ಉಪಗ್ರಹದ ಮೂಲಕ ಸೆರೆಯಾಯ್ತು ಲಡಾಖ್ ಗಡಿಯಲ್ಲಿ ಚೀನಿ ಸೈನ್ಯ ಜಮಾವಣೆ ಚಿತ್ರಗಳು!

ಲಡಾಖ್: ಗಡಿಯಲ್ಲಿ ಭಾರತ-ಚೀನಾ ಸೈನಿಕರ ಭೀಕರ ಹಿಂಸಾತ್ಮಕ ಘರ್ಷಣೆ ಬಳಿಕ, ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಈಗಾಗಲೇ ಹಲವು ಸುತ್ತಿನ ಮಿಲಿಟರಿ ಮಾತುಕತೆಗಳು ನಡೆದಿವೆ. ಗಡಿಯಿಂದ ಸೈನ್ಯ ಹಿಂಪಡೆಯುವ ಈ ಹಿಂದಿನ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡುವುದು ಭಾರತದ ಇರಾದೆಯಾಗಿದೆ. ಅದರಂತೆ ಪ್ರತಿ ಬಾರಿಯ ಉನ್ನತ ಸೇನಾಧಿಕಾರಿಗಳ ಸಭೆಯಲ್ಲೂ ಸೈನ್ಯವನ್ನು ಹಿಂಪಡೆಯುವ ಕುರಿತು ಭಾರತೀಯ ಸೇನೆ ಪ್ರಸ್ತಾವನೆ ಮಂಡಿಸುತ್ತಿದೆ. ಆದರೆ ಮಿಲಿಟರಿ ಮಾತುಕತೆಗಳಲ್ಲಿ ಸೈನ್ಯ ಹಿಂಪಡೆಯುವ ಕುರಿತು ಮಾತನಾಡುವ ಚೀನಾ ಸೇನೆ, ಮಾತುಕತೆ ಬಳಿಕ ಮತ್ತೆ ಸೈನ್ಯ ಜಮಾವಣೆಗೊಳಿಸುವ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದೆ. ಇದಕ್ಕೆ ಪುಷ್ಠಿ ಎಂಬಂತೆ ಇತ್ತೀಚಿಗೆ ಘರ್ಷಣೆ ನಡೆದ ಸಮೀಪದಲ್ಲೇ ಇನ್ನೂ ಚೀನಾ ಪಡೆಗಳು ಬೀಡು ಬಿಟ್ಟಿರುವ ಚಿತ್ರಗಳನ್ನು ಉಪಗ್ರಹದ ಮೂಲಕ ಸೆರೆ ಹಿಡಿಯಲಾಗಿದೆ. ಗಲ್ವಾನ್ ವ್ಯಾಲಿ ಸುತ್ತಮುತ್ತ ಭಾರೀ ಸಂಖ್ಯೆಯಲ್ಲಿ ಚೀನಿ ಸೈನಿಕರು ಜಮಾವಣೆಗೊಂಡಿರುವುದು ಹಾಗೂ ಗಡಿಯ ಅತ್ಯಂತ ಸಮೀಪದಲ್ಲಿ ಕ್ಯಾಂಪ್ ಹಾಕಿರುವುದು ಉಪಗ್ರಹದ ಮೂಲಕ ಸೆರೆಹಿಡಿಯಲಾದ ಚಿತ್ರಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಕಳೆದ ಜೂನ್ 15ರಂದು ನಡೆದಿದ್ದ ಘರ್ಷಣೆ ವೇಳೆ ಭಾರತೀಯ ಸೈನಿಕರಿಂದ ಧ್ವಂಸಗೊಳಿಸಿದ್ದ ಚೆಕ್‌ಪೋಸ್ಟ್‌ನ್ನು ಮತ್ತೆ ಪುನರ್ ನಿರ್ಮಿಸಿರುವ ಚೀನಿ ಸೇನೆ, ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಇರುವ ಪೆಟ್ರೋಲಿಂಗ್ ಪಾಯಿಂಟ್ 14ರ ಬಳಿ ಮತ್ತೆ ಸೈನಿಕರನ್ನು ಜಮಾವಣೆಗೊಳಿಸಿದೆ. ಒಟ್ಟಿನಲ್ಲಿ ಚೀನಾಗೆ ಇಷ್ಟು ಬೇಗ ಗಡಿ ಸಮಸ್ಯೆ ಇತ್ಯರ್ಥವಾಗುವುದು ಬೇಕಿಲ್ಲ ಎಂಬುದು ಚೀನಾ ಸೇನೆಯ ಚಲನವಲನಗಳಿಂದಲೇ ಸ್ಪಷ್ಟವಾಗುತ್ತಿದೆ. ಇದಕ್ಕೆಲ್ಲಾ ಭಾರತ ಸೂಕ್ತ ತಿರುಗೇಟು ನೀಡಲಿರುವುದು ಅಷ್ಟೇ ಸತ್ಯ.


from India & World News in Kannada | VK Polls https://ift.tt/2YxROfK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...