3ನೇ ಸುತ್ತಿನ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಪೂರ್ಣ: ಗಡಿ ಬಿಟ್ಟು ಹೋಗುತ್ತಾ ಚೀನಾ?

ನವದೆಹಲಿ: ಗಲ್ವಾನ್ ಹಿಂಸಾತ್ಮಕ ಘರ್ಷಣೆ ಬಳಿಕ ಭಾರತ-ಚೀನಾ ನಡುವೆ ಸತತ ಮಿಲಿಟರಿ ಮಾತುಕತೆಗಳು ನಡೆಯುತ್ತಿದ್ದು, ಇದೀಗ ಮೂರನೇ ಸುತ್ತಿನ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಮುಗಿದಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆ, ಭಾರತ-ಚೀನಾ ಸೇನೆ ನಡುವಿನ ಕೋರ್ ಕಮಾಂಡರ್ ಮಟ್ಟದ ಮಾತುಕತೆ ನಿನ್ನೆ(ಮಂಗಳವಾರ) ರಾತ್ರಿ 11 ಗಂಟೆಗೆ ಮುಕ್ತಾಯ ಕಂಡಿದೆ ಎಂದು ಸ್ಪಷ್ಟಪಡಿಸಿದೆ. ಸತತ 12 ಗಂಟೆಗಳ ಕಾಲ ನಡೆದ ಈ ಮಾತುಕತೆಯಲ್ಲಿ ನಡೆದ ಕಹಿ ಘಟನೆಗಳತ್ತ ಗಮನ ಕೊಡದೇ ಗಡಿಯಿಂದ ಉಭಯ ಸೇನಾ ಪಡೆಗಳನ್ನು ಹಿಂದಕ್ಕೆ ಪಡೆಯುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಗಡಿಯಿಂದ ಸೈನ್ಯ ಹಿಂಪಡೆಯುವ ಪ್ರಸ್ತಾವನೆಗೆ ಚೀನಾ ಸೇನೆ ಸಮ್ಮತಿ ಸೂಚಿಸಿದ್ದು, ಉದ್ವಿಗ್ನತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ. ಇನ್ನು ಸದ್ಯದ ಉದ್ವಿಗ್ನತೆಯನ್ನು ಕಡಿಮೆ ಮಾಡಿ ಗಡಿಯಲ್ಲಿ ಶಾಂತಿ ಮರುಸ್ಥಾಪನೆಗೆ ಒತ್ತು ನೀಡಿರುವ ಭಾರತೀಯ ಸೇನೆ, ಈ ನಿಟ್ಟಿನಲ್ಲಿ ಚೀನಿ ಸೇನೆಯ ಮನವೋಲಿಸುವಲ್ಲಿ ನಿರತವಾಗಿದೆ.


from India & World News in Kannada | VK Polls https://ift.tt/3ghBPZE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...