ಝೊಮ್ಯಾಟೋ ಟೀ-ಶರ್ಟ್ ಸುಟ್ಟು ಹಾಕಿ ಚೀನಾ ವಿರುದ್ಧ ಆಕ್ರೋಶ

ಕೋಲ್ಕತ್ತಾ: ಲಡಾಖ್‌ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಭಾರತೀಯ ಯೋಧರ ಮೇಲೆ ಚೀನೀ ಸೈನಿಕರು ಅಮಾನವೀಯವಾಗಿ ದಾಳಿ ಮಾಡಿದ್ದನ್ನು ಇಡೀ ಭಾರತೀಯರು ಒಕ್ಕೊರಳಿನಿಂದ ಖಂಡಿಸಿದ್ದರು. ಆನಂತರ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗ್ತಿದ್ದಂತೆ ಭಾರತೀಯ ನಾಗರಿಕರು ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಚೀನಾಗೆ ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದರು. ಇದೀಗ ಫುಡ್ ಡೆಲಿವರಿ ಸಂಸ್ಥೆಯಾಗಿರೋ ಕಂಪನಿ ವಿರುದ್ಧ ಅದೇ ಕಂಪನಿ ಸಿಬ್ಬಂದಿ ರೊಚ್ಚಿಗೆದ್ದಿದ್ದಾರೆ. ಸಂಸ್ಥೆಯ ಟೀ-ಶರ್ಟ್ ಸುಟ್ಟು ಹಾಕೋ ಮೂಲಕ ಝೊಮ್ಯಾಟೋ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ದೇಶದ ಸೈನಿಕರನ್ನು ಹತ್ಯೆಗೈದ ಚೀನಾದ ಹೂಡಿಕೆಯಿರುವ ಕಂಪನಿಯಲ್ಲಿ ನಾವು ಕೆಲಸ ಮಾಡುವುದಿಲ್ಲ ಎಂದು ಕೋಲ್ಕತ್ತಾದಲ್ಲಿ ಝೊಮ್ಯಾಟೋ ಸಿಬ್ಬಂದಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಚೀನಾದ ಪ್ರಮುಖ ಕಂಪನಿಯಾದ ಆಲಿಬಾಬಾ ಗ್ರೂಫ್‌ನ ಸಹಸಂಸ್ಥೆಯಾದ ಆಂಟ್ ಫಿನಾನ್ಶಿಯಲ್ 2018ರಲ್ಲಿ ಝೋಮ್ಯಾಟೋ ಕಂಪನಿಯಲ್ಲಿ 210 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿತ್ತು. ಚೀನಾದ ಕಂಪನಿಗಳು ಭಾರತದಿಂದ ಲಾಭ ಗಳಿಸಿ ಭಾರತೀಯ ಸೈನಿಕರನ್ನೇ ಹತ್ಯೆ ಮಾಡುತ್ತಿವೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ. ನಮ್ಮ ಭೂಮಿಯನ್ನೂ ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ನಮ್ಮಿಂದ ಲಾಭ ಗಳಿಸಿ ನಮಗೆ ದ್ರೋಹ ಬಗೆಯುವ ಕಂಪನಿಯಲ್ಲಿ ನಾವು ಕೆಲಸ ಮಾಡುವುದಿಲ್ಲ, ಬೇಕಾದರೆ ಹಸಿವಿನಿಂದ ನರಳಲೂ ತಯಾರಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ರೋಗ ದೇಶಾದ್ಯಂತ ಆಕ್ರಮಿಸಿದಾಗ ಇತ್ತೀಚೆಗೆ ಝೊಮ್ಯಾಟೋ ಕಂಪನಿ ತನ್ನ 520 ಮಂದಿ ಕೆಲಸಗಾರರನ್ನು ತೆಗೆದುಹಾಕಿತ್ತು. ಕೊಲ್ಕತ್ತಾದಲ್ಲಿ ಪ್ರತಿಭಟನೆ ಮಾಡಿದವರು ಸದ್ಯ ಕೆಲಸದಿಂದ ತೆಗೆದು ಹಾಕಿದವರೋ ಅಥವಾ ಸದ್ಯ ಇರುವ ಸಿಬ್ಬಂದಿಯೋ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ.


from India & World News in Kannada | VK Polls https://ift.tt/31ryt1M

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...