ಅಯೋಧ್ಯೆ: ಉತ್ತರಪ್ರದೇಶದ ಮುಖ್ಯಮಂತ್ರಿ ಇಂದು ಅಯೋಧ್ಯೆಗೆ ಭೇಟಿ ನೀಡಿ ನಿರ್ಮಾಣದ ಕಾಮಗಾರಿಗಳನ್ನು ವೀಕ್ಷಿಸಲಿದ್ದಾರೆ. ದೇಶದಲ್ಲಿ ಕೊರೊನಾ ಅಪ್ಪಳಿಸಿದ ನಂತರ ಲಾಕ್ಡೌನ್ ಜಾರಿಯಾಗಿತ್ತು. ಆನಂತರ ಸಿಎಂ ಆದಿತ್ಯನಾಥ್ಗೆ ಅಯೋಧ್ಯೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಲಾಕ್ಡೌನ್ ಇದ್ದಾಗ ಒಮ್ಮೆ ಭೇಟಿ ನೀಡಿದ್ದ ಆದಿತ್ಯನಾಥ್ಗೆ ಲಾಕ್ಡೌನ್ ಜಾರಿಗೊಳಿಸಿದ ನಂತರ ಇದು ಎರಡನೇ ಭೇಟಿಯಾಗಿದೆ. ಇಂದು ಮಧ್ಯಾಹ್ನ ಅಯೋಧ್ಯೆಗೆ ಭೇಟಿ ನೀಡಲಿರುವ ಆದಿತ್ಯನಾಥ್, ರಾಮಮಂದಿರ ನಿರ್ಮಾಣದ ಕಾಮಗಾರಿ ವೀಕ್ಷಣೆ ಮಾಡುವುದರ ಜೊತೆಗೆ ಅಯೋಧ್ಯೆಯ ಸುತ್ತಮುತ್ತ ನಡೆಯುವ ಕಾಮಗಾರಿಯನ್ನೂ ಪರಿಶೀಲನೆ ನಡೆಸಲಿದ್ದಾರೆ, ಅಲ್ಲದೆ ವಿವಿಧ ದೇವಸ್ಥಾನಗಳಿಗೂ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಮಾರ್ಚ್ 25ಕ್ಕೆ ಅಯೋಧ್ಯೆಗೆ ಭೇಟಿ ನೀಡಿದ್ದಾಗ ರಾಮಲಲ್ಲಾ ಮೂರ್ತಿಯನ್ನು ತಾತ್ಕಾಲಿಕ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಆದಿತ್ಯನಾಥ್ ಹಾಜರಿದ್ದರು. ಇನ್ನು ರಾಮಮಂದಿರ ನಿರ್ಮಾಣಕ್ಕೆ ಆದಿತ್ಯನಾಥ್ ಅವರು ವೈಯಕ್ತಿಕವಾಗಿ 11 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
from India & World News in Kannada | VK Polls https://ift.tt/2NCdNMp