ಚೀನಾ ಸೇನೆಯಿಂದ ಎಲ್ಲಾ ಒಪ್ಪಂದಗಳಿಗೆ ಅಗೌರವ: ಭಾರತದ ತೀಕ್ಷ್ಣ ಪ್ರತಿಕ್ರಿಯೆ!

ನವದೆಹಲಿ: ಪದೇ ಪದೇ ಗಡಿ ಸಮಸ್ಯೆಗೆ ಕಾರಣವಾಗುತ್ತಿರುವ ಚೀನಾ ಸೇನೆಯಿಂದ ಉಭಯ ದೇಶಗಳ ನಡುವೆ ಮಾಡಿಕೊಂಡ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಿದೆ. ಗಡಿಯಲ್ಲಿ ತಂಟೆ ತೆಗೆಯುವ ಮೂಲಕ, ಈ ವಿಚಾರದಲ್ಲಿ ಮಾಡಿಕೊಂಡ ಪರಸ್ಪರ ಒಪ್ಪಂದಗಳಿಗೆ ಅಗೌರವ ತೋರುತ್ತಿದೆ ಎಂದು ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಈ ಕುರಿತು ಮಾತನಾಡಿರುವ ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್, ಗಡಿ ಒಪ್ಪಂದಗಳನ್ನು ಮೀರುತ್ತಿರುವ ಚೀನಾ ಸೇನೆ ಅಗೌರವದ ನಡುವಳಿಕೆಯನ್ನು ತೋರುತ್ತಿದೆ ಎಂದು ಕಿಡಿಕಾರಿದ್ದಾರೆ. ಈಗಾಗಲೇ ಗಡಿ ಸಮಸ್ಯೆ ಕುರಿತು ಉಭಯ ಸೇನೆಗಳ ನಡುವೆ ಮಿಲಿಟರಿ ಮಾತುಕತೆಗಳು ನಡೆದಿವೆ. ಆದರೆ ಮಾತುಕತೆ ಸಂದರ್ಭದಲ್ಲಿ ಸೇನೆಯನ್ನು ಹಿಂಪಡೆಯುವ ಕುರಿತು ಭರವಸೆ ನೀಡುವ ಚೀನಾ ಅಧಿಕಾರಿಗಳು, ಮಾತುಕತೆ ಬಳಿಕ ಮತ್ತೆ ಸೈನ್ಯ ಜಮಾವಣೆಯ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸುತ್ತಾರೆ ಎಂದು ಅನುರಾಗ್ ಶ್ರೀವಾತ್ಸವ್ ಅಸಮಾಧಾನ ಹೊರಹಾಕಿದರು. ಘರ್ಷಣೆ ನಡೆದ ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಇನ್ನೂ ಚೀನಿ ಪಡೆಗಳು ಬೀಡು ಬಿಟ್ಟಿದ್ದು, ಸೇನೆ ಹಿಂಪಡೆಯುವ ಭಾರತೀಯ ಸೇನೆಯ ಆಹ್ವಾನಕ್ಕೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಶ್ರೀವಾತ್ಸವ್ ಹೇಳಿದ್ದಾರೆ.


from India & World News in Kannada | VK Polls https://ift.tt/2VgmhwY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...