ನವದೆಹಲಿ: ಚೀನಾದಿಂದ ಬರೋಬ್ಬರಿ 5,700 ಕೋಟಿ ರೂ. ಸಾಲ ಪಡೆದಿರುವ ಇದೀಗ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಜನರಿಗೆ ಸಲಹೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಆಪ್ ನಾಯಕ ಕಿಡಿಕಾರಿದ್ದಾರೆ. ಕೊರೊನಾ ನೆರವಿನ ರೂಪದಲ್ಲಿ ಈ ಹಿಂದೆ ಚೀನಾದ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (ಎಐಐಬಿ)ಯಿಂದ ಭಾರತ ಸರ್ಕಾರ 5,700 ಕೋಟಿ ರೂ. ಸಾಲ ಪಡೆದಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಈ ಒಪ್ಪಂದಕ್ಕೆ ಕಳೆದ ಜೂನ್ನಲ್ಲಿ ಭಾರತ-ಚೀನಾ ಸಹಿ ಮಾಡಿವೆ ಎಂದು ಕೇಂದ್ರ ಹಣಕಾಸು ಇಲಾಖೆಯೇ ಮಾಹಿತಿ ನೀಡಿದೆ. ಅಂದರೆ ಸರ್ಕಾರ ಮಾತ್ರ ಚೀನಾದೊಂದಿಗೆ ವ್ಯವಹರಿಸಬಹುದು ಜನಸಾಮಾನ್ಯರಿಗೆ ಈ ಅಧಿಕಾರ ಇಲ್ಲವೇ ಎಂದು ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ. ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಜನರಿಗೆ ಪುಕ್ಕಟೆ ಸಲಹೆ ನೀಡುವ ಮೋದಿ ಸರ್ಕಾರಕ್ಕೆ, ಆ ರಾಷ್ಟ್ರದೊಂದಿಗೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು ರದ್ದುಪಡಿಸಲು ಸಾಧ್ಯವೇ ಎಂದು ಸಂಜಯ್ ಸಿಂಗ್ ಪ್ರಶ್ನಿ ಸಿದ್ದಾರೆ. ಗಡಿಯಲ್ಲಿ ನಮ್ಮ ವೀರ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸುತ್ತಿದ್ದಾರೆ. ಆದರೆ ಗಡಿ ಸಂರಕ್ಷಣೆ ಮಾಡುವ ಬದಲು ಮೋದಿ ಸರ್ಕಾರ ಚೀನಿ ವಸ್ತುಗಳನ್ನು ಬಹಿಷ್ಕರಿಸಿ ಎಂದು ಜನರಿಗೆ ಸಲಹೆ ನೀಡುವಲ್ಲಿ ನಿರತಾವಾಗಿದೆ ಎಂದು ಸಂಜಯ್ ಸಿಂಗ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
from India & World News in Kannada | VK Polls https://ift.tt/3eKMtHG