ಆ್ಯಪ್ ನಿಷೇಧ ನಿರ್ಧಾರ ತೀವ್ರ ಕಳವಳಕಾರಿ: ಭಾರತದ ನಡೆಗೆ ಚೀನಾ ಪ್ರತಿಕ್ರಿಯೆ!

ಬೀಜಿಂಗ್: ಲಡಾಖ್ ಗಡಿ ಸಂಘರ್ಷದ ಬಳಿಕ ಚೀನಾ ವಿರುದ್ಧ ಭುಗಿಲೆದ್ದಿರುವ ಆಕ್ರೋಶದ ಭಾಗವಾಗಿ 59 ಚೀನಾ ಆ್ಯಪ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ಈ ಘೋಷಣೆಗೆ ಭಾರೀ ಜನಬೆಂಬಲ ವ್ಯಕ್ತವಾಗಿದ್ದು, ಚೀನಾದ ವಸ್ತುಗಳ ಆಮದು ಮತ್ತು ಬಳಕೆ ಮೇಲೂ ಸಂಪೂರ್ಣವಾಗಿ ನಿಷೇಧ ಹೇರುವಂತೆ ಒತ್ತಾಯ ಕೇಳಿ ಬಂದಿದೆ. ಈ ಮಧ್ಯೆ ತನ್ನ 59 ಚೀನಾ ಆ್ಯಪ್‌ಗಳನ್ನು ನಿಷೇಧಿಸಿರುವ ಭಾರತದ ನಡೆಯನ್ನು ತೀವ್ರ ಕಳವಳಕಾರಿ ಎಂದು ಕರೆದಿರುವ ಚೀನಾ, ಇಂತಹ ಆಕ್ರಮಣಕಾರಿ ನೀತಿಗಳಿಂದ ಸಮಸ್ಯೆ ಮತ್ತಷ್ಟು ಕಗ್ಗಂಟಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್, ಭಾರತದ ನಡೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದರು. ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನು-ನಿಬಂಧನೆಗಳನ್ನು ಪಾಲಿಸುವಂತೆ ಚೀನಿ ಕಂಪನಿಗಳಿಗೆ ನಾವು ಯಾವಾಗಲೂ ಸ್ಪಷ್ಟ ಸೂಚನೆಯನ್ನು ನೀಡಿರುತ್ತೇವೆ. ಯಾವುದೇ ಕಾರಣಕ್ಕೂ ಸ್ಥಳೀಯ ಕಾನೂನನ್ನು ಅಗೌರವಿಸುವ ಪ್ರಶ್ನೆಯೇ ಇಲ್ಲ ಎಂದು ಲಿಜಿಯಾನ್ ಹೇಳಿದರು. ಅದರಂತೆ ಚೀನಾವೂ ಸೇರಿದಂತೆ ಅಂತಾರಾಷ್ಟ್ರೀಯ ಹೂಡಿಕೆದಾರರ ಕಾನೂನಾತ್ನಕ ಹಕ್ಕುಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿ ಭಾರತದ ಮೇಲಿದ್ದು, ಈಗ ಕೈಗೊಂಡಿರುವ 59 ಚೀನಾ ಆ್ಯಪ್‌ಗಳ ಮೇಲಿನ ನಿಷೇಧದ ತೀರ್ಮಾನವನ್ನು ಮರುಪರಿಶೀಲಿಸಲಿದೆ ಎಂದು ಲಿಜಿಯಾನ್ ಭರವಸೆ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/38b7dpK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...