ಹೊಸದಿಲ್ಲಿ: ಮಾಜಿ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಭಾರತೀಯ ಕ್ರಿಕೆಟ್ನ ಪ್ರಸ್ತುತ ಮತ್ತು ಹಿಂದಿನ ಯುಗದ ಕೆಲವು ಸೂಪರ್ಸ್ಟಾರ್ ಆಟಗಾರರೊಂದಿಗೆ ಆಡಿದ ಅಪರೂಪದ ಕ್ರಿಕೆಟಿಗ. 2008ರಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಓಜಾ, 2013ರಲ್ಲಿ ಹಾಗೂ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಸ್ಥಾನ ಗಟ್ಟಿಮಾಡಿಕೊಳ್ಳುವ ಸಮಯದವರೆಗೂ ಆಡಿದ್ದರು. ಅವರು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಮಾತ್ರ ಆಡಿದ್ದಾರೆ. ಅವರ ಐದು ವರ್ಷಗಳ ಅಲ್ಫಾವಧಿಯಲ್ಲಿ ಭಾರತೀಯ ಕ್ರಿಕೆಟ್ನ ಕೆಲ ಅತ್ಯುತ್ತಮ ಜ್ಞಾನವುಳ್ಳ ಕ್ರಿಕೆಟಿಗರ ಜತೆ ಡ್ರೆಸ್ಸಿಂಗ್ ಕೊಠಡಿ ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಓಡಿಐಗೆ ಪದಾರ್ಪಣೆ ಪಂದ್ಯದಲ್ಲಿ ಓಜಾ, ತಮಗೆ ಸಹಾಯ ಮಾಡಿದ್ದ ಭಾರತ ಟೆಸ್ಟ್ ತಂಡದ ಮಾಜಿ ನಾಯಕ ಅವರನ್ನು ಶ್ಲಾಘಿಸಿದ್ದರು. ಕುಂಬ್ಳೆ ನಾಯಕತ್ವದಲ್ಲಿ ಎಡಗೈ ಮಾಜಿ ಸ್ಪಿನ್ನರ್ ಒಮ್ಮೆಯೂ ಆಡದಿದ್ದರೂ, ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಭಾರತೀಯ ಬೌಲರ್ನಿಂದ ಕಲಿಕೆಯ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. "ಅನಿಲ್ ಕುಂಬ್ಳೆ ಅಂಗಳದಲ್ಲಿ ಇದ್ದರೆ, ಎದುರಾಳಿ ಅಥವಾ ಸಹ ಆಟಗಾರರ ಮೇಲೆ ತುಂಬಾ ಆಕ್ರಮಣಕಾರಿಯಾಗಿರುತ್ತಾರೆ. ಮೈದಾನದಿಂದ ಹೊರಗಡೆ ಅವರು ತುಂಬಾ ಬದಲಾಗಿರುತ್ತಾರೆ. ಒಮ್ಮೆ ಅಂಗಳದಿಂದ ಹೊರಗಡೆ ಅವರೊಂದಿಗೆ ಮಾತನಾಡುವಾಗ, ಖಂಡಿತಾ ನಾನು ಅನಿಲ್ ಕುಂಬ್ಳೆ ಬಳಿ ಮಾತನಾಡುತ್ತಿದ್ದೇನೆಯೇ ಎಂಬ ಅನುಮಾನ ಮೂಡಿತ್ತು. ಅಂದರೆ, ಅಷ್ಟರ ಮಟ್ಟಿಗೆ ಅವರು ಸೌಮ್ಯ ಸ್ವಭಾವದವರು," ಎಂದು ಓಜಾ ವಿಸ್ಡನ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅತಿ ವೇಗವಾಗಿ 100 ಟೆಸ್ಟ್ ವಿಕೆಟ್ಗಳನ್ನು ಪಡೆದ ಭಾರತದ ಮೊದಲ ಬೌಲರ್ ಓಜಾ, ಸಚಿನ್ ತೆಂಡೂಲ್ಕರ್ನಿಂದ ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿವರೆಗೂ ಪ್ರತಿಯೊಬ್ಬ ಆಟಗಾರರೊಂದಿಗೆ ಅತ್ಯುತ್ತಮವಾಗಿ ವ್ಯವಹರಿಸುತ್ತಿದ್ದರು. "ಸಚಿನ್ ಪಾಜಿ ಅವರು ಯಾವಾಗಲೂ ಶಾಂತ ಸ್ವಭಾವದಿಂದ ಇರುತ್ತಿದ್ದರು. ಅವರು ಯಾವುದೇ ಪ್ರತಿಕ್ರಿಯೆಗಳನ್ನು ನೀಡುತ್ತಿರಲಿಲ್ಲ. ಅವರು ವಿಭಿನ್ನ ವಿಧಾನವನ್ನು ಹೊಂದಿದ್ದರು. ಅನಿಲ್ ಭಾಯ್ ಕೂಡ ವಿಭಿನ್ನ ವಿಧಾನವನ್ನು ಹೊಂದಿದ್ದರು. ಎಂ.ಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರಿಗೆ ದೇಶಕ್ಕಾಗಿ ಪಂದ್ಯ ಗೆಲ್ಲುವುದು ಮುಖ್ಯವಾಗಿತ್ತು. ಆದರೆ, ಇವರಿಬ್ಬರ ವಿಧಾನ ಅತ್ಯಂತ ವಿಭಿನ್ನವಾಗಿತ್ತು," ಎಂದು ಸೇರಿಸಿದರು. "ವಿವಿಎಸ್ ಲಕ್ಷ್ಮಣ್ ಅವರು ಸುಪ್ರಭಾತ ಕೇಳಿಕೊಂಡು ನಂತರ ಬ್ಯಾಟಿಂಗ್ಗೆ ಇಳಿಯುತ್ತಿದ್ದರು. ಇದು ಅವರ ಆಕ್ರಮಣಕಾರಿ ಬಗೆಯಾಗಿತ್ತು. ಹಾಲಿ ನಾಯಕ ವಿರಾಟ್ ಕೊಹ್ಲಿಯೂ ಅಷ್ಟೇ, ಅವರು ಪಂಜಾಬಿ ಹಾಡುಗಳನ್ನು ಜೋರಾಗಿ ಹಾಕಿಕೊಂಡು ಕೇಳುತ್ತಾರೆ. ಅಲ್ಲದೆ, ಮುಖ ಹಾಗೂ ಕೈಗಳಿಂದ ಸನ್ನೆಗಳನ್ನು ಮಾಡಿಕೊಂಡು ಸಂಗೀತವನ್ನು ಆಹ್ಲಾದಿಸುತ್ತಾರೆ. ಆದರೆ, ಇದು ತಪ್ಪಲ್ಲ. ಇದು ಒಬ್ಬರಿಂದ ಒಬ್ಬರಿಗೆ ವಿಭಿನ್ನತೆಯನ್ನು ತೋರಿಸುತ್ತದೆ," ಎಂದು ಪ್ರಗ್ಯಾನ್ ಓಜಾ ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2VsgjcC