ನಾವು ಒಟ್ಟು ನಾಲ್ಕು ಯುದ್ಧ ಗೆದ್ದಿದ್ದೇವೆ, ಇದೀಗ ನಿಮ್ಮ ಸರದಿ: ಕೇಂದ್ರಕ್ಕೆ ಕ್ಯಾ.ಸಿಂಗ್ ಪಂಥಾಹ್ವಾನ!

ಚಂಢೀಗಡ್: ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ನಾವು ಒಟ್ಟು ನಾಲ್ಕು ಯುದ್ಧಗಳನ್ನು ಗೆದ್ದಿದ್ದು, ಇದೀಗ ಚೀನಾ ಗೆ ಬುದ್ಧಿ ಕಲಿಸುವ ಜವಾಬ್ದಾರಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದಾರೆ. 1948(ಭಾರತ-ಪಾಕಿಸ್ತಾನ),1965(ಭಾರತ-ಪಾಕಿಸ್ತಾನ),1971(ಭಾರತ-ಪಾಕಿಸ್ತಾನ),1999(ಭಾರತ-ಪಾಕಿಸ್ತಾನ) ಯುದ್ಧಗಳಲ್ಲಿ ನಾವು ಜಯ ಸಾಧಿಸಿದ್ದು, ಇದೀಗ ಚೀನಾಗೆ ಮಿಲಟರಿ ಉತ್ತರ ನೀಡಬೇಕಿರುವುದು ಮೋದಿ ಸರ್ಕಾರದ ಕರ್ತವ್ಯ ಎಂದು ಕ್ಯಾ.ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಖುದ್ದು ಸೇನೆಯಲ್ಲಿ ಸೇವೆ ಸಲ್ಲಿಸಿರುವ ಕ್ಯಾ.ಅಮರಿಂದರ್ ಸಿಂಗ್, ಇದೀಗ ಮೋದಿ ಸರ್ಕಾರಕ್ಕೆ ಪಂಥಾಹ್ವನ ನೀಡಿದ್ದು, ಚೀನಾಗೆ ಮಿಲಿಟರಿ ಉತ್ತರ ನೀಡುವಂತೆ ಪರೋಕ್ಷವಾಗಿ ಆಗ್ರಹಿಸಿದ್ದಾರೆ. 1960ರಿಂದಲೂ ಚೀನಾ ನಮ್ಮೊಂದಿಗೆ ಗಡಿ ತಕರಾರು ತೆಗೆಯುತ್ತಿದೆ. ಇದೇ ಕಾರಣಕ್ಕೆ 1965ರಲ್ಲಿ ಭಾರತ-ಚೀನಾ ನಡುವೆ ಯುದ್ಧವೂ ಸಂಭವಿಸಿದೆ. ಇಷ್ಟು ವರ್ಷಗಳ ಬಳಿಕವೂ ಗಡಿ ಕ್ಯಾತೆ ತೆಗೆಯುವುದನ್ನು ನಿಲ್ಲಿಸಲು ಒಪ್ಪದ ಚೀನಾಗೆ ಈ ಬಾರಿ ಬುದ್ಧಿ ಕಲಿಸಲೇಬೇಕಿದೆ ಎಂದು ಕ್ಯಾ.ಸಿಂಗ್ ಹೇಳಿದ್ದಾರೆ. ಗಡಿಯಲ್ಲಿ ನಮ್ಮ ವೀರ ಯೋಧರ ಸಾವಿಗೆ ಕಾರಣವಾಗಿರುವ ಹಾಗೂ ನಮ್ಮ ನೆಲ ಕಬಳಿಸಿರುವ ಚೀನಾಗೆ ಬುದ್ಧಿ ಕಲಿಸಲು ಇದು ಸೂಕ್ತ ಸಮಯ ಎಂದಿರುವ ಕ್ಯಾ.ಸಿಂಗ್, ಪಿಎಂ ಕೇರ್ಸ್‌ನಲ್ಲಿರುವ ಚೀನಾ ಹಣವನ್ನು ಮರಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/31u1o5u

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...