ನವದೆಹಲಿ: ಸತತ ಮಿಲಿಟರಿ ಮಾತುಕತೆಗಳ ಹೊರತಾಗಿಯೂ ಲಡಾಖ್ ಗಡಿಯಲ್ಲಿ ಸೈನ್ಯ ಜಮಾವಣೆಯನ್ನು ಕಡಿಮೆ ಮಾಡದ ಚೀನಾಗೆ ಪ್ರತ್ಯುತ್ತರ ನೀಡಲು ನಿರ್ಧರಿಸಿದೆ. ಅದರಂತೆ ಭಾರತ-ಚೀನಾ ಗಡಿಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ರವಾನಿಸಿರುವುದಾಗಿ ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಭಾರತ-ಚೀನಾ ನಡುವಿನ ಸುಮಾರು 3,488 ಕಿ.ಮೀ ಉದ್ದದ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಜಮಾವಣೆ ಮಾಡಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. ಕೇವಲ ಲಡಾಖ್ ಗಡಿಗ ಮಾತ್ರವಲ್ಲದೇ ಭಾರತದೊಂದಿಗಿನ ಗಡಿಯುದ್ದಕ್ಕೂ ಭಾರೀ ಸಂಖ್ಯೆಯಲ್ಲಿ ಸೈನ್ಯವನ್ನು ಜಮಾವಣೆ ಮಾಡುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಕೂಡ ಸೈನ್ಯ ಜಮಾವಣೆಯನ್ನು ದ್ವಿಗುಣಗೊಳಿಸಲಿದೆ. ಕೇವಲ ಸೇನೆ ಮಾತ್ರವಲ್ಲದೇ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿಯನ್ನೂ ಗಡಿಯಲ್ಲಿ ನಿಯೋಜಿಸಲು ನಿರ್ಧರಿಸಿಲಾಗಿದ್ದು, ಈಗಾಗಲೇ ಐಟಿಬಿಪಿ ಯೋಧರನ್ನು ಗಡಿಗೆ ರವಾನಿಸಲಾಗಿದೆ ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ. ಮಿಲಿಟರಿ ಕಾರ್ಯಾಚರಣೆ ಮುಖ್ಯಸ್ಥ ಲೆ.ಜ. ಪರಮ್ಜೀತ್ ಸಿಂಗ್ ಹಾಗೂ ಐಟಿಬಿಪಿ ಮುಖ್ಯಸ್ಥ ಎಸ್ಎಸ್ ದೆಸ್ವಾಲ್ ನಡುವೆ ಮಾತುಕತೆ ಬಳಿಕ, ಚೀನಾ ಗಡಿಯುದ್ದಕ್ಕೂ ಸೇನೆ ಮತ್ತು ಐಟಿಬಿಪಿ ಯೋಧರನ್ನು ನಿಯೋಜಿಸುವ ತೀರ್ಮಾನ ಕೈಗೊಳ್ಳಲಾಯಿತು ಎನ್ನಲಾಗಿದೆ.
from India & World News in Kannada | VK Polls https://ift.tt/2Zd3nrY