ಮಹಾಬಲೇಶ್ವರ ಕಲ್ಕಣಿ, ಬೆಂಗಳೂರು: ರಿಚಾರ್ಜ್ ಮಾಡಿ 60 ದಿನಗಳೊಳಗೆ ಒಂದು ಬಾರಿಯೂ ಪ್ರಯಾಣ ಮಾಡಿದಿದ್ದರೆ ಅಥವಾ 7 ದಿನಗಳ ಒಳಗೆ ಕಾರ್ಡ್ ಪ್ರವೇಶ ದ್ವಾರದಲ್ಲಿ ಎಂಟ್ರಿ ಮಾಡಿಲ್ಲವಾದರೆ ರಿಚಾರ್ಜ್ ಮಾಡಿದ ಪೂರ್ಣ ಕಡಿತವಾಗುತ್ತದೆ. ಬಿಎಂಆರ್‌ಸಿಎಲ್ ರೂಪಿಸಿರುವ ಈ ಅವೈಜ್ಞಾನಿಕ ಕ್ರಮಕ್ಕೆ ಮೆಟ್ರೊ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಂಆರ್‌ಸಿಎಲ್ ನಿಯಮದ ಪ್ರಕಾರ, ಮೆಟ್ರೊ ಸ್ಮಾಟ್ ಕಾರ್ಡ್ ರಿಚಾರ್ಜ್ ಮಾಡಿ 60 ದಿನಗಳ ಒಳಗೆ ಒಂದು ಬಾರಿ ಕಡ್ಡಾಯವಾಗಿ ಪ್ರಯಾಣ ಮಾಡಲೇಬೇಕು. ಇಲ್ಲದಿದ್ದರೆ ನಿಮ್ಮ ಮೆಟ್ರೊ ಕಾರ್ಡ್‌ನಲ್ಲಿ ರಿಚಾರ್ಜ್ ಮಾಡಿದ ಹಣ ಕಡಿತವಾಗುತ್ತದೆ. ಹಣವಿದ್ದಾಗ ಕೆಲವರು 500 ರೂ., ಸಾವಿರ ರೂ. ಮೆಟ್ರೊ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡುತ್ತಾರೆ. ಅನಿವಾರ್ಯ ಕಾರಣಗಳಿಂದ ಎರಡು ತಿಂಗಳು ಮೆಟ್ರೊದಲ್ಲಿ ಪ್ರಯಾಣ ಮಾಡಲಾಗದೇ ಇದ್ದರೆ ಆ ಹಣ ಪೂರ್ಣ ಮಾಯವಾಗುತ್ತದೆ. ಪ್ರಯಾಣ ಮಾಡದೇ ಹಣ ಕಡಿತವಾಗುವುದರ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುವುದು ಹೀಗೆ. ''ರಿಚಾರ್ಜ್ ಮಾಡಿದ 7 ದಿನಗಳಲ್ಲಿ ಒಂದು ಬಾರಿ ಪ್ರಯಾಣ ಮಾಡಬೇಕು. ಪ್ರಯಾಣ ಮಾಡಲು ಸಾಧ್ಯವಿಲ್ಲವಾದರೆ 60 ದಿನಗಳ ಕಾಲಾವಕಾಶ ಇರುತ್ತದೆ. 60 ದಿನಗಳ ಒಳಗಾಗಿ ಕಸ್ಟಮರ್ ಕೇರ್ ಸೆಂಟರ್‌ನಲ್ಲಿ ಅಥವಾ ಟಾಪ್ ಅಪ್ ಟರ್ಮಿನಲ್‌ನಲ್ಲಿ ಕಾರ್ಡ್ ಅನ್ನು ಸಕ್ರಿಯಗೊಳಿಸಿಕೊಳ್ಳಬೇಕು. ಸರ್ವರ್ ಸಾಮರ್ಥ್ಯ 60 ದಿನಗಳಿಗೆ ಮಾತ್ರ ಸೀಮಿತವಾಗಿರುವುದರಿಂದ, ನಿಗದಿತ ದಿನಗಳ ನಂತರ ತನ್ನಷ್ಟಕ್ಕೆ ತಾನೇ ಹಣ ಕಡಿತವಾಗುತ್ತದೆ ಎನ್ನುತ್ತಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಮೆಟ್ರೊ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆ ಸಂದರ್ಭದಲ್ಲಿ ಹೊಸದಾಗಿ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿದ ಎಷ್ಟೋ ಪ್ರಯಾಣಿಕರಿಗೆ, ಪ್ರಯಾಣ ಮಾಡುವುದಕ್ಕೆ ಅವಕಾಶವೇ ಇಲ್ಲದಂತಾಯಿತು. ರಿಚಾರ್ಜ್ ಮಾಡಿದ ಹಣವನ್ನು ಹೀಗೆ ಏಕಾಏಕಿ ಕಡಿತ ಮಾಡಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ''ರಿಚಾರ್ಜ್ ಮಾಡಿ 60 ದಿನಗಳ ಒಳಗೆ ಪ್ರಯಾಣ ಮಾಡಲೇಬೇಕು ಎನ್ನುವ ಬಿಎಂಆರ್‌ಸಿಎಲ್ ನಿಯಮ ತೀರಾ ಬಾಲಿಶವಾಗಿದೆ. ಎಲ್ಲಿಗಾದರೂ ತಕ್ಷಣಕ್ಕೆ ಹೊರಡಬೇಕೆಂದಿದ್ದರೆ ಕೂಡಲೇ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಲಾಗುವುದಿಲ್ಲ. ಈ ಉದ್ದೇಶದಿಂದ ಹಣ, ಸಮಯವಿದ್ದಾಗ ಕಾರ್ಡ್ ರಿಚಾರ್ಜ್ ಮಾಡಿಟ್ಟುಕೊಳ್ಳುತ್ತೇವೆ. ಅನಿವಾರ್ಯ ಕಾರಣಗಳಿಂದ ಕಾರ್ಡ್ ಬಳಸಿಲ್ಲವಾದರೆ ಪೂರ್ಣ ಹಣ ಕಡಿತಗೊಳಿಸುವುದು ನ್ಯಾಯಸಮ್ಮತವಲ್ಲ'' ಎನ್ನುತ್ತಾರೆ ಮೆಟ್ರೊ ಪ್ರಯಾಣಿಕ ಪವನ್. ಈ ನಿಯಮದಿಂದ ಏನೇನು ತೊಂದರೆ ಮೆಟ್ರೊ ಸ್ಮಾರ್ಟ್ ಕಾರ್ಡ್‌ನಲ್ಲಿ ದೊಡ್ಡ ಮೊತ್ತ ಮಾಡಿಸುವವರ ಸಂಖ್ಯೆ ಕಡಿಮೆಯಾಗುತ್ತದೆ ಕಾರ್ಡ್ ರಿಚಾರ್ಜ್ ಮಾಡಿಟ್ಟುಕೊಂಡವರಿಗೆ 2-3 ತಿಂಗಳು ಬಳಸಲು ಸಾಧ್ಯವಾಗದಿದ್ದರೆ ಆ ಹಣ ನಷ್ಟವಾಗುತ್ತದೆ ಅಡ್ವಾನ್ಸ್ ಆಗಿ ಮೆಟ್ರೊ ಕಾರ್ಡ್ ರಿಚಾರ್ಜ್ ಮಾಡಿಕೊಟ್ಟುಕೊಳ್ಳುವವರ ಸಂಖ್ಯೆಯೂ ಇಳಿಕೆಯಾಗುತ್ತದೆ ಬಿಸಿನೆಸ್ ವರ್ಗದವರು ಮೆಟ್ರೊ ಸ್ಮಾರ್ಟ್ ಕಾರ್ಡ್ ಬಳಕೆ ಕಡಿಮೆ ಮಾಡಬಹುದು ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಸಿದ ಬಳಿಕ ಬೇರೆ ಊರುಗಳಿಗೆ ಹೋದವರು, ಅನಾರೋಗ್ಯ ಪೀಡಿತರು, ನಾನಾ ಕಾರಣಗಳಿಗೆ ಬಳಕೆ ಮಾಡಲು ಸಾಧ್ಯವಾಗದವರಿಗೆ ನಷ್ಟ. ಪ್ರಯಾಣಿಕರ ಒತ್ತಾಯವೇನು ?
- ಮೆಟ್ರೊ ಕಾರ್ಡ್ ರಿಚಾರ್ಜ್ ಮಾಡಿದ ಹಣ ಬಳಕೆ ಮಾಡುವವರೆಗೂ ಕಾರ್ಡ್‌ನಲ್ಲೇ ಇರಬೇಕು.
- ಬಿಎಂಆರ್‌ಸಿಎಲ್ ಕೂಡಲೇ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿಮಯ ಬದಲಾವಣೆ ಮಾಡಬೇಕು
- ಹೆಚ್ಚಿನ ಮೊತ್ತ ರಿಚಾರ್ಜ್ ಮಾಡಿಸುವುದರಿಂದ ಬಿಎಂಆರ್‌ಸಿಎಲ್‌ಗೆ ಹೆಚ್ಚಿನ ಹಣ ಸಿಗಲಿದೆ
- ಪ್ರವಾಸಿಗರು, ಅಪರೂಪಕ್ಕೆ ಮೆಟ್ರೊ ರೈಲು ಬಳಕೆ ಮಾಡುವವರಿಗೆ ಅನುಕೂಲವಾಗುವಂತೆ ನಿಯಮ ರೂಪಿಸಬೇಕು.
from India & World News in Kannada | VK Polls https://ift.tt/3tdIfT7