ರಾಯಚೂರು: ದೇಶದೆಲ್ಲೆಡೆ ಅಪ್ಪಳಿಸಿ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ದೇಶಕ್ಕೆ ಅಪ್ಪಳಿಸಿರೋ ಈ ಮಹಾಮಾರಿಯನ್ನು ಹೊಡೆದೋಡಿಸಲು ಸರ್ಕಾರ ಇನ್ನಿಲ್ಲದ ಸರ್ಕಸ್ ನಡೆಸಿ ಕೊನೆಗೆ ಜನರೇ ಜಾಗೃತರಾಗಿರುವಂತೆ ಕರೆ ನೀಡಿದೆ. ಹೊರಗಡೆ ಹೋಗೋವಾಗ ಧರಿಸಿ ಸ್ಯಾನಿಟೈಸರ್ ಬಳಸುವಂತೆ ಸರ್ಕಾರ ಮತ್ತು ಸಮಾಜ ಸ್ನೇಹಿ ಸಂಘಟನೆಗಳು ವಿನಂತಿಸಿಕೊಂಡರೂ ಇನ್ನೂ ಬಹುತೇಕರಿಗೆ ಬುದ್ಧಿಯೇ ಬಂದಿಲ್ಲ. ಹೀಗಾಗಿ ಮಾಸ್ಕ್ ಧರಿಸದೇ ಓಡಾಡೋ ಜನರಿಗೆ ದಂಡ ವಿಧಿಸೋ ಮೊರೆ ಹೋಗಿದ್ದು, ಹಾಗಾದರೂ ಜನರು ಮಾಸ್ಕ್ ಧರಿಸಲಿ ಅಂತ ಪ್ಲ್ಯಾನ್ ಮಾಡಿದ್ದಾರೆ. ರಾಯಚೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ, ಮಾಸ್ಕ್ ಧರಿಸದವರು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವವರ ವಿರುದ್ಧ ಕಟ್ಟುನಿಟ್ಟಿನ ಕ್ರ ]ಮ ಕೈಗೊಳ್ಳುವಂತೆ ಸೂಚಿಸಿದ ನಂತರ ಪೊಲೀಸರು ಮಾಸ್ಕ್ ಧರಿಸದೆ ಓಡೋಡೋರಿಗೆ ದಂಡ ವಿಧಿಸುತ್ತಿದ್ದಾರೆ. ಪರಿಣಾಮ, ಕೇವಲ ಎರಡೇ ದಿನದಲ್ಲಿ ಪೊಲೀಸರು ಬರೋಬ್ಬರಿ 159800ರೂಪಾಯಿ ವಸೂಲಿ ಮಾಡಿದ್ದಾರೆ. ಪೊಲೀಸರು ಈ ಹಿಂದೆಯೇ ಜಿಲ್ಲಾದ್ಯಂತ ಮಾಸ್ಕ್ ಧರಿಸುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಆರೋಗ್ಯದ ಹಿತರಕ್ಷಣೆಯಿಂದ ಪೊಲೀಸರು ನೀಡಿರೋ ಎಚ್ಚರಿಕೆಯನ್ನು ಅನೇಕ ಜನ ನಿರ್ಲಕ್ಷ್ಯ ಮಾಡಿದ್ದು ಹೀಗಾಗಿ ಮಾಸ್ಕ್ ಧರಿಸದೇ ಇರೋ ಜನರನ್ನು ಹಿಡಿದು ಮಾಡುತ್ತಿದ್ದಾರೆ. ಜೂನ್ 24ರಂದು ಜಿಲ್ಲಾದ್ಯಂತ ಒಟ್ಟು 427 ಜನರಿಂದ 85,400 ರೂಪಾಯಿ ದಂಡ ವಸೂಲಿ ಮಾಡಿದ್ದು ನಿನ್ನೆ ಅಂದರೆ ಜೂನ್ 25ರಂದು 527 ಮಂದಿಯಿಂದ 74,400 ರೂಪಾಯಿ ವಸೂಲಿ ಮಾಡಿದ್ದಾರೆ. ಮಾಸ್ಕ್ ಧರಿಸದೇ ನಗರದ ಪ್ರದೇಶದಲ್ಲಿ ಓಡಾಡೋ ಜನರಿಗೆ 200 ರೂಪಾಯಿ ದಂಡ ವಿಧಿಸುತ್ತಿದ್ದು, ಗ್ರಾಮೀಣ ಪ್ರದೇಶದ ಜನರಿಗೆ 100 ರೂಪಾಯಿ ದಂಡ ಹಾಕುತ್ತಿದ್ದಾರೆ.
from India & World News in Kannada | VK Polls https://ift.tt/3hZGDVb