ಚೀನಾ ವಸ್ತುಗಳ ಬಳಕೆ ನಿಷೇಧಿಸುವಂತೆ ಯೋಧನ ಮನವಿ: ವಿಡಿಯೋ ವೈರಲ್!

ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ಹಿಂಸಾತ್ಮಕ ಘರ್ಷಣೆ ಬಳಿಕ ಭಾರತದಲ್ಲಿ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪದೇ ಪದೇ ಗಡಿ ತಕರಾರು ತೆಗೆಯುವ ಚೀನಾಗೆ ವಾಣಿಜ್ಯ ಕ್ಷೇತ್ರದಲ್ಲಿ ಹೊಡತ ನೀಡಲು ಆಗ್ರಹ ಕೇಳಿ ಬರುತ್ತಿದೆ. ಅದರಂತೆ ಚೀನಿ ವಸ್ತುಗಳ ಆಮದು ಮತ್ತು ಬಳಕೆ ಮೇಲೆ ನಿಷೇಧ ಹೇರುವಂತೆ ಒತ್ತಾಯ ಕೇಳಿ ಬಂದಿದ್ದು, ಚೀನಾ ವಸ್ತುಗಳ ಬಳಕೆಯ ವಿರುದ್ಧ ದೇಶದಲ್ಲಿ ಅಭಿಯಾನವೇ ಶುರುವಾಗಿದೆ. ಈ ಆಭಿಯಾನಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರ ಕೂಡ ಹಂತ ಹಂತವಾಗಿ ಚೀನಾ ವಸ್ತುಗಳ ಆಮದು ಪ್ರಮಾಣವನ್ನು ತಗ್ಗಿಸುವ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ. ಈ ಮಧ್ಯೆ ಭಾರತೀಯ ಸೇನೆಯ ಯೋಧನೋರ್ವ ಚೀನಾ ವಸ್ತುಗಳ ಬಳಕೆಯನ್ನು ನಿಲ್ಲಿಸುವಂತೆ ಜನರಲ್ಲಿ ಮನವಿ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಚೀನಾ ಗಡಿಗೆ ಕರ್ತವ್ಯಕ್ಕೆ ತೆರಳುತ್ತಿದ್ದ ಯೋಧ, ಗಡಿಯಲ್ಲಿ ಸೈನಿಕರು ಎದುರಿಸುತ್ತಿರುವ ಕಷ್ಟಗಳ ಕುರಿತು ವಿಡಿಯೋ ಮೂಲಕ ತಿಳಿಸಿದ್ದಾರೆ. ದೇಶಕ್ಕಾಗಿ ನಾವು ಇಷ್ಟೊಂದು ಕಷ್ಟ ಎದುರಿಸುತ್ತಿದ್ದು, ನೀವು ಚೀನಾ ವಸ್ತುಗಳ ಬಳಕೆಯನ್ನು ನಿಷೇಧಿಸುವ ಮೂಲಕ ಈ ಯುದ್ಧದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಚೀನಿ ವಸ್ತುಗಳು, ಚೀನಾ ಮೊಬೈಲ್ ಮತ್ತು ಆಪ್‌ಗಳ ಬಳಕೆಯನ್ನು ಕಡಿಮೆ ಮಾಡಿ ಎಂದು ದೇಶವಾಸಿಗಳಲ್ಲಿ ಮನವಿ ಮಾಡಿರುವ ಈ ಯೋಧ, ಚೀನಾಗೆ ಬುದ್ಧಿ ಕಲಿಸಲು ನಾವೆಲ್ಲಾ ಒಟ್ಟಾಗಿ ಹೋರಾಡಬೇಕಿದೆ ಎಂದು ಕರೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ.


from India & World News in Kannada | VK Polls https://ift.tt/2CJPkTh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...