ಹೊಸದಿಲ್ಲಿ: ಕೊರೊನಾ ಕಾರಣದಿಂದಾಗಿ ಬಾಕಿ ಉಳಿದಿರುವ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲು ಶುಕ್ರವಾರ ಅನುಮತಿ ನೀಡಿದೆ. ಬಾಕಿ ಉಳಿದಿರುವ ಪರೀಕ್ಷೆಗಳಿಗೆ ಈ ಹಿಂದೆ ನಡೆಸಲಾದ ಪರೀಕ್ಷೆಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ಅಂಕ ನೀಡುವ ಸಿಬಿಎಸ್ಇ ಯೋಜನೆಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮೋದನೆ ನೀಡಿತ್ತು. ಇದೀಗ ಅಧಿಕೃತ ಅಧಿಸೂಚನೆ ಹೊರಡಿಸುವಂತೆ ಸಿಬಿಎಸ್‌ಇಗೆ ತಿಳಿಸಿದೆ. ಸಿಬಿಎಸ್ ಇ ಈಗಾಗಲೇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿರುವ ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನ ಕಾರ್ಯಕ್ಷಮತೆ(internal assessment performance) ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಲಿದೆ. ಜುಲೈ 15ರೊಳಗೆ ಫಲಿತಾಂಶ ಪ್ರಕಟ ಪ್ರಕಟ ಮಾಡುವಂತೆಯೂ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಹತ್ತು ಮತ್ತು ಹನ್ನೆರಡೇ ತರಗತಿಯ ಉಳಿದ ಪರೀಕ್ಷೆಗಳನ್ನು ನಡೆಸುವುದಿಲ್ಲ. ಕೋವಿಡ್-19 ಪರಿಸ್ಥಿತಿ ಸುಧಾರಿಸಿದ ಬಳಿಕ ಮಂಡಳಿ ನಡೆಸುವ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಬಹುದು. ಇದು ವಿದ್ಯಾರ್ಥಿಗಳ ಪರವಾದ ನಿರ್ಧಾರ ಎಂದು ಸರ್ಕಾರ ಪರ ವಕೀಲ ತುಶಾರ್ ಮೆಹ್ತಾ ನ್ಯಾಯಾಲಯಕ್ಕೆ ಹೇಳಿದರು. ಇಷ್ಟಾದರೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ನಂತರ ಪರೀಕ್ಷೆ ತೆಗೆದುಕೊಳ್ಳುವ ಆಯ್ಕೆಯನ್ನು ಬಿಟ್ಟಿದೆ. ಆದರೆ, 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಆಯ್ಕೆ ಇಲ್ಲ.
from India & World News in Kannada | VK Polls https://ift.tt/3i3lFo6