ಹೊಸದಿಲ್ಲಿ: ಸುಂಟರಗಾಳಿ, ಪ್ರವಾಹ, ಮಿಂಚು ಅಥವಾ ಭೂಕಂಪದ ರೀತಿ, ಬೆಂಕಿಯು ಬಾಹ್ಯ ಶಕ್ತಿಯ ಕೈವಾಡ ಇಲ್ಲದೆ ತನ್ನಷ್ಟಕ್ಕೆ ತಾನು ಅನಾಹುತ ಸೃಷ್ಟಿಸಲಾರದು. ಆದ್ದರಿಂದ ಬೆಂಕಿ ಅವಘಡವನ್ನು ‘’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನ ಮಾಡಿದೆ. ಅಲಹಾಬಾದ್‌ನ ಮದ್ಯ ತಯಾರಿಕಾ ಕಂಪನಿಯೊಂದರ ಗೋದಾಮಿಗೆ ಬೆಂಕಿ ಬಿದ್ದು ಆಗಿದ್ದ ಕೋಟ್ಯಂತರ ರೂ. ನಷ್ಟ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಬೆಂಕಿಯು ದೇವರಿಂದ ಆದ ಅನಾಹುತ. ಇದರಿಂದ ಕಂಪನಿಗೆ ನಷ್ಟ ಆಗಿದೆ. ಆದ್ದರಿಂದ ಕಂದಾಯ ಹೊಣೆಗಾರಿಕೆಯಿಂದ ವಿನಾಯಿತಿ ನೀಡಬೇಕು’ ಎಂದು ನ್ಯಾಯಾಲಯವನ್ನು ಕಂಪನಿ ಕೋರಿತ್ತು. ಕಂಪನಿಯ ಈ ಕೊರಿಕೆಯನ್ನು ಅಲಹಾಬಾದ್ ಹೈಕೋರ್ಟ್ ಮನ್ನಿಸಿ ತೀರ್ಪು ನೀಡಿತ್ತು. ನ್ಯಾಯಮೂರ್ತಿ ಎ.ಎಂ ಖನ್ವಿಲ್ಕರ್ ನೇತೃತ್ವದ ಸುಪ್ರೀಂ ನ್ಯಾಯಪೀಠ, ಹೈಕೋರ್ಟ್‌ನ ಈ ತೀರ್ಪನ್ನು ರದ್ದುಗೊಳಿಸಿತು. ‘ಬಾಹ್ಯ ಕೈವಾಡ ಇಲ್ಲದೇ ಘಟಿಸುವ ಮಿಂಚು, ಬಿರುಗಾಳಿ, ಪ್ರವಾಹದಂತಹ ನೈಸರ್ಗಿಕ ಸನ್ನಿವೇಶಗಳನ್ನು ದೇವರ ಕೃತ್ಯ ಎನ್ನಬಹುದು. ಆದರೆ, ಬೆಂಕಿಯನ್ನು ಅವುಗಳ ಸಾಲಿಗೆ ಸೇರಿಸಲಾಗದು. ಮೂರನೇ ವ್ಯಕ್ತಿಯ ಕೈವಾಡ ಇಲ್ಲದೇ ಬೆಂಕಿ ಘಟಿಸುವುದಿಲ್ಲ. ಆದ್ದರಿಂದ ಅದನ್ನು ದೇವರ ಕೃತ್ಯ ಎಂದು ಪರಿಗಣಿಸಲು ಬರುವುದಿಲ್ಲ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
from India & World News in Kannada | VK Polls https://ift.tt/3t7WdG9