ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಬಂಧಿಸಲು ವಾರಂಟ್ ಹೊರಡಿಸಲಾಗಿದೆ. ಅಕ್ರಮ ಭೂ ಹಂಚಿಕೆ ಆರೋಪದಡಿ ನವಾಜ್ ಷರೀಫ್ ಸೇರಿದಂತೆ ಮೂವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿದ್ದು, ಷರೀಫ್‌ಗೆ ಆತಂಕ ತಂದೊಡ್ಡಿದೆ. ವಯೋಸಹಜ ಅನಾರೋಗ್ಯ ಹಿನ್ನೆಲೆ ಲಂಡನ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ 70 ವರ್ಷದ ನವಾಜ್ ಷರೀಫ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗಿನ ಯಾವುದೇ ಸಮನ್ಸ್‌ಗಳಿಗೆ ಉತ್ತರಿಸಿಲ್ಲ. ಹೀಗಾಗಿ ಅವರನ್ನು ಘೋಷಿತ ಅಪರಾಧಿಯನ್ನಾಗಿ ಅನೌನ್ಸ್ ಮಾಡಬೇಕು ಅಂತಾ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವನ್ನು ಪಾಕಿಸ್ತಾನದ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ ಮನವಿ ಮಾಡಿದೆ. ನವಾಜ್ ಷರೀಪ್ ಸೇರಿದಂತೆ ಮತ್ತೆ ನಾಲ್ವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿದ್ದು, ಆ ಜಿಯೋ ಮೀಡಿಯಾ ಗ್ರೂಪ್ ಮಾಲೀಕ ಮೀರ್ ಶಕಿಲೂರ್ ರೆಹಮಾನ್ ಮತ್ತು ಲಾಹೋರ್ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಹುಮಯೂನ್ ಫೈಜ್ ರಸೂಲ್ ಮತ್ತು ಮಾಜಿ ನಿರ್ದೇಶಕ ಮಿಯಾನ್ ಬಶೀರ್. ಪಂಜಾಬ್‌ನ ಮುಖ್ಯಮಂತ್ರಿ (1986) ಆಗಿದ್ದ ವೇಳೆ ನವಾಜ್ ಷರೀಫ್ ಅವರು ಕಾನೂನು ನಿಯಮಗಳನ್ನು ಉಲ್ಲಂಘಿಸಿ ಮೀರ್ ಶಕಿಲೂರ್ ರೆಹಮಾನ್ ಅವರಿಗೆ ಜಮೀನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
from India & World News in Kannada | VK Polls https://ift.tt/2NMaliB