16-17ರಷ್ಟಕ್ಕೆ ಏರಿಕೆ ಕಂಡಿದೆ. ಕಳೆದೊಂದು ವಾರದಿಂದ ಇದು ಸ್ಥಿರವಾಗಿರುವುದು ಮೂರನೇ ಅಲೆಯ ಉತ್ತುಂಗವನ್ನು ದೇಶ ದಾಟಿದೆ ಎನ್ನುವುದರ ಸುಳಿವು ಆಗಿರಬಹುದು ಎಂದು ತಜ್ಞರು ಆಶಾಭಾವ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ ಹೊಸ ರೂಪಾಂತರಿ ಪತ್ತೆ 2012 ರಿಂದ 2015ರ ನಡುವೆ ಮಧ್ಯ ಪ್ರಾಚ್ಯದಲ್ಲಿ ಶ್ವಾಸಕೋಶ ಸಂಬಂಧಿ ಗಂಭೀರ ಸೋಂಕಿಗೆ ಕಾರಣವಾದ ವೈರಾಣು ರೂಪಾಂತರ ಹೊಂದುವ ಮೂಲಕ ಹೊಸದಾಗಿ ದಾಳಿ ನಡೆಸಲು ಶುರು ಮಾಡಿದೆ ಎಂದು ಚೀನಾ ವಿಜ್ಞಾನಿಗಳು ಎಚ್ಚರಿಸಿದ್ದಾರೆ. 'ನಿಯೊಕೊವ್‌' (ಎನ್‌ಇಒಸಿಒವಿ) ಎಂದು ಕರೆಯಲಾಗಿರುವ ಈ ರೂಪಾಂತರಿ ವೈರಾಣು ಹೆಚ್ಚಾಗಿ ಬಾವಲಿಗಳಲ್ಲಿ ಕಾಣ ಸಿಗುತ್ತದೆ. ಬಾವಲಿಗಳಲ್ಲಿ ಕಿಣ್ವವೊಂದರ ಮೂಲಕ ಮನುಷ್ಯರ ದೇಹ ಹೊಕ್ಕುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಅನೇಕರಲ್ಲಿ ನಿಯೊಕೊವ್‌ ಸೋಂಕು ಹೆಚ್ಚಿದೆ. ಸಾಮಾನ್ಯ ಕೋವಿಡ್‌-19 ವೈರಾಣುವಿಗಿಂತ ಬೇರೆ ಮಾದರಿಯಲ್ಲಿ ಮನುಷ್ಯನ ದೇಹ ಹೊಕ್ಕುವ 'ನಿಯೊಕೊವ್‌' ಅತ್ಯಂತ ವೇಗವಾಗಿ ಪ್ರಸರಣ ಹೊಂದುವ ಜತೆಗೆ ಮಾರಣಾಂತಿಕ ರೋಗ ಲಕ್ಷಣಗಳನ್ನು ಸೋಂಕಿತರಲ್ಲಿ ಉಂಟು ಮಾಡುತ್ತಿದೆ ಎಂದು ಚೀನಾ ವಿಜ್ಞಾನಿಗಳು ತಿಳಿಸಿದ್ದಾರೆ.


from India & World News in Kannada | VK Polls https://ift.tt/3gcGWvP

ಗಂಭೀರ ಕಾಯಿಲೆ ಇದ್ದರೆ ನಿರ್ಲಕ್ಷ್ಯ ಬೇಡ; ಕಳೆದ 1 ವಾರದಲ್ಲಿ ಸೋಂಕಿನ ಜೊತೆ ಸಾವಿನ ಸಂಖ್ಯೆಯೂ ಏರಿಕೆ!

ಮಹಾಬಲೇಶ್ವರ ಕಲ್ಕಣಿ ಬೆಂಗಳೂರು: ಮೂರನೇ ಅಲೆ ಆರಂಭದಲ್ಲಿ ಕೋವಿಡ್‌ ಸೋಂಕು ತೀವ್ರವಾಗಿ ಹರಡಿದರೂ ಸಾವಿನ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ, ಕಳೆದ ಒಂದು ವಾರದಿಂದ ಸೋಂಕಿನ ಜತೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗಿದೆ. ಸೋಂಕಿತ ಮೃತರಲ್ಲಿ ಎರಡನೇ ಅಲೆಯಲ್ಲಿ ಕಾಣಿಸಿಕೊಂಡ ರೋಗ ಲಕ್ಷಣಗಳೇ ಕಾಣಿಸುತ್ತಿದ್ದು, ಗಂಭೀರ ಕಾಯಿಲೆಗಳನ್ನು ಉಳ್ಳವರು ಎಚ್ಚರಿಕೆ ವಹಿಸಬೇಕಾಗಿದೆ. ಕಳೆದ ಎರಡು ದಿನಗಳಲ್ಲಿ 91 ಜನ ಮೃತಪಟ್ಟಿದ್ದಾರೆ. ಈ ಪೈಕಿ ಶೇ.50ರಷ್ಟು ಜನರು ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಾಗಿದ್ದಾರೆ. ಉಳಿದವರು ಕಿಡ್ನಿ, ಹೃದ್ರೋಗ, ಯಕೃತ್ತಿನ ಸಮಸ್ಯೆ ಸೇರಿದಂತೆ ಇತರ ದೀರ್ಘಕಾಲದ ಸಮಸ್ಯೆಯಿಂದ ಬಳಲುತ್ತಿರುವವರಾಗಿದ್ದಾರೆ. ಮೃತಪಟ್ಟ ಹೆಚ್ಚಿನವರಲ್ಲಿ ಜ್ವರ, ಕೆಮ್ಮು ಉಸಿರಾಟದ ತೊಂದರೆ ಕಂಡು ಬಂದಿದೆ. ಜ್ವರ ಮತ್ತು ಕೆಮ್ಮಿನಿಂದ 11 ಜನ ಮೃತಪಟ್ಟರೆ, ಜ್ವರ, ಕೆಮ್ಮು, ಉಸಿರಾಟ ತೊಂದರೆಯಿಂದ 16 ಹಾಗೂ ಜ್ವರ ಮತ್ತು ಉಸಿರಾಟ ತೊಂದರೆಯಿಂದ 11, ಕೇವಲ ಜ್ವರದಿಂದ 23 ಜನ ಮೃತಪಟ್ಟಿದ್ದಾರೆ. ಇದೇ ವೇಳೆ ಕೆಮ್ಮು, ಉಸಿರಾಟ ತೊಂದರೆಯಿಂದ 11, ಕೇವಲ ಉಸಿರಾಟ ತೊಂದರೆಯಿಂದ 17 ಹಾಗೂ ಕೆಮ್ಮಿನಿಂದ ಕೇವಲ ಇಬ್ಬರು ಮೃತಪಟ್ಟಿದ್ದಾರೆ. ‘ಮೂರನೇ ಅಲೆಯಲ್ಲಿ ಸೋಂಕು ಸೌಮ್ಯವಾಗಿದೆ. ಸೋಂಕಿನಿಂದ ಹೆಚ್ಚು ಸಮಸ್ಯೆ ಇಲ್ಲ’ ಎಂದು ಗಂಭೀರ ಕಾಯಿಲೆಗಳನ್ನು ಉಳ್ಳ ಕೋವಿಡ್‌ ಸೋಂಕಿತರು ನಿರ್ಲಕ್ಷ್ಯ ತೋರುವಂತಿಲ್ಲ. ಇಂಥವರ ಮೇಲೆ ಸೋಂಕು ಹೆಚ್ಚು ಪರಿಣಾಮ ಬೀರುತ್ತಿದೆ. 2ನೇ ಅಲೆಯಲ್ಲಿ ಸೋಂಕು ಶ್ವಾಸಕೋಶದ ಮೇಲೆ ದಾಳಿ ಮಾಡಿ ಉಸಿರಾಟಕ್ಕೆ ಸಮಸ್ಯೆ ಉಂಟು ಮಾಡಿತ್ತು. ಕ್ಷಣಾರ್ಧದಲ್ಲಿ ಪಲ್ಸ್‌ ರೇಟ್‌ ಇಳಿಕೆಯಾಗಿ ಸೋಂಕಿತರನ್ನು ಸಾವಿನ ಕೂಪಕ್ಕೆ ನೂಕುವ ಶಕ್ತಿಯನ್ನು ವೈರಸ್‌ ಹೊಂದಿತ್ತು. ಕಾಯಿಲೆ ಇಲ್ಲದವರಿಗೂ ಸೋಂಕು ಕಾಣಿಸಿಕೊಂಡರೆ ಆಕ್ಸಿಜನ್‌ ಬೇಕಾಗುತ್ತಿತ್ತು. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿತ್ತು.


from India & World News in Kannada | VK Polls https://ift.tt/3g5CL5e

ಪೊಲೀಸರಿಗೆ ಬಾಡಿವೋರ್ನ್‌ ಕ್ಯಾಮೆರಾ ನೀಡಲು ಹೈಕೋರ್ಟ್ ಸೂಚನೆ

ಬೆಂಗಳೂರು: ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಗಾಗಿ ಬಾಡಿವೋರ್ನ್‌ ಕ್ಯಾಮೆರಾ ಖರೀದಿಗೆ ಹೊರಡಿಸಿರುವ ಕಾರ್ಯಾದೇಶ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಸಲ್ಲಿಸುವಂತೆ ಸರಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ. ಅಲ್ಲದೇ ಒಂದು ವಾರ ಗಡುವು ನೀಡಿದೆ. ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಪಿಐಎಲ್‌ ಹೈಕೋರ್ಟ್‌ ಸಿಜೆ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಸರಕಾರಿ ವಕೀಲರು, ‘ಬಾಡಿವೋರ್ನ್‌ ಕ್ಯಾಮೆರಾ ಖರೀದಿಗಾಗಿ ಹೊರಡಿಸಿರುವ ಕಾರ್ಯಾದೇಶ ಮತ್ತು ಇತರ ದಾಖಲೆಗಳು ಸಿದ್ಧ ಇವೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಇ-ಫೈಲಿಂಗ್‌ ಮಾಡಲಾಗಲಿಲ್ಲ. ಒಂದು ವಾರ ಕಾಲಾವಕಾಶ ನೀಡಿದರೆ ಎಲ್ಲಾ ಅಗತ್ಯ ಮಾಹಿತಿ ಸಲ್ಲಿಸಲಾಗುವುದು’ ಎಂದರು. ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿ, ‘ಇದೇ ಕೊನೆಯ ಅವಕಾಶ. ಮತ್ತೆ ಸಮಯ ನೀಡುವುದಿಲ್ಲ’ ಎಂದು ಹೇಳಿತು. ಏನಿದು ಪ್ರಕರಣ?: ‘ ನಗರ ಪೊಲೀಸರಿಗಾಗಿ ಖರೀದಿಸಿರುವ 50 ಬಾಡಿ ವೋರ್ನ್‌ ಕ್ಯಾಮೆರಾಗಳನ್ನು ಬಳಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು. ಪೊಲೀಸರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅನುಕೂಲವಾಗುವಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಾಡಿವೋರ್ನ್‌ ಕ್ಯಾಮೆರಾ ಖರೀದಿಸಲು ಸರಕಾರಕ್ಕೆ ನಿರ್ದೇಶಿಸಬೇಕು’ ಎಂದು ವಕೀಲೆ ಗೀತಾ ಮಿಶ್ರಾ ಅವರು ಪಿಐಎಲ್‌ನಲ್ಲಿ ನ್ಯಾಯಾಲಯವನ್ನು ಕೋರಿದ್ದರು.


from India & World News in Kannada | VK Polls https://ift.tt/3G22FBi

ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ವಿಫಲ: ಎಂಜಿನಿಯರ್‌ಗಳನ್ನೇ ಜೈಲಿಗಟ್ಟುವ ಎಚ್ಚರಿಕೆ ನೀಡಿದೆ ಹೈಕೋರ್ಟ್..!

: ಮಹಾನಗರದ ಗುಂಡಿ ಮುಚ್ಚುವ ವಿಚಾರ ಸಂಬಂಧ ಹೈಕೋರ್ಟ್‌ ಗುರುವಾರ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತಲ್ಲದೆ, ಪಾಲಿಕೆ ಎಂಜಿನಿಯರ್‌ಗಳನ್ನು ಜೈಲಿಗೆ ಕಳಿಸಿದರೆ ಬುದ್ದಿ ಬರುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿತು. ಗುಂಡಿ ಮುಚ್ಚಿರುವ ಕುರಿತು ಪಾಲಿಕೆ ಸಲ್ಲಿಸಿದ ವರದಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ನ್ಯಾಯಪೀಠ, ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿತು. ಫೆಬ್ರುವರಿ 7 ಕ್ಕೆ ಪಾಲಿಕೆ ಮುಖ್ಯ ಎಂಜಿನಿಯರ್‌ಗೆ ಖುದ್ದು ಹಾಜರಾಗಲು ತಾಕೀತು ಮಾಡಿತು. 'ಬೆಂಗಳೂರಿನ ರಸ್ತೆ ದುಸ್ಥಿತಿಗೆ ಎಂಜಿನಿಯರ್‌ಗಳೇ ಕಾರಣ. ಅವರೆಲ್ಲ ಏನು ಮಾಡುತ್ತಿದ್ದಾರೆ? ಅವರ ವಿರುದ್ಧ ಎಫ್‌ಐಆರ್‌ ಹಾಕಿ ಜೈಲಿಗೆ ಕಳಿಸಿದರೆ ಬುದ್ದಿ ಬರುತ್ತದೆ' ಎಂದು ನ್ಯಾಯಪೀಠ ಖಡಕ್‌ ಆಗಿ ನುಡಿಯಿತು. ಬೆಂಗಳೂರಿನ ರಸ್ತೆ ದುಸ್ಥಿತಿ ಕುರಿತು ಕೋರಮಂಗಲದ ವಾಸಿ ವಿಜಯ್‌ ಮೆನನ್‌ 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾ. ಸೂರಜ್‌ ಗೋವಿಂದ ರಾಜ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತು. ಪರ ಹಾಜರಾದ ವಕೀಲ ಕೆ. ಎನ್‌. ಪುಟ್ಟೇಗೌಡ, 'ನಗರದಲ್ಲಿ ಭಾರಿ ಮಳೆಯ ನಂತರ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಿರುವ ಕುರಿತು ಇದೇ 20ರಂದು ವರದಿ ಸಲ್ಲಿಸಲಾಗಿದೆ. ಅದರಂತೆ, ಬಹುತೇಕ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ, ಆದರೆ, ಉಪ ರಸ್ತೆಗಳಲ್ಲಿ ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ' ಎಂದರು. ಆಗ ಸಿಟ್ಟಿಗೆದ್ದ ಸಿಜೆ, ಬಿಬಿಎಂಪಿ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು. 'ನೀವು ಬೆಂಗಳೂರಿನಲ್ಲಿ ಎಷ್ಟು ವರ್ಷಗಳಿಂದ ಇದ್ದೀರಿ? ನೀವು ಪಾಲಿಕೆಯನ್ನು ಸಮರ್ಥಿಸಿಕೊಳ್ಳಬೇಡಿ. ನ್ಯಾಯಾಂಗದ ಪ್ರತಿನಿಧಿಯಾಗಿ ನಿಜಾಂಶ ಹೇಳಿ' ಎಂದು ಖಾರವಾಗಿ ವಕೀಲರನ್ನು ಪ್ರಶ್ನಿಸಿದರು. ಅಲ್ಲದೆ, 'ಪಾಲಿಕೆ ಕಾಮಗಾರಿಯ ಗುಣಮಟ್ಟ ಏನು ಎಂಬುದನ್ನು ಪ್ರತಿ ಮಳೆಗೂ ರಸ್ತೆಗಳಲ್ಲಾಗುತ್ತಿರುವ ಗುಂಡಿಗಳೇ ತೋರಿಸುತ್ತಿವೆ. ನೀವು ರಿಪೇರಿ ಮಾಡುವ ರಸ್ತೆಗಳು ದೀರ್ಘ ಕಾಲ ಬಾಳಿಕೆ ಬರುವುದಿಲ್ಲವೇಕೇ..? ನೀವು ಸುಮ್ಮನೆ ಕಾರಣ ನೀಡಿ ತಪ್ಪಿಸಿಕೊಳ್ಳಲಾಗದು. ನೀವು ಮುಚ್ಚಲು ಯಾವ ವಿಧಾನ, ಯಾವ ತಂತ್ರಜ್ಞಾನ ಅನುಸರಿಸುತ್ತಿದ್ದೀರಿ' ಎಂದು ಖಾರವಾಗಿ ಪ್ರಶ್ನಿಸಿತು. ಆಗ ಪಾಲಿಕೆ ಪರ ವಕೀಲರು, ''ಬೆಂಗಳೂರಿನಲ್ಲಿ ವಾಹನ ದಟ್ಟಣೆ ಅಧಿಕ. ವಾಹನಗಳ ಭಾರವನ್ನು ರಸ್ತೆಗಳು ತಡೆಯುತ್ತಿಲ್ಲ, ಅದಕ್ಕೆ ಹೀಗಾಗುತ್ತಿದೆ. ಆದರೂ ಪಾಲಿಕೆ ವೈಟ್‌ ಟಾಪಿಂಗ್‌ ಮತ್ತು ಟೆಂಡರ್‌ ಶ್ಯೂರ್‌ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದೆ. ಅಲ್ಲಿ ಗುಂಡಿಗಳ ಸಮಸ್ಯೆ ಇಲ್ಲ. ಆದರೂ ಪಾಲಿಕೆ ಶಕ್ತಿ ಮೀರಿ ಗುಂಡಿಗಳನ್ನು ಮುಚ್ಚಲು ಪ್ರಯತ್ನಿಸುತ್ತಿದೆ' ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಬೇರೆ ಏಜೆನ್ಸಿಗೆ ನೀಡಬೇಕೇ? ಆಗ ಮುಖ್ಯ ನ್ಯಾಯಮೂರ್ತಿಗಳು 'ಪಾಲಿಕೆ ಬೆಂಗಳೂರಿನ ರಸ್ತೆಗಳ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ, ಆ ಹೊಣೆಯನ್ನು ಬೇರೆ ಏಜೆನ್ಸಿಗೆ ನೀಡಿ ಎಂದು ಸರಕಾರಕ್ಕೆ ಆದೇಶಿಸಬೇಕಾಗುತ್ತದೆ. ಏಕೆಂದರೆ ಇಷ್ಟು ಸಮಯ ನೀಡಿದರೂ ಪಾಲಿಕೆಯಿಂದ ಏನೂ ತೃಪ್ತಿಕರವಾದ ಕೆಲಸವಾಗಿಲ್ಲ' ಎಂದು ಆಕ್ಷೇಪಿಸಿತು. 'ಪಾಲಿಕೆಯೇ ನೀಡಿರುವ ಮಾಹಿತಿಯಂತೆ, ಇನ್ನೂ 30 ಕಿ. ಮೀ. ಪ್ರಮುಖ ರಸ್ತೆಗಳು ಮತ್ತು 482 ಕಿ. ಮೀ. ಉಪ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ. ಯಾವ ತಂತ್ರಜ್ಞಾನ ಬಳಸುತ್ತಿದ್ದೀರೆಂದು ಮಾಹಿತಿ ನೀಡಿಲ್ಲ. ಹೋಗಲಿ ಯಾವ ತಜ್ಞರ ಸಲಹೆ ಪಡೆಯಲಾಗುತ್ತಿದೆ ಎಂದು ಬಗ್ಗೆಯೂ ವಿವರ ಇಲ್ಲ. ಇಂತಹ ವರದಿಯನ್ನು ಒಪ್ಪಲಾಗದು' ಎಂದು ನ್ಯಾಯಪೀಠ ಹೇಳಿತು. ರಸ್ತೆ ಗುಂಡಿಗಳ ಸ್ಥಿತಿ ಬಗ್ಗೆ 'ವಿಜಯ ಕರ್ನಾಟಕ' ಸರಣಿ ಲೇಖನ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸಮನ್ವಯತೆ ಇಲ್ಲವೇ..? 'ಇವತ್ತು ರಸ್ತೆ ರಿಪೇರಿ ಮಾಡಲಾಗುತ್ತದೆ, ನಾಳೆ ಮತ್ತೆ ಅಗೆಯಲಾಗುತ್ತದೆ. ಏಕೆ ಹೀಗೆ? ಪಾಲಿಕೆ ಮತ್ತು ಇತರೆ ನಗರಾಡಾಳಿತ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲವೇ' ಎಂದು ನ್ಯಾಯಪೀಠ ಪ್ರಶ್ನಿಸಿತು. 'ಅನುಮತಿ ಇಲ್ಲದೆ ರಸ್ತೆ ಅಗೆಯುವ ಸಂಸ್ಥೆಗಳ ವಿರುದ್ಧ ಪಾಲಿಕೆ ಏನು ಕ್ರಮ ಕೈಗೊಂಡಿದೆ? ಎಷ್ಟು ದಂಡ ವಿಧಿಸಲಾಗಿದೆ? ಎಷ್ಟು ಎಫ್‌ಐಆರ್‌ಗಳನ್ನು ಹಾಕಲಾಗಿದೆ' ಎಂದು ಕೇಳಿ ಮುಂದಿನ ವಿಚಾರಣೆ ವೇಳೆ ವಿವರ ನೀಡುವಂತೆ ನ್ಯಾಯಪೀಠ ಆದೇಶಿಸಿತು. 'ಬೆಂಗಳೂರಿನ ರಸ್ತೆ ದುಸ್ಥಿತಿ ಬಗ್ಗೆ ಎಲ್ಲ ವಾಹನ ಸವಾರರಿಗೂ ಚೆನ್ನಾಗಿ ಗೊತ್ತು. ಮಳೆ ಬಂದ ಕೂಡಲೇ ಪದೇ ಪದೇ ಗುಂಡಿಗಳು ಬೀಳುತ್ತವೆ. ಇದು ಪಾಲಿಕೆ ಕಾಮಗಾರಿಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಲ್ಲವೇ?' ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಜ್ಞರ ವರದಿ ಪಾಲನೆಗೆ ನಿರ್ಲಕ್ಷ್ಯ ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಎಸ್‌. ಆರ್‌. ಅನುರಾಧ, '2018ರಲ್ಲಿ ಬೆಂಗಳೂರಿನ ರಸ್ತೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ್ದ ಸೇನಾ ಎಂಜಿನಿಯರ್‌ ಒಳಗೊಂಡ ಕೋರ್ಟ್‌ ಕಮಿಷನರ್ಸ್, ರಸ್ತೆ ಕಾಮಗಾರಿ ಯಾವ ಗುಣಮಟ್ಟದಿಂದ ಕೂಡಿರಬೇಕು ಎಂದು ವಿವರವಾದ ವರದಿ ಸಲ್ಲಿಸಿತ್ತು. ಆದರೆ, ಆ ವರದಿಯನ್ನು ಪಾಲಿಕೆ ಪಾಲನೆ ಮಾಡುತ್ತಿಲ್ಲ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಜತೆಗೆ, 2015ರಿಂದ ಕೋರ್ಟ್‌ ನೀಡಿರುವ ಆದೇಶಗಳನ್ನು ಪಾಲನೆ ಮಾಡುತ್ತಿಲ್ಲ. ರಸ್ತೆಗಳು ಪದೇ ಪದೇ ಗುಂಡಿ ಬೀಳಲು ಅದೇ ಕಾರಣ' ಎಂದು ಅವರು ಆರೋಪಿಸಿದರು.


from India & World News in Kannada | VK Polls https://ift.tt/3ARgCkN

ಉತ್ತರ ಪ್ರದೇಶ ಚುನಾವಣೆಯಲ್ಲಿ ಒಬಿಸಿ ಮತಗಳೇ ನಿರ್ಣಾಯಕ..! ಮತ್ತೆ ಬಿಜೆಪಿಗೆ ಒಲಿಯುತ್ತಾ..?

ಲಖನೌ (): ಉತ್ತರ ಪ್ರದೇಶದ ವಿಧಾನ ಸಭೆ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗ () ನಿರ್ಣಾಯಕವಾಗಿದ್ದು, ಈ ಸಮುದಾಯದ ಒಲವು ಗಳಿಸಿಕೊಳ್ಳಲು ಎಲ್ಲಾ ಪಕ್ಷಗಳೂ ಕಸರತ್ತು ತೀವ್ರಗೊಳಿಸಿವೆ. 'ಸಾಮಾಜಿಕ ನ್ಯಾಯ' ಪರಿಕಲ್ಪನೆಯ ಪದಕ್ಕೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಎಲ್ಲಿಲ್ಲದ ಮಹತ್ವ ಇದೆ. ಒಬಿಸಿ ಮೀಸಲು ಪ್ರತಿಪಾದಿಸಿದ ಮಂಡಲ್‌ ಕಮಿಷನ್‌ ವರದಿ ಮೂಲಕ, ಈ ಎರಡೂ ರಾಜ್ಯಗಳಲ್ಲಿ ಅಗಾಧ ರಾಜಕೀಯ ಪರಿವರ್ತನೆಗಳು ಘಟಿಸಿದವು. ಈ ಆಂದೋಲನದ ಜ್ವಾಲೆಯಲ್ಲಿಯೇ ಮುಲಾಯಂ ಸಿಂಗ್‌ ಯಾದವ್‌ ಅಭ್ಯುದಯಕ್ಕೆ ಬಂದರು. 1990ರ ದಶಕದಲ್ಲಿ ಸಮಾಜ ವಾದಿ ಪಾರ್ಟಿ ಕಟ್ಟಿ ಯಶಸ್ಸಿನ ಉತ್ತುಂಗ ತಲುಪಿದರು. ಅಲ್ಲಿಂದ ಇಲ್ಲಿಯವರೆಗೆ ಒಬಿಸಿ ಬ್ಯಾಂಕ್‌ ಪ್ರತ್ಯೇಕತೆಯ ಅಸ್ಮಿತೆಯನ್ನು ಕಾಯ್ದುಕೊಂಡಿದೆ. 2017ರ ವಿಧಾನ ಸಭೆ ಹಾಗೂ 2019ರ ಲೋಕ ಸಭೆ ಚುನಾವಣೆಗಳಲ್ಲಿ ಒಬಿಸಿ ಸಮುದಾಯಗಳ ಒಲವು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರಿಂದಲೇ ಭರ್ಜರಿ ಗೆಲುವು ಸಾಧಿಸಿತ್ತು. ಈ ಸಾರಿ ಕೂಡ ಒಬಿಸಿ ಮತಗಳತ್ತ ಬಿಜೆಪಿ ಗುರಿ ಇಟ್ಟು ನಿಂತಿದೆ. ಎಸ್ಪಿಯೂ ಈ ಸಮುದಾಯದ ಒಲವನ್ನು ಮರಳಿ ಗಳಿಸಿಕೊಳ್ಳಲು ಪೈಪೋಟಿ ನಡೆಸಿದೆ. ಬಿಎಸ್‌ಪಿ ಮಾತ್ರ ತನಗೆ ದಲಿತರ ಮತಗಳು ಸಾಕು, ಬ್ರಾಹ್ಮಣರ ಮತಗಳು ಬಂದರೆ ಬೋನಸ್‌ ಎನ್ನುವ ನಿಲುವಿಗೆ ಅಂಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಚುನಾವಣೆಯು ಒಟ್ಟಾರ್ಥದಲ್ಲಿ ಒಬಿಸಿ ಮತಗಳ ಸುತ್ತ ನಡೆಯುತ್ತಿರುವ ಮಹಾ ಸಮರ ಎನಿಸಿದೆ. ಬೃಹತ್‌ ಜನಸಂಖ್ಯೆ: ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಒಬಿಸಿ ಸಮುದಾಯಗಳ ಪಾಲು ಶೇ.54.5ರಷ್ಟಿದೆ. ಅರ್ಧಕ್ಕಿಂತ ಹೆಚ್ಚಿರುವ ಈ ಸಮುದಾಯಗಳ ಮನ ಗೆಲ್ಲುವ ಪಕ್ಷ ಅಧಿಕಾರದ ಗದ್ದುಗೆ ಏರುತ್ತದೆ. ಒಬಿಸಿ ವಿರೋಧ ಕಟ್ಟಿಕೊಂಡ ಪಕ್ಷ ಎರಡಂಕಿ ದಾಟುವುದು ಕಷ್ಟ. ಅದು ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಜಾತ್ಯತೀತ ರಾಜಕಾರಣಕ್ಕೆ ಒತ್ತು ನೀಡುವ ಪಕ್ಷಗಳು ಕೂಡ ಒಬಿಸಿ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತವೆ. ಬಿಜೆಪಿ ಆದಿಯಾಗಿ ಎಲ್ಲಾ ಪಕ್ಷಗಳು ಈ ಸಮುದಾಯಗಳನ್ನು ಒಲಿಸಿಕೊಳ್ಳಲು ಸರ್ಕಸ್‌ ಮಾಡುತ್ತವೆ. ಇದಕ್ಕೆ ಸಾಕ್ಷಿ, ಪ್ರಮುಖ ಪಕ್ಷಗಳ ರಾಜ್ಯಾಧ್ಯಕ್ಷರು. , ಬಿಜೆಪಿಯಿಂದ ಮೊದಲ್ಗೊಂಡು ರಾಜ್ಯದ ಎಲ್ಲಾ ಪ್ರಮುಖ ಪಕ್ಷಗಳ ಅಧ್ಯಕ್ಷರು ಒಬಿಸಿಯವರೇ ಆಗಿದ್ದಾರೆ. 2017ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆ ಮ್ಯಾಜಿಕ್‌ ಸೃಷ್ಟಿಸಿತು. ಎಸ್‌ಪಿಯ ಯಾದವೇತರ ಒಬಿಸಿ ಮತ ಮತ್ತು ಬಿಎಸ್‌ಪಿಯ ಜಾಟವಾ ದಲಿತೇತರ ಮತಗಳು ಮೋದಿ ಅಲೆಗೆ ಪಕ್ಕಾದವು. ಇದರಿಂದಾಗಿ ಎರಡೂ ಕಡೆ ಬಿಜೆಪಿ ಅಧಿಕಾರ ಹಿಡಿಯಿತು. ಈ ಸೂತ್ರವೇ ಈ ಸಾರಿಯೂ ಮ್ಯಾಜಿಕ್‌ ಸೃಷ್ಟಿಸುವುದು ಖಚಿತವಾಗಿದೆ. ಅದಕ್ಕಾಗಿ ಎಲ್ಲಾ ಪಕ್ಷಗಳ ನಡುವೆ ಒಬಿಸಿ ಮತ ಸಮರ ನಡೆದಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ ಪಕ್ಷಗಳ ಗೆಲುವಿಗೆ ಒಬಿಸಿ ಒಲವೇ ಮಾನದಂಡವಾಗಿದೆ. ಹೆಚ್ಚು ಒಬಿಸಿ ಶಾಸಕರನ್ನು ಹೊಂದಿದ ಪಕ್ಷ ಇಲ್ಲಿ ಅಧಿಕಾರ ಹಿಡಿಯುತ್ತದೆ. ಹಾಲಿ ಬಿಜೆಪಿ 102 ಒಬಿಸಿ ಶಾಸಕರನ್ನು ಹೊಂದಿದ್ದು, ಐದು ವರ್ಷ ಅಚಲ ಆಡಳಿತ ನಡೆಸಿತು. 12 ಒಬಿಸಿ ಶಾಸಕರನ್ನು ಹೊಂದಿದ್ದ ಎಸ್‌ಪಿ ವಿರೋಧ ಪಕ್ಷವಾಯಿತು. ಬಿಎಸ್‌ಪಿ ಐದು, ಅಪ್ನಾ ದಳ ಐದು ಮತ್ತು ಕಾಂಗ್ರೆಸ್‌ ಒಬ್ಬ ಒಬಿಸಿ ಶಾಸಕರನ್ನು ಹೊಂದಿವೆ.


from India & World News in Kannada | VK Polls https://ift.tt/3G5f6fx

ಉಕ್ರೇನ್‌ ಜತೆಗಿನ ಬಿಕ್ಕಟ್ಟು ಶಮನಗೊಳಿಸಿ: ರಷ್ಯಾ ಮನವಿಗೆ ಅಮೆರಿಕ ಡೋಂಟ್ ಕೇರ್..!

ಮಾಸ್ಕೊ: ರಷ್ಯಾ ಹಾಗೂ ಉಕ್ರೇನ್‌ ನಡುವಿನ ಮುಸುಕಿನ ಗುದ್ದಾಟ ಈಗ ಅಮೆರಿಕದ ಅಂಗಳ ತಲುಪಿದೆ. ಬಿಕ್ಕಟ್ಟು ಶಮನಗೊಳಿಸಲು ಸಹಕರಿಸಿ ಎಂದು ರಷ್ಯಾ ಮನವಿ ಮಾಡಿದ್ದರೂ, ಅಮೆರಿಕ ಮಾತ್ರ ಯಾವುದೇ ಪ್ರಕ್ರಿಯೆ ನೀಡಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಯಾವ ಹಂತಕ್ಕೆ ತಲುಪುತ್ತದೆ ಎಂಬ ಕುತೂಹಲ ಮೂಡಿದೆ. 'ಮಧ್ಯ ಪ್ರವೇಶ ಮಾಡಿ ಬಿಕ್ಕಟ್ಟು ಶಮನಗೊಳಿಸಬೇಕು ಹಾಗೂ ರಷ್ಯಾಗೆ ಭದ್ರತೆ ಖಾತರಿಪಡಿಸಬೇಕು ಎಂದು ಅಮೆರಿಕ ಹಾಗೂ ನ್ಯಾಟೋಗೆ ಮನವಿ ಮಾಡಿದರೂ ಇದುವರೆಗೆ ಸಕಾರಾತ್ಮಕ ಉತ್ತರ ಬಂದಿಲ್ಲ. ಹಾಗಾಗಿ, ಎರಡೂ ದೇಶಗಳ ನಡುವಿನ ಗೊಂದಲ ಮುಂದುವರಿದಿದೆ' ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೆಡೆ, ಉಕ್ರೇನ್‌ ಗಡಿಗೆ ರಷ್ಯಾ ಒಂದು ಲಕ್ಷಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಿ ಯುದ್ಧದ ಭೀತಿ ಸೃಷ್ಟಿಸಿದೆ. ಮತ್ತೊಂದೆಡೆ ಅಮೆರಿಕ ಹಾಗೂ ನ್ಯಾಟೋ ಬಳಿ ತಮ್ಮ ದೇಶದ ಭದ್ರತೆ ಕುರಿತು ಕಳವಳ ವ್ಯಕ್ತಪಡಿಸಿದೆ. ಹಾಗಾಗಿಯೇ, ಇದುವರೆಗೂ ಈ ಕುರಿತು ಮಧ್ಯ ಪ್ರವೇಶಿಸಲು ಅಮೆರಿಕ ಮುಂದಾಗಿಲ್ಲ ಎಂದು ತಿಳಿದು ಬಂದಿದೆ. ಅತ್ತ, ನ್ಯಾಟೋ ನಿಲುವು ಉಕ್ರೇನ್‌ ಪರವಾಗಿ ಇದ್ದರೂ ಯಾವುದೇ ಬಹಿರಂಗ ಹೇಳಿಕೆ ನೀಡುತ್ತಿಲ್ಲ. ಹಾಗಾಗಿ, ಉಭಯ ರಾಷ್ಟ್ರಗಳ ಬಿಕ್ಕಟ್ಟು ಕಗ್ಗಂಟಾಗಿಯೇ ಉಳಿಯುವಂತಾಗಿದೆ. ರಷ್ಯಾ ಹಾಗೂ ಉಕ್ರೇನ್‌ ನಡುವೆ ದಶಕಗಳಿಂದಲೂ ಬಿಕ್ಕಟ್ಟು ಇದೆ. ಅದರಲ್ಲೂ, 1991ರ ಬಳಿಕ ರಷ್ಯಾ ಹಿಡಿತದಿಂದ ಉಕ್ರೇನ್‌ ಮುಕ್ತವಾದ ಬಳಿಕ ಆ ರಾಷ್ಟ್ರದ ಮೇಲೆ ರಷ್ಯಾ ಆಗಾಗ ಪ್ರಾಬಲ್ಯ ಸಾಧಿಸಲು ಹವಣಿಸುತ್ತದೆ. ಇದರ ಭಾಗವಾಗಿಯೇ ಈಗ ಪೂರ್ವ ಉಕ್ರೇನ್‌ ಗಡಿಗೆ ಲಕ್ಷಾಂತರ ಸೈನಿಕರನ್ನು ನಿಯೋಜಿಸಿ ಯುದ್ಧದ ಭೀತಿ ಹೆಚ್ಚಿಸಿದೆ. ಅಲ್ಲದೆ, ಉಕ್ರೇನ್‌ಗೆ ನ್ಯಾಟೋ ಒಕ್ಕೂಟದ ಸದಸ್ಯತ್ವ ಸಿಗಬಾರದು ಎಂಬುದು ರಷ್ಯಾ ಒತ್ತಾಯವಾಗಿದೆ. ಯುದ್ಧವಿಲ್ಲ ಎಂದ ರಷ್ಯಾ: ಉಕ್ರೇನ್‌ ಗಡಿಗೆ ಲಕ್ಷಾಂತರ ಸೈನಿಕರನ್ನು ನಿಯೋಜಿಸಿರುವ ರಷ್ಯಾ, ಯುದ್ಧ ಸಾರುವ ಮೂಲಕ ಅತಿಕ್ರಮಣ ಮಾಡಲು ಮುಂದಾಗಿದೆ ಎಂಬ ಮಾತುಗಳನ್ನು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌ ತಳ್ಳಿ ಹಾಕಿದ್ದಾರೆ. 'ಯಾವ ರಾಷ್ಟ್ರಗಳ ಮೇಲೂ ರಷ್ಯಾ ಆಕ್ರಮಣ ಮಾಡುವುದಿಲ್ಲ. ದೇಶ ದೇಶಗಳ ಮಧ್ಯೆ ಯುದ್ಧದ ಸನ್ನಿವೇಶ ಕುರಿತ ಚಿಂತನೆಯೇ ಸ್ವೀಕಾರಾರ್ಹವಲ್ಲ. ನಾವು ಮೊದಲು ಸಹ ಇದನ್ನೇ ಹೇಳಿದ್ದೇವೆ. ಈಗಲೂ ಇದನ್ನೇ ಹೇಳುತ್ತಿದ್ದೇವೆ. ಯಾರ ಮೇಲೂ ದಾಳಿ ಮಾಡುವ ಉದ್ದೇಶ ನಮ್ಮದಲ್ಲ' ಎಂದು ಸ್ಪಷ್ಪಪಡಿಸಿದ್ದಾರೆ.


from India & World News in Kannada | VK Polls https://ift.tt/3KNx2iy

ಪಂಜಾಬ್‌ ಕಾಂಗ್ರೆಸ್‌ನಲ್ಲಿ ಮತ್ತೆ ಭಿನ್ನಮತ ಸ್ಫೋಟ..! ರಾಹುಲ್‌ ಸಭೆಗೆ ಸಂಸದರ ಗೈರು..!

ಚಂಡಿಗಢ (ಪಂಜಾಬ್): ವಿಧಾನಸಭೆ ಚುನಾವಣೆ ಪ್ರಚಾರ ಭರಾಟೆ ನಡುವೆಯೇ ಪಂಜಾಬ್‌ನ ಅಮೃತಸರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡೆಸಿದ ಸಮಾವೇಶಕ್ಕೆ ಪಕ್ಷದ ಐವರು ಸಂಸದರು ಗೈರಾಗುವ ಮೂಲಕ ಪಕ್ಷದಲ್ಲಿನ ಬಂಡಾಯ ಜಗಜ್ಜಾಹೀರಾಗಿದೆ. ಹಿರಿಯ ಮನಿಷ್‌ ತಿವಾರಿ, ರವನೀತ್‌ ಸಿಂಗ್‌ ಬಿಟ್ಟು, ಜಸ್ವೀರ್‌ ಸಿಂಗ್‌ ಗಿಲ್‌, ಮುಹಮ್ಮದ್‌ ಸಾದಿಕ್‌ ಮತ್ತು ಕ್ಯಾ. ಅಮರಿಂದರ್‌ ಸಿಂಗ್‌ ಅವರ ಪತ್ನಿ ಪ್ರಣೀತ್‌ ಕೌರ್‌ ರಾಹುಲ್‌ ಕಾರ್ಯಕ್ರಮದಲ್ಲಿ ಭಾಗವಹಿಸುವುದಿರಲಿ, ಅವರನ್ನು ಭೇಟಿ ಮಾಡುವ ಸೌಜನ್ಯವನ್ನೂ ತೋರಿಸಲಿಲ್ಲ. ಮನಿಷ್‌ ತಿವಾರಿ ಅವರು ಸೋನಿಯಾ ಗಾಂಧಿ ವಿರುದ್ಧ ಅಪಸ್ವರ ಎತ್ತಿದ ಜಿ23 ಗುಂಪಿನ ಪ್ರಮುಖ ಸದಸ್ಯ. ಪೂರ್ಣಾವಧಿ ನಾಯಕತ್ವಕ್ಕಾಗಿ ಮೂರು ವರ್ಷಗಳ ಹಿಂದೆಯೇ ಮನಿಷ್‌ ಆಗ್ರಹ ಮಂಡಿಸಿದ್ದರು. ಇವರ ನಿಲುವನ್ನು ಪಂಜಾಬಿನ ಈ ಐವರು ಸಂಸದರೂ ಬೆಂಬಲಿಸಿದ್ದರು ಎನ್ನುವುದು ವಿಶೇಷ. ಜೊತೆಗೆ, ಚುನಾವಣೆ ಘೋಷಣೆಯಾದ ಬಳಿಕ ಇದು ರಾಜ್ಯಕ್ಕೆ ರಾಹುಲ್‌ ಗಾಂಧಿ ಅವರ ಮೊದಲ ಭೇಟಿಯಾಗಿತ್ತು. ಕಾಂಗ್ರೆಸ್‌ನಿಂದ ನಿರ್ಗಮಿಸಿದ ಬಳಿಕ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌, ಪಂಜಾಬ್‌ ಲೋಕ ಕಾಂಗ್ರೆಸ್‌ ಪಕ್ಷ ಕಟ್ಟಿದ್ದು, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಇವರ ಜತೆಗೆ ಈ ಐವರೂ ಸಂಸದರು ನಿಕಟ ಸಂಪರ್ಕದಲ್ಲಿದ್ದು, ಕಾಂಗ್ರೆಸ್‌ ತೊರೆಯುವ ಸನ್ನಹದಲ್ಲಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶ ನೋಡಿಕೊಂಡು ಈ ಸಂಸದರು ಮುಂದಿನ ದಾರಿ ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಆಹ್ವಾನವೇ ಇರಲಿಲ್ಲ: ರಾಹುಲ್‌ ಗಾಂಧಿ ಅಮೃತಸರಕ್ಕೆ ಬರುವ ಕಾರ್ಯಕ್ರಮ ವಾರ ಮೊದಲೇ ನಿಗದಿಯಾಗಿತ್ತು. ಪಕ್ಷದ 117 ಅಭ್ಯರ್ಥಿಗಳ ಜತೆಗೂಡಿ ಸ್ವರ್ಣ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎನ್ನುವುದೂ ಖಾತ್ರಿಯಾಗಿತ್ತು. ಇವರ ಜತೆಗೆ ಪಕ್ಷದ ಪ್ರಮುಖರೆಲ್ಲರೂ ರಾಹುಲ್‌ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರ್ಧಾರವಾಗಿತ್ತು. 'ನಮಗೆ ರಾಹುಲ್‌ ಗಾಂಧಿ ಭೇಟಿಯ ವಿಷಯವೇ ಗೊತ್ತಿಲ್ಲ. ಆಹ್ವಾನಿಸಿದ್ದರೆ ಖಂಡಿತ ಹೋಗುತ್ತಿದ್ದೆವು' ಎಂದು ಸಂಸದರು ಉತ್ತರ ನೀಡಿದ್ದಾರೆ. 'ಕಾರ್ಯಕ್ರಮವು ಪಕ್ಷದ 117 ಅಭ್ಯರ್ಥಿಗಳಿಗಾಗಿ ಆಯೋಜನೆಗೊಂಡಿದೆ ಎನ್ನುವ ಮಾಹಿತಿ ಇತ್ತು. ನಮ್ಮನ್ನು ಮುಖ್ಯಮಂತ್ರಿಯಾಗಲಿ, ಪಿಸಿಸಿ ಅಧ್ಯಕ್ಷರಾಗಲಿ ಆಹ್ವಾನಿಸಿರಲಿಲ್ಲ. ಪಕ್ಷದ ಉಸ್ತುವಾರಿ ವಹಿಸಿರುವ ಪ್ರಧಾನ ಕಾರ್ಯದರ್ಶಿ ಕೂಡ ಆ ಬಗ್ಗೆ ಚಕಾರ ಎತ್ತಿರಲಿಲ್ಲ. ಆಹ್ವಾನಿಸಿದ್ದರೆ ಖಂಡಿತ ಹೋಗುತ್ತಿದ್ದೆವು' ಎಂದು ಭಿನ್ನ ಬಣದ ಸಂಸದ ಜಸ್‌ಬಿರ್‌ ಸಿಂಗ್‌ ಗಿಲ್‌ ಹೇಳಿದ್ದಾರೆ. ಕ್ಯಾಪ್ಟನ್‌ ನಿರ್ಗಮನದ ನಂತರ ಪಂಜಾಬ್‌ ಕಾಂಗ್ರೆಸ್‌ ಮುರಿದ ಮನೆಯಾಗಿದೆ. ಇರುವ ನಾಯಕರ ನಡುವೆಯೂ ಹೊಂದಾಣಿಕೆ ಇಲ್ಲ. ಇದೇ ಕಾರಣ, '117 ಸ್ಥಾನಗಳ ಪೈಕಿ ಕಾಂಗ್ರೆಸ್‌ ಈ ಬಾರಿ ಎರಡಂಕಿ ತಲುಪಿದರೆ, ಅದೇ ದೊಡ್ಡ ಸಾಧನೆ' ಎಂದು ಕೆಲವರು ಅಪಹಾಸ್ಯ ಮಾಡುತ್ತಿದ್ದಾರೆ. ಭಿನ್ನ ಬಣದಲ್ಲಿ ಅರ್ಧದಷ್ಟು ಸಂಸದರು ಪಂಜಾಬ್‌ನಲ್ಲಿ ಕಾಂಗ್ರೆಸ್‌ ಎಂಟು ಸಂಸದರನ್ನು ಹೊಂದಿದೆ. ಒಟ್ಟು 13 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ತಲಾ ಎರಡು, ಆಪ್‌ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್‌ ಎಂಟು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇರುವ ಈ ಎಂಟು ಸಂಸದರಲ್ಲಿ ಸದ್ಯ ಅರ್ಧಕ್ಕಿಂತ ಹೆಚ್ಚು ಮಂದಿ ಭಿನ್ನ ಬಣ ಸೇರಿದ್ದಾರೆ. ಗುರ್ಜಿತ್‌ ಸಿಂಗ್‌ ಅಹುಜಾ, ಅಮರ್‌ ಸಿಂಗ್‌ ಮತ್ತು ಸಂತೋಷ್‌ ಸಿಂಗ್‌ ಚೌಧರಿ ಮಾತ್ರ ಕಾಂಗ್ರೆಸ್‌ಗೆ ನಿಷ್ಠರಾಗಿದ್ದಾರೆ. ಆದರೆ ಗಾಂಧಿ ಕುಟುಂಬದೆಡೆಗಿನ ಅವರ ನಿಷ್ಠೆ ಪ್ರಶ್ನಾರ್ಹವಾಗಿಯೇ ಉಳಿದಿದೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪರವಾಗಿ ಪ್ರಚಾರ ನಡೆಸಲು ರಾಷ್ಟ್ರಮಟ್ಟದ ನಾಯಕರೇ ಇಲ್ಲದಂತಾಗಿದೆ.


from India & World News in Kannada | VK Polls https://ift.tt/34dO20u

ನಾಲ್ಕೈದು ತಿಂಗಳಲ್ಲಿ ಯಾವ ಮೂರ್ಖರೂ ಸಿಎಂ ಬದಲಾವಣೆ ಮಾಡೋದಿಲ್ಲ; ಡಾ. ಸುಧಾಕರ್

ಚಿಕ್ಕಬಳ್ಳಾಪುರ: ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಇನ್ನು ನಾಲ್ಕೈದು ತಿಂಗಳಾಗಿಲ್ಲ. ಇಷ್ಟು ಬೇಗ ಯಾವ ಮೂರ್ಖರು ಸಿಎಂನ್ನು ಬದಲಾವಣೆ ಮಾಡಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರೂ ಇಷ್ಟು ಕಡಿಮೆ ಅವಧಿಯಲ್ಲಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಲ್ಲ. ಅದೊಂದು ಗಾಳಿ ಸುದ್ದಿ. ನನ್ನ ಪ್ರಕಾರ ಕಠಿಣವಾಗಿ ಹೇಳುವುದಾದರೆ ಯಾವ ಮೂರ್ಖರು ಕೂಡಾ 4-6 ತಿಂಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡೋದು ಅಸಾಧ್ಯ ಎನ್ನುವ ಮೂಲಕ ವಿಷಯವನ್ನು ಸಾರಸಗಟಾಗಿ ತಳ್ಳಿಹಾಕಿದರು. ಹೆಸರು ಹೇಳಲಿ: ಬಿಜೆಪಿ ಸಚಿವರು ಮತ್ತು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಸಂಪರ್ಕದಲ್ಲಿದ್ದರೋ ಗೊತ್ತಿಲ್ಲ. ಎದುರು ಸಿಕ್ಕಾಗ ಯಾರಾದರೂ ಮಾತನಾಡುತ್ತಾರೆ. ವಿಶ್ವಾಸ ಬೇರೆ ರಾಜಕಾರಣ ಬೇರೆ.ಯಾರ ಜತೆ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಹೇಳಿದರೆ ಆ ಹೇಳಿಕೆ ಬಗ್ಗೆ ವ್ಯಾಖ್ಯಾನ ಮಾಡಬಹುದು ಎಂದರು. ಚಾಲ್ತಿಯಲ್ಲಿರಲು ಪ್ರಸ್ತಾಪ: ಇದೆಲ್ಲಾ ರಾಜಕಾರಣದಲ್ಲಿ ಸಾಮಾನ್ಯವಾದ ಸಂಗತಿ. ಚುನಾವಣೆ ಇನ್ನು 15 ತಿಂಗಳಿದೆ. ಹೀಗಾಗಿ ಸದಾ ಚಾಲ್ತಿಯಲ್ಲಿರಬೇಕಲ್ಲ ಎಂಬ ಕಾರಣಕ್ಕೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಮೊದಲು ಅವರು ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದುನ್ನು ಸ್ಪಷ್ಟಪಡಿಸಿದರೆ ಅದರ ಬಗ್ಗೆ ಮಾತನಾಡಬಹುದು ಎಂದರು. ಟಾಪ್‌ 3ನಲ್ಲಿ ಬರುತ್ತೇವೆ: ರಾಜ್ಯದಲ್ಲಿ 6 ಜಿಲ್ಲೆಗಳಲ್ಲಿ ಅಪೌಷ್ಟಿಕತೆಯಿಂದ ಕೆಲವು ದುಷ್ಪರಿಣಾಮಗಳು ಬೀರಿವೆ. ಹೀಗಾಗಿ ಆರೋಗ್ಯ ಸೂಚ್ಯಂಕದಲ್ಲಿ 8ರಿಂದ 9ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಆ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಮುಂದಿನ ಟಾಪ್‌ 3ನಲ್ಲಿ ಬರಲು ಬೇಕಾದ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು. ಅಭಿವೃದ್ಧಿಗೆ ತೊಡಕಾಗಲ್ಲ, ಜವಾಬ್ದಾರಿ ಹೆಚ್ಚಿದೆ ಜಿಲ್ಲಾ ಉಸ್ತುವಾರಿ ಬದಲಾವಣೆಯಿಂದ ಕಾರ್ಯಕರ್ತರು, ಮುಖಂಡರಿಗೆ ಬೇಸರವಾಗಿರುವುದು ಸಹಜ.ಆದರೆ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ತೊಡಕಾಗಲ್ಲ. ಬೇರೊಂದು ಜಿಲ್ಲೆಯ ಉಸ್ತುವಾರಿ ಸಿಕ್ಕಿರುವುದರಿಂದ ಇನ್ನು ಜವಾಬ್ದಾರಿ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ಉಸ್ತುವಾರಿ ಅಧಿಕಾರ ಇಲ್ಲದೇ ಇದ್ದರೂ ನಾನು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧನಾಗಿದ್ದೇನೆ. ನಮ್ಮ ಹಿರಿಯರಾದ ಎಂಟಿಬಿ ನಾಗರಾಜ್‌ ಅವರ ಸಹಕಾರ ಮತ್ತು ಮುಖ್ಯಮಂತ್ರಿಗಳ ನೆರವಿನಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ನಾನು ಯಾವ ಮುಖಂಡರು ಮತ್ತು ಕಾರ್ಯಕರ್ತರನ್ನು ಬಿಟ್ಟು ಹೋಗುತ್ತಿಲ್ಲ. ಜಿಲ್ಲೆಗೆ ಆಗಾಗ್ಗೆ ಭೇಟಿ ಕೊಟ್ಟು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಿಕ್ಕಿರುವುದರಿಂದ ನನ್ನ ಕಾರ್ಯಕ್ಷೇತ್ರವೂ ಈಗ ಹೆಚ್ಚಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಮೂರು ಜಿಲ್ಲೆಗಳಲ್ಲಿಓಡಾಡಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ. ಅಭಿವೃದ್ಧಿಗೂ ಕಂಕಣ ಬದ್ಧನಾಗಿದ್ದೇನೆ ಎಂದು ತಿಳಿಸಿದರು.


from India & World News in Kannada | VK Polls https://ift.tt/34bSXPo

ಭೂ ಕಬಳಿಕೆ ಪ್ರಕರಣ; ಬೈರತಿ ಬಸವರಾಜ್‌ ಕೇಸ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿದ ಹೈಕೋರ್ಟ್‌

ಬೆಂಗಳೂರು: ಭೂ ಕಬಳಿಕೆ ಪ್ರಕರಣ ಸಂಬಂಧ ಸಚಿವ ಬೈರತಿ ಬಸವರಾಜ್‌ ಮತ್ತು ಶಾಸಕ ಆರ್‌.ಶಂಕರ್‌ ವಿರುದ್ಧದ ಖಾಸಗಿ ದೂರು ಸಂಬಂಧ ಅಧೀನ ನ್ಯಾಯಾಲಯದ ವಿಚಾರಣೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್‌ ಮಂಗಳವಾರ ವಿಸ್ತರಿಸಿದೆ. ಭೂ ಕಬಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧದ ದೂರು ವಿಚಾರಣೆಗೆ ಅಂಗೀಕರಿಸಿ ಸಮನ್ಸ್‌ ಜಾರಿಗೊಳಿಸಿದ 42ನೇ ಎಸಿಎಂಎಂ ಕೋರ್ಟ್‌ ಆದೇಶ ರದ್ದು ಕೋರಿ, ಭೈರತಿ ಬಸವರಾಜ್‌ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾ. ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ ಕೆಲ ಕಾಲ ವಾದ - ಪ್ರತಿವಾದ ಆಲಿಸಿತು. ಬಳಿಕ ವಿಚಾರಣೆಯನ್ನು ಫೆಬ್ರುವರಿ ಎರಡನೇ ವಾರಕ್ಕೆ ಮುಂದೂಡಿ, ಅಲ್ಲಿಯವರೆಗೂ ಅರ್ಜಿದಾರರ ವಿರುದ್ಧದ ನಗರದ 42ನೇ ಎಸಿಎಂಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ 2021 ರ ಡಿ.21 ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮಂದುವರಿಸುವುದಾಗಿ ಆದೇಶಿಸಿತು. ಪ್ರಕರಣದ ಹಿನ್ನೆಲೆ: ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್‌.ಪುರ ಹೋಬಳಿಯ ಕಲ್ಕೆರೆ ಗ್ರಾಮದ ಸರ್ವೆ ನಂಬರ್‌ 375/2 ರಲ್ಲಿನ 22.43 ಎಕರೆ ಜಾಗ ಅದೂರ್‌ ಅಣ್ಣೈಯಪ್ಪಗೆ ಎಂಬುವರಿಗೆ ಸೇರಿತ್ತು. 2003ರ ಮೇ 21ರಂದು ಸಂಬಂಧಿಕರಾದ ಮಾದಪ್ಪ ಮತ್ತು ಪಿಳ್ಳಮಾದಪ್ಪ ಖಾಲಿ ಕಾಗದಗಳ ಮೇಲೆ ಅದೂರ್‌ ಅಣ್ಣೈಯಪ್ಪ ಅವರ ಸಹಿ ಮತ್ತು ಹೆಬ್ಬೆಟ್ಟು ಪಡೆದುಕೊಂಡಿದ್ದರು. ನಂತರ ಪಾಲುದಾರಿಕೆ ಕರಾರು ಸಿದ್ಧಪಡಿಸಿ ಕೊಂಡು ಬೈರತಿ ಬಸವರಾಜ್‌ಗೆ 2003ರ ಮೇ 21ರಂದು ಅಕ್ರಮವಾಗಿ 22.43 ಎಕರೆ ಜಮೀನು ಮಾರಾಟ ಮಾಡಿ ದ್ದಾರೆ ಹಾಗೂ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಮಾಡಿ ಕೊಟ್ಟಿದ್ದಾರೆ ಎಂದು ಆರೋಪಿಸಿ ಅಣ್ಣೈಯಪ್ಪ ಪುತ್ರ ಮಾದಪ್ಪ ಖಾಸಗಿ ದೂರು ದಾಖಲಿಸಿದ್ದರು.


from India & World News in Kannada | VK Polls https://ift.tt/3H90wVG

ಶಾಲೆಯಲ್ಲಿ ಮಕ್ಕಳಿಗೆ ನಮಾಜ್‌ಗೆ ಅವಕಾಶ ಕಲ್ಪಿಸಿದ ಮುಳಬಾಗಿಲು ಶಾಲಾ ಮುಖ್ಯ ಶಿಕ್ಷಕಿ ಅಮಾನತು!

ಮುಳಬಾಗಲು: ನಗರದ ಬಳೇಚಂಗಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್‌ ಮಾಡಲು ಅವಕಾಶ ಕಲ್ಪಿಸಿದರೆಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮುಖ್ಯ ಶಿಕ್ಷಕಿ ಉಮಾದೇವಿ ಅವರನ್ನು ಬಿಇಒ ಡಿ. ಗಿರಿಜೇಶ್ವರಿ ದೇವಿ ಅಮಾನತುಗೊಳಿಸಿದ್ದಾರೆ. ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್‌ ಮಾಡಲು ಮುಖ್ಯ ಶಿಕ್ಷಕಿ ಅವಕಾಶ ನೀಡಿದ್ದಾರೆ ಎಂಬ ಆರೋಪದ ಮೇಲೆ ಡಿಡಿಪಿಐ ಹಾಗೂ ಸ್ಥಳೀಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಡಿಡಿಪಿಐ ಅವರು ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಿದ್ದರು. ಸದರಿ ಈ ಶಾಲೆಯಲ್ಲಿ ನಮಾಜ್‌ ಮಾಡಲು ಅವಕಾಶ ನೀಡಿರುವುದನ್ನು ಖಂಡಿಸಿ ಹಳೆಯ ವಿದ್ಯಾರ್ಥಿಗಳು ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದಕ್ಕೆ ಮಣಿದ ಅಧಿಕಾರಿಗಳು ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಏನಿದು ಘಟನೆ? ಮುಳಬಾಗಲು ನಗರದ ಸೋಮೇಶ್ವರ ಪಾಳ್ಯದ ಬಳೆಚಂಗಪ್ಪ ಸರಕಾರಿ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ದಿನ ಪ್ರತ್ಯೇಕ ಕೊಠಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್‌ಗೆ ಅವಕಾಶ ಕಲ್ಪಿಸಿದ್ದು, ಇದರಿಂದ ಸಿಟ್ಟುಗೊಂಡ ಹಿಂದೂಪರ ಸಂಘಟನೆಗಳು, ಹಳೆಯ ವಿದ್ಯಾರ್ಥಿಗಳು ವಾರದ ಹಿಂದೆ ನೂರಾರು ಸಂಖ್ಯೆಯಲ್ಲಿ ಶಾಲೆಯ ಮುಂದೆ ಜಮಾಯಿಸಿದ್ದರು. ಶಾಲೆಯಲ್ಲಿ ಮಕ್ಕಳಿಗೆ ನಮಾಜ್‌ ನೀಡಲು ಅವಕಾಶ ಮಾಡಿಕೊಟ್ಟ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಅಮಾನತುಗೊಳಿಸಲು ಆಗ್ರಹಿಸಿದ್ದರು. ಲಾಕ್‌ಡೌನ್‌ ಬಳಿಕ ಸ್ಥಗಿತಗೊಂಡಿದ್ದ ಶಾಲೆಗಳು ಮರು ಆರಂಭವಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಆ ನಡುವೆಯೂ ಪ್ರತಿ ಶುಕ್ರವಾರ ಮುಸ್ಲಿಂ ಸಮುದಾಯದ ಮಕ್ಕಳು ನಮಾಜ್‌ಗೆ ಹೋಗಬೇಕೆಂದು ರಜೆ ಪಡೆಯುವುದು ಕಂಡುಬಂದಿದೆ. ನಮಾಜ್‌ ಮಾಡಿ ಬರುವುದಾಗಿ ಹೋದರೂ ಮರಳಿ ಮಕ್ಕಳು ಶಾಲೆಗೆ ವಾಪಸ್‌ ಬರದಿರುವುದನ್ನು ಕಂಡು ಶಾಲೆಯ ಮುಖ್ಯಶಿಕ್ಷಕರು ಮಕ್ಕಳ ಹಾಜರಾತಿ ತಪ್ಪಬಾರದೆಂಬ ಕಾರಣಕ್ಕೆ ಶಾಲೆಯ ಕೊಠಡಿಯೊಂದರಲ್ಲಿಯೇ ಮಕ್ಕಳಿಗೆ ನಮಾಜ್‌ ಮಾಡಲು ಅವಕಾಶ ನೀಡಿದ್ದರು. ಈ ಸಂಬಂಧ ಕಳೆದ ಸೋಮವಾರ ಡಿಡಿಪಿಐ ರೇವಣ ಸಿದ್ದಪ್ಪ ಮುಖ್ಯ ಶಿಕ್ಷಕಿ ಉಮಾದೇವಿ ಅವರನ್ನು ವಿಚಾರಣೆ ನಡೆಸಿದ ವೇಳೆಯೂ ‘ಕೋವಿಡ್‌ ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಶಾಲೆಯಲ್ಲಿಯೇ ನಮಾಜ್‌ ಮಾಡಲು ಅವಕಾಶ ನೀಡಿದೆವು. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ನಮಾಜ್‌ಗೆ ರಜೆ ಪಡೆದು ಹೋಗುತ್ತಿದ್ದ ಮಕ್ಕಳು ಮತ್ತೆ ಶಾಲೆಗೆ ಬರುತ್ತಿರಲಿಲ್ಲ. ಹೀಗಾಗಿ ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ನಮಾಜ್‌ಗೆ ಅವಕಾಶ ಕಲ್ಪಿಸಿದೆವು’ ಎಂದಿದ್ದರು. ಬಳೇ ಚೆಂಗಪ್ಪ ಶಾಲೆಯಲ್ಲಿ 400 ಮಕ್ಕಳಿದ್ದು, ಈ ಪೈಕಿ 161 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ‘ಶಿಕ್ಷಕರು ಒಳ್ಳೆಯ ದೃಷ್ಟಿಯಿಂದ ನೀಡಿದ್ದರೂ ಅದು ತಪ್ಪು. ಮುಖ್ಯ ಶಿಕ್ಷಕರ ಮತ್ತು ಸಹ ಶಿಕ್ಷಕರ ಹೇಳಿಕೆಯನ್ನು ಲಿಖಿತವಾಗಿ ದಾಖಲಿಸಿಕೊಂಡು ಅವರ ಸಹಿ ಪಡೆದಿದ್ದೇವೆ. ಅವರ ಹೇಳಿಕೆಯ ವಿವರ ಒಳಗೊಂಡಂತೆ ಜಿಲ್ಲಾಧಿಕಾರಿಗೆ ಸಮಗ್ರ ವರದಿ ಸಲ್ಲಿಸಲಾಗಿದೆ’ ಎಂದು ರೇವಣ ಸಿದ್ದಪ್ಪ ವಿಚಾರಣೆ ನಡೆಸಿದ ಬಳಿಕ ಮಾಹಿತಿ ನೀಡಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.


from India & World News in Kannada | VK Polls https://ift.tt/3IFtc9d

ಯು ಮುಂಬಾಗೆ ಮತ್ತೆ ಶರಣಾದ ಬೆಂಗಳೂರು ಬುಲ್ಸ್‌!

ಬೆಂಗಳೂರು: ತಂಡದ ಸಂಘಟಿತ ಹೋರಾಟಕ್ಕೆ ಶರಣಾದ 2018ರ ಚಾಂಪಿಯನ್ಸ್‌ ಪ್ರೊ ಕಬಡ್ಡಿ ಲೀಗ್‌ 8ನೇ ಆವೃತ್ತಿಯಲ್ಲಿ6ನೇ ಸೋಲಿಗೆ ಒಳಗಾಯಿತು. ಆದರೂ ಲೀಗ್‌ನಲ್ಲಿ ಆಡಿದ 15 ಪಂದ್ಯಗಳ ಪೈಕಿ 8 ಗೆಲುವು, 1 ಟೈನಿಂದ ಒಟ್ಟಾರೆ 46 ಅಂಕ ಕಲೆಹಾಕಿರುವ ಪವನ್‌ ಕುಮಾರ್‌ ಸೆಹ್ರಾವತ್‌ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ವೈಟ್‌ಫೀಲ್ಡ್‌ನ ಶೆರ್ಟಾನ್‌ ಗ್ರ್ಯಾಂಡ್‌ ಹೋಟೆಲ್‌ ಸಭಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 34-45 ಅಂಕಗಳಿಂದ ಮುಂಬಾ ತಂಡದ ವಿರುದ್ಧ ಸೋಲನುಭವಿಸಿತು. ಬುಲ್ಸ್‌ ಪರ ಮತ್ತೊಮ್ಮೆ ಮಿಂಚಿದ ನಾಯಕ ಪವನ್‌ ಕುಮಾರ್‌ 14 ಅಂಕ ಹಾಗೂ ರೇಡರ್‌ ಭರತ್‌ 7 ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅತ್ತ ರೇಡಿಂಗ್‌ ಮತ್ತು ಟ್ಯಾಕಲ್‌ ಸೇರಿ ಎಲ್ಲ ವಿಭಾಗಗಳಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ ದಿಲ್ಲಿ ತಂಡ ಟೂರ್ನಿಯಲ್ಲಿ 5ನೇ ಜಯ ದಾಖಲಿಸಿತು. ಇದರೊಂದಿಗೆ ಒಟ್ಟಾರೆ 41 ಅಂಕ ಹೊಂದಿರುವ ಮುಂಬಾ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದೆ. ಮುಂಬಾ ಪರ ರೇಡರ್‌ಗಳಾದ ಅಭಿಷೇಕ್‌ ಸಿಂಗ್‌ (11 ಅಂಕ), ರಾಹುಲ್‌ ಸೆತ್ಪಾಲ್‌(8 ಅಂಕ) ಮತ್ತು ವಿ. ಅಜಿತ್‌ (8 ಅಂಕ) ತಂಡದ ಗೆಲುವಿಗೆ ತಮ್ಮ ಕೊಡುಗೆ ನೀಡಿದರು. ಪ್ರಥಮಾರ್ಧಕ್ಕೆ ಬುಲ್ಸ್‌ 20-22ರಲ್ಲಿದಿಟ್ಟ ಪ್ರತಿರೋಧ ನೀಡಿತು. ಆದರೆ ದ್ವಿತೀಯಾರ್ಧದಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ 9 ಅಂಕ ಹಿನ್ನಡೆ ಅನುಭವಿಸಿತು. ಗುರುವಾರದ ಪಂದ್ಯ ಪುಣೇರಿ ಪಲ್ಟನ್‌ ಯು.ಪಿ. ಯೋಧಾ ಪಂದ್ಯ ಆರಂಭ: ರಾತ್ರಿ 7.30 ಎರಡನೇ ಚರಣದಲ್ಲಿ ಬೆಂಗಳೂರಿಗೆ ಮೂರನೇ ಸೋಲುಮೊದಲ ಚರಣದಲ್ಲಿ ಅಬ್ಬರಿಸಿದ್ದ ಬೆಂಗಲೂರು ಬುಲ್ಸ್‌ ತಂಡ ಎರಡನೇ ಚರಣದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತು ಕಂಗಾಲಾಗಿದೆ. ಮುಂದಿನ ಪಂದ್ಯಗಳಲ್ಲಿ ಆದರೂ ತಂಡ ಚೇತರಿಸಿಕೊಳ್ಳುವುದೇ ಕಾದು ನೋಡಬೇಕಿದೆ. ಇದಕ್ಕೂ ಮುನ್ನ ಬೆಂಗಾಲ್‌ ವಾರಿಯರ್ಸ್‌ ಮತ್ತು ಪಟನಾ ಪೈರೇಟ್ಸ್‌ ಎದುರು ಮುಗ್ಗರಿಸಿತ್ತು. ಎರಡನೇ ಚರಣದಲ್ಲಿ ತೆಲುಗು ಟೈಟನ್ಸ್‌ ಎದುರು ಬೆಂಗಳೂರು ತಂಡಕ್ಕೆ ಸಿಕ್ಕಿರುವ ಏಕಮಾತ್ರ ಗೆಲುವಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rRDuMS

ಮೇಕೆದಾಟು ಯೋಜನೆಗೆ 'ಪರಿಸರ ಅನುಮತಿ'ಯೊಂದೇ ಬಾಕಿ..! ಮಿಕ್ಕಿದ್ದೆಲ್ಲಾ ಸಲೀಸು..!

: ರಾಜಕೀಯ ತಿಕ್ಕಾಟದಿಂದ ಭಾರೀ ಸುದ್ದಿಯಲ್ಲಿರುವ ಮೇಕೆದಾಟು , ಅನುಮತಿಯೊಂದನ್ನು ಮಾತ್ರ ಕಾಯುತ್ತಿದೆ. ಉಳಿದಂತೆ ಭೂಸ್ವಾಧೀನ, ಸ್ಥಳಾಂತರ ಸೇರಿದಂತೆ ಯಾವುದೇ ಸಮಸ್ಯೆಗಳು ಯೋಜನೆಯನ್ನು ಬಾಧಿಸುತ್ತಿಲ್ಲ. ಒಮ್ಮೆ ಅನುಮತಿ ಸಿಕ್ಕರೆ ಕೆಲವೇ ವರ್ಷಗಳಲ್ಲಿ ಇದು ನಿರ್ಮಾಣವಾಗುತ್ತದೆ. ಯೋಜನೆಯಿಂದ 5 ಗ್ರಾಮಗಳು ಮುಳುಗಡೆಯಾಗಲಿದ್ದು, ಇಲ್ಲಿರುವ 200 ಕುಟುಂಬಗಳನ್ನು ಸ್ಥಳಾಂತರಿಸಬೇಕು. ರಾಮನಗರ ಜಿಲ್ಲೆಯ ಕಾಡಂಚಿನ ಮಡವಾಳ, ಕೊಂಗೆದೊಡ್ಡಿ, ಸಂಗಮ, ಮುತ್ತತ್ತಿ, ಬೊಮ್ಮಸಂದ್ರ ಗ್ರಾಮಗಳು ಮುಳುಗಡೆ ಹೊಂದಲಿವೆ. ಇತರೆ ನೀರಾವರಿ ಯೋಜನೆಗಳಿಗೆ ವ್ಯಕ್ತವಾಗುವ ಸ್ಥಳೀಯರ ವಿರೋಧದಂತೆ ಈ ಯೋಜನೆಗೆ ಸ್ಥಳೀಯರ ವಿರೋಧವೂ ಇಲ್ಲ. ಕಂದಾಯ ಮತ್ತು ಖಾಸಗಿ ಭೂ ಸ್ವಾಧೀನ ಪ್ರಮಾಣವು ತೀರಾ ಕಡಿಮೆ ಇರುವುದರಿಂದ ರಾಜ್ಯ ಸರಕಾರದ ಬೊಕ್ಕಸದ ಮೇಲೆ ಹೆಚ್ಚಿನ ಹೊರೆಯೂ ಇಲ್ಲ. ತಜ್ಞರ ಪ್ರಕಾರ 350 ಕೋಟಿ ರೂ. ವೆಚ್ಚದಲ್ಲಿ ಭೂ ಸ್ವಾಧೀನ ಮಾಡಬಹುದು. ಆದರೆ, ಅಂತಾರಾಜ್ಯ ನೀರಾವರಿ ವ್ಯಾಜ್ಯ ಆಗಿರುವುದರಿಂದ ಮತ್ತು ಕಾವೇರಿ ಐತೀರ್ಪಿನ ನಂತರ ಯೋಜನಾ ರೂಪುರೇಷೆ ಸಿದ್ದವಾಗಿದ್ದರಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ನಿಜವೆಂದರೆ, ಕಾವೇರಿ ತೀರ್ಪಿನಂತೆ ತಮಿಳುನಾಡಿಗೆ ಹರಿಯುವ ನೀರಿನ ಕೊರತೆಯೂ ಆಗುವುದಿಲ್ಲ. ಕಾವೇರಿ ನ್ಯಾಯಮಂಡಳಿ ತೀರ್ಪಿನ ಪುಟ ಸಂಖ್ಯೆ 13 ಹಾಗೂ ಷೆಡ್ಯೂಲ್‌ 9ರಲ್ಲಿ ಕಾವೇರಿ ವ್ಯಾಪ್ತಿಯಲ್ಲಿ ಯೋಜನೆಗಳನ್ನು ಜಾರಿ ತರಲು ಅವಕಾಶವಿದೆ. ಜತೆಗೆ ಎರಡೂ ರಾಜ್ಯಗಳಿಗೆ ಮೇಕೆದಾಟುವಿನಿಂದ ಅನುಕೂಲವೇ ಆಗಿದೆ. ಯೋಜನೆ ಅನುಷ್ಠಾನದಿಂದ ರಾಜಕೀಯ ಪಕ್ಷಗಳಿಗೆ ಸೀಮಿತವಾಗಿರದ ಅದರ ಫಲಾಫಲಗಳು ಬೆಂಗಳೂರು ಸೇರಿದಂತೆ ನಾನಾ ಭಾಗದ ಜನರಿಗೆ ಪರೋಕ್ಷವಾಗಿ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ. ಭವಿಷ್ಯದ ಕುಡಿವ ನೀರಿಗೆ ಮೂಲ: 2050ರ ವೇಳೆಗೆ ಬೆಂಗಳೂರಿನ ಮಹಾ ನಗರದ ಜನಸಂಖ್ಯೆ ಎರಡು ಕೋಟಿ ದಾಟಲಿದೆ. ಹಾಗೆಯೇ ದೇವನ ಹಳ್ಳಿ, ನೆಲಮಂಗಲ, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ತಾಲೂಕು ಕೇಂದ್ರಗಳೂ ಭವಿಷ್ಯದಲ್ಲಿ ಕುಡಿಯುವ ನೀರಿನ ಕೊರತೆ ಎದುರಿಸಲಿವೆ. ಒಂದು ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುತ್ತಿದ್ದ ಅರ್ಕಾವತಿ ನದಿ ಮೂಲ ಕೂಡ ಬತ್ತಿ ಹೋಗಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಪರ್ಯಾಯ ನೀರಿನ ಮೂಲಗಳು ಇಲ್ಲ. ಹೀಗಾಗಿ ಯೋಜನೆಯೊಂದೇ ಭರವಸೆಯಾಗಿದೆ. ಒತ್ತಡ ನಿರ್ವಹಣೆ: ಕಾವೇರಿ ನ್ಯಾಯ ಮಂಡಳಿ ತೀರ್ಪಿನಂತೆ 177.5 ಟಿಎಂಸಿ ನೀರನ್ನು ಕಾವೇರಿಗೆ ಹರಿಸಬೇಕಾದ ಸಂದರ್ಭದಲ್ಲಿ ನೀರಿನ ಕೊರತೆ ಉದ್ಭವಿಸಿದಾಗ ಕಬಿನಿ, ಕೆಆರ್‌ಎಸ್‌, ಹಾರಂಗಿ, ಹೇಮಾವತಿ ಜಲಾಶಯದಿಂದ ಕಾವೇರಿಗೆ ನೀರು ಹರಿಸಬೇಕಾದ ಅಗತ್ಯತೆ ಸೃಷ್ಟಿಯಾಗುತ್ತಿದೆ. ಮೇಕೆದಾಟು ಯೋಜನೆಯಿಂದ ಸಂಗ್ರಹಿಸಿಕೊಳ್ಳುವ 60 - 65 ಟಿಎಂಸಿ ನೀರನ್ನು ಅಗತ್ಯವಿದ್ದಾಗ ಕಾವೇರಿಗೆ ಹರಿಸಬಹುದು. ಇದರಿಂದ ಇತರೆ ಜಲಾಶಗಳ ಮೇಲಿನ ಒತ್ತಡ ನಿವಾರಿಸಬಹುದು. ಜತೆಗೆ ಈ ವ್ಯಾಪ್ತಿಯ ರೈತರಿಗೂ ಹೆಚ್ಚು ನೀರಾವರಿ ಕಲ್ಪಿಸಬಹುದು. ನೀರಿನ ಕೊರತೆ ಎದುರಾಗುವ ಕಾಲುವೆ ಕೊನೆ ಭಾಗದ ರೈತರಿಗೆ ನೀರು ಹರಿಸಬಹುದಾಗಿದೆ. ಇನ್ನೂ 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಬಳಿಕ ನೀರು ತಮಿಳುನಾಡಿಗೇ ಹರಿದು ಹೋಗುತ್ತದೆ. ಹೀಗಾಗಿ, ಸಂಕಷ್ಟದ ಸಂದರ್ಭದಲ್ಲಿ ಎರಡೂ ರಾಜ್ಯಗಳಿಗೂ ಈ ಯೋಜನೆ ಅನುಕೂಲ.


from India & World News in Kannada | VK Polls https://ift.tt/3u6zKJY

ಕೋವಿಡ್ ನಿಯಮ ಉಲ್ಲಂಘಿಸಿದ ಬಸವ ಕಲ್ಯಾಣದ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್

: ರಾಜ್ಯದಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿಧಾನಸಭಾ ಕ್ಷೇತ್ರದ ಶರಣು ಸಲಗಾರ ವಿರುದ್ದ ದಾಖಲಾಗಿದೆ. ಅಭಿಮಾನಿಗಳು ಹಾಗೂ ಬೆಂಬಲಿಗರ ಜೊತೆಗೆ ಶಾಸಕ ಶರಣು ಪಾದಯಾತ್ರೆ ನಡೆಸಿದ ಹಿನ್ನೆಲೆಯಲ್ಲಿ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಶಾಸಕ ಪಾದಯಾತ್ರೆ ನಡೆಸಿದ್ದು ಏಕೆ..?ಬಸವ ಕಲ್ಯಾಣ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ನಾರಾಯಣ ರಾವ್ ಅವರು ಕೋವಿಡ್‌ನಿಂದ ನಿಧನರಾದ ವೇಳೆ, ಬಸವ ಕಲ್ಯಾಣ ಕ್ಷೇತ್ರದಲ್ಲಿ ವಿಧಾನ ಸಭಾ ಉಪ ಚುನಾವಣೆ ಎದುರಾಗಿತ್ತು. ಆಗ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿತ್ತು. ಈ ವೇಳೆ ಬಸವ ಕಲ್ಯಾಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಶರಣು ಸಲಗಾರ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿತ್ತು. ಹರಕೆ ಹೊತ್ತಿದ್ದ ಅಭಿಮಾನಿಗಳು..! ವಿಧಾನ ಸಭಾ ಉಪ ಚುನಾವಣೆಯಲ್ಲಿ ಶರಣು ಸಲಗಾರ ಗೆಲುವು ಸಾಧಿಸಿದರೆ, ಬಸವ ಕಲ್ಯಾಣದಿಂದ ಗೋಕುಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದವರೆಗೆ ಶರಣು ಸಲಗಾರ ಅವರ ಜೊತೆ ಪಾದಯಾತ್ರೆ ಮಾಡುವುದಾಗಿ ಗ್ರಾಮಸ್ಥರು ಹರಕೆ ಹೊತ್ತಿದ್ದರು. ಅವರ ಮಹದಾಸೆಯಂತೆ ಶರಣು ಸಲಗಾರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು. ಬಳಿಕ ಗ್ರಾಮಸ್ಥರು ಹೊತ್ತಿದ್ದ ಹರಕೆ ತೀರಿಸಲು ಬಸವ ಕಲ್ಯಾಣದಿಂದ ಗೋಕುಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದವರೆಗೆ ಜನವರಿ 24 ರಂದು ಶಾಸಕ ಶರಣು ಸಲಗಾರ ಪಾದಯಾತ್ರೆ ಮಾಡಿದ್ದರು. ಶಾಸಕ ಸಲಗಾರ ಅವರ ಜೊತೆ ಬೆಂಲಿಗರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು. ರಾಜ್ಯದಲ್ಲಿ ಜಾರಿಯಲ್ಲಿರುವ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪ ಈ ವೇಳೆ ಕೇಳಿ ಬಂತು. ಬಸವ ಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗಾರ ಹಾಗೂ ಬೆಂಬಲಿಗರು ಪಾದಯಾತ್ರೆ ವೇಳೆ ಸಂಪೂರ್ಣವಾಗಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ, ಶಾಸಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಕುಂದಾ ಎಂಬುವರು ಬಸವ ಕಲ್ಯಾಣ ನಗರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡಿದ್ದ ಶಾಸಕರ ವಿರುದ್ಧ ಬಸವ ಕಲ್ಯಾಣ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್‌ನಲ್ಲಿ ಶಾಸಕರಷ್ಟೇ ಅಲ್ಲ, ಪಾದಯಾತ್ರೆ ಆಯೋಜನ ಮಾಡಿದ ಕೃಷ್ಣಾ ರೆಡ್ಡಿ ಸೇರಿದಂತೆ ಹಲವರ ಹೆಸರನ್ನೂ ನಮೂದಿಸಲಾಗಿದೆ. ಕೋವಿಡ್‌ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತವು ಮಾರ್ಗಸೂಚಿಯನ್ನು ಪಾಲನೆ ಮಾಡುವಂತೆ ಸಾರ್ವಜನಿಕರಿಗೆ ಕಾಲ ಕಾಲಕ್ಕೆ ಸೂಚನೆ ನೀಡುತ್ತಲೇ ಇದೆ. ಕೋವಿಡ್‌ ಹರಡುವಿಕೆ ತಡೆಯಲು ಅನೇಕ ನಿಯಮಗಳನ್ನೂ ಜಾರಿಗೆ ತರಲಾಗಿದೆ. ಆದ್ರೆ, ಶಾಸಕರೇ ಈ ನಿಯಮ ಉಲ್ಲಂಘಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಬೀದರ್ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದರೂ ಅನೇಕ ರಾಜಕೀಯ ಪಕ್ಷಗಳ ನಾಯಕರು ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/33R9MiQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...