ಬೆಂಗಳೂರು: ಕಳೆದ ಒಂದು ವರ್ಷದಿಂದ ಕಮೀಷನರ್ ಆಗಿ ಕಾರ್ಯ ನಿರ್ವಹಿಸಿದ್ದ ಅವರು ವರ್ಗಾವಣೆ ಆಗಿದ್ದಾರೆ. ನೂತನ ಬೆಂಗಳೂರು ನಗರ ಆಯುಕ್ತರಾಗಿ ಅವರು ನೇಮಕಗೊಂಡಿದ್ದಾರೆ. ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಆಗಿ ವರ್ಗಾವಣೆಗೊಂಡಿರುವ ಭಾಸ್ಕರ್ ರಾವ್ ಅವರು ಬೆಂಗಳೂರು ಜನತೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಭಾಸ್ಕರ್ ರಾವ್ ಅವರು ‘ಪ್ರೀತಿಯ ಬೆಂಗಳೂರಿಗರೇ, ನಗರ ಪೊಲೀಸ್ ಆಯುಕ್ತನಾಗಿದ್ದ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದೇನೆ. ನಾನು ಬೆಂಗಳೂರು ಕಮಿಷನರ್ ಆದಾಗಿನಿಂದ ನನಗೆ ಮತ್ತು ಬೆಂಗಳೂರು ನಗರ ಪೊಲೀಸರಿಗೆ ನಿರಂತರವಾಗಿ ಬೆಂಬಲ, ಸಹಕಾರ, ಸಹನೆ ಮತ್ತು ಸಹಾಯ ನೀಡಿದ್ದಾಕ್ಕಾಗಿ ನಗರದ ಪ್ರತಿಯೊಬ್ಬ ನಾಗರಿಕರಿಗೂ ನಾನು ಹೃದಯಾಂತರಾಳದ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ವೈರ್ಲೆಸ್ ಮೂಲಕ ನಗರ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದ ಭಾಸ್ಕರ್ ರಾವ್, ಎನ್ಆರ್ಸಿ ಮತ್ತು ಸಿಎಎ ಪ್ರತಿಭಟನೆ ವೇಳೆ ಸಾಕಷ್ಟು ಶ್ರಮ ಪಟ್ಟಿದ್ದೀರಿ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿರಂತರ ಪ್ರಯತ್ನ ಮಾಡಿದ್ದೀರಿ. ಕೋವಿಡ್ ನಿಯಂತ್ರಣಕ್ಕೂ ರಾತ್ರಿ ಹಗಲೆನ್ನದೆ ಶ್ರಮ ಹಾಕಿದ್ದೀರಿ. ಆಸ್ಪತ್ರೆಯಲ್ಲಿರುವ ಸಿಬ್ಬಂದಿ ಆದಷ್ಟು ಬೇಗ ಗುಣ ಮುಖರಾಗಿ ಮನೆ, ಮಕ್ಕಳು, ಕುಟುಂಬಕ್ಕೆ ಆದ್ಯತೆ ನೀಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು. ಇಂದು ಬೆಂಗಳೂರು ಜನತೆಗೂ ಕೂಡ ಧನ್ಯವಾದ ಹೇಳಿರುವ ಭಾಸ್ಕರ್ ರಾವ್, ಜನರ ಸಹಕಾರವನ್ನು ಸ್ಮರಿಸಿದ್ದಾರೆ. ಸದ್ಯ ನೂತನ ಕಮಿಷನರ್ ಆಗಿ ಆಯ್ಕೆಗೊಂಡಿರುವ ಕಮಲ್ ಪಂಥ್ ಆವರು, 1990ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಅವರು ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
from India & World News in Kannada | VK Polls https://ift.tt/318OTuk