ಸೇಲಂ (): ತಮಿಳುನಾಡಿನ ಡಿಎಂಕೆ ಕೆ. ಅರ್ಜುನ, ಪೊಲೀಸರ ಮೇಲೆ ಮೆರೆದು ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಸೇಲಂನಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಕಾಲಿನಿಂದ ಒದ್ದು, ಶಬ್ಧಗಳಿಂದ ನಿಂದಿಸಿ, ನೂಕಾಡಿ, ತಳ್ಳಾಡಿ ದಾಂಧಲೆ ಎಬ್ಬಿಸಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಇದಕ್ಕೆಲ್ಲಾ ಕಾರಣವಾಗಿದ್ದು, ಇ ಪಾಸ್. ತಮಿಳುನಾಡಿನಲ್ಲಿ ಕೊರೊನಾ ವೈರಸ್ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ನಗರದಿಂದ ಮತ್ತೊಂದು ನಗರಕ್ಕೆ ಸಂಚಾರ ಮಾಡಬೇಕೆಂದರೆ, ಇ ಪಾಸ್ ಇರೋದು ಕಡ್ಡಾಯ. ತಮಿಳುನಾಡಿನಲ್ಲಿ ಲಾಕ್ಡೌನ್ ಕೂಡಾ ಕಡ್ಡಾಯವಾಗಿ ಜಾರಿಯಲ್ಲಿದೆ. ಈ ಕಾನೂನನ್ನು ಜಾರಿಗೆ ತರಲು ಹೆದ್ದಾರಿಯ ಟೋಲ್ ಬಳಿ ಪೊಲೀಸ್ ಅಧಿಕಾರಿ ಕರ್ತವ್ಯ ನಿರತರಾಗಿದ್ದರು. ಈ ವೇಳೆ, ಟೋಲ್ ಬಳಿ ಬಂದ ಮಾಜಿ ಸಂಸದರಿಗೆ ಪಾಸ್ ತೋರಿಸುವಂತೆ ಕೇಳಲಾಯ್ತು. ಆಗ ಮಾಜಿ ಸಂಸದ ಅರ್ಜುನ, ನನ್ನ ಬಳಿಯೇ ಪಾಸ್ ಕೇಳುತ್ತೀಯಾ ಎಂದು ಪೊಲೀಸ್ ಅಧಿಕಾರಿಗೆ ನಿಂದಿಸಿದರು. ಪೊಲೀಸ್ ಅಧಿಕಾರಿ ಪಾಸ್ ಇಲ್ಲದೆ ಮುಂದಕ್ಕೆ ಬಿಡೋದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದಾಗ ವಾಹನದಿಂದ ಇಳಿದ ಮಾಜಿ ಸಂಸದ ಅರ್ಜುನ, ಪೊಲೀಸ್ ಅಧಿಕಾರಿಯನ್ನು ತಳ್ಳಿ, ಆತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಅಷ್ಟೇ ಅಲ್ಲ, ಕಾಲಿನಿಂದ ಒದ್ದು ಪೊಲೀಸ್ ಅಧಿಕಾರಿ ಮೇಲೆ ದರ್ಪ ಮೆರೆದರು. ಈ ವೇಳೆ ಸ್ಥಳದಲ್ಲಿ ಇದ್ದ ಇನ್ನಿತರ ಪೊಲೀಸರು ಹಾಗೂ ಸ್ಥಳೀಯರು ಸಂಸದರನ್ನು ತಡೆದು ಹೋಗಲು ಕಳುಹಿಸಿಕೊಟ್ಟರು. ಈ ಪ್ರಕರಣ ಸಂಬಂಧ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
from India & World News in Kannada | VK Polls https://ift.tt/2YFiMSM