ಹೊಸದಿಲ್ಲಿ: ಹಾಗೂ ಸೇರಿದಂತೆ ಅನುಭವಿ ಆಟಗಾರರನ್ನು ದಕ್ಷಿಣ ಆಫ್ರಿಕಾದ 2007ರ ಟಿ20 ವಿಶ್ವಕಪ್ ಟೂರ್ನಿಗೆ ತೆರಳದಂತೆ ಅಂದಿನ ಭಾರತ ತಂಡದ ನಾಯಕ ತಡೆದಿದ್ದರು ಎಂಬ ಮಹತ್ವದ ವಿಷಯವನ್ನು ಟೀಮ್ ಇಂಡಿಯಾ ಮಾಜಿ ಕೋಚ್ ಬಹಿರಂಗಪಡಿಸಿದ್ದಾರೆ. ಸ್ಪೋರ್ಟ್ಸ್ಕೀಡಾದ ಫೇಸ್ಬುಕ್ ಪೇಜ್ ಲೈವ್ ಚಾಟ್ನಲ್ಲಿ ಇಂದ್ರಾನಿಲ್ ಬಸು ಅವರೊಂದಿಗೆ ಮಾತನಾಡಿದ ಅವರು 2007ರ ಉದ್ಘಾಟನಾ ಟಿ20 ವಿಶ್ವಕಪ್ ಟೂರ್ನಿಗೆ ಹೊಸ ನಾಯಕನ ಅಡಿಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಿದ ಹಿರಿಯ ಆಟಗಾರರ ಮನಸ್ಥಿತಿ ಬಗ್ಗೆ ವಿವರಿಸಿದರು. ಈ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ, ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಅಲ್ಲದೆ, ಇಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್ಮನ್ ಆಗಿ ಮಿಂಚುತ್ತಿರುವ ರೋಹಿತ್ ಶರ್ಮಾ ಅವರಂಥ ಹಲವು ಯುವ ಆಟಗಾರರು ಬೆಳಕಿಗೆ ಬರಲು ಕಾರಣವಾಗಿತ್ತು. "ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಅವರನ್ನು ಟಿ20 ವಿಶ್ವಕಪ್ ಆಡದಂತೆ ರಾಹುಲ್ ದ್ರಾವಿಡ್ ತಡೆದಿದ್ದು ನಿಜ. ಆ ವೇಳೆ ರಾಹುಲ್ ದ್ರಾವಿಡ್ ಇಂಗ್ಲೆಂಡ್ನಲ್ಲಿದ್ದ ಭಾರತ ತಂಡಕ್ಕೆ ನಾಯಕರಾಗಿದ್ದರು. ಅಂದು ಕೆಲವು ಆಟಗಾರರು ಚುಟುಕು ವಿಶ್ವಕಪ್ ಆಡಲು ಇಂಗ್ಲೆಂಡ್ನಿಂದ ನೇರವಾಗಿ ಜೋಹಾನ್ಸ್ಬರ್ಗ್ಗೆ ಪ್ರಯಾಣ ಬೆಳೆಸಿದ್ದರು. ಅಂದು ಅವರು ವಿಶ್ವಕಪ್ ಟೂರ್ನಿಗೆ ಯುವ ಆಟಗಾರರಿಗೆ ಅವಕಾಶ ನೀಡುವಂತೆ ಹೇಳಿದ್ದರು. ನಂತರ, ಭಾರತ ವಿಶ್ವಕಪ್ ಗೆಲುವಿನ ಬಳಿಕ ಸಚಿನ್ 'ಹಲವು ವರ್ಷಗಳಿಂದ ಭಾರತ ತಂಡದಲ್ಲಿ ಆಡುತ್ತಿದ್ದೇನೆ. ಒಮ್ಮೆಯೂ ನಾನು ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ'ವೆಂದು ನನಗೆ ಆಗಾಗ ಹೇಳಿ ಪಶ್ಚಾತಾಪ ಪಡುತ್ತಿದ್ದರು," ಎಂದು ಲಾಲ್ಚಂದ್ ತಿಳಿಸಿದರು. ಮಹೇಂದ್ರ ಸಿಂಗ್ ಧೋನಿ ಮೊದಲ ಬಾರಿ ನೀಡಿದ್ದ ನಾಯಕತ್ವವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು. ನಿರ್ಣಾಯಕ ಸನ್ನಿವೇಶಗಳಲ್ಲಿ ತೆಗೆದುಕೊಳ್ಳುವ ನಿರ್ಧಾರ ಹಾಗೂ ತಮ್ಮ ಶಾಂತ ಸ್ವಭಾವದ ನಾಯಕತ್ವ ಇಡೀ ವಿಶ್ವದ ಗಮನ ಸೆಳೆಯಿತು. ಎಂ.ಎಸ್ ಧೋನಿ ನಾಯಕತ್ವದ ಬಗ್ಗೆ ವಿಶ್ಲೇಷಿಸಿದ ರಜಪೂತ್, ಭವಿಷ್ಯದಲ್ಲಿ ಭಾರತ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. " ಪ್ರಾಮಾಣಿಕವಾಗಿ ಹೇಳಬೇಕಾದರೆ ಎಂ.ಎಸ್ ಧೋನಿ ಶಾಂತ ಸ್ವಭಾವದವರು. ನಾಯಕನಾಗಿ ಆಲೋಚಿಸುತ್ತಿದ್ದ ಅವರು, ಎದುರಾಳಿ ತಂಡವನ್ನು ಎರಡು ಹಂತಗಳಲ್ಲಿ ಯೋಚನೆ ಮಾಡುತ್ತಿದ್ದರು. ಮಾಜಿ ನಾಯಕರಾದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅವರ ಮಿಶ್ರಣ ಅವರಲ್ಲಿತ್ತು. ಆಟಗಾರರಿಗೆ ವಿಶ್ವಾಸ ತುಂಬುತ್ತಿದ್ದ ಸೌರವ್ ಗಂಗೂಲಿ, ಭಾರತ ತಂಡದ ಆಲೋಚನೆಯನ್ನೇ ಬದಲಿಸಿದ್ದರು, ಇದನ್ನು ಎಂ.ಎಸ್ ಧೋನಿ ಮುಂದುವರಿಸುವ ಮೂಲಕ ಯುವ ಆಟಗಾರರಿಗೆ ಅವಕಾಶ ನೀಡುತ್ತಿದ್ದರು ಹಾಗೂ ಯಾರಲ್ಲಾದರೂ ಉತ್ತಮ ಪ್ರತಿಭೆ ಇದ್ದರೆ, ಅವರಿಗೆ ಅವಕಾಶ ಕಲ್ಪಿಸುತ್ತಿದ್ದರು. ಧೋನಿ ಎಂದಿಗೂ ತಪ್ಪಿಸಿಕೊಳ್ಳುವ ಮನೋಭಾವವನ್ನು ತೋರಿಸಲಿಲ್ಲ, ಇದು ಆಟಗಾರರು ತಂಡಕ್ಕೆ ಅತ್ಯುತ್ತಮವಾದದನ್ನು ನೀಡಲು ಸಹಾಯವಾಯಿತು," ಎಂದು ಲಾಲ್ಚಂದ್ ರಜಪೂತ್ ಕೂಲ್ ಕ್ಯಾಪ್ಟನ್ರನ್ನು ಶ್ಲಾಘಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3eLa9M4