ಭಾರತ-ಜಪಾನ್ ಜಂಟಿ ನೌಕಾ ಸಮರಾಭ್ಯಾಸ: ಬಾಯ್ಬಿಟ್ಟು ನೋಡಿದ ಚೀನಾ!

ನವದೆಹಲಿ: ಲಡಾಖ್ ಗಡಿಯಲ್ಲಿ ಚೀನಾದ ದುಸ್ಸಾಹಸದ ನಡುವೆಯೇ, ನೌಕಾಸೇನೆ ಜಂಟಿ ಸಮರಾಭ್ಯಾಸ ನಡೆಸಿರುವುದು ಗಮನ ಸೆಳೆದಿದೆ. ಹಿಂದೂ ಮಹಾಸಾಗರದ ಬಳಿ ಭಾರತ ಹಾಗೂ ಜಪಾನ್ ನೌಕಾಸೇನೆಯ ಯುದ್ಧ ಹಡಗುಗಳು ಜಂಟಿ ಸಮರಾಭ್ಯಾಸ ನಡೆಸಿದವು. ಸಮರಾಭ್ಯಾಸದಲ್ಲಿ ನಿರತ ಯುದ್ಧ ಹಡಗುಗಳು: ಭಾರತ- ಐಎನ್‌ಎಸ್ ರಾಜಪೂತ್, ಐಎನ್ಎಸ್ ರಾಣಾ ಹಾಗೂ ಐಎನ್‌ಎಸ್ ಕುಲೀಷ್ ಜಪಾನ್- ಜೆಎಸ್ ಶಿಮಾಯುಕಿ ಹಾಗೂ ಜೆಎಸ್ ಕಶೀಮಾ ಇನ್ನು ಭಾರತ-ಜಪಾನ್ ಜಂಟಿ ನೌಕಾ ಸಮಾರಾಭ್ಯಾಸವನ್ನು ಗಮನಿಸುತ್ತಿರುವ , ಮಲಾಕ್ಕಾ ಜಲಸಂಧಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಮೇಲೆ ಕಣ್ಣಿಟ್ಟಿದೆ. ಅತ್ತ ಅಮೆರಿಕ ಕೂಡ ಪೆಸಿಫಿಕ್ ಮಹಾಸಾಗರಕ್ಕೆ ಮೂರು ಅಣ್ವಸ್ತ್ರ ಯುದ್ಧ ಹಡಗುಗಳನ್ನು ರವಾನೆ ಮಾಡಿದ್ದು, ಚೀನಾದ ಎಲ್ಲಾ ಯೋಜನೆಗಳು ತಲೆಕೆಳಗಾಗುವ ಸಂಭವನೀಯತೆಯನ್ನು ಹೆಚ್ಚಿಸಿದೆ. ಅಮೆರಿಕ-ಭಾರತ-ಜಪಾನ್ ನೌಕಾ ಸಮರಾಭ್ಯಾಸ 'ಮಲಬಾರ್' 2015ರಿಂದಲೇ ಆರಂಭವಾಗಿದ್ದು, ಭಾರತ-ಜಪಾನ್ ಭೂಸೇನೆ ನಡುವಿನ 'ಧರ್ಮಾ ಗಾರ್ಡಿಯನ್' ಹೆಸರಿನ ಜಂಟಿ ಸೇನಾಭ್ಯಾಸಕ್ಕೂ 2018ರಿಂದ ಚಾಲನೆ ನೀಡಲಾಗಿದೆ. 2007ರಲ್ಲಿ ಬಂಗಾಳ ಕೊಲ್ಲಿಯಲ್ಲಿ ಭಾರತ-ಅಮರಿಕ ನೌಕಾಸೇನೆಯ ಜಂಟಿ ಸಮರಾಭ್ಯಾಸವನ್ನು ಚೀನಾ ವಿರೋಧಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.


from India & World News in Kannada | VK Polls https://ift.tt/3icQCGI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...