ಬೆಳಗಾವಿಗೆ ಯಡಿಯೂರಪ್ಪ ಭೇಟಿ: ಸಿಎಂ ಅಳಿಯ - ಪೊಲೀಸರ ನಡುವೆ ವಾಗ್ವಾದ, ರೈತರಿಂದ ಘೇರಾವ್‌

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗ್ಗೆ ಬೆಳಗಾವಿಗೆ ಭೇಟಿ ನೀಡಿದ್ದು, ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕುಶಲೋಪರಿ ವಿಚಾರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಪ್ರವಾಸಿ ಮಂದಿರಕ್ಕೆ ಶುಕ್ರವಾರ ಆಗಮಿಸಿದ ಸಿಎಂ ಯಡಿಯೂರಪ್ಪ ಅವರ ಅಳಿಯ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಸರ್ಕ್ಯೂಟ್ ಹೌಸ್ ನೊಳಗೆ ಕಾರಿನಲ್ಲಿ ಬಂದ ಸಿಎಂ ಅಳಿಯ ವಿರೂಪಾಕ್ಷ ಯಮಕನಮರಡಿ ಅವರ ಬಳಿ ಪೊಲೀಸರು ನಿಧಾನವಾಗಿ ಹೋಗಿ ಎಂದಿದ್ದಾರೆ. ಇದರಿಂದ ಕೆರಳಿದ ವಿರೂಪಾಕ್ಷ ಅವರು ಕಾರಿನಿಂದ ಇಳಿದು ಅವಾಚ್ಯ ಶಬ್ದ ಬಳಸಿ ನಿಂದಿಸಿದರೆನ್ನಲಾಗಿದೆ. ಇದರಿಂದ ಕೆರಳಿದ ಪೊಲೀಸ್ ಸಿಬ್ಬಂದಿ ಕೂಡ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ನಂತರ ಮಧ್ಯ ಪ್ರವೇಶಿಸಿದ ಬಿಜೆಪಿ ಮುಖಂಡರುಪರಿಸ್ಥಿತಿ ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ರೈತರು ಮುಖ್ಯಮಂತ್ರಿಗೆ ಘೇರಾವ್‌ ಹಾಕಲು ಯತ್ನಿಸಿದರು. ಘೇರಾವ್‌ಗೆ ಮುಂದಾದ ರೈತರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ವೇಳೆ ಘೇರಾವ್‌ಗೆ ಮುಂದಾದ ರೈತ ಮಹಿಳೆಯನ್ನು ಪೊಲೀಸರು ಬೀದಿಯಲ್ಲಿ ಹಿಡಿದು ಎಳೆದಾಡಿದ ಘಟನೆ ನಡೆಯಿತು. ಸುಮಾರು 15ಕ್ಕೂ ಹೆಚ್ಚು ರೈತರು ಮುಖ್ಯಮಂತ್ರಿ ವಿರುದ್ಧ ಘೇರಾವ್‌ಗೆ ಮುಂದಾಗಿದ್ದರು. ಪ್ರವಾಹ ಸಂತ್ರಸ್ತರ ಅಳಲು ಕೇಳಲು ಗಡಿ ಜಿಲ್ಲೆಗೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಬೆಳಗ್ಗೆ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ವಾಯುವಿಹಾರ ನಡೆಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ. ಬುಧವಾರ ಕ್ಯಾಬಿನೆಟ್ ಮೀಟಿಂಗ್ ಆದಮೇಲೆ ಭಾಗಕ್ಕೆ ಹೋಗಿ ಪ್ರವಾಹದಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಗಮನ ಹರಿಸುತ್ತೇವೆ. ರಸ್ತೆ ಸೇತುವೆಗಳು ದೊಡ್ಡ ಪ್ರಮಾಣದಲ್ಲಿ ಹಾನಿ ಆಗಿದೆ. ಈ ಬೃಹತ್‌ ಪ್ರಮಾಣದ ಹಾನಿಯನ್ನು ಸರಿಪಡಿಸಲು ದೊಡ್ಡ ಪ್ರಮಾಣದ ಅನುದಾನ ಬೇಕು. ಮತ್ತೊಂದು ಬಾರಿ ದೆಹಲಿಗೆ ಹೋಗಿ ಪರಿಹಾರ ಕೇಳುತ್ತೇನೆ ಎಂದು ಗುರುವಾರ ಹೇಳಿಕೆ ನೀಡಿದ್ದರು. ಇದರಂತೆ ಇಂದು ಬೆಳಗಾವಿಗೆ ಬೇಟಿ ನೀಡಿರುವ ಮುಖ್ಯಮಮತ್ರಿಗಳು ನೆರೆಸಂತ್ರಸ್ತರ ಅಹವಾಲು ಸ್ವೀಕರಿಸುತ್ತಿದ್ದಾರೆ. ಕೇಂದ್ರದವರು ಯಾವ ರಾಜ್ಯಕ್ಕೂ ಹಣ ಕೊಟ್ಟಿಲ್ಲ. ಹಾಗಂತ ನಾವು ಕಾದು ಕುಳಿತಿಲ್ಲ. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದೇವೆ. ಜತೆಗೆ ಜೆಡಿಎಸ್ , ಕಾಂಗ್ರೆಸ್ ಅತಿಯಾಗಿ ಟೀಕೆ ಮಾಡುತ್ತಿವೆ. ಕೇಂದ್ರ ಸರ್ಕಾರದಿಂದ ನಾಲ್ಕಾರು ದಿನದಲ್ಲಿ ಹಣ ಬಿಡುಗಡೆ ಆಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿ ಇದ್ದದ್ದರಿಂದ ಸ್ವಲ್ಪ ಕಾಲಾವಕಾಶ ಬೇಕಿದೆ. ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಬೇಕು ಎಂದು ಗುರುವಾರ ಹೇಳಿದ್ದರು.


from India & World News in Kannada | VK Polls https://ift.tt/2LJfyXU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...