ಗಂಭೀರ ಕೊರೊನಾ ರೋಗಿಗಳಿಗೆ ಸ್ಟಿರಾಯ್ಡ್‌ ಬಳಕೆಗೆ ಕೇಂದ್ರದಿಂದ ಅನುಮತಿ

ಹೊಸದಿಲ್ಲಿ: ರೋಗಿಗಳ ಚಿಕಿತ್ಸೆಯಲ್ಲಿ ಕಡಿಮೆ ಬೆಲೆಯ - ಬಳಕೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಮಧ್ಯಮ ಮತ್ತು ಗಂಭೀರ ಅನಾರೋಗ್ಯಕ್ಕೊಳಗಾಗಿರುವ ರೋಗಿಗಳಿಗೆ ಮಿಥೈಲ್‌ಪ್ರೆಡ್ನಿಸೊಲೋನ್‌ ಬದಲು ಡೆಕ್ಸಾಮೆಥಾಸೋನ್‌ ಬಳಸುವಂತೆ ಸೂಚಿಸಲಾಗಿದೆ. ಈ ಹಿಂದೆ ಬ್ರಿಟನ್‌ನ ತಜ್ಞರು ಕೊರೊನಾ ರೋಗಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ, ತೀವ್ರ ಅನಾರೋಗ್ಯಕ್ಕೊಳಗಾದವರಿಗೆ ಸ್ಟಿರಾಯ್ಡ್‌ ನೀಡಿದಾಗ ಚೇತರಿಸಿಕೊಳ್ಳುತ್ತಾರೆ ಎಂಬುದು ತಿಳಿದು ಬಂದಿತ್ತು. ಬೆನ್ನಿಗೆ ವಿಶ್ವ ಆರೋಗ್ಯ ಸಂಸ್ಥೆ ಇದರ ಉತ್ಪಾದನೆಯನ್ನು ಹೆಚ್ಚಿಸುವಂತೆ ಖಾಸಗಿ ಕಂಪನಿಗಳಿಗೆ ಸೂಚಿಸಿತ್ತು. ಇದೀಗ ಕೇಂದ್ರ ಆರೋಗ್ಯ ಇಲಾಖೆ ಡೆಕ್ಸಾಮೆಥಾಸೋನ್‌ ಬಳಕೆಗಾಗಿ ಕೊರೊನಾ ಕ್ಲಿನಿಕಲ್‌ ಪ್ರೊಟೊಕಾಲ್‌ನಲ್ಲಿ ಬದಲಾವಣೆ ಮಾಡಿದೆ. ಈಗಾಗಲೇ ಡೆಕ್ಸಾಮೆಥಾಸೋನ್‌ನನ್ನು ಆರ್ಥರೈಟಿಸ್‌ (ಸಂಧಿವಾತ) ಸೇರಿದಂತೆ ಹಲವು ರೋಗಿಗಳಲ್ಲಿ ಉರಿಯೂತವನ್ನು ತಡೆಯಲು ಬಲಸಲಾಗುತ್ತಿದೆ. ಇದೀಗ ಆಕ್ಸಿಜನ್‌ ಸಂಪರ್ಕದಲ್ಲಿರುವ ಮತ್ತು ತೀವ್ರ ಉರಿಯೂತವನ್ನು ಎದುರಿಸುತ್ತಿರುವವರಿಗೂ ಇದನ್ನು ನೀಡುವಂತೆ ತಿಳಿಸಲಾಗಿದೆ.

ಕಳೆದ 60 ವರ್ಷಗಳಿಂದ ಕಡಿಮೆ ಡೋಸ್‌ನ ಡೆಕ್ಸಾಮೆಥಾಸೋನ್‌ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದು ಅತ್ಯಂತ ಅಗ್ಗದ ಔಷಧವಾಗಿದೆ. ಕೇವಲ 2 ರೂಪಾಯಿ 10 ಮಾತ್ರೆಗಳು ಸಿಗುತ್ತವೆ. ಇದನ್ನು ಇತ್ತೀಚೆಗೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ತಜ್ಞರು ಕೊರೊನಾ ರೋಗಿಗಳ ಮೇಲೆ ಪ್ರಯೋಗಿಸಿದ್ದರು. ಜೀವನ್ಮರಣ ಹೋರಾಟ ನಡೆಸುತ್ತಿರುವ ರೋಗಿಗಳಿಗೆ ಇದನ್ನು ನೀಡಿದಾಗ ಮೂರರಲ್ಲಿ ಒಬ್ಬರು ಬದುಕುಳಿಯುತ್ತಾರೆ ಎಂಬುದು ತಿಳಿದು ಬಂದಿತ್ತು. ತೀವ್ರ ಅನಾರೋಗ್ಯಕ್ಕೆ ಗುರಿಯಾದವರಿಗೆ ಮಾತ್ರ ಇದನ್ನು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ನೀಡುವಂತೆ ಹೇಳಿದೆ.


from India & World News in Kannada | VK Polls https://ift.tt/3eJ3hio

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...