ಪ್ರೀಮಿಯರ್‌ ಬ್ಯಾಡಿಂಟನ್‌ ಲೀಗ್‌ಗೂ ಮುನ್ನ ಶಾಕ್‌ ಕೊಟ್ಟ ಸೈನಾ ನೆಹ್ವಾಲ್‌!

ಹೊಸದಿಲ್ಲಿ: ವಿಶ್ವದ ಮಾಜಿ ನಂ.1 ಆಟಗಾರ್ತಿ ಹಾಗೂ ಭಾರತದ ಅತ್ಯಂತ ಅನುಭವಿ ಬ್ಯಾಡ್ಮಿಂಟನ್‌ ತಾರೆ , ಮುಂಬರುವ 5ನೇ ಆವೃತ್ತಿಯ () ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮೇದೋಜ್ಜೀರಕ ಗ್ರಂಥಿಯ ಉರಿಯೂತ ಸಮಸ್ಯೆ ಮತ್ತು ಸತತ ಗಾಯದ ಸಮಸ್ಯೆಗಳನ್ನು ಎದುರಿಸಿದ್ದ ಸೈನಾ ನೆಹ್ವಾಲ್‌, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸಾಲು ಸಾಲಾಗಿ ಆರಂಭಿಕ ಸುತ್ತುಗಳಲ್ಲೇ ಸೋತು ವೈಫಲ್ಯ ಅನುಭವಿಸಿದ್ದರು. ಹೀಗಾಗಿ ತಮ್ಮ ಲಯವನ್ನು ಮರಳಿ ಎಂದಿನ ಹಾದಿಗೆ ತಂದುಕೊಳ್ಳುವ ನಿಟ್ಟಿನಲ್ಲಿ ಅಗತ್ಯದ ವಿರಾಮ ತೆಗೆದುಕೊಂಡಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃ ಟ್ವಿಟರ್‌ ಖಾತೆ ಮೂಲಕ ಹೇಳಿಕೆ ನೀಡಿರುವ ಸೈನಾ, ಐದನೇ ಆವೃತ್ತಿಯ ಪಿಬಿಎಲ್‌ ಟೂರ್ನಿಯಿಂದ ಹೊರಗುಳಿದು ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳುವ ಕಡೆಗೆ ಶ್ರಮಿಸುವುದಾಗಿ ಹೇಳಿದ್ದು, ಇದರಿಂದ ಅಭಿಮಾನಿಗಳಿಗೆ ತಂದಿರುವ ಬೇಸರಕ್ಕೆ ಕ್ಷಮೆಯಾಚಿಸಿದ್ದಾರೆ. "ಎಲ್ಲರಿಗೂ ನಮಸ್ಕಾರ, 5ನೇ ಆವೃತ್ತಿಯ ಪಿಬಿಎಲ್‌ ಟೂರ್ನಿಯಲ್ಲಿ ನಾನು ಆಡುತ್ತಿಲ್ಲ. ಈ ವರ್ಷ ಹಲವು ಸಮಯ ನನ್ನ ಆರೋಗ್ಯ ಸ್ಥಿತಿ ಉತ್ತಮವಾಗಿರಲಿಲ್ಲ. ಮೇದೋಜ್ಜೀರಕ ಗ್ರಂಥಿಯ ಉರಿಯೂತ ಮತ್ತು ಗಾಯದ ಸಮಸ್ಯೆಗಳು ಕಾಡಿದ ಕಾರಣ ಪಿಬಿಎಲ್‌ ಸಮಯದಲ್ಲಿ ವಿಶ್ಋಆಂತಿ ತೆಗೆದುಕೊಂಡು ಉತ್ತಮ ರೀತಿಯ ತಯಾರಿ ನಡೆಸುವ ಕಡೆಗೆ ಗಮನ ನೀಡಲಿದ್ದೇನೆ. ನನ್ನೆಲ್ಲಾ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಮುಂದಿನ ವರ್ಷ ಪಿಬಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಶಯ ಹೊಂದಿದ್ದೇನೆ," ಎಂದು ಸೈನಾ ನೆಹ್ವಾಲ್‌ ಟ್ವೀಟ್‌ ಮಾಡಿದ್ದಾರೆ. ಸೈನಾ ನೆಹ್ವಾಲ್‌, ತಮ್ಮ ಕೊನೆಯ ಅಂತಾರಾಷ್ಟ್ರೀಯ ಟೂರ್ನಿಯಾದ ಹಾಂಕಾಂಗ್‌ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಚೀನಾದ ಎದುರಾಳಿ ಕಾಯ್‌ ಯಾನ್‌ ಯಾನ್‌ ಎದುರು 13-21, 20-21 ಅಂತರದ ಗೇಮ್‌ಗಳಿಂದ ಸುಲಭವಾಗಿ ಸೋಲೊಪ್ಪಿಕೊಂಡಿದ್ದರು. ಸದ್ಯ ವಿಶ್ವದ 9ನೇ ಶ್ರೇಯಾಂಕ ಹೊಂದಿರುವ ಸೈನಾ ನೆಹ್ವಾಲ್‌, ಕಳೆದ ಐದು ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಸೋತು ಸುಣ್ಣವಾಗಿದ್ದಾರೆ. ಈ ಮೂಲಕ ತಮ್ಮ ವೃತ್ತಿಬದುಕಿನಲ್ಲಿ ಹಿಂದೆಂದೂ ಕಂಡರಿಯದ ವೈಫಲ್ಯ ಎದುರಿಸಿದ್ದಾರೆ. ಇನ್ನು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಮೊದಲಿಗೆ ಹೈದರಾಬಾದ್‌ ಹಾಟ್‌ಶಾಟ್ಸ್‌ ಪರ ಆಡಿದ್ದ ಸೈನಾ, ಬಳಿಕ ತಂಡದ ಪರ ಸತತ 3 ವರ್ಷ ಆಡಿದ್ದರು. ಬಳಿಕ 2018-19ರ ಆವೃತ್ತಿಯಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಅಷ್ಟೇ ಮೊಪದಲಿಗೆ ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ ಎಂದು ಹೆಸರು ಪಡೆದಿದ್ದ ಟೂರ್ನಿಯಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಹೈದರಾಬಾದ್‌ ತಂಡಕ್ಕೆ ಸೈನಾ ಪ್ರಶಸ್ತಿ ಗೆಲುವು ತಂದುಕೊಟ್ಟಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OIu2I9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...