ಚೊಚ್ಚಲ ಹಗಲು ರಾತ್ರಿ ಟೆಸ್ಟ್; ಭಾರತಕ್ಕೆ ಶಾಕ್ ನೀಡಲು ಬಾಂಗ್ಲಾ ಹುಲಿಗಳ ವಿಶೇಷ ತಯಾರಿ!

ಕೋಲ್ಕೊತಾ: ಭಾರತ ಹಾಗೂ ಬಾಂಗ್ಲಾದೇಶ ನಡುವಣ ಐತಿಹಾಸಿಕ ಹಗಲು ರಾತ್ರಿ ಟೆಸ್ಟ್ ಪಂದ್ಯವು ಕೋಲ್ಕೊತಾದ ಮೈದಾನದಲ್ಲಿ ನವೆಂಬರ್ 22ರಿಂದ 26ರ ವರೆಗೆ ನಡೆಯಲಿದೆ. ಭಾರತದ ಮೊಟ್ಟ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಇದಾಗಿದೆ. 19 ವರ್ಷಗಳ ಹಿಂದೆ ಬಾಂಗ್ಲಾದೇಶ ಟೆಸ್ಟ್ ಕ್ರಿಕೆಟ್‌ಗೆ ದಾಪುಗಾಲನ್ನಿಡಲು ಭಾರತ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಚೊಚ್ಚಲ ಡೇ ನೈಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇತ್ತಂಡಗಳ ಪಾಲಿಗೂ ಹೊನಲು ಬೆಳಕಿನ ಪಂದ್ಯವು ಹೊಸ ಅನುಭವವಾಗಿದೆ. ಇದರಂತೆ ಭಾರತಕ್ಕೆ ಶಾಕ್ ನೀಡಲು ಬಾಂಗ್ಲಾದೇಶ ತಂಡವು ವಿಶೇಷ ತರಬೇತಿಯಲ್ಲಿ ತೊಡಗಿಸಿಕೊಳ್ಳಲಿದೆ. ಭಾರತವನ್ನು ಭಾರತದ ನೆಲದಲ್ಲೇ ಮಣಿಸುವ ಗುರಿಯನ್ನು ಹೊಂದಿರುವ ಬಾಂಗ್ಲಾದೇಶ, ಹಗಲು ರಾತ್ರಿ ಪಂದ್ಯದಲ್ಲಿ ಇಬ್ಬನಿ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವಿಶೇಷ ತಯಾರಿಯನ್ನು ನಡೆಸುತ್ತಿದೆ. ನೀರಿನಲ್ಲಿ ಚೆಂಡನ್ನು ಮುಳುಗಿಸಿ ಅಭ್ಯಾಸವನ್ನು ನಡೆಸಲಿದೆ. ಈ ಮೂಲಕ ಮಂಜು ಬಿದ್ದರೂ ಪರಿಣಾಮಕಾರಿ ದಾಳಿ ಸಂಘಟಿಸುವ ಇರಾದೆಯಲ್ಲಿದೆ. ಈ ಬಗ್ಗೆ ಬಾಂಗ್ಲಾದೇಶ ಸ್ಪಿನ್ನರ್ ಮೆಹಿದಿ ಹಸನ್ ಹೇಳಿಕೆಯನ್ನು ನೀಡಿದ್ದಾರೆ. ಹಗರು ರಾತ್ರಿ ಟೆಸ್ಟ್ ಕ್ರಿಕೆಟ್ ಪಂದ್ಯ ನಮ್ಮೆಲ್ಲರ ಪಾಲಿಗೆ ಹೊಸ ಅನುಭವವಾಗಿದೆ. ಪ್ರತಿಯೊಬ್ಬರು ಡೇ-ನೈಟ್ ಟೆಸ್ಟ್ ಪಂದ್ಯ ಆಡಲು ಉತ್ಸಾಹಿತರಾಗಿದ್ದಾರೆ. ನಮ್ಮ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲ. ನಮ್ಮ ವೇಗಿಗಳು ಚೆಂಡನ್ನು ನೀರಿನಲ್ಲಿ ಮುಳುಗಿಸಿ ಅಭ್ಯಾಸ ನಡೆಸಲಿದ್ದಾರೆ. ಯಾಕೆಂದರೆ ಚೆಂಡು ಒದ್ದೆಯಾದರೆ ಸ್ಕಿಡ್ ಆಗಲಿದೆ ಎಂದರು. ನಾನು ಪಿಂಕ್ ಬಾಲ್‌ನಲ್ಲಿ ಅಭ್ಯಾಸ ನಡೆಸಿದ್ದು, ಉತ್ತಮ ಚಲನೆಯನ್ನು ಪಡೆಯುತ್ತಿದೆ. ರೆಡ್ ಬಾಲ್‌ಗಿಂತಲೂ ಹೆಚ್ಚು ಸ್ವಿಂಗ್ ಪಡೆಯಬಹುದು. ಹೆಚ್ಚು ಅಭ್ಯಾಸ ನಡೆಸದಿದ್ದರೂ ಸಾಧ್ಯವಾದಷ್ಟು ಪ್ರಾಕ್ಟಿಸ್ ಮಾಡಿ ಪಂದ್ಯಕ್ಕೆ ಸಜ್ಜಾಗುವ ಗುರಿ ಹೊಂದಿದ್ದೇವೆ ಎಂದರು. ಹಾಗೊಂದು ವೇಳೆ ಬ್ಯಾಟ್ಸ್‌ಮನ್‌ಗಳು ಸೆಟ್ ಆದರೆ ರನ್ ಗಳಿಸುವುದು ಸುಲಭ. ಮುಂಬರುವ ಡೇ ನೈಟ್ ಟೆಸ್ಟ್‌ಗಾಗಿ ಎಲ್ಲರೂ ಉತ್ಸಾಹಿತರಾಗಿದ್ದು, ಧನಾತ್ಮಕವಾಗಿ ಎದುರು ನೋಡುತ್ತಿದ್ದೇವೆ. ಪಿಂಕ್ ಬಾಲ್‌ನಿಂದ ಸ್ಪಿನ್ನರ್‌ಗಳಿಗೂ ಹೆಚ್ಚು ಬೌನ್ಸ್ ಸಿಗಬಹುದು. ನಾವೀಗ ಬೆಳಕಿನಡಿಯಲ್ಲಿ ಅಭ್ಯಾಸದ ಮೂಲಕ ಸಿದ್ಧತೆ ನಡೆಸುತ್ತಿದ್ದೇವೆ ಎಂದರು. ಇಂದೋರ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ದ್ವಿಶತಕದ ಬೆಂಬಲದೊಂದಿಗೆ ಭಾರತ ಇನ್ನಿಂಗ್ಸ್ ಹಾಗೂ 130 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. ಇದೀಗ ಐತಿಹಾಸಿಕ ಕೋಲ್ಕೊತಾ ಟೆಸ್ಟ್ ಪಂದ್ಯದಲ್ಲಿ ಸರಣಿ ಗೆಲುವಿನ ಇರಾದೆಯಲ್ಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QxibPC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...