ಭಾರತದ ವಿರುದ್ಧ ಹೇಳಿಕೆ: ಓಲಿ ರಾಜೀನಾಮೆಗೆ ನೇಪಾಳ ಆಡಳಿತಾರೂಢ ಪಕ್ಷದಿಂದಲೇ ಒತ್ತಾಯ!

ಕಠ್ಮಂಡು: ನನ್ನನ್ನು ಪದಚ್ಯುತಿಗೊಳಿಸಲು ಭಾರತ ಷಡ್ಯಂತ್ರ ಹೂಡಿದೆ ಎಂಬ ಪ್ರಧಾನಿ ಕೆಪಿ ಶರ್ಮಾ ಓಲಿ ಹೇಳಿಕೆ ಅವರಿಗೆ ಮುಳುವಾಗಿ ಪರಿಣಮಿಸಿದೆ. ಓಲಿ ಹೇಳಿಕೆ ವಿರುದ್ಧ ನೇಪಾಳದ ಆಡಳಿತ ಪಕ್ಷದಲ್ಲೇ ತೀವ್ರ ಅಸಮಾಧಾನ ಭುಗಿಲೆದ್ದಿದ್ದು, ಇಂತಹ ಹೇಳಿಕೆ ನೀಡುವ ಮೂಲಕ ಪ್ರಧಾನಿ ನೇಪಾಳದ ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ತೀವ್ರ ಧಕ್ಕೆ ತಂದಿದ್ದಾರೆ ಎಂದು ಸಹವರ್ತಿಗಳೇ ಆರೋಪಿಸಿದ್ದಾರೆ. ಕೆಪಿ ಶರ್ಮಾ ಓಲಿ ಅವರ ಅಧಿಕೃತ ನಿವಾಸದಲ್ಲಿ ಸಭೆ ಸೇರಿದ್ದ ಆಡಳಿತಾರೂಢ ಪಕ್ಷದ ನಾಯಕರು, ಓಲಿ ಹೇಳಿಕೆಯನ್ನು ಬಹಿರಂಗವಾಗಿಯೇ ಟೀಕಿಸಿದರು. ಭಾರತದೊಂದಿಗಿನ ಸಂಬಂಧಕ್ಕೆ ಓಲಿ ಹೇಳಿಕೆ ಬಲವಾದ ಪೆಟ್ಟು ನೀಡಿದೆ ಎಂದು ಬಹುತೇಕರು ಅಭಿಪ್ರಾಯಪಟ್ಟರು. ಓಲಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ ಪುಷ್ಪ ಕಮಲ್ ದೊಹಲ್ ಅಲಿಯಾಸ್ ಪ್ರಚಂಡ, ಪ್ರಧಾನಿ ಅವರ ಹೇಳಿಕೆ ರಾಜಕೀಯವಾಗಿ ತಪ್ಪು ಮತ್ತು ರಾಜತಾಂತ್ರಿಕವಾಗಿ ಪ್ರಮಾದ ಎಂದು ಕಿಡಿಕಾರಿದರು. ಅಲ್ಲದೇ ಈ ಕೂಡಲೇ ಓಲಿ ಅವರ ಪಡೆಯಬೇಕೆಂದು ಆಗ್ರಹಿಸಿದರು. ಪ್ರಚಂಡ ಸೇರಿದಂತೆ ಮಾಧವ್ ಕುಮಾರ್ ನೇಪಾಳ, ಜಲನಾಥ್ ಖನಲ್, ಬಾಮ್ದೇವ್ ಗೌತಮ್ ಮುಂತಾದ ಹಿರಿಯ ನಾಯಕರೂ ಪ್ರಧಾನಿ ಓಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ ರಾಜೀನಾಮೆಗೂ ಆಗ್ರಹಿಸಿದರು. ಒಟ್ಟಿನಲ್ಲಿ ಹೊಸ ಗಡಿ ನಕ್ಷೆಯ ಮೂಲಕ ಭಾರತದ ವಿರೋಧಿ ಅಭಿಯಾನ ಆರಂಭಿಸಿದ್ದ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ, ಇದೀಗ ಸ್ವಪಕ್ಷೀಯರಿಂದಲೇ ಸಂಕಷ್ಟಕ್ಕೆ ಸಿಲುಕಿರುವುದು ಸ್ಪಷ್ಟವಾಗಿದೆ.


from India & World News in Kannada | VK Polls https://ift.tt/2ZofItv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...