ಕೊಹ್ಲಿ ವಿಕೆಟ್‌ ಎತ್ತಲು ರೂಪಿಸಿದ್ದ ರಣತಂತ್ರ ರಿವೀಲ್‌ ಮಾಡಿದ ರಬಾಡ!

ಕೇಪ್‌ ಟೌನ್‌: ವಿರುದ್ಧ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡುತ್ತಿದ್ದ ಟೀಮ್‌ ಇಂಡಿಯಾ ನಾಯಕ ವಿಕೆಟ್‌ ಉರುಳಿಸಲು ತಾವು ರೂಪಿಸಿದ್ದ ಗೇಮ್‌ ಪ್ಲಾನ್‌ ಅನ್ನು ಹರಿಣಗಳ ವೇಗಿ ಬಹಿರಂಗಪಡಿಸಿದ್ದಾರೆ. ಮಂಗಳವಾರ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ತಂಡ ಕಗಿಸೊ ರಬಾಡ(73ಕ್ಕೆ 4) ಹಾಗೂ ಮಾರ್ಕೊ ಯೆನ್ಸನ್‌(55ಕ್ಕೆ 3) ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 223 ರನ್‌ಗಳಿಗೆ ಆಲ್‌ಔಟ್‌ ಆಯಿತು. 79 ರನ್‌ ಗಳಿಸಿದ ಕೊಹ್ಲಿ ಭಾರತದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಬಳಿಕ ಪ್ರಥಮ ಇನಿಂಗ್ಸ್‌ ಶುರು ಮಾಡಿದ ದಕ್ಷಿಣ ಆಫ್ರಿಕಾ ಮೊದಲನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 17 ರನ್‌ ಗಳಿಸಿದೆ. ಮೊದಲನೇ ದಿನದಾಟದ ಬಳಿಕ ಮಾತನಾಡಿದ ರಬಾಡ, ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಶಿಸ್ತುಬದ್ಧ ಬ್ಯಾಟಿಂಗ್‌ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು. ಕೊಹ್ಲಿಗೆ ಲೈನ್‌ ಅಂಡ್‌ ಲೆನ್ತ್‌ ಅನ್ನು ಸ್ಥಿರವಾಗಿ ಬೌಲ್‌ ಮಾಡುತ್ತಿದ್ದೆ ಹಾಗೂ ಹೊರಗಡೆಗೆ ಚೆಂಡನ್ನು ಸ್ವಿಂಗ್‌ ಮಾಡುವ ಮೂಲಕ ಅವರನ್ನು ಶಾಟ್‌ಗೆ ಎಳೆಯುತ್ತಿದ್ದೆ ಎಂದು ಹೇಳಿದರು. "ವಿರಾಟ್‌ ಕೊಹ್ಲಿಗೆ ನನ್ನ ಯೋಜನೆ ಲೈನ್ ಅಂಡ್‌ ಲೆನ್ತ್‌ ಹಾಕುವುದಾಗಿತ್ತು. ಆಫ್‌ ಸ್ಟಂಪ್ ಮೇಲೆ ಪಿಚ್‌ ಮಾಡಿ ಹೊರಗಡೆಗೆ ಸ್ವಿಂಗ್‌ ಮಾಡುತ್ತಿದ್ದೆ. ಅದರಂತೆ ಅವರು ಬಹಳಾ ತಾಳ್ಮೆಯಿಂದ ಆಡುತ್ತಿದ್ದರು ಹಾಗೂ ಹೊರಗಡೆ ಇರುವ ಎಸೆತಗಳನ್ನು ವಿಕೆಟ್‌ ಕೀಪರ್‌ಗೆ ಬಿಟ್ಟಿದ್ದರು. ಆದರೆ, ನನ್ನ ಯೋಜನೆಯಂತೆ ಕೊಹ್ಲಿ ಅಂತಿಮ ಹಂತದಲ್ಲಿ ವಿಕೆಟ್‌ ಒಪ್ಪಿಸಿದರು. ಏನೇ ಆಗಲಿ ಕೊಹ್ಲಿ ಬ್ಯಾಟಿಂಗ್ ಅದ್ಭುತವಾಗಿತ್ತು," ಎಂದು ಶ್ಲಾಘಿಸಿದರು. ಮೊದಲನೇ ದಿನ ಕಗಿಸೊ ರಬಾಡ ಅವರ 55 ಎಸೆತಗಳನ್ನು ವಿರಾಟ್‌ ಕೊಹ್ಲಿ ಎದುರಿಸಿದ್ದರು ಹಾಗೂ ಕೇವಲ 24 ರನ್‌ ಕಲೆ ಹಾಕಿದ್ದರು. ಬಲಗೈ ವೇಗಿಗೆ ವಿಕೆಟ್‌ ಒಪ್ಪಿಸುವ ಮುನ್ನ ವಿರಾಟ್‌ ಮೂರು ಬೌಂಡರಿಗಳನ್ನು ಗಳಿಸಿದ್ದರು. ಮೊದನೇ ದಿನದಾಟದ ಬಗ್ಗೆ ಮಾತನಾಡಿ, "ಪಂದ್ಯ ಸದ್ಯ ಸಮಯೋಜಿತವಾಗಿದೆ. ನಿಸ್ಸಂಶಯವಾಗಿ ನಾವು ಕೂಡ ಟಾಸ್‌ ಗೆಲ್ಲುವುದನ್ನು ಇಷ್ಟಪಡುತ್ತೇವೆ. ಇದರ ಹೊರತಾಗಿಯೂ ಎದುರಾಳಿ ತಂಡವನ್ನು 223 ರನ್‌ಗಳಿಗೆ ಆಲ್‌ಔಟ್‌ ಮಾಡಿದ್ದೇವೆ. ಇನ್ನೇನಿದ್ದರೂ ನಮ್ಮ ಬ್ಯಾಟ್ಸ್‌ಮನ್‌ಗಳು ಉತ್ತಮ ಮೊತ್ತ ಕಲೆ ಹಾಕಬೇಕಾಗಿದೆ," ಎಂದು ಮಾಧ್ಯಮ ಸಂಭಾಷಣೆಯಲ್ಲಿ ರಬಾಡ ತಿಳಿಸಿದ್ದಾರೆ. "ನಮ್ಮ ದೊಡ್ಡ ಶಕ್ತಿಯೆಂದರೆ ಪಟ್ಟುಬಿಡದೆ ಆಡುವುದು ಹಾಗೂ ನಮ್ಮನ್ನು ತ್ವರಿತವಾಗಿ ಕಲಿಯಲು ಒತ್ತಾಯಿಸುವುದು. ಎದುರಾಳಿ ತಂಡದ ವಿರುದ್ಧ ಆಡುತ್ತಿರುವಾಗ ನೀವು ಯಾವಾಗಲೂ ಕಲಿಯುತ್ತಲೇ ಇರುತ್ತೀರಿ. ಭವಿಷ್ಯದಲ್ಲಿ ಇದು ನಮಗೆ ತುಂಬಾ ನೆರವಾಗುತ್ತದೆ," ಎಂದರು. ನ್ಯೂಲೆಂಡ್ಸ್‌ ಪರಿಸ್ಥಿತಿಗಳ ಬಗ್ಗೆ ಪ್ರತಿಕ್ರಿಯಿಸಿ, "ಇಲ್ಲಿನ ವಿಕೆಟ್‌ ಸ್ಪರ್ಧಾತ್ಮಕವಾಗಿದೆ. ಹಾಗಾಗಿ ಇಲ್ಲಿನ ಪರಿಸ್ಥಿತಿಗಳ ಮೇಲೆ ನಮಗೆ ಯಾವುದೇ ನಿಯಂತ್ರಣವಿಲ್ಲ. ಬ್ಯಾಟ್ಸ್‌ಮನ್‌ಗಳು ಮನಸು ಮಾಡಿದರೆ ಇಲ್ಲಿ ದೂಳೆಬ್ಬಿಸಬಹುದು. ಹಾಗಾಗಿ ಇದು ಅತ್ಯಂತ ಪರಿಪೂರ್ಣ ಟೆಸ್ಟ್‌ ಪಂದ್ಯವಾಗಲಿದೆ ಎಂದು ಭಾವಿಸುತ್ತೇನೆ. ನನಗೆ ಅನಿಸಿದ ಹಾಗೆ ಎರಡನೇ ದಿನವೂ ಪಿಚ್‌ ಬದಲಾವಣೆಯಾಗುವುದಿಲ್ಲ," ಎಂದು ಕಗಿಸೊ ರಬಾಡ ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3A3LRIZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...