ತೆಲಂಗಾಣದಲ್ಲಿ 7 ವರ್ಷದ ಬಾಲಕನನ್ನು ಅಪಹರಿಸಿದ್ದ 17 ವರ್ಷದ ಬಾಲಕ ಬಂಧನ!

ಹೈದರಾಬಾದ್‌: ತೆಲಂಗಾಣದ ಮೀರ್‌ಪೇಟ್‌ನಲ್ಲಿ 7 ವರ್ಷದ ಬಾಲಕನನ್ನು ಮಾಡಿದ ಆರೋಪ ಸಂಬಂಧ 17 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು, ಅಪಹರಣ ನಡೆದ ಮೂರೇ ಗಂಟೆಯೊಳಗೆ ಬಾಲಾಪರಾಧಿಯನ್ನು ಬಂಧಿಸಲಾಗಿದ್ದು, ವೀಕ್ಷಣೆ ಮನೆಗೆ ಕಳಿಸಲಾಗಿದೆ. ಸಾಫ್ಟ್‌ವೇರ್‌ ಎಂಜಿನಿಯರ್‌ ಜಿ. ರಾಜು ಎಂಬುವವರು ಭಾನುವಾರ ಪೊಲೀಸರನ್ನು ಭೇಟಿಯಾಗಿ, ತನ್ನ 2 ನೇ ತರಗತಿಯಲ್ಲಿ ಓದುತ್ತಿರುವ ಬಾಲಕನನ್ನು ಅಪಹರಿಸಲಾಗಿದೆ. ಅಲ್ಲದೆ, 7 ವರ್ಷದ ಬಾಲಕನ ಬಿಡುಗಡೆಗೆ 3 ಲಕ್ಷ ರೂ. ಹಣವನ್ನು ನೀಡಲು ಅಪಹರಣಕಾರ ಒತ್ತಾಯಿಸಿದ್ದಾನೆ. ಇನ್ನು, ಹಣ ನೀಡದಿದ್ದರೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿದರೆ ಬಾಲಕನನ್ನು ಕೊಲೆ ಮಾಡುವುದಾಗಿ ಅಪಹರಣಕಾರ ಬೆದರಿಕೆ ಹಾಕಿದ್ದಾರೆ ಎಂದೂ ಜಿ. ರಾಜು ಪೊಲೀಸ್‌ ಠಾಣೆಯಲ್ಲಿ ತಿಳಿಸಿದ್ದಾರೆ ಎಂದು ರಾಚಕೊಂಡ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು, 3 ಲಕ್ಷ ರೂ. ಬದಲು 1. 5 ಲಕ್ಷ ರೂ. ಹಣ ನೀಡುತ್ತೇನೆ ಎಂದು ಅಪಹರಣವಾಗಿರುವ ಬಾಲಕನ ತಂದೆ ಮನವಿ ಮಾಡಿಕೊಂಡರೂ ಸಹ ಅಪಹರಣಕಾರ ಒಪ್ಪಿಕೊಳ್ಳಲಿಲ್ಲ ಎಂದು ತಿಳಿದುಬಂದಿದೆ. ನಂತರ 25 ಸಾವಿರ ರೂ. ಅನ್ನು ನಗದು ರೂಪದಲ್ಲಿ ಹಾಗೂ ಉಳಿದ ಹಣವನ್ನು ಚೆಕ್‌ ರೂಪದಲ್ಲಿ ನೀಡಲು ರಾಜು ಒಪ್ಪಿಕೊಂಡಿದ್ದಾರೆ. ಬಳಿಕ ಪೊಲೀಸರ ಸೂಚನೆ ಮೇರೆಗೆ ಅರ್ಧಗಂಟೆಗೊಮ್ಮೆ ಅಪಹರಣಕಾರನಿಗೆ ರಾಜು ಕರೆ ಮಾಡುತ್ತಿದ್ದರು. ಈ ಹಿನ್ನೆಲೆ ಆರೋಪಿ ಯುವಕ ಬಾಲಕನ ತಂದೆಯೊಂದಿಗೆ ದೂರವಾಣಿಯಲ್ಲಿ ನಿರಂತರ ಸಂಪರ್ಕದಲ್ಲಿದ್ದ ಕಾರಣ ಪೊಲೀಸರು ಆತನನ್ನು ಟವರ್‌ ಲೊಕೇಷನ್‌ ಬಳಸಿ ಬಂಧಿಸಿದರು. ಅಪಹರಣಕಾರ ಕೇವಲ 17 ವರ್ಷ ಎಂದು ತಿಳಿದು ಪೊಲೀಸರೇ ಆಘಾತಕ್ಕೊಳಗಾಗಿದ್ದಾರೆ. ಬಾಲಾಪರಾಧಿ ನೀಡಿದ ಮಾಹಿತಿಯ ಆಧಾರದ ಮೇಲೆ, ಬಾಲಕನನ್ನು ಶ್ರೀ ಪ್ರಸನ್ನಂಜನೇಯ ದೇವಸ್ಥಾನದಿಂದ ರಕ್ಷಿಸಲಾಗಿದೆ. ಇನ್ನು, ತಾನು ವಿಶೇಷ ತರಗತಿ ಮುಗಿಸಿ ಮನೆಗೆ ಹೋಗಬೇಕಾದರೆ 7 ವರ್ಷದ ಬಾಲಕ 6 ವರ್ಷದ ಬಾಲಕನೊಂದಿಗೆ ಪಿಎಸ್‌ಆರ್‌ ಕಾಲನಿಯಲ್ಲಿ ಆಟವಾಡುತ್ತಿದ್ದುದ್ದನ್ನು ನೋಡಿದೆ. ನಂತರ, ತನ್ನೊಂದಿಗೆ ಆಟವಾಡಲು ಕರೆದು, ಆಟೋದಲ್ಲಿ ಬೇರೆ ಕಡೆ ಕರೆದುಕೊಂಡು ಹೋದೆ. ನಂತರ ದೇವಸ್ಥಾನದಲ್ಲಿ ಬಾಲಕನನ್ನು ಕೂರಿಸಿಕೊಂಡು ಆತನ ತಂದೆಯ ಫೋನ್‌ ನಂಬರ್ ಪಡೆದುಕೊಂಡು ಹಣಕ್ಕಾಗಿ ಒತ್ತಾಯ ಮಾಡಿದೆ ಎಂದು ಬಾಲಾಪರಾಧಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಪಹರಣಕಾರನು ಕರೆ ಮಾಡಿದಾಗ, ಅವನು ತನ್ನ ಧ್ವನಿಯನ್ನು ಬದಲಾಯಿಸಿದನು. ಎರಡು ಸಂದರ್ಭಗಳಲ್ಲಿ, ಅವನು ನನ್ನ ಮಗನನ್ನು ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡುವಂತೆ ಮಾಡಿದರು, '' ಎಂದು ರಾಜು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆದರೆ, ಬಾಲಾಪರಾಧಿ 7 ವರ್ಷದ ಬಾಲಕನನ್ನು ಕೆಟ್ಟದಾಗಿ ನೋಡಿಕೊಂಡಿಲ್ಲ ಅಥವಾ ಲಾಕ್‌ ಮಾಡಿ ಇಟ್ಟುಕೊಂಡಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಬಾಲಾಪರಾಧಿ ನೆರೆಹೊರೆಯವರೊಬ್ಬರಿಂದ 1 ಲಕ್ಷ ರೂ. ಹಣ ಕದ್ದ ಆರೋಪಕ್ಕೊಳಗಾಗಿದ್ದರು. ಆದರೆ, ಎರಡು ಕುಟುಂಬಗಳು ಆ ವಿಚಾರವನ್ನು ಪೊಲೀಸರಿಗೆ ತಿಳಿಸದೆ ಇತ್ಯರ್ಥಪಡಿಸಿಕೊಂಡಿದ್ದರು ಎಂಬುದೂ ಬೆಳಕಿಗೆ ಬಂದಿದೆ.


from India & World News in Kannada | VK Polls https://ift.tt/2KwMjGL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...