ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ಹಿಂಸಾತ್ಮಕ ಘರ್ಷಣೆ ಹಾಗೂ ಗಡಿಯಲ್ಲಿ ಚೀನಿ ಸೇನೆಯ ನಿರಂತರ ಉಪಟಳದ ಕುರಿತು ಚರ್ಚಿಸಲು, ರಕ್ಷಣಾ ಸಚಿವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯ, ವರ್ತಮಾನದ ಬೆಳವಣಿಗೆಗಳ ಕುರಿತು ರಾಜನಾಥ್ ಸಿಂಗ್ಶ ಶೀಘ್ರದಲ್ಲೇ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಚೀನಾ ಗಡಿ ಕ್ಯಾತೆ ವಿಷಯದಲ್ಲಿ ಈಗಾಗಲೇ ಅಮೆರಿಕ ಭಾರತಕ್ಕೆ ಬೆಂಬಲ ಘೋಷಿಸಿದ್ದು, ಸಕಲ ನೆರವು ನೀಡುವ ಭರವಸೆ ನೀಡಿದೆ. ಅದರಂತೆ ಗಡಿ ಕ್ಯಾತೆ ಶಾಂತಿಯುತ ಪರಿಹಾರ ಕಾಣಲು ಸಾಧ್ಯವಾದ ಎಲ್ಲಾ ನೆರವು ನೀಡುವುದಾಗಿಯೂ ಹೇಳಿದೆ. ಈ ಹಿನ್ನೆಲೆಯಲ್ಲಿ ಇಂದು(ಮಂಗಳವಾರ) ನಡೆಯಲಿರುವ ರಾಜನಾಥ್ ಸಿಂಗ್ ಹಾಗೂ ಮಾರ್ಕ್ ಎಸ್ಪರ್ ನಡುವಿನ ದೂರವಾಣಿ ಸಂಭಾಷಣೆ ಭಾರೀ ಮಹತ್ವ ಪಡೆದುಕೊಂಡಿದ್ದು, ಇಬ್ಬರೂ ಗಣ್ಯರ ನಡುವೆ ಏನು ಮಾತುಕತೆ ನಡೆಯಲಿದೆ ಎಂಬುದರತ್ತ ದೇಶ ಗಮನ ಇರಿಸಿದೆ.
from India & World News in Kannada | VK Polls https://ift.tt/38bGE3P