ಮೇಕ್‌ ಇನ್‌ ಇಂಡಿಯಾ ಎನ್ನುತ್ತಲೇ ಚೀನಾದಿಂದ ಆಮದು ಹೆಚ್ಚಳ: ರಾಹುಲ್ ತರಾಟೆ

ಹೊಸ ದಿಲ್ಲಿ: ಭಾರತ-ಚೀನಾ ಗಡಿ ಸಂಘರ್ಷದ ಬೆನ್ನಲ್ಲೇ, ಭಾರತ ಸರ್ಕಾರವೇನೋ ಚೀನಾಗಳನ್ನು ನಿಷೇಧಿಸಿದೆ. ಚೀನಾದ ವಸ್ತುಗಳ ಆಮದಿಗೆ ನಿರ್ಬಂಧವನ್ನೂ ಹೇರುತ್ತಿದೆ. ಆದ್ರೆ, ಇದೇ ವಿಚಾರವಾಗಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ನಾಯಕ , ಎಂದು ಹೇಳುತ್ತಲೇ ಚೀನಾದಿಂದ ಆಮದನ್ನು ಹೆಚ್ಚಿಸಿದೆ ಎಂದು 2014ರಿಂದ ಈವರೆಗಿನ ಲೆಕ್ಕಾಚಾರ ನೀಡಿದ್ಧಾರೆ. ವಾಸ್ತವ ಸಂಗತಿಗಳು ಸುಳ್ಳು ಹೇಳೋದಿಲ್ಲ ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮೇಕ್‌ ಇನ್‌ ಇಂಡಿಯಾ ಎಂದು ಹೇಳುತ್ತಲೇ ಮೋದಿ ಸರ್ಕಾರ ಚೀನಾದ ವಸ್ತುಗಳ ಪ್ರಮಾಣ ಹೆಚ್ಚಿಸಿದೆ ಎಂದು ಅಂಕಿಅಂಶ ನೀಡಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಗ್ರಾಫ್‌ ಚಿತ್ರಣವನ್ನೂ ನೀಡಿದ್ದಾರೆ. ಯುಪಿಎ ಹಾಗೂ ಎನ್‌ಡಿಎ ಸರ್ಕಾರದ ಅವಧಿಯಲ್ಲಿನ ಆಮದು ಪ್ರಮಾಣವನ್ನು ಬಿಂಬಿಸುವ ಚಿತ್ರಣ ನೀಡಿದ್ದಾರೆ. 2008ರ ಮನ್‌ಮೋಹನ್‌ ಸಿಂಗ್ ಆಡಳಿತಾವಧಿಯಲ್ಲಿ ಚೀನಾದಿಂದ ಶೇ. 12ರಷ್ಟು ಸರಕುಗಳ ಆಮದು ಆಗುತ್ತಿತ್ತು. ಆದ್ರೆ, 2012ಕ್ಕೆ ಇದು ಶೇ. 14ಕ್ಕೆ ಏರಿಕೆಯಾಯ್ತು. ನಂತರ 2014ರ ವೇಳೆಗೆ ಶೇ. 13ಕ್ಕೆ ಕುಸಿತವಾಗಿತ್ತು. ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ 2015ರಲ್ಲಿ ಈ ಪ್ರಮಾಣ ಶೇ. 13ರಿಂದ 14ಕ್ಕೆ ಏರಿಕೆಯಾಯ್ತು. 2016ರಲ್ಲಿ ಶೇ. 16ಕ್ಕೆ ಏರಿಕೆ ಕಂಡಿತು. 2017ಕ್ಕೆ ಶೇ. 17ಕ್ಕೆ ಏರಿಕೆ ಕಂಡಿತು. 2018ಕ್ಕೆ ಶೇ. 18ರಷ್ಟು ಆಮದು ಪ್ರಮಾಣ ಏರಿಕೆ ಕಂಡಿದೆ ಎಂದು ಗ್ರಾಫ್‌ ಚಿತ್ರಣವನ್ನು ರಾಹುಲ್ ನೀಡಿದ್ದಾರೆ.


from India & World News in Kannada | VK Polls https://ift.tt/2YIb2Q8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...