'ಕೊರೊನಾ ವೈರಸ್‌ಗಿಂತಲೂ ಹಸಿವು ಭಯಾನಕವಾಗಿದೆ' ; ವಲಸೆ ಕಾರ್ಮಿಕರ ಒಡಲಾಳದ ನೋವು

ಲಖನೌ: ದೇಶದಲ್ಲಿ ಮಹಾಮಾರಿ ಲಗ್ಗೆ ಇಟ್ಟಾಗಿನಿಂದ ಜನಸಾಮಾನ್ಯರ ಬದುಕು ಹದಗೆಟ್ಟಿದೆ. ಲಾಕ್‌ಡೌನ್‌ ನಂತರ ಕೆಲವೆಡೆ ಒಪ್ಪೊತ್ತಿನ ಊಟವೂ ಸಿಗದೇ ಹಸಿವಿನಿಂದ ಸಾವನ್ನಪ್ಪಿರೋ ಘಟನೆಯೂ ವರದಿಯಾಗಿತ್ತು. ಈಗಲೂ ಬಹುತೇಕ ಕಡೆ ವಲಸೆ ಕಾರ್ಮಿಕರು, ದಿನಗೂಲಿ ನೌಕರರು ರೇಷನ್ ಸಿಗದೆ ಪರದಾಡ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಉದ್ಯೋಗವೂ ಇಲ್ಲದೆ ನೀಗಿಸಲು ಪರದಾಡ್ತಿರೋ ಉತ್ತರಪ್ರದೇಶದ ಕೊರೊನಾ ವೈರಸ್‌ಗಿಂತಲೂ ಹಸಿವು ಭಯಾನಕ ಅಂತಾ ಹೇಳಿದ್ದಾರೆ. ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದಾಗ ಉತ್ತರಪ್ರದೇಶ ರಾಜ್ಯವೊಂದರಲ್ಲೇ ಸುಮಾರು 30 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದರು. ಅನೇಕರು ಕೆಲಸವೇ ಇಲ್ಲದಿದ್ದರೆ ಆಹಾರಕ್ಕೆ ಏನು ಮಾಡೋದು ಅನ್ನೋದರ ಬಗ್ಗೆ ಚಿಂತೆಗೀಡಾಗಿದ್ದರು. ಇದೀಗ ಬರೋಬ್ಬರಿ ಮೂರು ತಿಂಗಳ ಬಳಿಕ ವಲಸೆ ಕಾರ್ಮಿಕರು ಮತ್ತೆ ಕೆಲಸಕ್ಕೆ ಹಿಂತಿರುಗಲು ನಿರ್ಧರಿಸಿದ್ದು, ಈ ವೇಳೆ ಕೊರೊನಾ ವೈರಸ್‌ಗಿಂತಲೂ ಹಸಿವು ಭಯಾನಕ ಅಂದಿರೋದು ಕರುಣೆಯುಳ್ಳವರ ಕರುಳು ಕಿವುಚಿದಂತಾಗಿದೆ. ಜುಲೈ ಒಂದರಿಂದ ಸಾಮಾನ್ಯ ರೈಲುಗಳ ಸಂಚಾರವನ್ನು ರದ್ದು ಮಾಡಲು ಕೇಂದ್ರ ರೈಲ್ವೇ ಇಲಾಖೆ ನಿರ್ಧರಿಸಿದೆ. ಈಗಾಗಲೇ ವಲಸೆ ಕಾರ್ಮಿಕರು ಮೂರು ತಿಂಗಳು ಕೆಲಸವಿಲ್ಲದೆ ಪಡಬಾರದ ಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಮತ್ತೆ ಅಂತಹ ಭಯಾನಕ ದಿನಗಳು ಬರೋದು ಬೇಡ ಅಂತಾ ರೈಲು ಸಂಚಾರ ಸ್ಥಗಿತಗೊಳ್ಳುವ ಮುನ್ನವೇ ಕೆಲಸಕ್ಕಾಗಿ ಹೊರರಾಜ್ಯಗಳಿಗೆ ವಲಸೆ ಹೋಗಲು ತೀರ್ಮಾನಿಸಿದ್ದಾರೆ. ಪೂರ್ವ ಉತ್ತರ ಪ್ರದೇಶದ ಡಿಯೋರಿಯಾದಲ್ಲಿರೋ ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಗೋರಖ್‌ಪುರ ರೈಲು ನಿಲ್ದಾಣಕ್ಕೆ ಹೊರಟಿದ್ದ ವಲಸೆ ಕಾರ್ಮಿಕರನ್ನು ಮಾತಾಡಿಸಿದಾಗ, ‘ನಾವು ಇಲ್ಲಿಂದ 50 ಕಿ.ಮೀ ದೂರವಿರುವ ಗೋರಖ್‌ಪುರಕ್ಕೆ ಬಸ್ಸಿನಲ್ಲಿ ಹೋಗ್ತೀವಿ. ಅಲ್ಲಿಂದ ಮಹಾರಾಷ್ಟ್ರ, ಗುಜರಾತ್ ಮತ್ತು ಬೇರೆ ಬೇರೆ ಕಡೆ ಎಲ್ಲರೂ ಕೆಲಸಕ್ಕೆ ಹೋಗ್ತಾರೆ’ ಹೇಳಿದ್ದಾರೆ. ಮುಂಬೈನಲ್ಲಿ ಟೈಲರಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನೊಬ್ಬ ಮಾತನಾಡಿ, ನಾನು ಕೆಲಸ ಮಾಡ್ತಿದ್ದ ಕಂಪನಿಯಲ್ಲಿ ಕೆಲಸ ಸ್ಥಗಿತಗೊಂದು ಎರಡು ತಿಂಗಳು ಕಳೆದಿದೆ. ಉತ್ತರಪ್ರದೇಶದಲ್ಲೇ ಕೆಲಸ ಇರುತ್ತಿದ್ದರೆ ನಾನು ಮತ್ತೆ ಮುಂಬೈಗೆ ಹೋಗುತ್ತಿರಲಿಲ್ಲ. ಆದರೆ ನಾನೀಗ ನನ್ನ ಹೆಂಡತಿ ಮಕ್ಕಳನ್ನು ಸಾಕಲು ಮತ್ತೆ ಮುಂಬೈಗೆ ಹೋಗಲೇಬೇಕಾಗಿದೆ. ಅಲ್ಲಿ ಬೇರೆ ಏನಾದರೂ ಕೆಲಸ ಹುಡುಕುತ್ತೇನೆ. ಈ ಕೊರೊನಾ ವೈರಸ್ ಅನ್ನೋದು ಹಸಿವಿನಷ್ಟು ಕ್ರೂರವಾಗಿಲ್ಲ. ನನ್ನ ಮಕ್ಕಳು ಕೊರೊನಾದಿಂದ ಸಾಯುವುದಕ್ಕಿಂತ ನಾನು ಸಾಯುವುದೇ ಒಳಿತು’ ಎಂದು ಮನನೊಂದು ಹೇಳಿದ್ದಾರೆ. ಈಗಾಗಲೇ ಕೊರೊನಾ ವೈರಸ್‌ ತಗುಲಿ ದೇಶಾದ್ಯಂತ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿಗೆ ಈಗಲೂ ಕೊರೊನಾ ವೈರಸ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಕೆಲಸವಿಲ್ಲದೆ ಹಸಿವಿನಿಂದ ಕಂಗಾಲಾಗಿರೋ ಬಡಜನರು, ಕೊರೊನಾ ವೈರಸ್‌ಗಿಂತ ಹಸಿವು ಭಯಾನಕವಲ್ಲ ಅಂತಾ ಹೇಳ್ತಿರೋದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.


from India & World News in Kannada | VK Polls https://ift.tt/2YEMXd5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...