ಜಿನೆವಾ: ಹಾಂಕಾಂಗ್ ವಿವಾದಾತ್ಮಕ ಕಾನಾನನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ, 27 ರಾಷ್ಟ್ರಗಳು ಚೀನಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿವೆ. ಹಾಂಕಾಂಗ್ನಲ್ಲಿ ಜಾರಿಗೆ ತರಲಾಗುತ್ತಿರುವ ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾನೂನು ಚೀನಾದ ಏಕಪಕ್ಷೀಯ ಹಾಗೂ ಆಕ್ರಮಣಕಾರಿ ನಡೆ ಎಂದು ಈ 27 ರಾಷ್ಟ್ರಗಳು ಮುಂದೆ ಅಪಸ್ವರ ಎತ್ತಿವೆ. ಪ್ರಮುಖವಾಗಿ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಹಾಗೂ ಜಪಾನ್ ಸೇರಿದಂತೆ ಒಟ್ಟು 27 ರಾಷ್ಟ್ರಗಳು ಚೀನಾದ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿದ್ದು, ಚೀನಾ ಜಾರಿಗೆ ತರಲು ಉದ್ದೇಶಿಸಿರುವ ಕಾನೂನು ಹಾಂಕಾಂಗ್ ಜನತೆಯ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ. ಇನ್ನು ಹಾಂಕಾಂಗ್ ವಿಷಯದಲ್ಲಿ ಚೀನಾ ವಿರುದ್ಧ ಜಾಗತಿಕ ಒಕ್ಕೂಟವೊಂದು ರಚೆನಯಾಗುತ್ತಿರುವ ಲಕ್ಷಣ ಕಂಡುಬರುತ್ತಿದ್ದು, ಅಮೆರಿಕದ ಬಳಿಕ ಒಂದೊಂದೇ ರಾಷ್ಟ್ರಗಳು ಚೀನಾ ವಿರುದ್ಧ ಅಪಸ್ವರ ಎತ್ತುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದೇ ವಿರೋಧದ ಧ್ವನಿ ಚೀನಾದ ಮಿಲಿಟರಿ ವರ್ತನೆ ಮೇಲೂ ಕೇಳಿ ಬರುವ ಸಾಧ್ಯತೆಯೂ ಇದ್ದು, ಹಾಗೆನಾದರೂ ಆದರೆ ಗಡಿ ತಕರಾರು ವಿಷಯದಲ್ಲಿ ಭಾರತದ ವಾದಕ್ಕೆ ಮತ್ತಷ್ಟು ಬಲ ಬರಲಿರುವುದು ಖಚಿತ.
from India & World News in Kannada | VK Polls https://ift.tt/2CWU206